• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ಯುವ ಸಾಹಿತ್ಯ ಪ್ರೇಮಿಗಳ ಕನ್ನಡ 'ಕಹಳೆ'!

By ಜಯನಗರದ ಹುಡುಗಿ
|

ಹೋದ ವರ್ಷ ಮಾರ್ಚಿ. ನಾನಾಗ ಬಾರ್ಸಿಲೋನಾದಲ್ಲಿದ್ದೆ. ಥೀಸಿಸ್ ಸಮಯದಲ್ಲಿ ತಲೆ ಕೆಡಿಸಿಕೊಂಡು ಕೂತಿದ್ದೆ. ಸಿಕ್ಕಾಪಟ್ಟೆ ಕೆಲಸ, ಓದು ಇವೆಲ್ಲದರ ಮಧ್ಯ ಫೇಸ್ಬುಕ್ಕಿನಲ್ಲಿ ಸ್ನೇಹಿತರು ಅವರ ಕೆಲಸದ ಮಧ್ಯೆ ಓಡಾಡುತ್ತಿದ್ದ ಜಾಗಗಳು, ಮನೆಯಲ್ಲಿ ಅವರಮ್ಮನ ಅಡಿಗೆಗಳನ್ನೆಲ್ಲಾ ನೋಡುತ್ತಾ ಕುಳಿತವಳಿಗೆ ಸಿಕ್ಕಿದ್ದು ಕಹಳೆ ಅನ್ನೊ ಕನ್ನಡದ ಪುಟ. ಹೊರದೇಶದಲ್ಲಿದ್ದವರಿಗೆ ಎಲ್ಲಿ ತಮ್ಮ ಭಾಷೆ ಕಂಡರೂ ಎಲ್ಲಿಲ್ಲದ ಆನಂದವಾಗುವುದು ಸಹಜ.

ದೊಡ್ಡವರು ಹೇಳಿದಂತೆ, ಏನಾದರೂ ಕಳೆದರೇ ಅದರ ಮೌಲ್ಯ ಗೊತ್ತಾಗೋದು ಅನ್ನೋದು ಸತ್ಯವೇ ಸರಿ. ಹೀಗೆ ಆ ಪುಟವನ್ನೆಲ್ಲಾ ಜಾಲಾಡೋವಾಗ ಹೊಸ ಬರಹಗಾರರ ವೇದಿಕೆ ಎಂದೆಲ್ಲಾ ಕೇಳಿ, ಓದಿ ಖುಷಿಯಾಯ್ತು. ಯಾರ್ಯಾರು ಇದ್ದಾರೆ ಎಂದು ಕಂಡಾಗ ಎಲ್ಲ ಬಹುಮುಖ್ಯವಾಗಿ ನಮ್ಮ ವಯಸ್ಸಿನವರೇ ಎಲ್ಲಾ ಎಂದು ತಿಳಿದು ಖುಷಿಯಾಯ್ತು. ನಮ್ಮ ಪೀಳಿಗೆಯವರಿಗೆ ಕನ್ನಡ ಗೊತ್ತಿಲ್ಲ ಅಥವಾ ಗೊತ್ತಿದ್ದರೂ ಸಾಹಿತ್ಯದ ಗಂಧ ಗಾಳಿ ಕಡಿಮೆ ಎನ್ನುವ ಮಾತುಗಳಿಗೆ ಉಲ್ಟಾ ಈ ತಂಡ.

ಶಿವರಾಮ ಕಾರಂತರ ಭೇಟಿ ಮಾಡಿದ ಆ ನೆನಪು ನಿಮ್ಮೊಂದಿಗಿಷ್ಟು

ಇಲ್ಲಿ ಸ್ವಂತ ಕವನ ವಾಚಿಸಬಹುದು, ನಿಮ್ಮ ಕವನ ಬರೆಯಬಹುದು, ಲೇಖನ ಬರೆಯಬಹುದು, ದೊಡ್ಡ ಕವಿಗಳ ಕವಿತೆಗಳನ್ನ ವಾಚಿಸಬಹುದು, ಪುಸ್ತಕ ವಿಮರ್ಶೆ ಮಾಡಬಹುದು. ಇವೆಲ್ಲವನ್ನು ವಿಡಿಯೋ ಮುಖಾಂತರವೂ ಕಳುಹಿಸಬಹುದು. ಇದಿಷ್ಟೆ ಸಾಕಿತ್ತು ನನ್ನಂತಹ ಬೇರೆ ದೇಶದಲ್ಲಿ ಕೂತು ಕನ್ನಡ ಕನ್ನಡ ಎಂದು ಹಪಹಪಿಸುವವರಿಗೆ.

ನವರಸಾಯನ: ಇಂಗ್ಲಿಷ್ ಅಂದಾಕ್ಷಣ ಶಾಪಗ್ರಸ್ತ ಕರ್ಣನ ನೆನಪು!

ತಂಡದ ಜನರ ಹೆಸರು ಬರೆಯುವದಕ್ಕಿಂತ, ತಂಡ ಕೆಲಸ ಮಾಡುವ ಪರಿ ನೋಡಿದರೆ, ಅಲ್ಲೆಲ್ಲೋ ಒಬ್ಬರ ಕೆಲಸ ಎದ್ದು ಕಾಣುವುದಿಲ್ಲ, ಒಂದು ತಂಡ ಮತ್ತು ಅದರ ಕೆಲಸ ಎದ್ದು ಕಾಣಿಸುತ್ತದೆ. ತುಂಬಾ ಖುಷಿಯಾಗೋದು ಈ ವಿಷಯಕ್ಕೇನೆ.

ಜೀವ ತುಂಬಿದ, ತುಂಬುವ ಭಾಷೆ ಕನ್ನಡ

ಜೀವ ತುಂಬಿದ, ತುಂಬುವ ಭಾಷೆ ಕನ್ನಡ

‘ಜೀವನದ ಭಾಷೆ ಯಾವುದಾದರೇನು ಜೀವ ತುಂಬಿದ, ತುಂಬುವ ಭಾಷೆ ಕನ್ನಡವೇ. ಕನ್ನಡ ಸಾಹಿತ್ಯ ಸಾಗರಕ್ಕೆ ಒಂದು ಹನಿಯನ್ನು ಸೇರಿಸೋಣ' ಎಂಬ ಧ್ಯೇಯದೊಂದಿಗೆ ಸಮಾನ ಮನಸ್ಕರ ಸಮೂಹವೊಂದು ಕನ್ನಡ ಸೇವೆಯಲ್ಲಿ ತೊಡಗಿದೆ. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬರವಣಿಗೆಯನ್ನು ಕಲಿಯುತ್ತ, ಕಲಿಸುತ್ತ ಸಾಗಿದೆ.

ಎಲ್ಲರೂ ಬೆಳಗ್ಗಿಂದ ಸಂಜೆ ಅವರವರ ಕೆಲಸದಲ್ಲಿ ಮುಳುಗಿರುತ್ತಾರೆ. ರಾತ್ರಿಯೋ ಅಥವಾ ಬೆಳಗ್ಗಿನ ಜಾವ ಥಟ್ಟನೆ ಏನಾದರೂ ಸದ್ದು 'ಕಹಳೆ' ಮಾಡುತ್ತದೆ ಎಂದರೆ ಕಾರಣ ಅದರ ತಂಡ.

ಕಹಳೆ ಶುರುಗೊಂಡಿದ್ದು ಕಥಾ ಸ್ಪರ್ಧೆಯಿಂದ

ಕಹಳೆ ಶುರುಗೊಂಡಿದ್ದು ಕಥಾ ಸ್ಪರ್ಧೆಯಿಂದ

ಕಹಳೆ ಶುರುಗೊಂಡಿದ್ದು ಕಥಾ ಸ್ಪರ್ಧೆಯಿಂದ. ಕಹಳೆಯ ಮೊದಲ ಕಾರ್ಯಕ್ರಮಕ್ಕೆ 110ಕ್ಕೂ ಹೆಚ್ಚು ಕಥೆಗಳು ಬಂದಿದ್ದವು. ಸಾವಣ್ಣ ಪಬ್ಲಿಕೇಷನ್ಸ್ ನಿಂದ ಈ ಸ್ಪರ್ಧೆಯ ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ಕೊಡಲಾಗಿತ್ತು.

ನಂತರ ಶುರುವಾದದ್ದೆ ಕವನ ವಾಚನ. ಇಲ್ಲಿಯತನಕ 11 ಕವನ ವಾಚನ ಕಾರ್ಯಕ್ರಮಗಳು ನಡೆದಿವೆ. ಸುಮಾರು 500 ಜನರು ತಮ್ಮ ತಮ್ಮ ಕವಿತೆಗಳನ್ನ ಹಂಚ್ಕೊಂಡಿದ್ದಾರೆ. ಆನ್ಲೈನ್ ಕವನ ವಾಚನದಿಂದ ಬಹಳಷ್ಟು ನನ್ನಂತಹ ಹೊರನಾಡ ಕನ್ನಡಿಗರಿಗೆ ವರವಾಗಿದ್ದು ಎಂದರೆ ತಪ್ಪಿಲ್ಲ. ದುಬೈ, ಸ್ಪೇನ್, ಅಮೆರಿಕಾ, ಆಫ್ರಿಕಾ ಹೀಗೆ ಬೇರೆ ಬೇರೆ ದೇಶಗಳಿಂದ ಸಾಹಿತ್ಯಾಭಿಮಾನಿಗಳು ಇದರಲ್ಲಿ ಭಾಗವಹಿಸಿದ್ದು, ಕನ್ನಡ ಸಾಹಿತ್ಯಾಸಕ್ತರು ಜಗತ್ತಿನಾದ್ಯಂತ ಹರಡಿದ್ದಾರೆ ಅನ್ನೋದಕ್ಕೆ ಹಿಡಿದ ಕೈಗನ್ನಡಿ.

ವಸುಧೇಂದ್ರ ಅವರಿಂದ ಉಪಯುಕ್ತ ಮಾಹಿತಿ

ವಸುಧೇಂದ್ರ ಅವರಿಂದ ಉಪಯುಕ್ತ ಮಾಹಿತಿ

'ಕಹಳೆ ಕಟ್ಟೆ' ಪ್ರಾಯಶಃ ಇವರ ಬಹು ಮುಖ್ಯ ಕಾರ್ಯಕ್ರಮ. ಸಾಹಿತ್ಯದ ಸೂಕ್ಷ್ಮಗಳನ್ನ ಹಿರಿಯ ಸಾಹಿತಿಗಳಿಂದ ಅರಿಯುವ, ಕಲಿಯುವ, ಚರ್ಚಿಸುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮ. ಖ್ಯಾತ ಕತೆಗಾರ, ಛಂದ ಪುಸ್ತಕ ಪ್ರಕಾಶನದ ಮಾಲಿಕ ವಸುಧೇಂದ್ರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕತೆಗಾರನಿಗೆ ಮತ್ತು ಕತೆಗೆ ಇರಬೇಕಾದ ಪ್ರಜ್ಞೆಗಳ ಬಗ್ಗೆ ತಿಳಿಸಿಕೊಟ್ಟಿದ್ದರು. ಇದೇ 25ರಂದು, ಭಾನುವಾರ ಖ್ಯಾತ ಸಾಹಿತಿ, ಪತ್ರಕರ್ತ ಜೋಗಿಯವರು ಎರಡನೇ ಸಂಚಿಕೆಯಲ್ಲಿ ಭಾಗವಹಿಸುತ್ತಾರೆ.

ಮತ್ತೊಂದು ಹೊಸ ಪ್ರಯತ್ನ ನಡೆಯೋದರ ಹೆಸರು 'ತಲೆಮಾರು'. ಹಳೆ ತಲೆಮಾರಿನ ಕವಿತೆಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಪುಟ್ಟ ಪ್ರಯತ್ನವೇ 'ತಲೆಮಾರು'. ಇಲ್ಲಿ ಯುವಕವಿಗಳು ಹಳೇ ತಲೆಮಾರಿನ ಕವಿಗಳ ಕವಿತೆಗಳನ್ನು ಓದಿ ಅವುಗಳನ್ನು ವಿಡಿಯೋ ಮಾಡುತ್ತಾರೆ. ಇಲ್ಲಿವರೆಗೆ 20ಕ್ಕೂ ಹೆಚ್ಚು ವಿಡಿಯೋ ಸರಣಿಗಳು ಬಂದಿದ್ದು,

ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಕುವೆಂಪು ಹೀಗೆ ಹಲವು ಕವಿಗಳ ಕವಿತೆಗಳ ಸರಣಿ ಹೊರಬಂದಿದೆ.

ಜೋಗಿ ಬರುತ್ತಿದ್ದಾರೆ, ನೀವೆಲ್ಲ ಬರ್ತೀರಲ್ಲ?

ಜೋಗಿ ಬರುತ್ತಿದ್ದಾರೆ, ನೀವೆಲ್ಲ ಬರ್ತೀರಲ್ಲ?

ಪುಸ್ತಕ ಪ್ರೇಮಿಗಳಿಗೆ ಹೊಸ ಪುಸ್ತಕಗಳನ್ನು ಪರಿಚಯಿಸುವುದು, ತಾವು ಓದಿದ ಪುಸ್ತಕ ಬಗ್ಗೆ ಬರೆದು ಅಥವಾ ವಿಡಿಯೋ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯೇ ಪುಸ್ತಕ ಪ್ರೀತಿ. ಇಲ್ಲಿವರೆಗೆ 10ಕ್ಕೂ ಹೆಚ್ಚು ವಿಡಿಯೋಗಳು ಬಂದಿವೆ. ಅಲ್ಲದೇ ಕಹಳೆ ಬ್ಲಾಗಿನಲ್ಲೂ ಹಲವಾರು ಪುಸ್ತಕ ವಿಮರ್ಶೆಗಳು ಪ್ರಕಟಗೊಂಡಿವೆ. ಕವಿಗಳು ಅವರ ಬಲು ಇಷ್ಟವಾದ ಸಾಲುಗಳನ್ನ ಬುಕ್ಮಾರ್ಕಾಗಿಯೂ ಇವರೆಲ್ಲ ಪ್ರಕಟಿಸಿದ್ದಾರೆ.

ಕಹಳೆಯ ಕಾರ್ಯಕ್ರಮಗಳು ಸುಮಾರಾಗಿ ನಡೆಯೋದು ಕೋರಮಂಗಲದ ಅಟ್ಟಗಲಾಟದಲ್ಲಿ. ಕೋರಮಂಗಲದಲ್ಲಿ ಕನ್ನಡದ ಕಂಪು ಹರಡಿಸೋ ಒಳ್ಳೆ ಕೆಲಸ ಮಾಡುತ್ತಿರುವ ಈ ತಂಡಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಬೇಕು. ಹೊಸದಾಗಿ 'ಪದ ಪಲ್ಲಕ್ಕಿ' ಅನ್ನೋದನ್ನ ಸಹ ಶುರು ಮಾಡಿದ್ದಾರೆ. ಬರಹವನ್ನ ಸಂಭ್ರಮಿಸುವ, ಅಚರಿಸುವ ಉದ್ದೇಶದಿಂದ ಹುಟ್ಟಿಕೊಂಡ ಕಹಳೆಯ ಹೊಸ ಕೂಸು "ಪದ ಪಲ್ಲಕ್ಕಿ".

ಅದರ ಬಗ್ಗೆ ತಿಳಿದುಕೊಳ್ಳಲು ನೀವು ಅವರ ಫೇಸ್ಬುಕ್ ಪೇಜ್ ಅನ್ನ ಖಂಡಿತವಾಗಿಯೂ ನೋಡಿ. ಹೊಸ ಹುಡುಗರ ಪ್ರಯತ್ನಕ್ಕೆ ಬೆನ್ನು ತಟ್ಟಿ. ಆ ಹುಡುಗರೇ ವಿನಯ ಕುಮಾರ ಸಜ್ಜನರ, ಶ್ರೀಧರ ತಲಗೇರಿ, ವಾರಿಜಾ ಹೆಬ್ಬಾರ್, ಸುಷ್ಮಾ ವೆಂಕಟೇಶ್, ಪ್ರವೀಣ ಕುಮಾರ್ ಹೂಗಾರ್, ಕುಮಾರ್ ಸ್ಥಾವರೇಮಠ, ಪ್ರವೀಣ್ ರೆಡ್ಡಿ, ಬಸವರಾಜ ಶಿವನಾಯಕರ್ರೆಲ್ಲರ ಪರಿಶ್ರಮವೇ ಈ ಮುದ್ದಾದ ತಂಡ. ನಮ್ಮ ಪೀಳಿಗೆ ಏನು ಮಾಡುತ್ತಿದೆ ಎಂದು ಕೇಳುವವರಿಗೆ ಉತ್ತರ ಈ ಹೊಸ ತಂಡ. ಅಂದಹಾಗೆ ಮಾರ್ಚ್ 25ರಂದು ಬರ್ತೀರಾ ಅಲ್ವಾ ಜೋಗಿಯವರನ್ನ ಭೇಟಿ ಮಾಡೋದಕ್ಕೆ?

ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kahale, is a platform provided by Kannada enthusiasts in Koramangala, Bengaluru to share creative Kannada write ups like poems, short stories written by them or others. Meghana Sudhindra introduces Kahale team and the wonderful work they are doing to Oneindia Kannada readers. Kannada writer Jogi is sharing his thoughts on March 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more