ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಲಕ್ಷಣ ಹೊಂದಿದ್ದರೆ ಮಾತ್ರ ಅತಿಥಿ ದೇವೋಭವ, ಇಲ್ಲದ್ದಿದ್ದರೆ ದೆವ್ವೋಭವವೇ!

By ಜಯನಗರದ ಹುಡುಗಿ
|
Google Oneindia Kannada News

ಮೊನ್ನೆ ಜಯನಗರಕ್ಕೆ ವಾಪಸ್ಸು ಬಂದೆ. ಬಂದಾಗ ಎಲ್ಲರಿಗೂ ಕಥೆ ಹೇಳುವ ಪ್ರಮೇಯ ಒದಗಿ ಬಂತು. ಮೊದಲು ಅಮ್ಮನಿಗೆ ಕೇಳಿದ್ದು, ನೀ ಹೇಗಮ್ಮ ಅತಿಥಿಯರನ್ನ ಸಂಭಾಳಿಸುತ್ತಿದ್ದೆ. ಜನ ಜಾತ್ರೆಯಾಗಿದ್ದ ನಮ್ಮ ಮನೆಗೆ ಅತಿಥಿಗಳ ಸಂಖ್ಯೆ ಯಾವಾಗಲೂ ಇರುತ್ತಿತ್ತು. ರಜೆಯಲ್ಲಂತೂ ಅಮ್ಮನಿಗೆ ಬಿಡುವೇ ಇರುತ್ತಿರಲ್ಲಿಲ್ಲ.

ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!

ನಮ್ಮ ದೇಶದಲ್ಲಿ ಅತಿಥಿ ದೇವೋಭವ ಅನ್ನೋದನ್ನ ವಿಪರೀತವಾಗಿ ಮಾಡುತ್ತಾರೆ. ಅದನ್ನೇ ಜನ ಎಲ್ಲೇ ಬಂದರೂ ನಿರೀಕ್ಷಿಸುತ್ತಾರಲ್ಲ, ಅದೇ ನಗು ತರಿಸುವುದು.

How guests become ghosts in foreign land?

ನಾನು ಬಾರ್ಸಿಲೋನಾದಲ್ಲಿ ವಿದ್ಯಾರ್ಥಿನಿಯಾಗಿದ್ದೆ. ಅಲ್ಲಿಯೇ ಪಾರ್ಟ್ ಟೈಮ್ ಕೆಲಸ ಸಹ ಮಾಡುತ್ತಿದ್ದೆ. ನನ್ನ ಕೆಲವು ಸ್ನೇಹಿತರು ಸಹ ಯುರೋಪಿನ ದೇಶದಲ್ಲಿ ಓದಲೋ ಅಥವಾ ಕೆಲಸದಲ್ಲೋ ಇರುತ್ತಿದ್ದರು. ಒಮ್ಮೊಮ್ಮೆ ಗೆಳೆಯರ ಗೆಳತಿಯರೋ, ಗೆಳತಿಯರ ಗೆಳೆಯರೋ ನಮ್ಮ ಊರಿಗೆ ಬಂದೊಡನೆ ಕರೆ ಮಾಡಿ, ನನ್ನ ಸಹಾಯ ತೆಗೆದುಕೊಳ್ಳುತ್ತಿದ್ದರು.

ಬರೀ ಹುಡುಗಿಯರಿಗೆ ಮಾತ್ರ ನನ್ನ ಮನೆಯಲ್ಲಿ ಜಾಗ ಸಿಗುತ್ತಿದ್ದರಿಂದ ಹುಡುಗರಿಗೆ ಪ್ರವೇಶವಿರುತ್ತಿರಲ್ಲಿಲ್ಲ. ಕೆಲವು ಸ್ನೇಹಿತೆಯರು ಅವರ ಮನೆಯಂತೆ ನನ್ನ ಮನೆಯನ್ನು ತಿಳಿದುಕೊಂಡು, ನನಗೆ ಸಹಾಯ ಮಾಡುತ್ತಿದ್ದರು, ಇನ್ನು ಕೆಲವರಂತು ಅವರ ರಜೆಗೆ ನನ್ನನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು.

ಡೆನ್ಮಾರ್ಕ್ ನಿಂದ ಬಂದ ನನ್ನ ಗೆಳತಿಯ ಕಥೆ ರೋಚಕ. ಅವಳ ಅಜ್ಜ, ಹಾಗೂ ನನ್ನ ಅಜ್ಜ ಸ್ನೇಹಿತರಂತೆ. ಅಲ್ಲಿಂದ ನಮ್ಮ ಸಂಬಂಧ ಚಿಗುರೊಡೆದ್ದಿದ್ದು. ಪುಸ್ತಕಗಳು, ಒಳ್ಳೆ ಅಡುಗೆ, ನಮ್ಮಪ್ಪಂದಿರ ಹುಚ್ಚುತನಗಳು, ಅಮ್ಮಂದಿರ ತ್ಯಾಗ ಇವೆಲ್ಲವೂ ಸಮಾನವಾಗಿದ್ದರಿಂದ ಮಾತು ಬಹು ಸುಲಭ.

How guests become ghosts in foreign land?

ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!

ಅವಳು ಸಹ ಹೆಚ್ಚು ಖರ್ಚು ಮಾಡುತ್ತಿರಲ್ಲಿಲ್ಲ, ವಿದ್ಯಾರ್ಥಿನಿಗಳಾಗಿದ್ದರಿಂದಲೇನೋ ಇಬ್ಬರು ಆರಾಮಾಗಿ ಜಾಗ ಸುತ್ತಿದ್ವಿ. ಒಂದು ದಿನ ನಾನು ಅಡುಗೆ ಮಾಡಿದ್ದರೆ, ಮತ್ತೊಂದು ದಿನ ಅವಳು ಮಾಡುತ್ತಿದ್ದಳು. ಪಾತ್ರೆ ತೊಳೆಯುವುದಕ್ಕೂ ಸಹ ಒಂದೊಂದು ದಿನ ಮೀಸಲಿಟ್ಟಿದ್ದೆವು. ಕಡಿಮೆ ಸಮಯದ ಪರಿಚಯವಾಗಿದ್ದರು ಸಹ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಮಯ ಹೊಂದಿಸಿಕೊಂಡು ಇಷ್ಟವಾದ ಜಾಗಗಳನ್ನ ನೋಡಿಕೊಂಡು ಬಂದಿದ್ವಿ.

ಓಹೋ ಅತಿಥಿಗಳೆಂದರೆ ಬೆಂಗಳೂರಿನಷ್ಟು ಕಿರಿಕಿರಿ ಅಲ್ಲ ಸದ್ಯ ಅಂದುಕೊಂಡು, ನನಗೆ ಯಾರೇ ಕರೆ ಮಾಡಿ ನಾನು ನಿಮ್ಮ ಊರಿನಲ್ಲಿದ್ದೇನೆ ಎಂದರೂ ಅವರ ಜೊತೆ ಊರು ಸುತ್ತುತ್ತಿದ್ದೆ. ನನ್ನ ಪಕ್ಕದ ರೂಮಿನವಳು ಆಗಾಗ ಎಚ್ಚರಿಸುತ್ತಿದ್ದಳು, ಹೀಗೆಲ್ಲ ಎಲ್ಲರಿಗೂ ಸಲಿಗೆ ಕೊಡಬೇಡ ಎಂದು.

ಒಮ್ಮೆ ನನ್ನೊಂದಿಗೆ ಅವಳು ಸಹ ಊರು ತಿರುಗೋದಿಕ್ಕೆ ಬಂದಾಗ ನನ್ನ ಜೊತೆ ಬಂದಿದ್ದ ಮತ್ತೊಬ್ಬರು ಅತಿಥಿಯ ಆರ್ಭಟ ನೋಡಿ ಬೇಸ್ತು ಬಿದ್ದಿದ್ದಳು, ನೀನ್ಯಾಕೆ ಅಡುಗೆ ಮಾಡಿಕೊಡಬೇಕು, ಅದೇನು ಹಾಗೆಲ್ಲ ಮಾತಾಡೋದು ಬಂದವರು, ನನ್ನ ಊಟವನ್ನು ನೋಡಿಕೊಳ್ಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.

How guests become ghosts in foreign land?

"Your are the host not mummy" ಎಂದು ನನಗೆ ಒಂದು ಗಂಟೆ ಉಪನ್ಯಾಸ ನೀಡಿದ್ದಳು. ಅವಳ ಮನೆಗೆ ಕ್ರಿಸ್ಮಸ್ ರಜೆಗೆ ಬೆಲ್ಜಿಯಂ ಗೆ ಹೋದಾಗ ಅವಳ ಮನೆಯ ಸದಸ್ಯೆಯ ಹಾಗೆ ನೋಡಿಕೊಂಡಳೆ ಹೊರತು ನಾನು ಅವಳಿಗೆ ನನಗೆ ಅದು ಕೊಡು, ಇದು ಕೊಡು ಎನ್ನಲ್ಲಿಲ್ಲ.

ಒಂದು ದಿನ ಅವಳ ಮನೆಯವರು ಹಬ್ಬ ದ ತಯಾರಿಯಲ್ಲಿದ್ದರಿಂದ ನನಗೆ ಮ್ಯಾಪ್ ಕೊಟ್ಟು ಜಾಗಗಳ ಹೆಸರು ತಿಳಿಸಿ ನೋಡಿಕೊಂಡು ಬರಲು ಹೇಳಿದ್ದಳು. ರೇಗಿಸೋಕೆ " I am not your mummy" ಎಂದು ನನ್ನ ಅತಿಥಿಯ ನೆನಪು ಮಾಡಿಕೊಟ್ಟಳು. ಇಷ್ಟಾದರೂ ನನಗೆ ಬುದ್ಧಿ ಬರದೆ ಮತ್ತೊಂದು ಅತಿಥಿಗೂ ಹೂಂ ಅಂದಿದ್ದೆ.

ಅವಳು ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಅವಳ ಅವಳ ಆರ್ಥಿಕ ಸ್ಥಿತಿ ಬೇರೆ ಬೇರೆಯದ್ದಾಗಿತ್ತು. ಅದನ್ನು ಅರ್ಥ ಮಾಡಿಕೊಳ್ಳದೇ ನಾನು ಅವಳ ಕೆಲಸದವಳಾಗಿದ್ದೆ. ಇದ್ದ ಮೂರು ದಿವಸವೂ ಅದರಲ್ಲೂ ನಿನ್ನ ರೂಮ್ ಚಿಕ್ಕದ್ದು, ಅದು ಶುಚಿಯಾಗಿಲ್ಲ, ಅಡುಗೆ ಮಾಡಿದ್ದ ಪಾತ್ರೆ ತೊಳಿ ಎಂದರೆ ನಾ ಇದೆಲ್ಲ ಕೆಲಸ ಮಾಡೇ ಇಲ್ಲ ಎಂದು ವಕ್ರವಾದ ಮುಖ ಮಾಡಿದ್ದಳು.

ಅದರ ಜೊತೆಗೆ ಅವಳ ಗೆಳತಿಗೆ "I remember living with someone" ಎಂದು ಮೆಸೇಜ್ ಗಳನ್ನು ಸಹ ಮಾಡುತ್ತಿದ್ದಳು. ಏನಪ್ಪ ಗುರು ಹೋದರೆ ಸಾಕು ಎಂದು ಮನಸ್ಸಲ್ಲೆ ಅಂದುಕೊಳ್ಳುತ್ತಿದ್ದೆ. ನಂತರ ಅಮೆರಿಕಾದಿಂದ ಬಂದ ನನ್ನ ಆಪ್ತ ಗೆಳತಿ ಅನುಶ್ರೀಗೆ ಈ ಕಥೆ ಹೇಳುತ್ತಿದ್ದೆ.

ಅವಳು, "ಲೇ ಪೆದ್ದಿ, ಇಲ್ಲೆಲ್ಲ ಆಗಲ್ಲ ಎಂದರೆ ಆಗಲ್ಲ ಅನ್ನುತ್ತಾರೆ, ಮುಲಾಜೆಲ್ಲ ಇಲ್ಲಿ ಇಲ್ಲ, ನೀನು ಇಷ್ಟು ವರ್ಷ ನಿಮ್ಮಮ್ಮನಿಗೆ ಇಲ್ಲ ಎಂದು ಹೇಳಲು ಕಲಿಸಿ, ಇವಾಗ ಇಲ್ಲ ಅನ್ನಲು ಬಾಯಿಗೆ ಬರಲ್ಲಿಲ್ಲವಾ" ಎಂದು ನಕ್ಕಿ ನಕ್ಕಿ ಮಲಗಿದಳು.

ಬೆಳಗ್ಗೆ ಎದ್ದು ಮಾತಾಡೋವಾಗ ಅವಳು ಹೇಳಿದ್ದ ಮಾತು ನೆನಪಾಯಿತು, ದೇವರು ಅನ್ನಿಸಿಕೊಳ್ಳುವವರು ಅದರ ಲಕ್ಷಣಗಳನ್ನು ಹೊಂದಿರಬೇಕು, ಸುಮ್ಮನೆ ಆ categoryಗೆ ಸೇರಿದವರೆಲ್ಲ ದೇವರಾಗುವುದಿಲ್ಲ ಎಂದು ಬುದ್ಧಿ ಹೇಳಿ , ಅವಳ ಊರಿಗೆ ಹೊರಟಳು.

ಇಷ್ಟೆಲ್ಲಾ ಆಯ್ತಲ್ಲಪ್ಪ ಕೆಲವರು ಅವರ ಕೆಲಸ ಆದ ಮೇಲೆ ಮತ್ತೆ ನೆನಪು ಮಾಡಿಕೊಳ್ಳುವುದು ಅವರಿಗೆ ಮತ್ತೆ ಕೆಲಸವಾಗಬೇಕಾದಾಗಲೇ, ಊರಿಗೆ ಬರುವಾಗ ದಿನಾ ವಿಚಾರಿಸಿಕೊಳ್ಳುತ್ತಿದ್ದವರು ಇವಾಗ ನಾಪತ್ತೆ. ನಾಲ್ಕು-ಐದು ದಿವಸಕ್ಕೆ ಸುಸ್ತಾಗಿದ್ದ ನಾನು, ಅಮ್ಮ ಇಷ್ಟೆಲ್ಲಾ ವರ್ಷಗಟ್ಟಲೇ ಹೇಗೆ ಸಹಿಸಿಕೊಂಡಿದ್ದಳು ಎಂದು ನೆನೆದು ಮರುಕವಾಗುತ್ತದೆ.

ಅತಿಥಿ ದೇವರ ಲಕ್ಷಣಗಳನ್ನು ಹೊಂದಿದ್ದರೆ ಮಾತ್ರ ದೇವೋಭವ, ಇಲ್ಲದ್ದಿದ್ದರೆ ದೆವ್ವೋಭವವೆ !

English summary
It is common to treat guests while they coming to home. But, how guests become ghosts in foreign land? Oneindia Kannada columnist Jayanagarda Hudugi shares her experience humorously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X