ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದ ಹುಡುಗಿಯ 100ನೇ ಲೇಖನ : ರಾಜಸ್ಥಾನದ ರಾಣಿ!

By ಜಯನಗರದ ಹುಡುಗಿ
|
Google Oneindia Kannada News

ಆರೋ ಹೆಡ್ಡಿನ ಮಕ್ಕಳನ್ನ ನೋಡಿದ ನಂತರ, ಹುಲಿಗೂ ನಮಗೂ ಇದ್ದ ಸಮೀಕರಣ ನೋಡಿ ನಾವು ಆರೋ ಹೆಡ್ಡಿನ ಕಥೆಗಳನ್ನ ಕೇಳುತ್ತಾ ಬಂದೆವು. ಹುಲಿ ಮತ್ತು ಹುಲಿ ಮರಿಗಳು ಇರುವ ಬಗೆ, ರಣಥಂಬೋರಿನ ಇತಿಹಾಸ ಇವೆಲ್ಲವನ್ನ ನಮ್ಮ ಗೈಡ್ ಹೇಳುತ್ತಾ ಹೋದರು. ಹೆಣ್ಣು ಹುಲಿ ತನ್ನ ಮಗಳನ್ನ ಅಥವಾ ಮಗನನ್ನ ಚಿಕ್ಕ ವಯಸ್ಸಿನಲ್ಲಿಯೇ ಗಡಿಪಾರು ಮಾಡಿ ತನ್ನ ಜೀವನವನ್ನ ತಾನು ನೋಡಿಕೊಳ್ಳಬೇಕು ಎಂಬ ಸ್ವಾವಲಂಬನೆಯ ಪಾಠ ಕಲಿಸುವುದು ಎಂದೆಲ್ಲಾ ಹೇಳುತ್ತಿರುವಾಗಲೇ ಚಾಲಕ ಯರ್ರಾಬಿರಿ ಜೀಪ್ ತಿರುಗಿಸಿ ಯಾವುದೋ ಪೊದೆಗಳ ಆಚೆಗೆ ತಂದು ಬಿಟ್ಟರು.

ಅಲ್ಲಿ ಲಾಡ್ಲಿ ಕಲ್ಲಿನ ಹಾಗೆ ಕೂತಿದ್ದಳು. ಮುಂದೆ ಜಿಂಕೆಯ ಹಿಂಡು. ಆ ಜಿಂಕೆಗಳಿಗೆ ಗೊತ್ತೇ ಆಗದಂತೆ ಕೂತಿದ್ದಳು. ಜಿಂಕೆಗಳಿಗೆ ಪೆರಿಫೆರಲ್ ವಿಷನ್ ಇರುವುದು. ಅಂದರೆ ಅದಕ್ಕೆ ಕಣ್ಣುಗಳು ತಲೆಯ ಬಲ ಮತ್ತು ಎಡ ತುದಿಗೆ ಇರೋದು. ಎರಡು ಕಣ್ಣುಗಳು ಬೇರೆ ಬೇರೆ ದೃಶ್ಯವನ್ನು ಕಾಣುತ್ತದೆ. ಅದಕ್ಕೆ ತಲೆ ಅಲ್ಲಾಡಿಸಿ ಅಲ್ಲಾಡಿಸಿ ತಾನು ನೋಡಬೇಕಾದ್ದುದ್ದನ್ನ ಸರಿಪಡಿಸಿಕೊಳ್ಳುತ್ತದೆ. ತನ್ನ ಅಕ್ಕಪಕ್ಕದ್ದು ಸರಿಯಾಗಿ ಕಾಣುತ್ತದೆ. ಮುಂದೆ ಮತ್ತು ಹಿಂದೆ ಅದರ ದೃಷ್ಟಿ ಬಹಳ ಕಡಿಮೆ ಇರುತ್ತದೆ. ಇದನ್ನ ಹುಲಿ ತನ್ನ ಲಾಭಕ್ಕೆ ಪಡೆದುಕೊಳ್ಳುತ್ತದೆ.

ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ..ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ..

ನಮ್ಮ ಕಡೆಯಲ್ಲಿ ಹೇಳುತ್ತಾರಲ್ಲ, "ನೋಡೋ, ಹೊಡುದ್ರೂ ಹುಲಿ ಥರ ಹೊಡಿಬೇಕು ಎದುರುಗಡೆಯಿಂದ" ಅಂತ. ಅದರ ಅರ್ಥ ಇದೆ. ಹುಲಿ ತನ್ನ ಯಾವ ಬೇಟೆಯನ್ನ ಮೂಲೆಗಳಿಂದ ಆಡೋಲ್ಲ. ತೀರ ನೇರವಾಗಿ ಅಥವಾ ಹಿಂಭಾಗದಿಂದ ಸಾಯಿಸುತ್ತದೆ. ಇದನ್ನ ಧೈರ್ಯ ಶೌರ್ಯ ಅನ್ನೋದಕ್ಕಿಂದ ಅದರ ಚಾಣಾಕ್ಷತನವೆಂದರೆ ತಪ್ಪಲ್ಲ. ಜಿಂಕೆ ಮರಿಗಳು ತನ್ನ ಪಾಡಿಗೆ ಹುಲ್ಲು ತಿನ್ನುತ್ತಾ ಆನಂದವಾಗಿದ್ದವು. ಹುಲಿ ಕಾಯುತ್ತಲೇ ಇತ್ತು. ಚಿಕ್ಕಂದಿನಿಂದ ನೋಡಿದ್ದ ನ್ಯಾಷನಲ್ ಜಿಯೋಗ್ರಫಿ ಮತ್ತು ಡಿಸ್ಕವರಿಯೇ ನೆನಪಿಗೆ ಬಂತು. ಅಯ್ಯೋ ಪಾಪ ಎಂದು ಸಿನೆಮಾ ನೋಡುವ ಹಾಗಾಯ್ತು ನಮ್ಮ ಕಥೆ.

ಬೇಟೆಯಾಡಲು ಅಣಿಯಾಗಿದ್ದ ಲಾಡ್ಲಿ

ಬೇಟೆಯಾಡಲು ಅಣಿಯಾಗಿದ್ದ ಲಾಡ್ಲಿ

ನಿಶ್ಯಬ್ಧವಾಗಿ ಜೀಪಿನಲ್ಲಿ ಕೂತಿದ್ದೆವು. ಹುಲಿ ಯಾವ ಶಬ್ಧಕ್ಕೂ ರಿಯಾಕ್ಟ್ ಮಾಡುತ್ತಿರಲ್ಲಿಲ್ಲ. ರೆಪ್ಪೆಯನ್ನೂ ಅಲ್ಲಾಡಿಸುತ್ತಿರಲ್ಲಿಲ್ಲ. ಚಕಚಕಚಕ ಎಂದು ನಮ್ಮ ಕ್ಯಾಮೆರಾ ಸದ್ದು ಮಾತ್ರ ಆಗುತ್ತಿತ್ತು. ಒಮ್ಮೆ ಅನಿರುದ್ಧನ ಕ್ಯಾಮೆರಾ ಸ್ವಲ್ಪ ಜಾಸ್ತಿ ಸದ್ದು ಮಾಡಿತು. ಲಾಡ್ಲಿ ತಿರುಗಿ ನೋಡಿದಳು. ಅವಳು ಬೇಟೆಯಾಡುವ ಸ್ಥಾನದಲ್ಲಿ ಕೂತಿದ್ದಳು. ಮುಂದೆ ಬೇಟೆಯಾಡುವ ಬದಲು ಎಡಗಡೆ ಬಂದಿದ್ದರೆ ಅವಳಿಗೆ ನಾಲ್ಕು ವಾರದ ಊಟ ಸಿಗುತ್ತಿತ್ತು. ನಾವೆಲ್ಲರೂ ಅವಳ ಹೊಟ್ಟೆ ಸೇರುತ್ತಿದ್ದೆವೇನೋ. ಆದರೆ ಅವಳಿಗೆ ಹುಲುಮಾನವರ ಮಾಂಸಕ್ಕಿಂತ ಆ ಜಿಂಕೆಯ ಮಾಂಸವೇ ರುಚಿಯಾಗಿ ಕಂಡಿತ್ತೇನೋ. ನಮಗೊಂದು ಲುಕ್ ಕೊಟ್ಟು ಮತ್ತೆ ಕಾಯುತ್ತಾ ಕೂತಳು. ಅಷ್ಟೊತ್ತಿಗೆ ಲಂಗೂರ್ ಕೋತಿಗಳು ಕಿರುಚೋದಕ್ಕೆ ಶುರು ಮಾಡಿದ್ದವು. ಆಗ ಟ್ಯೂಬ್ ಲೈಟ್ ಆದ ಜಿಂಕೆ ಓಡಿ ಹೋಯಿತು. ಅಲ್ಲಿಗೆ ಲಾಡ್ಲಿಯ ಬೇಟೆಯ ಕಥೆ ಮುಗಿಯಿತು.

ಕಾಡಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ

ಕಾಡಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ

ಈ ಹುಲಿಗಳ ಥರಹವೇ ಕಾಡುಬೆಕ್ಕೊಂದು ಇದೆ. ಹುಲಿಯ ಆಕಾರ, ಆದರೆ ಥೇಟ್ ನಮ್ಮ ನಾಡಿನ ಬೆಕ್ಕಿನ ಮುಖ. ಇವುಗಳಿಗೆ ಬೇಟೆಯಾಡುವ ಸಾಮರ್ಥ್ಯ ಅಷ್ಟಿಲ್ಲ. ಆದರೆ ಸುಲಭವಾಗಿ ಸಿಗುವ ಕೋತಿಗಳು ಮತ್ತು ನವಿಲುಗಳನ್ನ ಕೊಂದು ತಿನ್ನುತ್ತವೆ. ಅದಕ್ಕೆ ಕೋತಿಗಳು ಮತ್ತು ನವಿಲುಗಳು ಹುಲಿಯನ್ನ ಕಂಡರೆ ಕಾಡುಬೆಕ್ಕು ಅಂದುಕೊಂಡು ತನ್ನವರಿಗೆ ತಿಳಿಸಲು ಕಾಡೆಲ್ಲ ಸದ್ದು ಮಾಡುತ್ತದೆ. ಇದರಿಂದ ಜಿಂಕೆ ಬಚಾವಾಗುತ್ತದೆ. ಹೀಗೆ ಕಾಡಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ ಪಟ್ಟಿರುವಂಥದ್ದೇ.

ಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತುಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತು

ಹುಲಿ ಸಂಖ್ಯೆ ಹೆಚ್ಚಿಸಿರುವ ಲಾಲ್ಡಿ, ಕುಂಭ

ಹುಲಿ ಸಂಖ್ಯೆ ಹೆಚ್ಚಿಸಿರುವ ಲಾಲ್ಡಿ, ಕುಂಭ

ಲಾಡ್ಲಿ 4 ಬಾರಿ ಮರಿಗಳನ್ನ ಹಾಕಿದ್ದಾಳೆ. ಒಂದು ಬಾರಿ ಮೂರು ಮರಿಗಳನ್ನ ಸಾಮನ್ಯವಾಗಿ ಹುಲಿಗಳು ಹಾಕುತ್ತವೆ. 4 ಬಾರಿ ಮರಿಗಳನ್ನ ಹಾಕುವಷ್ಟರಲ್ಲಿ ಅದಕ್ಕೆ ಆಯಸ್ಸು ಕುಂದಿರುತ್ತದೆ. ಲಾಡ್ಲಿ ಮತ್ತು ಕುಂಭ ಸೇರಿ ರಣಥಂಬೋರಿನಲ್ಲಿ ಹುಲಿಗಳ ಸಂಖ್ಯೆಯನ್ನ ಜಾಸ್ತಿ ಮಾಡಿವೆ. ಕುಂಭ ಕಾಡಲ್ಲಿರುವ ಫತೇಹ್ ನಂತರ ಅತ್ಯಂತ ಬಲಿಷ್ಠ ಹುಲಿ. ಝೋನ್ 6ನ ಮಹಾರಾಣಿ ಇವಳು. ನಮ್ಮ ಗೈಡ್ ಪ್ರಮೋದ್ ಅವಳ ಮರಿಗಳನ್ನ ತೋರಿಸಿದರು. ಜೈ ಮತ್ತು ವೀರು ಎಂದು ನಮ್ಮ ಮುಂದೆಯೇ ನಾಮಕರಣ ಮಾಡಿದರು.

ನಮಗೆಲ್ಲ ಇಲ್ಲೂ ಬೆಲೆ ಇಲ್ಲಾ ಗುರು

ನಮಗೆಲ್ಲ ಇಲ್ಲೂ ಬೆಲೆ ಇಲ್ಲಾ ಗುರು

3 ವರ್ಷದ ಧಡಿಯ ಹುಲಿಗಳು ಹೇಗೆ ಮಲಗಿದ್ದವು ಅಂದರೆ ಪಕ್ಕದಲ್ಲಿ ಬಾಂಬ್ ಸಿಡಿಸಿದರೂ ಎಚ್ಚರವಾಗದ ಸ್ಥಿತಿ. ನಾವೆಲ್ಲ, "ಮನುಷ್ಯನನ್ನ ಬೇಟೆಯಾಡಿದರೆ ಮತ್ತೆ ಮನುಷ್ಯನನ್ನ ಮಾತ್ರ ಕೊಲ್ಲುತ್ತದಂತೆ, ಅಂದರೆ ನಾವು ಅಷ್ಟು ರುಚಿಯಾಗಿರುತ್ತೇವೆಯಾ?" ಎಂದು ನಮ್ಮ ಅಹಂನ್ನು ಏರಿಸಿಕೊಳ್ಳಲು ಪ್ರಯತ್ನಿಸಿ ಕೇಳಿದಾಗ, ಪ್ರಮೋದ್ ನಕ್ಕು ಅಂದರು "ಎಂಥದ್ದು ಇಲ್ಲ ಮನುಷ್ಯ ಹುಲಿಗಳಿಗೆ ಸುಲಭದ ಬೇಟೆ, ನಮಗೆ ಓಡುವುದಕ್ಕಾಗೋದಿಲ್ಲ, ಕಾಡಿನ ದಾರಿಗಳು ಗೊತ್ತಿರುವುದಿಲ್ಲ ಮತ್ತು ವಾಸನೆಯ ವಿದ್ಯೆಯೂ ಗೊತ್ತಿಲ್ಲ. 10 ನಿಮಿಷದಲ್ಲಿ ತನ್ನ ಕೆಲಸ ಮುಗಿಸಿಬಿಡಬಹುದು ಅಷ್ಟೆ. ಅದರಲ್ಲೇನು ಎಂಬುವ ಕಾರಣಕ್ಕೆ ಮಾತ್ರ ಮನುಷ್ಯನನ್ನ ಬೇಟೆಯಾಡುತ್ತದೆ" ಎಂದಾಗ "ನಮಗೆಲ್ಲ ಇಲ್ಲೂ ಬೆಲೆ ಇಲ್ಲಾ ಗುರು" ಎಂದು ಸುಮ್ಮನೆ ನೋಡುತ್ತಾ ಕೂತೆವು.

ಸಿಟಿಗಿಂತ ಕಾಡನ್ನೇ ಇಷ್ಟಪಡುವ ಜಡೆಯಪ್ಪ ಎಂಬ ಮಾಂತ್ರಿಕ!ಸಿಟಿಗಿಂತ ಕಾಡನ್ನೇ ಇಷ್ಟಪಡುವ ಜಡೆಯಪ್ಪ ಎಂಬ ಮಾಂತ್ರಿಕ!

ಕಾಡಿನಲ್ಲಿ ಸರ್ಜಿಕಲ್ ಸ್ಟ್ರೈಕ್

ಕಾಡಿನಲ್ಲಿ ಸರ್ಜಿಕಲ್ ಸ್ಟ್ರೈಕ್

ಊಟದ ನಂತರ ಶೋ ಮುಗಿಯುವ ಕ್ಲೈಮ್ಯಾಕ್ಸಿನಂತೆ ನೂರ್ ಟಾರ್ ರಸ್ತೆಯ ಮೇಲೆ ಬಂದು ನಿಂತಳು. ನೂರ್ ಅವಳ ಹೆಸರೇ ಹೇಳಿದಂತೆ ಆ ಕಾಡಿನ ವಜ್ರ. ಯಾರಿಗೂ ಏನೂ ಕೇರ್ ಮಾಡದೇ ಆರಾಮಾಗಿ ತನ್ನ ಪಾಡಿಗೆ ಹೂಗುಟ್ಟುತ್ತಾ ಹೋಗುತ್ತಿದ್ದಳು. ನಮ್ಮ ಗೈಡ್ ಬನ್ನಿ ಇವತ್ತು ಒಂದು ದೊಡ್ಡ ಸರ್ಜಿಕಲ್ ಸ್ಟ್ರೈಕ್ ನೋಡೋಣ ಎಂದು ಜೀಪನ್ನ ಅಡ್ಡಾಡಿಡ್ಡಿ ಓಡಿಸಿದ್ದರು. ಲಾಡ್ಲಿಯ ಮರಿ ಜೈಗೆ ಮತ್ತು ನೂರಿಗೆ ಕದನ. 11 ವರ್ಷದ ಹೆಣ್ಣಿಗೆ 3 ವರ್ಷದ ಗಂಡಿಗೇನು ಜಗಳ ಎಂದು ಅಂದುಕೊಳ್ಳುವುದರಲ್ಲಿಯೇ, ಪ್ರಮೋದ್ ಇಲ್ಲ ಇದು ಜಗಳ ಅಲ್ಲ ಜೈ ನೂರ್ ಜೊತೆಗೆ ಮಕ್ಕಳು ಮಾಡುವ ಆಸೆ ಇಟ್ಟುಕೊಂಡಿದೆ. ಅದಕ್ಕೆ ಕರೆಯುತ್ತಿದೆ. ಆದರೆ ನೂರ್ ಟೆರಿಟೆರಿ ಇಲ್ಲದ ಹುಲಿಯನ್ನ ಹತ್ತಿರವೂ ಸೇರಿಸುವುದಿಲ್ಲ ಎಂದು ಹೇಳುತ್ತಿದ್ದಾಗಲೇ ನೂರ್ ಜೈನನ್ನ ಹೊಡೆದು ಓಡಿಸಿದ್ದಳು. ಅಬ್ಬ ಹೆಣ್ಣು ಹುಲಿಯೇ ಎಂದು ನಾನು ಮನಸ್ಸಿನಲ್ಲಿ ಅಂದುಕೊಂಡೆ. ಇಷ್ಟೆ ಶಕ್ತಿ ಯುಕ್ತಿ ನಮ್ಮ ಹೆಣ್ಣುಮಕ್ಕಳಿಗೂ ಬರಲಿ ಎಂದುಕೊಂಡೆ. 8 ಹುಲಿಗಳನ್ನ ದರ್ಶನ ಮಾಡಿಸಿದ ರಣ ರಣ ರಣಥಂಬೋರಿಗೆ ನಮಿಸುತ್ತಾ ಆ ದಿವಸದ ಸಫಾರಿಗೆ ಗುಡ್ ಬೈ ಹೇಳಿದೆವು. ಎಲ್ಲರ ಕಣ್ಣಲ್ಲಿಯೂ ಮಿಂಚು.

ಗೊರು ಗೊರು ಗೊರುಕನ ಎಂಬ ಸೋಲಿಗರ ಹಳ್ಳಿಯ ಹಾಡುಗೊರು ಗೊರು ಗೊರುಕನ ಎಂಬ ಸೋಲಿಗರ ಹಳ್ಳಿಯ ಹಾಡು

ಜಯನಗರದ ಹುಡುಗಿಯ 100ನೇ ಅಂಕಣ

ಜಯನಗರದ ಹುಡುಗಿಯ 100ನೇ ಅಂಕಣ

ಅದೇ ಮಿಂಚನ್ನ ಹೊತ್ತು ಜಯನಗರದ ಹುಡುಗಿ 100ನೇ ವಾರದ ಅಂಕಣವನ್ನ ಬರೆದಿದ್ದಾಳೆ. ನಿಮ್ಮ ಪ್ರೀತಿಯಿಂದಲೇ ಇವೆಲ್ಲಾ ಸಾಧ್ಯವಾದ್ದದ್ದು. ಹುಲಿ ಕಾಣಿಸುವ ಅಚ್ಚರಿಯ ಹಾಗೆ ನೀವೆಲ್ಲಾ ನನಗೆ ಎಷ್ಟೊಂದು ಸಲಹೆಗಳನ್ನ ನೀಡಿದ್ದೀರಿ. ಇನ್ನೂ ನಿಮ್ಮ ಹಾರೈಕೆ ಮತ್ತು ಸಪೋರ್ಟ್ ಇರಲಿ. ಒನ್ಇಂಡಿಯಾ ಕನ್ನಡದ ಎಲ್ಲರಿಗೂ, ಓದುಗರಿಗೂ ಮತ್ತು ಮನೆಯವರಿಗೂ ದೊಡ್ಡ ಧನ್ಯವಾದಗಳು.

English summary
Jayanagarada Hudugi Kannada column by Meghana Sudhindra has entered 100 club. She writes about Ranthambore wildlife reserve is in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X