ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!

By ಜಯನಗರದ ಹುಡುಗಿ
|
Google Oneindia Kannada News

ಆರ್ಡೆನೆಸ್ ಚಾರಣದ ನಂತರ ಅಣ್ಣ ತನ್ನ ಮನೆ ದೆನ್ ಹಾಗ್ ಗೆ ಕರೆದುಕೊಂಡು ಹೋದ. ಇನ್ನು ಅವನ ದೇಶ ಸುತ್ತುವ ಯೋಜನೆ - ಯೋಚನೆ ಮಾಡುತ್ತಿದ್ದೆವು. ನನಗೆ ಜನ ಮರುಳೋ ಜಾತ್ರೆ ಮರುಳೊ ಎಂದು ದೊಂಬಿ ದೊಂಬಿಯಾಗಿ ಹೋಗುವ ಜಾಗಗಳು ಇಷ್ಟವಾಗುವುದೇ ಇಲ್ಲ.

ಯುರೋಪ್ ಪ್ರವಾಸದಲ್ಲಿ ಹೋದ ಐಫೆಲ್ ಗೋಪುರ, ಮೊನಾಲೀಸ ಚಿತ್ರ ಇದ್ಯಾವುದು ನನಗೆ ಹಿಡಿಸಲ್ಲಿಲ್ಲ. ಎಲ್ಲರೂ ನೋಡಲೇಬೇಕಾದ ಜಾಗಗಳು ನನಗೆ ಉಸಿರು ಕಟ್ಟಿಸುತ್ತದೆ. ಹೆಚ್ಚೆಚ್ಚು ಜನ ಹುಚ್ಚುಚ್ಚಾಗಿ ಆಡೋದನ್ನ ನೋಡೋದು ನನಗೆ ಒಂದು ಥರಹ ವಿಚಿತ್ರ ಅನ್ನಿಸುತ್ತದೆ.

ದೇವರು ರುಜು ಮಾಡಿದ ಆರ್ಡೆನೆಸ್ ಎಂಬ ಮಾಯೆ!ದೇವರು ರುಜು ಮಾಡಿದ ಆರ್ಡೆನೆಸ್ ಎಂಬ ಮಾಯೆ!

ಈ ಕಥೆಯೆಲ್ಲ ಅವನಿಗೆ ಹೇಳಿದ ಮೇಲೆ ಪ್ರಸಿದ್ಧ ಜಾಗಗಳನ್ನ ತೋರಿಸುವ ಪ್ಲಾನ್ ಅವನು ಬಿಟ್ಟ. ಡಚ್ ಕ್ರೆಮ್ಲಿನ್ ಅನ್ನೋ ಜಾಗಕ್ಕೆ ಹೋಗೋದು ಎಂದು ಇಲ್ಲಿಂದ 105 ಕಿಲೋಮೀಟರ್ ಇದೇ ಅನ್ನುವಾಗ ತಲೆ ಕೆಡೋದೊಂದು ಬಾಕಿ. ಆ ಕೊರೆಯುವ ಛಳಿಯಲ್ಲಿ ಹೇಗೆ ಹೋಗೋದು ಎಂದು. ಸಾಧಾರಣ ಬೆಂಗಳೂರಿನಲ್ಲಿ ಇರುವವರಿಗೆ ಯಾವ ಛಳಿ ಮಳೆ ಬಿಸಿಲನ್ನು ಅಧಿಕವಾಗಿ ತಡೆದುಕೊಂಡಿರಲ್ಲಿಲ್ಲ.

ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...

ಕ್ರೆಮ್ಲಿನ್ ಅನ್ನೋದು ರಷ್ಯಾದಲ್ಲಿರುವ ಒಂದು ಜಾಗ. ಅಲ್ಲಿನ ಸರ್ಕಾರವನ್ನ ಸಹ ಕ್ರೆಮ್ಲಿನ್ ಎಂದೇ ಸಂಬೋಧಿಸುತ್ತಾರೆ. ಅಲ್ಲಿಗೂ ಇಲ್ಲಿಗೂ ಏನಪ್ಪ ಸಂಬಂಧ ಎಂದುಕೊಂಡು ಕೂತಿದ್ದೆ. ಮತ್ತೆ ವಿಶ್ವಯುದ್ಧದ ಕಥೆಗಳು ಶುರುವಾಗುತ್ತವೋ ಎಂದು. ನಾ ಕಂಡಂತೆ ಯುರೋಪಿನ ಜನಕ್ಕೆ ವಿಶ್ವಯುದ್ಧದ ಕಥೆಗಳು ಬಹಳ ಪುಂಖಾನುಪುಂಖವಾಗಿ ವಿವರಿಸುವ ಜನಗಳನ್ನ ಕಂಡರೆ ವಿಪರೀತ ಇಷ್ಟ.

ಯುದ್ಧಕ್ಕೂ ಇಲ್ಲಿಯ ಕಥೆಗೂ ಸಂಬಂಧವೇ ಇಲ್ಲ

ಯುದ್ಧಕ್ಕೂ ಇಲ್ಲಿಯ ಕಥೆಗೂ ಸಂಬಂಧವೇ ಇಲ್ಲ

ಏಷ್ಯಾದಲ್ಲಿ ಇದ್ದವರಿಗೆ ನಮ್ಮ ಸಂಪತ್ತೆಲ್ಲಾ ಲೂಟಿ ಮಾಡಿ ಜಗತ್ತನ್ನ ಆಳುವ ರಾಜರಾಗಿ ತೋರಿಸಿಕೊಳ್ಳುವ ಇರಾದೆಯಿತ್ತುನ್ನುವುದು ತಿಳಿದ ವಿಷಯವೇ. ನಮ್ಮ ವಿಶ್ವವಿದ್ಯಾಲಯದಲ್ಲಿ ಈ ವಿಶ್ವಯುದ್ಧದ ವಿಚಾರ ಮಾತಾಡೋವಾಗ ಏಷ್ಯಾದಿಂದ ಮತ್ತು ಆಫ್ರಿಕಾ ಖಂಡದಿಂದ ಬಂದವರ ಪ್ರತಿಕ್ರಿಯೆಗಳು ಒಂದೆ ತೆರನಾಗಿ ಇರುತ್ತಿದ್ದವು. ನಮಗೆ ಸಂಬಂಧವಿಲ್ಲದ ಯುದ್ಧಕ್ಕೆ ನಮ್ಮನ್ನ ಎಳೆದು ತಂದ ಮಹನೀಯರು ಎಂದು ತಿಳಿದುಕೊಂಡಿದ್ದೆವು. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಅಣ್ಣ ಅಲ್ಲಿಗೆ ಕರೆದುಕೊಂಡು ಹೋದ.

ಕ್ರೆಮ್ಲಿನ್ ನಗರದ ಮಿನಾರುಗಳು

ಕ್ರೆಮ್ಲಿನ್ ನಗರದ ಮಿನಾರುಗಳು

ಡಚ್ ಕ್ರೆಮ್ಲಿನ್ ಗೆರ್ ಲೀಗ್ ವಾಟರ್ ಅನ್ನುವ ಅಜ್ಜನ ಕನಸು. ಅವರು ಮುಂಚೆ ಕಮ್ಮಾರರಾಗಿದ್ದರಂತೆ. ಕ್ರೆಮ್ಲಿನ್ ಅನ್ನುವ ನಗರದ ಸುಂದರವಾದ ವಾಸ್ತುಶಿಲ್ಪವನ್ನ ಇಲ್ಲಿ ಮರುನಿರ್ಮಾಣ ಮಾಡಿದ್ದರೆಂದು ಅಲ್ಲಿ ಗೊತ್ತಾಯಿತು. ಅಜ್ಜನ ಹೆಂಡತಿ ಬಂದು ಇದರ ಕಥೆಯನ್ನ ಹೇಳುವುದಕ್ಕೆ ಶುರು ಮಾಡಿದರು. ಅಜ್ಜ ಕಮ್ಮಾರಿಕೆ ಕೆಲಸ ಮಾಡುತ್ತಿದ್ದರಂತೆ. ಅವರಿಗೆ ತಮ್ಮ ಕಲೆಯನ್ನ ಪ್ರದರ್ಶನ ಮಾಡಿಕೊಳ್ಳುವ ಮನಸಾಯಿತಂತೆ. ಕ್ರೆಮ್ಲಿನ್ ನಗರದ ಮಿನಾರುಗಳು, ಬೈಬಲ್ ನ ಸುಂದರ ಕಥೆಗಳನ್ನ ಅವರು ಪ್ರದರ್ಶನ ಮಾಡುವ ಮನಸ್ಸಾಯಿತಂತೆ. 1990ರಿಂದ ಗಾರೆ ಕೆಲಸ, ಮರಗೆಲಸ ಹಾಗೂ ಪೂರ್ತಿ ಕಮ್ಮಾರಿಕೆಯ ಕೆಲಸವನ್ನ ಅವರೇ ಮಾಡುವುದು ಎಂದು ತಿಳಿಯಿತು. 50ನೇ ವಯಸ್ಸಿಂದ ಅವರ ಕಲಾ ಪ್ರದರ್ಶನ ಶುರು ಮಾಡಿದ್ದರಂತೆ.

ಕನಸಿನ ನನಸಿಗಾಗಿ ಮಕ್ಕಳೂ ಬೇಡವೆಂದ ಅಜ್ಜ

ಕನಸಿನ ನನಸಿಗಾಗಿ ಮಕ್ಕಳೂ ಬೇಡವೆಂದ ಅಜ್ಜ

ನಮ್ಮಂತಹ ಸುಮಾರು ಜನರಿಗೆ 50ನೇ ವಯಸ್ಸಿನಲ್ಲೆ ಎಲ್ಲವನ್ನು ಬಿಟ್ಟು ಮನೆಯಲ್ಲಿ ಆರಾಮಾಗಿ ಇರುವ ಯೋಚನೆ ಬರುವುದನ್ನೇ ಕಂಡ ನಮಗೆ ನಿಜವಾಗ್ಲೂ ಇದೊಂದು ವಿಸ್ಮಯಕರವಾದ ಸಂಗತಿ. ಇದರ ಮೇಲೆ ಇವರ ಪೂರ್ತಿ ಶ್ರಮ, ದುಡ್ಡು ವ್ಯಯಿಸಬೇಕೆಂದು ಮಗು ಹಾಗೂ ಅದರ ಜವಾಬ್ದಾರಿಯೂ ಬೇಡವೆಂದು ಸಹ ಬಿಟ್ಟಿದ್ದನ್ನು ಅಜ್ಜಿ ಹೇಳಿದ್ದು ಕೇಳಿ ದಿಗ್ಮೂಢಳಾದೆ. ಅಜ್ಜನನ್ನು ಮಾತಾಡಿಸುವ ಅವಕಾಶ ಬಂದಾಗ ಭಾರತದ ವಾಸ್ತುಶಿಲ್ಪದ ಬಗ್ಗೆಯೂ ಸುಮಾರು ಮಾತಾಡಿದ್ದರು. ಡಚ್ ಭಾಷೆ ಮಾತಾಡುವ ಅವರು, ಈಗಿನ ಕಾಲದ ಮಕ್ಕಳ ಬಗೆಗಿನ ಅನಾಸಕ್ತಿಗಳ ಬಗ್ಗೆ ತಿಳಿಸಿಹೇಳುತ್ತ ತಮ್ಮ ಬದುಕಲ್ಲಿ 50 ವರ್ಷದ ನಂತರ ಆದ ಬದಲಾವಣೆಯನ್ನ ತಿಳಿಸಿ ಹೇಳುತ್ತಿದ್ದರು.

ಅಜ್ಜನ ಬಳಿ ಈಗಲೂ ಸ್ಮಾರ್ಟ್ ಫೋನ್ ಇಲ್ಲ

ಅಜ್ಜನ ಬಳಿ ಈಗಲೂ ಸ್ಮಾರ್ಟ್ ಫೋನ್ ಇಲ್ಲ

ಒಂದು ಮಿನಾರನ್ನ ಕಟ್ಟುವುದಕ್ಕೆ ತೆಗೆದುಕೊಳ್ಳುವಷ್ಟು ಸಮಯ, ಡ್ರಾಗನ್ ಆಫ್ ಆರ್ಫಿಯಸ್ ಗೆ ಬೇಕಾಗುವ ಪದಾರ್ಥಗಳು ಇವೆಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. ಅಜ್ಜನ ಹತ್ತಿರ ಈಗಲೂ ಸ್ಮಾರ್ಟ್ ಫೋನ್ ಇಲ್ಲ, ಅದನ್ನ ಕಂಡರೆ ಅವರಿಗೆ ಆಗುವುದಿಲ್ಲ. ಅಜ್ಜಿ ಮಾತ್ರ ಪ್ರಚಾರದ ಪೂರ್ತಿ ಕಾರ್ಯ ತೆಗೆದುಕೊಂಡು ಫೇಸ್ಬುಕ್ಕಿನ್ನಲ್ಲಿ ಎಲ್ಲ ಕಡೆ ಇದರ ಬಗ್ಗೆ ಸುಮಾರು ವಿಷಯಗಳನ್ನ ತಿಳಿಸುತ್ತಾರೆ. ಕಲೆಯನ್ನ ಮೆಚ್ಚುವವರಿಗೆ ಮಾತ್ರ ಈ ಜಾಗ ಸೀಮಿತ.

ಈ ಯಾತ್ರೆ ನೀವು ಮಾಡಲೇಬೇಕು

ಈ ಯಾತ್ರೆ ನೀವು ಮಾಡಲೇಬೇಕು

ಹಾಗ್ ಇಂದ ಅಷ್ಟೊಂದು ದೂರಕ್ಕೆ ಬೇರೆ ಜಾಗಗಳೆ ಸಿಗುತ್ತದೆ ಎಂದು ಅಂದುಕೊಂಡು ಹೋದರೆ ನಿಮಗೆ ಬೇಜಾರು ಖಚಿತ. ಈ ಜಾಗ ಒಂದು ಮನುಷ್ಯನ ಕನಸನ್ನು ನನಸಾಗಿಸಿದ್ದ ಬಗೆ, ಅವರ ಆಸೆ ಆಸಕ್ತಿ, ಇರುವ ಜೀವನವನ್ನ ಖುಷಿಯಾಗಿ ಕಳೆಯುವ ರೀತಿ ಹಾಗೂ ಕಲೆಯನ್ನ ಬೆಳೆಸುವ ಬಗೆಯನ್ನ ತಿಳಿದುಕೊಳ್ಳುವುದಕ್ಕಾದರೂ ಈ ಯಾತ್ರೆ ನೀವು ಮಾಡಲೇಬೇಕು.

ಮುಂದಿನ ವಾರ ರಷ್ಯನ್ನರ ಪುರಾಣ

ಮುಂದಿನ ವಾರ ರಷ್ಯನ್ನರ ಪುರಾಣ

ಭಾರತದ ಪುರಾಣ ಮಾತ್ರ ಗೊತ್ತಿದ್ದ ನನಗೆ ಅವರ ಪುರಾಣಗಳನ್ನ ತಿಳಿಯುವ ಅವಕಾಶವಾಯಿತು. ಇದನ್ನೆಲ್ಲಾ ಕಣ್ಣು ತುಂಬಿಕೊಂಡು ಮನೆಗೆ ಬಂದಾಗ ಮುಂದಿನ ದಿನ ಹೊಸ ವರ್ಷ ಎಂದು ತಿಳಿಯಿತು, ಅಣ್ಣ ಪಾನಿಪುರಿ ಮಾಡಿದ ಮಂಜಿನ ಹನಿಗಳು ಬೀಳುವುದನ್ನು ನೋಡುತ್ತಾ ಹೊಸ ವರ್ಷದ ಆಗಮನವನ್ನು ಕಾಯುತ್ತಾ ಕುಳಿತೆವು..

English summary
Inspirational story of a person from Kremlin, who gave up idea of having children, who hates smart phone for the sake or realising the dream and showcase his art work. Hats off to his dedication. An article by Jayanagarada Hudugi Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X