• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶತಮಾನದ ಹಿಂದಿನ ಬೆಂಗಳೂರು ನೆನಪಿಸುವ ಸಿದ್ದಾಪುರದ ಸಸ್ಯಕಾಶಿ

By ಜಯನಗರದ ಹುಡುಗಿ
|

ನಾನು ಮದುವೆಯಾದ ಹೊಸದರಿಂದ ನಮ್ಮತ್ತೆ "ಗಿಡಗಳನ್ನ ತರೋದಕ್ಕೆ ಸಿದ್ದಾಪುರದ ಹೋಗಬೇಕು, ಅಲ್ಲಿ ಸಿಕ್ಕಾಪಟ್ಟೆ ಗಿಡಗಳು ಸಿಗತ್ತೆ" ಎಂದು ಅಂತಾನೆ ಇದ್ದರು. ಗಿಡಗಳನ್ನ ನೋಡಿ ಬೆಳೆದವಳಾದರೂ ನನಗಷ್ಟು ಬೆಳೆಸುವ ಕಾರ್ಯದಲ್ಲಿ ಆಸಕ್ತಿ ಇರಲ್ಲಿಲ್ಲ. ಅದಕ್ಕೆ ವ್ಯಯಿಸುವ ಸಮಯದಲ್ಲಿ 2 ಪುಸ್ತಕ ಓದಬಹುದೆಂಬ ಲೆಕ್ಕಾಚಾರ ನನ್ನ ಮನಸಲ್ಲಿ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ನಮ್ಮ ಮನೆಗಳಲ್ಲಿ ಅವರವರ ಆಸಕ್ತಿಗೆ ಅವರವರ ಸಮಯವನ್ನು ಬಿಡುವ ಕಾರಣ ಯಾರೂ ಯಾರನ್ನೂ ಬಲವಂತ ಮಾಡುವುದಿಲ್ಲ. ಅವರವರ ಆಸಕ್ತಿಯನ್ನ ಪೋಷಿಸಿಕೊಳ್ಳೋದು, ಮತ್ತೊಬ್ಬರ ಬೆನ್ನು ತಟ್ಟುವುದು ನಮ್ಮ ಅಭ್ಯಾಸ. ಹೀಗಿದ್ದಾಗ ಈ ಸಿದ್ದಾಪುರಕ್ಕೆ ಹೋಗಿ ಗಿಡಗಳನ್ನ ತರುವ ವಿಷಯ ಏನು ಎಂದು ನನಗೆ ಅರ್ಥವಾಗಲ್ಲಿಲ್ಲ. ನನ್ನ ತಾಯಿಯೂ ಸಹ ಆಗಾಗ ಅಲ್ಲಿ ಹೋಗಿ ಗಿಡಗಳನ್ನ ತಂದು ನೆಟ್ಟು, ಮಕ್ಕಳಂತೆ ಪೋಷಿಸುತ್ತಿದ್ದಳು.

ಸಿದ್ದಾಪುರ ಅಂದರೆ ಊರಿನ ಆಚೆ ಇರಬಹುದು ಎಂಬ ನಾನು ಆರಾಮಾಗಿದ್ದೆ. ಆದರೆ ನಮ್ಮ ಜಯನಗರದಲ್ಲಿಯೇ ಇದೆ ಎಂದು ತಿಳಿದಾಗ ವಿಪರೀತ ಖುಷಿಪಟ್ಟೆ. ಆದರೂ ಅಷ್ಟೊಂದು ಜಾಗಗಳು ನಮ್ಮ ಬೆಂಗಳೂರಿನಲ್ಲಿರುತ್ತದೆ ಎಂಬ ಒಂದು ಚಿಕ್ಕ ಸಂಶಯದೊಂದಿಗೇ ಹೋದೆ.

'ಅಮ್ಮ' ಹೀಗೇ ಇರಬೇಕೆಂದು ಯಾರು ಹೇಳಿದ್ದು ನಿಮಗೆ?

ಅಶೋಕ ಪಿಲ್ಲರಿನ ಹತ್ತಿರ ಕಾರು ತಿರುಗಿಸಿದ ನಂತರ ಅಜ್ಜಿ ಮತ್ತು ಅತ್ತೆ ಅಲ್ಲೇ ಕೃಷ್ಣೇಂದ್ರ ನರ್ಸರಿ ಕಡೆ ತಿರುಗಿಸಿ ಎಂದು ಹೇಳುತ್ತಾ ಹೋದರು. ಇದೇನು ಈ ಪಾಟಿ ಎಕರೆಗಟ್ಟಲೆ ಬರೀ ಗಿಡಗಳೇ ತುಂಬಿಕೊಂಡಿರುವ ಜಾಗ ಕಂಡು ನಾನು ಮೂಕವಿಸ್ಮಿತಳಾದೆ.

ಸಿದ್ದಾಪುರ ನರ್ಸರಿಯ ಇತಿಹಾಸ

ಸಿದ್ದಾಪುರ ನರ್ಸರಿಯ ಇತಿಹಾಸ

ಮಹಾರಾಜರ ಕಾಲದಲ್ಲೋ ಬ್ರಿಟೀಷರ ಕಾಲದಲ್ಲೋ ಈ ನರ್ಸರಿಯ ಒಡೆಯರಿಗೆ ಭೂಮಿ ಸಿಕ್ಕಿದೆ. ಕೆಲವಂತೂ 1885 ಇಸವಿಯವರೆಗೆ ಚರಿತ್ರೆಯನ್ನ ಹೇಳತ್ತೆ. ಓಬಳಪ್ಪ ನರ್ಸರಿಯಂತೂ ಸಿಕ್ಕಾಪಟ್ಟೆ ಹಳೆಯದು. ಇನ್ನು ಕೃಷ್ಣೇಂದ್ರ ನರ್ಸರಿ 1940ರಿಂದ ಈಗಲೂ ಸಿಕ್ಕಾಪಟ್ಟೆ ಯಶಸ್ವಿಯಾಗಿ ನಡೆಯುತ್ತಿದೆ. ಒಂದೊಂದು ನರ್ಸರಿಯಲ್ಲೂ ಕಡಿಮೆಯೆಂದರೆ ಒಂದು ಸಾವಿರದಷ್ಟು ವೆರೈಟಿ ಗಿಡಗಳಿವೆ. ಬೆಳಗ್ಗೆ 10 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಇವರ ವ್ಯಾಪಾರಕ್ಕೆ ಕೊನೆಯೇ ಇಲ್ಲ. ತುಳಸಿ ಗಿಡಗಳಿಗಂತೂ ವಿಪರೀತ ಬೇಡಿಕೆ. ಆದರೆ ಸಂಜೆ 6 ಘಂಟೆಯ ನಂತರ ತುಳಸಿಗಿಡಗಳನ್ನ ಅವರು ಮಾರುವುದಿಲ್ಲ. ಅದಕ್ಕೆ ಅವರದೇ ಆದ ನಂಬಿಕೆಗಳಿವೆ.

ಆಟೋಗಾಗಿ ಗಂಟೆಗಟ್ಟಲೆ ಕಾದುಕೂತ ನನ್ನ ಕಥೆ ವ್ಯಥೆ

ವೆರೈಟಿ ವೆರೈಟಿ ರೋಸ್ ಗಿಡಗಳು

ವೆರೈಟಿ ವೆರೈಟಿ ರೋಸ್ ಗಿಡಗಳು

20 ವೆರೈಟಿ ರೋಸ್ ಗಿಡಗಳು, ಕ್ರೆಸಿಯುನ್ಥುಸ್, ಲಾವೆಂಡರ್ ಮತ್ತು ನಾಗದಾಳಿ ಗಿಡಗಳು ಸಹ ಇಲ್ಲಿ ನಳನಳಿಸುತ್ತದೆ. ನಾಗದಾಳಿಗಳು ಹಾವುಗಳನ್ನ ದೂರ ಇಡುತ್ತದೆ ಎಂಬ ನಂಬಿಕೆ ಇದೆ. ಒಂದೊಂದು ನರ್ಸರಿ 2ರಿಂದ 3 ಎಕರೆಯಷ್ಟು ಜಾಗದಲ್ಲಿದೆ. ಮುಂಚೆ ಒಬ್ಬೊಬ್ಬರಿಗೆ 20-30 ಎಕರೆಯಿತ್ತಂತೆ ಆದರೆ ಅವರವರ ಮನೆಯವರಿಗೆ ಭಾಗವಾಗಿ ಒಬ್ಬೊಬ್ಬರ ಹತ್ತಿರ ಈಗ ಅಷ್ಟೆ ಉಳಿದುಕೊಂಡಿದೆ. ಈ ನರ್ಸರಿಗಳು ಮಹಾರಾಜರ ಮನೆಗಳಿಗೆ, ಬ್ರಿಟೀಷರ ಮನೆಗಳಿಗೆ ಗಿಡಗಳನ್ನ ಮಾರುವ, ಪಾಟುಗಳಿಗೆ ಹಾಕಿಸುವ ಮತ್ತು ಅವುಗಳನ್ನ ಕಾಪಾಡುವ ಕೆಲಸ ಅವರದ್ದಾಗಿತ್ತಂತೆ. ಮರಿಗೌಡರು ಲಾಲ್ ಬಾಗಿಗೆ ಬಂದ ನಂತರ ಇವರ ವ್ಯಾಪಾರ ಉದ್ಯಮ ಮತ್ತಷ್ಟು ಜಾಸ್ತಿಯಾಯ್ತು ಅನ್ನುತ್ತಾರೆ ಇಲ್ಲಿನ ಜನ.

ನೃತ್ಯಗಾರ್ತಿಯರಿಗಿರುವ ರಂಗಪ್ರವೇಶ ಸಂಗೀತಗಾರರಿಗೇಕಿಲ್ಲ?

ಮಳೆ ನೀರು ಕೊಯಿಲಿನ ವ್ಯವಸ್ಥೆ

ಮಳೆ ನೀರು ಕೊಯಿಲಿನ ವ್ಯವಸ್ಥೆ

ಕೃಷ್ಣೇಂದ್ರ ನರ್ಸರಿ 2 ಎಕರೆ ಜಾಗದಲ್ಲಿ ಸುಮಾರು ಗಿಡಗಳನ್ನ ಹಾಕಿಕೊಂಡಿದ್ದಾರೆ. ನೀರಿನ ಸಮಸ್ಯೆ ಇವರಿಗೆ ಅಷ್ಟಿಲ್ಲ. 3 ಮಳೆ ನೀರು ಕೊಯಿಲಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ, ಒಂದು ದೊಡ್ಡ ಬಾವಿಯನ್ನೂ ಸಹ ತುಂಬಾ ಚೆನ್ನಾಗಿ ಶುಚಿಯಾಗಿಟ್ಟುಕೊಂಡಿದ್ದಾರೆ. 80 ಲಕ್ಷ ಲೀಟರಿನಷ್ಟು ನೀರು ಸಂಗ್ರಹ ಈ ಮಳೆ ನೀರಿನ ಕೊಯಿಲಿನಿಂದ ಆಗುತ್ತದೆ. ಬರಿ ಇಲ್ಲಷ್ಟೆ ಅಲ್ಲದೇ ದೇವನಹಳ್ಳಿಯಲ್ಲಿ 40 ಎಕರೆ ಜಾಗದಲ್ಲಿ ಮತ್ತಷ್ಟು ಗಿಡಗಳನ್ನ ಹಾಕಿಕೊಂಡು ಅವನ್ನೆಲ್ಲಾ ಇಲ್ಲಿ ಮಾರಾಟ ಮಾಡುತ್ತಾರೆ. ಇಲ್ಲಿ ಪರ್ಪಲ್ ಮತ್ತು ಬಿಳಿ ಆರ್ಕಿಡ್ಗಳು ಬಹಳ ಪ್ರಸಿದ್ಧಿ. ತೈವಾನಿನಿಂದ ತಂದು ಕಸಿ ಮಾಡಿದ್ದಾರೆ. 2 ತಿಂಗಳು ಬಾಡದೇ ಅರಳಿರುವ ಹೂಗಳು ಅವು. 40ರಿಂದ 50 ಬಗೆಯ ದಾಸವಾಳಗಳು, 148 ಬಗೆಯ ಸಣ್ಣ ಗಿಡಗಳು 500 ಬಗೆಯ ಮತ್ತಷ್ಟು ದೊಡ್ಡ ಗಿಡಗಳು ಸೇರಿ ಸುಮಾರು 1000ದಿಂದ 4000 ಸಾವಿರದವರೆಗೆ ಗಿಡಗಳನ್ನ ನೆಟ್ಟು ಪೋಷಿಸಿದ್ದಾರೆ.

ಶತಮಾನಗಳ ಹಿಂದೆ ಬೆಂಗಳೂರು ಹೇಗಿತ್ತು

ಶತಮಾನಗಳ ಹಿಂದೆ ಬೆಂಗಳೂರು ಹೇಗಿತ್ತು

ಈ ಸಿದ್ದಾಪುರದ ಪೂರ್ತಿ ಏರಿಯಾದಲ್ಲಿ ಒಂದು ದೊಡ್ಡ ಬಿಲ್ಡಿಂಗ್ ಸಹ ಕಾಣೋಲ್ಲ, ಅಂದರೆ ಯಾವ ಹೈರೇಸ್ ಬಿಲ್ಡಿಂಗ್ಗಳು ಸಹ ಕಾಣಸಿಗುವುದಿಲ್ಲ. ಎಲ್ಲಾ ಕಡೆ ನರ್ಸರಿಗಳೇ ಇದ್ದ ಕಾರಣ ಇಲ್ಲಿರುವ ಎಲ್ಲರೂ ತಮ್ಮ ಜಾಗಗಳನ್ನ ಮಾರದೇ ಇನ್ನೂ ನರ್ಸರಿಗಳನ್ನಾಗಿಯೇ ಮಾಡಿಟ್ಟುಕ್ಕೊಂಡಿದ್ದಾರೆ. ಈಗ 4ನೇ ಪೀಳಿಗೆಯವರು ಈ ನರ್ಸರಿಗಳನ್ನ ನಡೆಸುತ್ತಿದ್ದಾರೆ. ಆ ನರ್ಸರಿಗಳ ಮಧ್ಯದಲ್ಲಿ ಬಾವಿ, ಸಣ್ಣ ಕೊಳಗಳು ಇವೆಲ್ಲವೂ, ಶತಮಾನಗಳ ಹಿಂದೆ ಬೆಂಗಳೂರು ಹೇಗಿತ್ತು ಎನ್ನುವುದನ್ನ ಪರಿಚಯ ಮಾಡಿಕೊಡುತ್ತದೆ.

4ನೇ ತಲೆಮಾರಿನಿಂದ 5ನೇ ತಲೆಮಾರಿಗೆ

4ನೇ ತಲೆಮಾರಿನಿಂದ 5ನೇ ತಲೆಮಾರಿಗೆ

ಇಲ್ಲಿ ಕೆಲಸ ಮಾಡುವ ಸುಮಾರು ಗಾರ್ಡನರ್ ಗಳು ವಹ್ನಿಕುಲ ಕ್ಷತ್ರಿಯ ಸಮಾಜಕ್ಕೆ ಸೇರಿದವರು. ಇಲ್ಲಿ ಕೆಲಸಕ್ಕಾಗಿ ಬಂದವರು ಇಲ್ಲೇ ಶತ ಶತಮಾನಗಳಿಂದ ಇದ್ದು ನರ್ಸರಿಗಳನ್ನ ಸ್ಥಾಪನೆ ಮಾಡಿಯೋ ಅಥವಾ ಅಲ್ಲಿ ಕೆಲಸಮಾಡಿಕೊಂಡಿದ್ದಾರೆ. ಮುಂಚೆ ಉತ್ತರ ಕರ್ನಾಟಕದ ರೈತರೂ ಸಹ ಸಸಿಗಳಿಗೆ, ಗಿಡಗಳಿಗೆ ಇಲ್ಲೇ ಬರುತ್ತಿದ್ದರಂತೆ. ಕೋಟಿಗಟ್ಟೆಲೆ ಬೆಲೆಬಾಳುವ ನೆಲಕ್ಕೆ ಈಗ ಕೊಂಚ ಹಣದ ದಾಹ ಹೆಚ್ಚಾಗಿದೆ. ಕೃಷ್ಣೇಂದ್ರ ನರ್ಸರಿಯ ಎದುರುಗಡೆಗೆ ದೊಡ್ಡ ಅಪಾರ್ಟ್ಮೆಂಟ್ ಬಂದಿದೆ. ಹಂಗಾಗಿಯೂ ನರ್ಸರಿಗಳನ್ನ ಮುಂದಿನ ಪೀಳಿಗೆಯೂ ನಡೆಸಬೇಕೆಂಬ ಹಪಿಹಪಿಯೊಂದಿಗೆ 4ನೇ ತಲೆಮಾರು 5ನೇ ತಲೆಮಾರಿಗೆ ಅದರ ವಿದ್ಯೆಯನ್ನ ಕಲಿಸುತ್ತಿದೆ.

English summary
Krishnendra nursary in Siddapura reminds us about century old beautiful Bengaluru. Now also the nursary, which is near Ashoka Pillar, Jayanagar, has been well maintained and has thousands of veriety flowers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more