ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಭವಿಷ್ಯ ಬದಲಾಯಿಸಲು, ಪ್ರಶ್ನೆ ಕೇಳಲಿಕ್ಕಾದರೂ ಮತ ಚಲಾಯಿಸಿ

By ಜಯನಗರದ ಹುಡುಗಿ
|
Google Oneindia Kannada News

ಚುನಾವಣೆ ಚುನಾವಣೆ ಎಂಬ ಮಾತನ್ನ ಟೀವಿಯಲ್ಲಿ, ರೇಡಿಯೋದಲ್ಲಿ, ದಿನ ಪತ್ರಿಕೆ, ಫೇಸ್ ಬುಕ್, ಇಂಟರ್ನೆಟ್ ಅಲ್ಲಿ ನೋಡಿ ನೋಡಿ, ಅವರಿಗೆ ವೋಟು ಹಾಕೋದ, ಇವರಿಗಾ ಎಂಬ ಪ್ರಶ್ನೆ ಮೂಡುತ್ತಿರುತ್ತದೆ. 2014ರ ಮಹಾ ಚುನಾವಣೆಯಲ್ಲಿ ನನ್ನ ಹಳೆ ಕಛೇರಿಯ ಸಹೋದ್ಯೋಗಿ ಮಿತ್ರರು ರಜಾ ಹಾಕಿ ಯಾವ ಊರಲ್ಲಿ ಠಿಕಾಣಿ ಹೂಡೋದು ಎಂಬ ಯೋಚನೆ ಮಾಡುತ್ತಿದ್ದರು. ಹೊಸ ಕಛೇರಿಯಲ್ಲಿ 2018ರ ಚುನಾವಣೆಗೆ ಎಲ್ಲ ತಮ್ಮ ತಮ್ಮ ಊರಿಗೆ ಹೋಗಿ ಮತ ಚಲಾಯಿಸುವ ಬಗ್ಗೆ ಯೋಚನೆ ಯೋಜನೆ ಹಾಕಿಕೊಂಡಿದ್ದಾರೆ. ಖುಷಿಯಾಗೋದು ಈ ವಿಚಾರಕ್ಕೆ. ಜನಕ್ಕೆ ಅವರ ಮತ ಚಲಾವಣೆಯಿಂದ ಅವರ ಭವಿಷ್ಯವನ್ನ ರೂಪಿಸಿಕೊಳ್ಳಬಹುದು ಮುಂದೇನಾದರೂ ಮಾಡಬಹುದು ಎಂಬ ಆಸೆಯಿಂದ ಅಥವಾ ಅಪೇಕ್ಷೆಯಿಂದ ಜನ ಅವರ ಹಕ್ಕನ್ನ ಚಲಾಯಿಸುತ್ತಾರೆ.

ಬಾರ್ಸಿಲೋನಾದಲ್ಲಿ ಹೋದ ವರ್ಷ ನನ್ನ ಸ್ನಾತಕೋತ್ತರ ಪದವಿಗೆ ಹೋದಾಗ ಈ ಮತ ಚಲಾವಣೆಯ ಬಗ್ಗೆ ಒಂದು ವಿಶಿಷ್ಟ ಅನುಭವವಾಗಿತ್ತು. ಕೊಂಚ ಅಂತಾರಾಷ್ಟ್ರೀಯ ಸುದ್ದಿಗಳನ್ನ ಓದಿದ್ದರೆ ಬಾರ್ಸಿಲೋನಾ ಕತಲೂನ್ಯ ಪ್ರಾಂತ್ಯದ ರಾಜಧಾನಿಯದ್ದು. ಇತ್ತೀಚೆಗೆ ಸ್ಪೇನ್ ದೇಶದಿಂದ ಬೇರ್ಪಡುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಅದಕ್ಕೆ ಮತ ಏಣಿಕೆಯೂ ಆಗಿತ್ತು. ಸ್ಪೇನ್ ಕತಲೂನ್ಯವನ್ನ ಬೇರೆ ದೇಶವಾಗಿ ಬಿಡಲು ತಯಾರಿರಲ್ಲಿಲ್ಲ. ಇದಕ್ಕೆ ಅದರ ಎಕಾನಮಿಯೂ ಕಾರಣ. ಸ್ಪೇನ್ ನ ಬಹುಬಾಲು ರಫ್ತು, ದುಡ್ಡು ಎಲ್ಲ ಬಾರ್ಸಿಲೋನಾದ ಬಂದರಿನಲ್ಲಿ ನಡೆಯೋದು. ಈ ಕಾರಣಕ್ಕೆ ಮಾತ್ರ ಬಾರ್ಸಿಲೋನಾವನ್ನ ಸ್ಪೇನ್ ಬಿಡಲು ತಯಾರಿರಲ್ಲಿಲ್ಲ.

Karnataka Elections : Vote for your future, for the change

ಸ್ವಾತಂತ್ರ್ಯ ಹೋರಾಟ ತೀವ್ರವಾದಾಗ 1 ವರ್ಷದ ನಂತರ ಅಂದರೆ 2017ರ ಅಕ್ಟೋಬರಿನಲ್ಲಿ ಚುನಾವಣೆಯಲ್ಲಿ ಮತ ಎಣಿಕೆ ನಂತರ ದೇಶ ವಿಂಗಡಣೆ ಮಾಡುವ ಇರಾದೆ ವ್ಯಕ್ತ ಪಡಿಸಿತ್ತು ಸ್ಪೇನ್ ಸರ್ಕಾರ. ಆದರೆ ಅದಕ್ಕೊಂದು ಷರತ್ತು ಹಾಕಿತ್ತು. ಬಾರ್ಸಿಲೋನಾದ ಜನರು ತಮ್ಮ ಊರಿನಲ್ಲಿಯೇ 1 ವರ್ಷ ಇದ್ದರೆ ಮಾತ್ರ ಅವರಿಗೆ ಮತ ಹಾಕುವ ಅವಕಾಶ. ಅಂದರೆ ಸ್ಪೇನಿನ ಪೌರತ್ವ ಇಟ್ಟುಕೊಂಡು ಅಮೇರಿಕಾದಲ್ಲಿದ್ದರೆ ಅವರಿಗೆ ಮತ ಚಲಾವಣೆಯ ಅವಕಾಶ ಇರುವುದಿಲ್ಲ. ಅಕ್ಟೋಬರ್ 2016ರಿಂದ ಅಕ್ಟೋಬರ್ 2017ರಷ್ಟು ಮಿನಿಮಮ್ ಸಮಯ ಜನ ಅವರ ಅಡ್ರೆಸ್ನಲ್ಲಿ ಇರಬೇಕಿತ್ತು.

ವಿಧಾನಸಭಾ ಚುನಾವಣೆ: ವಿಶೇಷ ಅಂಚೆ ಚೀಟಿ ಬಿಡುಗಡೆವಿಧಾನಸಭಾ ಚುನಾವಣೆ: ವಿಶೇಷ ಅಂಚೆ ಚೀಟಿ ಬಿಡುಗಡೆ

ಭಾರತದ ಹಾಗೆ ಸುಮಾರು ಯುವಜನರು, ದೇಶವನ್ನ ಬಿಟ್ಟು ಇನ್ನೆಲ್ಲೋ ಇರುವವರಾಗಿದ್ದರಿಂದ ಯುವಜನರನ್ನ ಮತದಾನದಿಂದ ದೂರ ಇಡುವ ಹುನ್ನಾರ ಅವರದಾಗಿತ್ತು. ಆದರೆ ಈ ಆದೇಶ ಇವರಿಗೇ ಮುಳುವಾಗಿದ್ದು ಸುಳ್ಳಲ್ಲ. ಈ ನಿಯಮವನ್ನ ಪಾಲಿಸಲು ಸುಮಾರು ಕತಲನ್ನರು ತಮ್ಮ ಕೆಲಸವನ್ನ ಒಂದು ವರ್ಷದ ಕಾಲ ಮುಂದೂಡಿದರು. ವಾಪಸ್ಸು ತಮ್ಮ ತಮ್ಮ ಮನೆಗಳಿಗೆ ಬಂದು ಸೇರಿಕೊಂಡರು. ದೊಡ್ಡ ದೊಡ್ಡ ಹುದ್ದೆ ಕೆಲಸವನ್ನೆಲ್ಲಾ ಬಿಟ್ಟು ತಮ್ಮ ಮನೆಗೆ ಬಂದು ಸೇರಿಕೊಂಡರು. ಗೂಗಲಿನ ಕೆಲಸ, ಪಿಎಚ್ಡಿಯ ಥೀಸಿಸ್ ಇವೆಲ್ಲವನ್ನ ಒಂದು ವರ್ಷಗಳ ಕಾಲ ತಡೆಹಿಡಿದುಕೊಂಡು ಬಂದರು. ಬಂದು ಸುಮ್ಮನೆ ಕೂರಲ್ಲಿಲ್ಲ, ಸ್ವಾತಂತ್ರ್ಯದ ಸಲುವಾಗಿ ಎಲ್ಲಾ ಕಡೆ ಪ್ರಚಾರ, ಅದರ ಬಗ್ಗೆ ಬೇರೆ ಬೇರೆ ದೇಶಗಳ ಮಾಧ್ಯಮಗಳಿಗೆ ವಿಷಯವನ್ನೂ ತಲುಪಿಸುತ್ತಿದ್ದರು. ನನ್ನ ಅಪಾರ್ಟ್ಮೆಂಟಿನಲ್ಲಿ ಪೂರ್ತಿ ಇಂಗ್ಲೀಷ್ ಮಾತಾಡುವ ಮಗುಗೆ ಕತಲಾನ್ ಪಾಠವಾಗುತ್ತಿತ್ತು. ಅಷ್ಟೊಂದು ಉತ್ಸುಕತೆ, ಭಾಷಾ ಪ್ರೇಮ.

ಬೆಂಗಳೂರು: ಮತದಾನದ ಕುರಿತು ಜಾಗೃತಿ ಮೂಡಿಸಲು ವಾಕಥಾನ್ಬೆಂಗಳೂರು: ಮತದಾನದ ಕುರಿತು ಜಾಗೃತಿ ಮೂಡಿಸಲು ವಾಕಥಾನ್

ಸ್ಪೇನ್ ಮತ್ತು ಕತಲೂನ್ಯ ಏನು ಪರಿಶುದ್ಧ ರಾಷ್ಟ್ರವಲ್ಲ. ಅಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನನ್ನ ರೆಸಿಡೆನ್ಸಿ ಪರ್ಮಿಟ್ ಗೆ ನಾ ಎಷ್ಟೆಲ್ಲಾ ಅಲೆದಾಡಿದ್ದೆ, ಬ್ಯಾಂಕ್ ವ್ಯವಹಾರಕ್ಕೆ ಎಷ್ಟೆಲ್ಲಾ ಹರಸಾಹಸ ಮಾಡಿದ್ದೆ, ಮನೆ ಬಾಡಿಗೆ, ಟ್ಯಾಕ್ಸ್ ಎಲ್ಲವೂ ಭಾರತದ ಹಾಗೆ ನಿಧಾನ ಗತಿ. ನೀರು, ಕರೆಂಟಿಗೂ ಅವರ ಭಾಷೆಯಲ್ಲಿಯೇ ಜಗಳ ಆಡಿ ಬೈದು ಬಂದಿದ್ದೆ. ಅದಕ್ಕಾಗಿ ಬೇಗ ಭಾಷೆ ಕಲಿತೆ. ಅದು ಬೇರೆ ವಿಚಾರ ಬಿಡಿ. ಹೀಗೆ ಒಂದು ವರ್ಷದ ಕಾಲ ಜನ ಅಲ್ಲಿದ್ದು ಅಂತೂ ಹಿಂಸಾಚಾರದಲ್ಲಿ ಕತಲೂನ್ಯವನ್ನ ಬೇರೆ ದೇಶ ಎಂದು 70% ಜನ ಮತ ಚಲಾಯಿಸಿ ಗೆಲ್ಲಿಸಿದರು. ದೇಶದಲ್ಲಿ ಅಷ್ಟೆಲ್ಲಾ ಹುಳುಕುಗಳಿದ್ದರೂ ಸಹ. ಅವರಿಗೆ ಸ್ಪೇನ್ ತಮ್ಮನ್ನ ಕಿತ್ತು ತಿನ್ನುತ್ತಿದೆ ಎಂದು ಅಜ್ಜ, ಅಪ್ಪ ಹಾಗೂ ಮೊಮ್ಮಗನಿಗೂ ಅನ್ನಿಸಿತ್ತು. ಅದಕ್ಕೆ ಚುನಾವಣೆಯ ಮೂಲಕ ಮತ ಚಲಾಯಿಸಿ ತಮ್ಮ ಭವಿಷ್ಯವನ್ನ ಬದಲಿಸಿಕೊಂಡರು. ಅದಾದ ನಂತರ ಸುಮಾರು ಗಣತಂತ್ರದ ವ್ಯತಿರಕ್ತವಾದ ಘಟನೆಗಳು ನಡೆದವು ಬಿಡಿ. ಆದರೂ ಅವರ ಹಕ್ಕನ್ನ ಚಲಾಯಿಸಿದರು.

ಚುನಾವಣೆ ಬಂದಾಗ ತೀರ ಬೆಂಗಳೂರಿನಂತ ಬೆಂಗಳೂರಿನ ವಿದ್ಯಾವಂತ ನಗರದಲ್ಲಿ 40ರಿಂದ 50 ಪ್ರತಿಶತ ಜನ ಮತ ಹಾಕುತ್ತಾರೆ. ಮಿಕ್ಕವರು ಹಾಕೋಲ್ಲ, ಅವರಿಗೆ ಆಸಕ್ತಿ ಇಲ್ಲ ಮತ್ತು ಬದಲಾವಣೆ ಆಗಲ್ಲ ಎಂಬ ಸಿನಿಸಿಸಮ್. ಅಂಥವರು ಫೇಸ್ ಬುಕ್ಕಿನಲ್ಲಿ ವಟ ವಟ ಎಂದು ಬಡಿದುಕೊಳ್ಳುತ್ತಾರೆ. ಕೆರೆ ಬೆಂಕಿ ಬೀಳೋವರೆಗು ಅವರಿಗೆ ಸಮಸ್ಯೆಯ ತೀವ್ರತೆ ಅರಿವಾಗೋಲ್ಲ, ಹೀಗೆಲ್ಲ ಇರೋವಾಗ ಸಿಗುವ ಒಂದು ದಿವಸವನ್ನ ತಮ್ಮ ಪ್ರವಾಸಕ್ಕೋ, ಇಲ್ಲ ಮತ ಚಲಾಯಿಸದೆ ಹುಂಬರಾಗೋದಕ್ಕೋ ಮೀಸಲಿಟ್ಟರೆ ನಮಗಿಂತ ದಡ್ಡ ಜನ ಮತ್ತೊಬ್ಬರಿಲ್ಲ. ಈ ವಾರ ನಿಮ್ಮ ಗುರುತಿನ ಚೀಟಿ ಹಿಡಿಯಿರಿ, ನಿಮ್ಮ ಹಕ್ಕನ್ನ ಚಲಾಯಿಸಿ. ಎಲ್ಲವೂ ಬದಲಾಗಿದರಬಹುದು ಕನಿಷ್ಠ ಪಕ್ಷ ಯಾಕೆ ಬದಲಾಗೋದಿಲ್ಲ ಎಂಬ ಪ್ರಶ್ನೆ ಕೇಳುವ ಹಕ್ಕು ನಿಮ್ಮಲ್ಲಿರುತ್ತದೆ. ಚಲಾಯಿಸುತ್ತೀರ ಅಲ್ವಾ?

English summary
Karnataka Assembly Elections 2018 : Vote for your future, for the change. You will have no chance to question the politicians, authorities, if you do not vote. Meghana Sudhindra in her column write how Spain people voted to uphold their rights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X