ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಲ್ಪ ಹೊತ್ತು ಮಹಾರಾಣಿಯಾಗಿಸುವ ವಿಭಿನ್ನ ಪ್ರಪಂಚ!

By ಜಯನಗರದ ಹುಡುಗಿ
|
Google Oneindia Kannada News

ಮದುವೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಎಲ್ಲರ ಮನೆಯಲ್ಲಿ ಬಟ್ಟೆ, ಒಡವೆ, ಛತ್ರ ಅದು ಇದು ಮಾತಿನ ನಂತರ ಶುರುವಾಗೋದೆ ಅಲಂಕಾರ ಎಂಬ ನನಗೆ ಅರ್ಥವಾಗದ ವಿಷಯ. ಚಿಕ್ಕ ವಯಸ್ಸಿನಲ್ಲಿ ಅಲಂಕಾರವೆಂದರೆ ಸಂಗೀತದಲ್ಲಿ ಹೇಳಿಕೊಡುವ ಪಾಠ ಎಂಬುದು ಗೊತ್ತಿತ್ತು. ಸಿನಿಮಾ ತಾರೆಯರು ಮೇಕಪ್ ಮಾಡಿಕೊಳ್ಳುತ್ತಾರೆ ಎಂದೂ ಗೊತ್ತಿತ್ತು. ಮೇಕಪ್ ಗೂ ಅಲಂಕಾರಕ್ಕೂ ಒಂದು ಸಂಬಂಧ ಇದೆ ಎಂದು ಗೊತ್ತಾದ್ದದ್ದು ಸ್ವಲ್ಪ ದೊಡ್ಡವಳಾದ ಮೇಲೆ.

ಮುಂಚೆ ಎಲ್ಲ ಬೆಳ್ಳಗಿದ್ದರೆ ಸೌಂದರ್ಯ ಎಂದು ಹೇಳಿಕೊಟ್ಟಿದ್ದ ಕಾರಣ ನಾನು ಮೇಕಪ್ ಮಾಡಿಕೊಳ್ಳುವ ಪ್ರಮೇಯ ಬಂದದ್ದು ಕಡಿಮೆಯೇ . ಹಾಗೆಯೂ ಎಲ್‌ಕೆಜಿಯಲ್ಲಿ ಓದುತ್ತಿದ್ದಾಗ ಶಾಲೆಯ ವಾರ್ಷಿಕೋತ್ಸವಕ್ಕೆ ಮೇಡ್ ಇನ್ ಇಂಡಿಯಾ ಹಾಡಿಗೆ ಕುಣಿಬೇಕಾದ ಸಂದರ್ಭ ಬಂತು. ಅಲ್ಲಿ ಬಂದ ಮೇಕಪ್ ಕಲಾವಿದರು ಮುಖಕ್ಕೆ ಬೆಳ್ಳನೆ ಪೌಡರ್ ಹಚ್ಚಿ, ಕೆನ್ನೆಗೆ ಗುಲಾಬಿ ಬಣ್ಣ ಬಳಿದು ಹೋಗಿದ್ದರು.

ಯಂತ್ರಕ್ಕೆ ಶಾಸ್ತ್ರಬದ್ಧವಾಗಿ ಸಂಗೀತ ಕಲಿಸಿದರೆ ಹೇಗಿರತ್ತೆ!ಯಂತ್ರಕ್ಕೆ ಶಾಸ್ತ್ರಬದ್ಧವಾಗಿ ಸಂಗೀತ ಕಲಿಸಿದರೆ ಹೇಗಿರತ್ತೆ!

ಆ ಕಾರ್ಯಕ್ರಮದ ಮುಖ್ಯ ಅತಿಥಿ ಮೇಕಪ್ ನಾಣಿ. ಅವರು ಬಂದು ನಮ್ಮನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಬಳಿದ ಲಿಪ್ ಸ್ಟಿಕ್ ಅನ್ನು ಅಳಿಸಿ, ಕೆನ್ನೆ ಮೇಲಿನ ಗುಲಾಬಿ ಬಣ್ಣವನ್ನ ಅಲ್ಪಸ್ವಲ್ಪ ತೆಗೆದು ನನ್ನ ಅಲಂಕಾರವನ್ನ ಸರಿ ಮಾಡಿದ್ದರು. ಅವರ ದೊಡ್ಡತನ ಅಥವಾ ಹಿರಿಮೆ ಯಾವುದು ನನಗಾಗ ಗೊತ್ತಿರಲ್ಲಿಲ್ಲ. ಎಷ್ಟೋ ವರ್ಷದ ನಂತರ ಇವರ ದೊಡ್ಡತನ ಗೊತ್ತಾಗಿದ್ದು. ಮೊದಲ ಬಾರಿಗೆ ಆ ಮೇಕಪ್ ಕಿಟ್ ನೋಡಿದ್ದು, ಕಲರ್ ಕಲರ್ ಎಲ್ಲವನ್ನು ನೋಡಿದ್ದು.

Lets enter the unusual world of makeup

ಆಗಾಗ ಹೊಸದಾಗಿ ಮದುವೆಯಾಗುವವರ ಮನೆಯಲ್ಲಿ ಮೇಕಪ್, ಬ್ಯೂಟಿ ಪಾರ್ಲರ್ ಅದೂ ಇದೂ ಎಂದೆಲ್ಲಾ ಮಾತಾಡೋವಾಗ್ಲೂ ನನಗದರ ಬಗ್ಗೆ ಅಷ್ಟು ಗೊತ್ತಿರಲ್ಲಿಲ್ಲ. ಅಮ್ಮ ನೈಸರ್ಗಿಕವಾಗಿಯೇ ಸುಂದರಿಯಾಗಿದ್ದರಿಂದಲೇನೋ ಅವಳಿಗೆ ಇವೆಲ್ಲದರ ಅವಶ್ಯಕತೆ ಇರುತ್ತಿರಲ್ಲಿಲ್ಲ. ಸಹಜವಾಗಿಯೇ ನಮಗಿದರ್ಯಾವುದರ ಬಗ್ಗೆ ಗೊತ್ತಿರಲ್ಲಿಲ್ಲ. ಆಗಾಗ ಕೂದಲು ಕತ್ತರಿಸಿಕೊಳ್ಳಲು ಚಿಕ್ಕಮ್ಮ ಕರೆದುಕೊಂಡು ಹೋದ್ದದ್ದು ಬಿಟ್ಟರೆ ಮತ್ತಿನ್ಯಾವುದಕ್ಕೂ ಈ ಬ್ಯೂಟಿ ಪಾರ್ಲರಿಗೆ ಹೋದ್ದದ್ದು ನೆನಪಿರಲ್ಲಿಲ್ಲ.

ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!

ಇಂಜಿನಿಯರಿಂಗ್ 3ನೇ ವರ್ಷದಲ್ಲಿ ಗೆಳತಿಯರೆಲ್ಲಾ "ನಿನ್ನ ಹುಬ್ಬು ನಮ್ಮ ಕಾಲೇಜಿನ ಪೊದೆ ಇದ್ದಂಗಿದೆ ಬಾ ಟ್ರಿಮ್ ಮಾಡಿಸೋಣ" ಎಂದು ಕರೆದುಕೊಂಡು ಹೋದರು ನೋಡಿ ಅಲ್ಲಿಗೆ ನನಗೆ ಈ ಪ್ರಪಂಚ ಪರಿಚಯವಾದದ್ದು. ನನಗಿಂತ ಪುಟಾಣಿ ಹುಡುಗಿಯರು, ಈಶಾನ್ಯ ರಾಜ್ಯದವರೆಂದು ಮುಖಚರ್ಯೆಯಲ್ಲಿ ಗೊತ್ತಾಯಿತು. ಹಿಂದಿಯಲ್ಲಿ "ಮೋಟಾ ಯಾ ಪತ್ಲಾ" ಎಂದು ಕೇಳಿ ನಾ ಪೆದ್ದಾಗಿ ಪತ್ಲಾ ಅಂದು ದಾರದಿಂದ ಏಳೆದೆಳೆದು ನನ್ನ ಹುಬ್ಬನ್ನ ತಿದ್ದಿದ್ದರು. ಜೀವನದ ಮಹಾದುಃಖದ ಸಮಯದಲ್ಲಿಯೂ ನಾ ಅಷ್ಟೊಂದು ಅತ್ತಿರಲ್ಲಿಲ್ಲ. ಹಾಗೆ ಕಣ್ಣೀರು ಬಂದಿತ್ತು. ಕೆಂಪು ಕೆಂಪು ಹುಬ್ಬು. ಒಮ್ಮೆ ಮಾಡಿಸಿದರೆ ಮುಗೀತು ಅಂದುಕೊಂಡರೆ ನನ್ನ ಗೆಳತಿ ಪ್ರತಿ ತಿಂಗಳು ಅಥವಾ 20 ದಿವಸಕ್ಕೆ ಬರಬೇಕು ಎಂದು ಹೇಳಿದ್ದು ಕೇಳಿ ದಂಗಾದೆ.

Lets enter the unusual world of makeup

ಇನ್ನು ನಾನು 20 ದಿವಸಕ್ಕೆ ಹೋಗಬೇಕು ಎಂದು ಹೋದೆ. ಗೆಳತಿಯರು ಬಂದಿರಲ್ಲಿಲ್ಲ. ಸರಿ ಅಲ್ಲಿದ್ದ ಹುಡುಗಿಯರು ಮಾತಿಗಿಳಿದರು. 18-20 ವರ್ಷದವರು, ಓದಿಲ್ಲ, ಅಲ್ಲಿ ಕೆಲಸ ಸಿಗೋಲ್ಲ, ಹೆಣ್ಣು ಮಕ್ಕಳನ್ನು ಮಾರುವ ದಂಧೆಯಿಂದ ತಪ್ಪಿಸಿಕೊಂಡು ಬಂದವರು. ಮದುವೆ ಮಾಡಿಕೊಂಡ ಬಂದ ಗಂಡ ಮತ್ತೊಬ್ಬಳೊಟ್ಟಿಗೆ ಸಂಸಾರ ಮಾಡುವವನು, 4 ತಿಂಗಳ ಬಸುರಿ, ಇಂತಹ ನೂರೆಂಟು ಕಥೆಗಳು ಕೇಳಿ ದಂಗಾದೆ. ಕನ್ನಡದವರೇ ನಡೆಸುವ ಪಾರ್ಲರಿನಲ್ಲಿಯೂ ಹಿಂದಿಯೇ ಅಧಿಕೃತ ಭಾಷೆ. ಹೋದಾಗೆಲ್ಲಾ ಒಂದಷ್ಟು ಕನ್ನಡ ಹೇಳಿಕೊಟ್ಟರೂ "ಭೂಲ್ ಗಯಿ" ಎಂದು ತಣ್ಣಗೆ ನಗೆ ನಕ್ಕು ಕೆಲಸ ಮಾಡುವವರು.

ಮುಂಚೆ ಈ ಪಾರ್ಲರಿನದೆಲ್ಲಾ ಬೋಗಸ್, ಹೆಣ್ಣು ಮಕ್ಕಳನ್ನ ವಿಪರೀತ ಸೌಂದರ್ಯೋಪಾಸಕರಾಗಿ ಮಾಡುತ್ತದೆ ಎಂದು ತಿಳಿದ್ದಿದ್ದ ನನಗೆ, ಇದು ಹೆಣ್ಣು ಮಕ್ಕಳು ಬದುಕು ಕಟ್ಟಿಕೊಳ್ಳುವ ಸ್ಥಳ ಎಂದು ತಿಳಿಯಿತು. ಬದುಕಿನ ಬಂಡಿಯನ್ನ ನೂಕುವುದಕ್ಕೆ ಅವರು ಕಂಡುಕೊಂಡ ತುಂಬಾ ಮರ್ಯಾದಸ್ಥ ಮಾರ್ಗವೆಂದೂ ಗೊತ್ತಾಯಿತು. ತಾವೆ ಚೆಂದವಿದ್ದರೂ ಸಹ ಅದು ಮಾಡಿ, ಇದು ಮಾಡಿ ಎಂದು ನಮ್ಮ ಅಂದ ಚೆಂದವನ್ನ ವಿಪರೀತ ಕಾಳಜಿ ಮಾಡುವವರು. ಒಮ್ಮೊಮ್ಮೆ ನಮಗ್ಯಾವ ಆಸಕ್ತಿ ಇಲ್ಲದಿದ್ದರೂ ಅದು ಇದು ಎಲ್ಲಾ ಹೇಳಿ 30 ರುಪಾಯಿನ ಕೆಲಸವನ್ನ 300ಕ್ಕೋ 3,000ಕ್ಕೋ ಎಳೆಯುವ ಪರಿ ಬಹು ವಿಚಿತ್ರ. ಒಮ್ಮೊಮ್ಮೆ ಅನ್ನಿಸುತ್ತೆ ಹೆಣ್ಣು ಮಕ್ಕಳು ಅವರು ಇದ್ದಂತೆ ಇದ್ದಿದ್ದರೆ ಇವರೆಲ್ಲಾ ಏನು ಮಾಡುತ್ತಿದ್ದರೆಂದು?

Lets enter the unusual world of makeup

ಇತ್ತೀಚೆಗೆ ನಡೆದ ಅಣ್ಣನ ಮದುವೆಯಲ್ಲಿ ಕಂಡ ಎಲ್ಲಾ ಮೇಕಪ್ಪಿನ ಮುಖಗಳಲ್ಲಿಯೂ ನಾನು ಒಳ ಸೌಂದರ್ಯವನ್ನ ಹುಡುಕಲು ಯತ್ನಿಸಿದೆ. ನನ್ನನ್ನು ಒಂದಷ್ಟು ಚೆಂದಗಾಣಿಸಿದ ತಂಗಿಯ ಬಾಯಲ್ಲಿಯೂ ಅದೇ ಮಾತು ಬಂದಿತ್ತು. ಮೇಕಪ್ಪೇ ಮಾಡಿಕೊಳ್ಳದ ಮುಖಕ್ಕೆ ಕೇಳುತ್ತಿದ್ದ ಪ್ರಶ್ನೆಗಳು ಹಾಸ್ಯಮಯವಾಗಿತ್ತು. ಹುಶಾರಿಲ್ವಾ? ಪಾರ್ಲರಿಗೆ ಹೋಗೋಕೆ ಟೈಮ್ ಆಗ್ಲಿಲ್ಲ್ವಾ ಅಂತ?

ಬಾರ್ಸಿಲೋನಾದಲ್ಲಿದ್ದಾಗ ಇದಕ್ಕೆಲ್ಲ ಸಮಯ, ಹಣ ಎರಡೂ ಹೊಂದಿಸುವುದಕ್ಕೆ ಸಾಧ್ಯವಾಗುತ್ತಿರಲ್ಲಿಲ್ಲ. ಆದರೆ ಒಮ್ಮೆ ಅಲ್ಲಿ ಹೇಗಿದೆ ಎಂದು ನೋಡಲು ಹೋಗಿದ್ದೆ. ಅಬ್ಬಬ್ಬಾ ಚಿಕ್ಕ ವಯಸ್ಸಿನ ಪುಟಾಣಿಯಿಂದ ಹಿಡಿದು ಹಣ್ಣು ಹಣ್ಣು ಮುದುಕಿಯ ತನಕ ಅಲ್ಲಿದ್ದರು. 90 ವರ್ಷದ ಲಿಂಡಾ ಅಜ್ಜಿ ಉಗುರನ್ನು ಒಂದೇ ಶೇಪಿನಲ್ಲಿ ಕತ್ತರಿಸಿಕೊಂಡು ನಾಳೆಯ ಪಾರ್ಟಿಗೆ ಪಿಂಕ್ ನೈಲ್ ಪಾಲಿಶನ್ನ ಹಚ್ಚಿಸಿಕೊಳ್ಳುತ್ತಿದ್ದಳು.

ನಾ ಕುತೂಹಲದಿಂದ ಕೇಳಿದಾಗ ಆಕೆ "I want to die with manicured hands meg" ಎಂದು ಉತ್ತರಿಸಿದ್ದಳು. ಅಲ್ಲಿನ ಹುಡುಗಿಯರು ಮತ್ತು ಹುಡುಗರು (ಹಾ ಇಲ್ಲಿನ ಹಾಗೆ ಬರೀ ಹುಡುಗಿಯರು ಮಾತ್ರ ಇರೋಲ್ಲ, ಇಬ್ಬರೂ ಇರುತ್ತಾರೆ) ಅಜ್ಜಿಗೆ ಪ್ರತಿ 15 ದಿವಸ ಸಿಗುವ ಅಶ್ವಿನಿ ದೇವತೆಗಳು. ಅರ್ಧ ದಿವಸ ಇದ್ದು ಹೋಗಿ ಅಜ್ಜಿ ತನ್ನ ಜೀವನೋತ್ಸಾಹವನ್ನ ಹೆಚ್ಚಿಸಿಕೊಳ್ಳುತ್ತಾಳೆ. ಇದೇ ಒಂದು ಬೇರೆ ಲೋಕ ನಾ ಕಂಡಿದ್ದು. ಸ್ವಲ್ಪ ಹೊತ್ತು ಮಹಾರಾಣಿಯಾಗುವ ಸಮಯ!

English summary
How do you measure beauty? Can we make ourselves beautiful by artificial makeup? Beauty has so many forms, and I think the most beautiful thing is confidence and loving yourself. Meghana Sudhindra takes you inside the unusual world of makeup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X