• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು

By ಜಯನಗರದ ಹುಡುಗಿ
|

ರಜಾ ದಿನದಂದು ಸಹ ಬಾರ್ಸಿಲೋನಾದಲ್ಲಿರುವ ಕಾಲೇಜಿನ ಲೈಬ್ರರಿಗೆ ಹೋಗಿ ಅರ್ಧ ರಾತ್ರಿಗೆ ಮನೆಗೆ ಬಂದಾಗ ಬೆಂಗಳೂರಲ್ಲಿ ಬೆಳಿಗ್ಗೆಯಾಗಿತ್ತು. ಅಮ್ಮನ ಹತ್ತಿರ ಮಾತಾಡೋವಾಗ ರಸ್ತೆಯಲ್ಲಿನ ಶಬ್ಧ ಬರಿ ಡ್ರಿಲ್ಲಿಂಗ್, ಸಿಮೆಂಟ್ ಲಾರಿಯದ್ದು ಕೇಳಿ ಕೇಳಿ ಸಾಕಾಗಿತ್ತು. ನನ್ನ ಬೇಜಾರು ಕಳೆಯಲೆಂದು ಅಮ್ಮ ನನ್ನ ಬಾಲ್ಯದ ನೆನಪನ್ನು ಬಿಚ್ಚಿಟ್ಟಳು ಫೋನಿನಲ್ಲಿ.

ನಮ್ಮ ಬೇಸಿಗೆ ರಜಾ ಬೆಂಗಳೂರಿಗೆ ಸೀಮಿತವಾಗಿತ್ತು. ಚಿಕ್ಕತ್ತೆ ತಿಪಟೂರಿನಲ್ಲಿ ಇದ್ದಿದ್ದರಿಂದ ಅವರ ಮನೆಗೆ ಒಮ್ಮೊಮ್ಮೆ ಹೋದದ್ದು ಇದೆ. ಇನ್ನು ಚಿಕ್ಕಪ್ಪ ಒಮ್ಮೆ ವಿಜಯವಾಡಾಕ್ಕೆ ವರ್ಗಾವಣೆಯಾದ್ದುದರಿಂದ ಆವಾಗ ಒಮ್ಮೆ ಹೋದ್ದದ್ದೂ ಇದೆ. ಅದನ್ನು ಬಿಟ್ಟರೆ ಆಚೆ ಹೋದ್ದದ್ದೇ ಕಡಿಮೆ. ನನ್ನ ಸ್ನೇಹಿತೆಯರ ಸ್ಥಿತಿ ಕೂಡ ಹೀಗೇ ಇದ್ದರಿಂದ ಎಲ್ಲರೂ ಬೆಂಗಳೂರಲ್ಲೆ ಜಯನಗರದಲ್ಲೆ ಬೀದಿ ತಿರುಗಿಕೊಂಡು ಇರುತ್ತಿದ್ವಿ.[ಬೆಂಗಳೂರಿನ ಕನ್ನಡಪ್ರೇಮಿ ಆಟೋ ಚಾಲಕರ ಕಥೆ!]

ಪರೀಕ್ಷೆ ಮುಗಿದ ನಂತರ ರಿಸಲ್ಟ್ ಬಂದ ಮೇಲೆ ನಮ್ಮ ಕಾರ್ಯಕ್ರಮ ಜಯನಗರದಲ್ಲಿ ಬೀದಿ ಅಲೆಯೋದು. ಊಟಕ್ಕೆ ಮನೆಗೆ ಹಾಜರಿ ಅಷ್ಟೆ. ನಮಗೇನು ಬೆಟ್ಟ ಗುಡ್ಡ ನದಿಗಳು ಇರಲಿಲ್ಲ, ಮರಗಳನ್ನು ಹತ್ತುವ ಸ್ಥಿತಿಯಲ್ಲೆ ಇರುತ್ತಿರಲಿಲ್ಲ. ಆದರೂ ರಸ್ತೆಯನ್ನೆ ಮೈದಾನ ಮಾಡಿಕೊಂಡು ಆಡುತ್ತಿದ್ದೆವು.

ಬೆಳಗ್ಗೆ ಮನೆಯ ಹತ್ತಿರ ಇರುವ ಮಿನಿ ಫಾರೆಸ್ಟ್ ಗೆ ನಮ್ಮ ನಡಿಗೆ. ಅಲ್ಲಿ ನಾವು ಅಮ್ಮಂದಿರ ಹತ್ತಿರ ಕಲಿತ ಅಷ್ಟು ಇಷ್ಟು ಯೋಗವನ್ನ ಮಾಡೋದು, ಅಲ್ಲಿನ ಲಾಫಿಂಗ್ ಕ್ಲಬ್ ಗೆ ಬರೊ ಅಜ್ಜ ಅಜ್ಜಿಯರ ಹತ್ತಿರ ಸ್ನೇಹ ಬೆಳಿಸೋದು, ಅವರು ನಗುವುದನ್ನು ಅನುಕರಣೆ ಮಾಡೋದು. ಇದು ಮಾಡಿ ಬಂದ ಮೇಲೆ ಸ್ನಾನ ತಿಂಡಿ, ಅಮೇಲೆ ಜಯನಗರ 9ನೇ ಬ್ಲಾಕ್ ರಸ್ತೆಯಲ್ಲಿ ನಮ್ಮ ಆಟಗಳ ಸರಣಿ ಶುರು.

ಆ ಆಟ ಈ ಆಟ ಅನ್ನುವಷ್ಟರಲ್ಲಿ ಸಮಯ ಹಾಳು ಮಾಡಿದ ಮೇಲೆ ಕಡೆಗೆ ಆಡುತ್ತಿದ್ದದ್ದು ಒಂದೆ Ghost and the graveyard. ಕಣ್ಣಾಮುಚ್ಚೆಗೆ ನಾವು ಕೊಟ್ಟ Fancy name. ಬಚ್ಚಿಟ್ಟುಕೊಳ್ಳೋದಕ್ಕೆ ಜಾಗಗಳೇ ಕಡಿಮೆಯಾದಾಗ ಅಕ್ಕ ಪಕ್ಕದ ಮನೆಯವರ ಗ್ರಿಲ್, ಸಜ್ಜ ಇವೆಲ್ಲವನ್ನು ಆರಾಮಾಗಿ ಹತ್ತಿ ಆ ಮನೆಯವರ ಹತ್ತಿರ ಚೆನ್ನಾಗಿ ಉಗಿಸಿಕೊಂಡ ಮೇಲೆ ಆಟ ನಿಲ್ಲುತ್ತಿದ್ದದ್ದು. [ನನ್ನ ಹಣೆಗೆ ಗಲ್ಲಕೆ ಮುತ್ತನ್ನು ರಾಜಣ್ಣ ಕೊಟ್ಟಾಗ!]

ಸಂಜೆ ಮನೆಯ ಹತ್ತಿರವಿದ್ದ ಲೈಬ್ರರಿ, ದೇವಸ್ಥಾನ. ಇವೆಲ್ಲ ಮುಗಿದ ನಂತರ ಅಮ್ಮನಿಗೆ ಹಸಿವು, ಬೇಜಾರು ಎಂಬ ಮಾತು ಕೇಳಿ ರೋಸಿ ಹೋಗಿ ನನ್ನನ್ನ ಸ್ವಿಮ್ಮಿಂಗ್ ಗೆ ಸೇರಿಸಿದ್ದು. ಮೂಲತಃ ಸೋಂಬೇರಿಯಾದ ನಾನು, ಇಷ್ಟೊಂದು ಕಷ್ಟ ಪಡುವ ಕೆಲಸ ಯಾಕೆ ಮಾಡಬೇಕು, ಆಮೇಲೆ ಅತ್ತು ಕರೆದು ಮಾಡಿದರೆ ಇವೆಲ್ಲ ಕ್ಲಾಸ್ ನಿಲ್ಲುತ್ತದೆ ಎಂದು ನಾನು ಎಣಿಸಿದ್ದೆ.

ಆದರೆ ನನ್ನಂತಹ ತುಂಬಾ ಜನರನ್ನ ನೋಡಿದ್ದ ಪಿಎಂ ಸ್ವಿಮ್ಮಿಂಗ್ ಸೆಂಟರ್ ನವರು ಅರ್ಧ ಘಂಟೆ ಬರೀ ಕಾಲನ್ನ ಮಾತ್ರ ಆಡಿಸಬೇಕು ಅಂತ ನೀರೊಳಗೆ ಬಿಟ್ಟಿದ್ದರು. ಹಿಂದಿನಿಂದ ಬಂದ ಸರ್ ತಲೆಯನ್ನ ನೀರಿನಲ್ಲಿಯೆ ಹಿಡಿದು 15 ನಿಮಿಷ ಕಾಲು ಬಡಿಯಲು ಹೇಳುತ್ತಿದ್ದರು. ಇದೇನು Torture ಅಂದು ಕೊಳ್ಳುವಷ್ಟರಲ್ಲಿ ಕೈ ಕಾಲು ಒಟ್ಟಿಗೆ ಆಡಿಸುವ ಪ್ರಕ್ರಿಯೆಯನ್ನು ಹೇಳಿಕೊಡುತ್ತಿದ್ದರು. 10 ದಿವಸದ ನಂತರ ಎತ್ತರದಿಂದ ಡೈವಿಂಗ್ ಅಂತ ಮಾಡಿ ಮುಗಿಸೊ ಅಷ್ಟರಲ್ಲಿ ನನ್ನ ಪ್ರಾಣ ಹೋಗೋದೊಂದು ಬಾಕಿಯಿತ್ತು! ಅಂತು 30 ದಿನಗಳಲ್ಲಿ ನಾನು ಈಜುವುದನ್ನು ಕಲಿತೆ. ತುಂಬಾ ಇಷ್ಟವಾದ ಹವ್ಯಾಸವಾಗಿತ್ತು. ಪ್ರತಿ ಬೇಸಿಗೆಗೆ ಅಲ್ಲಿಗೇ ಹೋಗಿ ಆಟ ಆಡಿಕೊಂಡು ಬಂದದ್ದೂ ಇದೆ. ಇವಾಗ ಇಲ್ಲಿ ಸಮುದ್ರದಲ್ಲಿ ಹಾಯಾಗಿ ಈಜಿ ಅಮ್ಮನಿಗೆ ಧನ್ಯವಾದ ಹೇಳೋದು ವಾಡಿಕೆ. [ಬೆಂಗಳೂರು ಕರಗದಂದು ಪಾಯಸ ಮಾಡಿ ಜಮಾಯಿಸಿ]

ಇನ್ನು ಬೇಸಿಗೆ ಶಿಬಿರಗಳೊ ಯಾವುದು ನಮ್ಮ ಆಸಕ್ತಿಯನ್ನ ಕೆರಳಿಸಲಿಲ್ಲ. ನಮ್ಮ ಸಂಸ್ಕೃತಿ ಕಲಿಯಲಿ ಅಂತ ಒಂದು ಶಿಬಿರಕ್ಕೆ ಸೇರಿಸಿದ್ದರು. ದಿನಾಲೂ ವೇದ, ಉಪನಿಷತ್ತುಗಳ ಪಾಠವಾಗುತ್ತಿತ್ತು. ಅದನ್ನೇನೋ ಕಲಿತ ನಂತರ ದಿವಸವೂ ಅಪ್ಪ ಅಮ್ಮನ ಕಾಲಿಗೆ ನಮಸ್ಕಾರ ಮಾಡಬೇಕು... ಇಂತ ಪಾಠಗಳನ್ನು ಕಲಿತುಕೊಂಡು ಬಂದಿದ್ವಿ. ಮತ್ತೆಲ್ಲೊ ಕಲೆಯೆ ಬರದ ನನಗೆ ಫ್ಯಾಬ್ರಿಕ್ ಪೈಂಟಿಂಗ್ ಕ್ಲಾಸ್ ಗೆ ಸೇರಿಸಿ ಅಲ್ಲೂ ಏನಾದ್ರು ಮಾಡಿಕಲಿಯಲಿ ಅಂತ ಅಮ್ಮ ಕಷ್ಟ ಪಟ್ಟಿದ್ದು ಈವಾಗಲೂ ನೆನಪಿದೆ.[ಜಯನಗರದ ಹುಡ್ಗಿ ಜತೆ ತಿಂಡಿಪೋತರ ಸ್ವರ್ಗ ಬೆಂಗ್ಳೂರಲ್ಲಿ ಸುತ್ತಾಟ]

ಕಡೆಗೆ ತನ್ನ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿ, ಅವಳ ಅಜ್ಜಿಯ ಹತ್ತಿರ ಸಂಗೀತ ಕಲಿಸಿ ಮೊಗ್ಗಿನ ಜಡೆ ಹಾಕಿಸಿ ಸಂತಸ ಪಟ್ಟಿದ್ದಳು. ಇದಿಷ್ಟು ಮಾಡಿದ್ದು ಯಾಕೆ ಗೊತ್ತಾ? ನಾವು ಬೇಸಿಗೆ ರಜಾದಿನಗಳಲ್ಲೂ ಒಮ್ಮೆಯೂ ಟಿವಿ ನೋಡಬಾರದು, ಮನೆಯಿಂದ ಆಚೆ ಇರಲೆಬೇಕು ಎಂಬುದು.

ಬಿರು ಬೇಸಿಗೆಯಲ್ಲಿ ಆಚೆ ಸೀದು ಕರಕಲಾಗಿ ಮನೆಗೆ ಬರುತ್ತಿದ್ದೆವು. ಸಂಗೀತ ಟೀಚರ್ ಹತ್ತಿರ ಒಂದೊಂದು ಕಾರ್ಯಕ್ರಮವನ್ನು ಸಹ ಗಿಟ್ಟಿಸಿ ಕೊಳ್ಳುತ್ತಿದ್ವಿ. ಹೀಗೆ ನಮ್ಮ ಬೇಸಿಗೆ ರಜಾಮಜಾ ನಡೆಯುತ್ತಿತ್ತು. ಊರು ಕೇರಿ ಇಲ್ಲದ ನಮ್ಮಂಥವರಿಗೆ ಬೆಂಗಳೂರಲ್ಲಿ ಮಜವೋ ಮಜ.

ಮೊನ್ನೆ 2 ವರ್ಷದ ಮಗು ಯೂಟ್ಯೂಬ್ನಲ್ಲಿ ಪದ್ಯ ನೋಡತ್ತೆ, 11 ವರ್ಷದ ಮಕ್ಕಳು ಟೀವಿಗೆ, ಫೋನಿಗೆ ಅಂಟುಕೊಂಡಿರುವುದನ್ನು ಕೇಳಿ ನಮ್ಮ ಬೇಸಿಗೆ ಕಥೆಯನ್ನ ಹೇಳಬೇಕೆನಿಸಿತು. ನಿಮ್ಮ ರಜೆಯ ಕಥೆ ಏನು? ಹೇಗೆ ರಜಾದಿನಗಳನ್ನು ಕಳೆಯುತ್ತೀರಿ? ನನ್ನೊಂದಿಗೆ ಹೇಳಿಕೊಳ್ಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Meghana Sudhindra (Jayanagarada Hudugi) walks down the memory lane during her summer vacation in Jayanagar Bengaluru. Learning swimming, fabric painting, knowing about Indian culture were part of the summer camps. How do you spend your summer?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more