ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ, ಆಹಾ ಆ 72 ಗಂಟೆಗಳು!

By ಜಯನಗರದ ಹುಡುಗಿ
|
Google Oneindia Kannada News

ಮನೆಯಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ ಎಂದು ಚಕ್ ಅಂತ ಮನೆಯ ಮೂರು ರೂಮಿನ ಬಾಗಿಲು ತೆಗೆದುಕೊಂಡವು. ಕೆಳಗಿನ ಮಹಡಿಯಲ್ಲಿದ್ದ ಅಮ್ಮ ಸದ್ಯ ಇನ್ನು ಮನೆಯಲ್ಲಿ ಫೋನು, ಕಂಪ್ಯೂಟರ್ ಬಂದ್ ಆಗಿ ಕೆಳಗಡೆ ಊಟಕ್ಕೆ ಬರುತ್ತಾರೆ ಎಂದು ನಿಟ್ಟುಸಿರು ಬಿಡುತ್ತಿದ್ದಳು. ಅವಳಿಗೂ ವಾಟ್ಸಾಪಿನ ಸಂಪರ್ಕ ಇಲ್ಲದೇ ಬೇಜಾರಾದರೂ ಮನೆಯಲ್ಲಿ ಮಾತಾಡುತ್ತಿದ್ದಾರಲ್ಲ ಎಂಬ ಖುಷಿ.

ಮುದ್ದಿನ ಮಗಳು ಹೇಳಿದ ಮೇಲೆ ಹಾಕಿಸಿದ ಇಂಟರ್ನೆಟ್ ಅಲ್ಲವೇ? ಅಪ್ಪ ಅದನ್ನೆ ಸರಿಪಡಿಸಲು ಫೋನು, ಕಂಪ್ಲೇಟು ಮಾಡುತ್ತಿದ್ದರು. ಇನ್ನು ಮಗಳು ಅದೇ ಕೆಲಸವನ್ನ ಇನ್ನೂ ಜೋರು ಧ್ವನಿಯಲ್ಲಿ ಮಾಡುತ್ತಿದ್ದಳು. ಎರಡನೇ ಮಗಳು ತಣ್ಣಗೆ ಬಟ್ಟೆಗಳನ್ನ ಪ್ಯಾಕ್ ಮಾಡಿಕೊಂಡು ಎಡಕಲ್ಲು ಗುಡ್ಡದ ಮೇಲೆ ಹೋಗಲು ಸಿದ್ಧಳಾದಳು. ಅಪ್ಪ ಮಗಳು ಒಂದೇ ಕೆಲಸವನ್ನ ಅರ್ಧ ದಿವಸ ಮಾಡುತ್ತಿದ್ದನ್ನ ಕಂಡು ಖೇದಗೊಂಡಳು.

ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು!ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು!

ಒಂದು ದಿವಸ ಇವರಿಬ್ಬರನ್ನು ಸಾಹಿತ್ಯದ ಕಾರ್ಯಕ್ರಮಕ್ಕೆ ಅಟ್ಟಿದ್ದರೆ ಬಾಯಿಮುಚ್ಚಿಕೊಂಡಿರುತ್ತಾರೆ ಎಂದು ಅಂದುಕೊಂಡರೆ, ಅಪ್ಪ ವೇದಿಕೆಯ ಮೇಲೆ ಇದ್ದಾಗಲೇ 10 ಬಾರಿ ಕರೆ ಬರಬೇಕೆ. ಅಪ್ಪ ಮಗಳನ್ನ ಕಣ್ಣುಸನ್ನೆಯಿಂದಲೇ ಕರೆದು ಫೋನ್ ಕೊಟ್ಟ ನಂತರ ಮಾತಾಡಿ ಅಮ್ಮನ ಪಕ್ಕ ಕೂತಾಗ ಅಮ್ಮ "ಏನೇ ಹೊಸ ಪುಸ್ತಕ ಬರೀತಿದ್ಯಾ ಅಥವಾ ಅಪ್ಪನ ಗೆಳೆಯರು ಅಮೇರಿಕಾದಿಂದ ಬರುತ್ತಿದ್ದಾರಾ" ಅಂತೇನೋ ಕೇಳಿದಾಗ, "ಇಲ್ಲಮ್ಮ ಇಂಟರ್ನೆಟ್ ಅವ್ರ್ದು" ಅಂದಾಗ... ಕರ್ಮ ನಿಮ್ಮಿಬ್ಬರದ್ದು ಎಂದು ಅಪ್ಪನ ಫೋನನ್ನ ಕಿತ್ತಿಟ್ಟುಕೊಂಡು ತನ್ನ ಬ್ಯಾಗಿನೊಳಗೆ ಹಾಕಿಕೊಂಡಳು. ಈ ಭೂತ ಇವರಿಬ್ಬರನ್ನು ಬಿಡುವುದು ಸಾಧ್ಯವೇ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತುಕೊಂಡು ಕೂತಳು.

 In the magical world of internet

ಕಾರ್ಯಕ್ರಮ ಮುಗಿದ ಮೇಲೂ ಅಪ್ಪ ಮಗಳ ಸಂಭಾಷಣೆ "ಭಾರತದಲ್ಲಿ ಕೆಟ್ಟ ಕಸ್ಟಮರ್ ಸರ್ವೀಸ್, ಮಾರುವಾಗ ಇರುವ ಪ್ರಾಮಾಣಿಕತೆ ಸರ್ವೀಸ್ ಕೊಡುವಾಗ ಇರುವುದಿಲ್ಲ" ಎಂದು ತಾವು ಸುತ್ತಿಬಂದ ದೇಶಗಳ ಬಗ್ಗೆ ಇಬ್ಬರೂ ವರದಿ ಕೊಡುತ್ತಿದ್ದಾಗ, ಸಂಪಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನಲ್ಲಿ ಅಮ್ಮ ಅವಳ ಪಾಡಿಗೆ ಪುಸ್ತಕ ಓದುತ್ತಿದ್ದಳು. ಇವರಿಬ್ಬರದ್ದೂ ಮುಗಿಯದೇ ಇರುವ ಕಥೆ ಎಂದುಕೊಂಡು. ಅಲ್ಲಿ ಹೋದ ಮದುವೆಮನೆಯಲ್ಲೂ ಮಾತು ಎಲ್ಲೆಲ್ಲೂ ಸುತ್ತಿ ಸ್ಕೂಬಾ ಡೈವಿಂಗ್, ಕಬಿನಿಯ ಹುಲಿ ಸಫಾರಿ, ಕೃಪಾಕರ ಸೇನಾನಿಯ ಡಾಕ್ಯುಮೆಂಟರಿಯ ನಂತರ ಹಾಂಕಾಂಗಿನಲ್ಲಿ ಇಂಟರ್ನೆಟ್ ಹೇಗಿದೆ ಎಂದು ಕೇಳುವಷ್ಟರಲ್ಲಿ ಹೊರಡೋಣ ಎಂಬ ಬುಲಾವ್ ಬಂತು. ಹೀಗೆ ನಮ್ಮಿಬ್ಬರ ಇಂಟರ್ನೆಟ್ ಜಪ ಮುಂದುವರಿಯುತ್ತಲೇ ಇತ್ತು.

ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಜೀವನಕ್ಕೆ ಒಳ್ಳೆಯದಲ್ಲ! ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಜೀವನಕ್ಕೆ ಒಳ್ಳೆಯದಲ್ಲ!

"ಎರಡು ಲೇಖನ ಬಾಲೆನ್ಸ್ ಇದೆ" ಎಂದು ಮಗಳು, "ನನಗೆ ಮೂರು ಲೇಖನ, ಇನ್ನೊಂದು ಭಾಷಣ... "ಎಂದು ಮುಗಿಯದೇ ಇರುವ ಪಟ್ಟಿಯನ್ನ ಕೇಳಿ ಅಮ್ಮನಿಗೆ ಬಾಲಕ್ಕೆ ಬೆಂಕಿ ಹತ್ತಿಕೊಂಡಾಗಲೇ ಬರೆಯುವ ಮಗಳಿಗೆ ಇಷ್ಟೆಲ್ಲಾ ಏಕೆ ಆತುರ ಎಂದು ಕಣ್ಣರಳಿಸುತ್ತಾ ನೋಡುತ್ತಿದ್ದಳು.

ಅಪ್ಪ ತನ್ನ ಗೆಳೆಯರ ಜೊತೆ ಮನೆಗೆ ಬರುತ್ತೇನೆಂದು ಹೇಳಿದಾಗ ಅಮ್ಮನಿಗೆ ಸಮಾಧಾನ. ಇನ್ನು ಇವರ ಮಾಯಾಜಾಲದ ಬಗೆಗಿನ ಮಾತುಕತೆ ನಿಲ್ಲುತ್ತದೆ ಎಂದು. ಮನೆಗೆ ಆ ಬಿಸಿಲಲ್ಲಿ ಬಂದ ಮೇಲೆ ತಣ್ಣಗೆ ಒಂದು ನಿದ್ದೆ ತೆಗೆಯೋಣವೆಂದು ಅಮ್ಮ ಮಲಗಿದರೆ, ಮಗಳು ಅದೇ ನಂಬರಿಗೆ ಕರೆ ಮಾಡಿ, ಟ್ವಿಟ್ಟರಿನಲ್ಲಿ ಮತ್ತೆ ಕಂಪ್ಲೇಂಟ್ ಮಾಡಿ ಆ ನಿದ್ದೆಯನ್ನೂ ಕಳೆದುಕೊಂಡಳು. ಅಪ್ಪ ಮಗಳು ಸಮಾಲೋಚಿಸಿ ಇನ್ನು ಫೇಸ್ಬುಕ್ಕಿಗೆ ಅವರ ದುಃಖವನ್ನು ತೋಡಿಕೊಳ್ಳುವ ಪ್ರಸ್ತಾವನೆಯನ್ನ ಮುಂದುವರಿಸಿದರು. ಆ ಸಮಯದಲ್ಲಿಯೇ ಅವಳ ಇಷ್ಟದ ಲೇಖಕರ ಎರಡು ಸಂದರ್ಶನ, ಮತ್ತೊಬ್ಬ ಲೇಖಕರ 1 ಘಂಟೆಯ ಸಂದರ್ಶನ ವಾಟ್ಸಾಪಿನಲ್ಲಿ ಬಂದಿತ್ತು. "ಛೇ ನೋಡಪ್ಪ ಇವನ್ನೆಲ್ಲ ಕೇಳೋಕೆ ಆಗಲ್ಲ ಈಗ, ರೌಂಡ್ ರೌಂಡ್ ಹೊಡಿತಿದೆ" ಎಂದು ಅವಳು ಹೇಳಿದರೆ, "ಸರಿ ಮಾಡ್ಸೋಣ ಪುಟ್ಟ ಅತಿಯಾಯ್ತು ಇವರ್ದು" ಎಂದು ಅಪ್ಪನ ಬೀಪಿ ಮೇಲೇರುತ್ತಿತ್ತು.

 In the magical world of internet

ಈ ಫೇಸ್ ಬುಕ್ಕಿನಲ್ಲಿ ನಮಗೆ ತೊಂದರೆಯಾಗಿದೆಯೆಂದು ಬರೆದುಕೊಂಡರೆ ಸಿಗುವ ಪ್ರತಿಕ್ರಿಯೆಗಳು ಸುಮಾರು ಹಾಸ್ಯಾಸ್ಪದವಾಗಿರುತ್ತದೆ. ಆ ಇಂಟರ್ನೆಟ್ ಯಾಕೆ ಹಾಕಿಸಿಕೊಂಡಿರಿ, ಹೀಗಲ್ಲ ಹಾಗೆ ಮಾಡಬೇಕು ಎನ್ನುವ ಸಲಹೆಗಳು ನೋಡಿ ನಕ್ಕ ನಂತರ ಫೋನ್ ಮಾಡಿ ಮಾಡಿ ಆ ರಿಪೇರಿ ಮಾಡುವವರ ಹತ್ತಿರ ಸಹನೆಯ ಪಾಠ, ನಮ್ಮ ಪಕ್ಕದ ಮನೆಯವರು ಖಾಲಿ ಮಾಡಿರುವ ಕಾರಣ ಸ್ವಿಚ್ ಇಲ್ಲದಿರುವ ಬಗ್ಗೆ, ಅದರ ಉಪಯೋಗದ ಪಾಠವನ್ನ ಇಬ್ಬರು ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಮಾಡುತ್ತಿದ್ದದ್ದು ಕಂಡು ಬಂತು. ಕಡೆಗೆ ಈ 72 ಘಂಟೆಗಳ ವನವಾಸವನ್ನ ನೊಡಲಾಗದೇ ಗೆಳೆಯನೊಬ್ಬ ಆ ಕಂಪೆನಿಯ ಎಂಡಿಯ ಈಮೈಲ್ ಐಡಿ ಕೊಟ್ಟು ಸುಮ್ಮನಾದ.

ರೋಡಿನ ಜೀವಂತಿಕೆಯ ಸಂಕೇತವಾಗಿದ್ದ ಟೆಲಿಫೋನ್ ಬೂತ್ ಕಾಣೆಯಾಗಿವೆರೋಡಿನ ಜೀವಂತಿಕೆಯ ಸಂಕೇತವಾಗಿದ್ದ ಟೆಲಿಫೋನ್ ಬೂತ್ ಕಾಣೆಯಾಗಿವೆ

ಮೊದಲೇ ಐಟಿಯಲ್ಲಿ ಕೆಲಸ ಮಾಡುವ ಮಗಳು ಈ ಎಸ್ಕಲೇಶನ್ ಅನ್ನುವ ಪದವನ್ನ ಸಾರಿ ಸಾರಿ ಕೇಳಿ ಮಾಡುತ್ತಿದ್ದದ್ದನು ನೆನೆಸಿಕೊಂಡು ಶಿವರಾತ್ರಿಯ ಪುಣ್ಯದಿವಸ ದೊಡ್ಡ ಮಿಂಚಂಚೆ ಬರೆದು ತನ್ನ ಕಾಯಕವನ್ನ ಮುಗಿಸಿದಳು. ಅಪ್ಪನ ಫೋನಿಗೆ ಕರೆ ಮೇಲೆ ಕರೆ. ಅಂತೂ ಸೂಜಿ ಪೋಣಿಸೋದಕ್ಕೆ ಮಹಾರಾಜನನ್ನ ಕರೆಸಿದ್ದಾಯಿತು. ಆ 72 ಘಂಟೆಗಳಲ್ಲಿ ಎರಡನೇ ಮಗಳು ಎಡಕಲ್ಲು ಗುಡ್ಡ, ಚೆಂಬ್ರಾ ಬೆಟ್ಟ, ಒಂದು ಆನೆ, ಸಿಕ್ಕಾಪಟ್ಟೆ ಜಿಂಕೆ ನೋಡಿಕೊಂಡು ಬಂದಳು. ಅಮ್ಮ ಒಂದು ಕವನ ಸಂಕಲನ, ಒಂದು ಕಥಾಸಂಕಲನ ಓದಿದಳು. ಅಪ್ಪ ಕೇಬಲ್ ಅವಾಂತರಗಳಿಂದಾಗುವ ಡೇಟಾ ಲಾಸಿನ ಬಗ್ಗೆ ಒಂದು ಘನವಾದ ಲೇಖನ ಬರೆಯೋದಕ್ಕೆ ಶುರುಮಾಡಿದರು, ದೊಡ್ಡ ಮಗಳು ಒಳ್ಳೆ ಎಸ್ಕಲೇಶನ್ ಮೇಲ್ ಬರೆಯೋದಕ್ಕೆ ಕಲಿತಳು.

ಈ 72 ಘಂಟೆಗಳಲ್ಲಿ ಯಾರು ಹೆಚ್ಚು ಕಲಿತಿದ್ದು? ಆಯ್ಕೆ ಮಾಡಿ!

English summary
Can't we live peacefully without internet? Why are we so dependant on the magical world of internet? What would happen if there is no internet connection for 72 hours? If you want to know, read this story by Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X