• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಪ್ಪರಿಸಿಕೊಂಡು ಓದಿ ನನ್ನ ಮತ್ತು ಚಾಕೋಲೇಟ್ ಕಥೆಯನ್ನು!

By ಜಯನಗರದ ಹುಡುಗಿ
|

ಹೋದ ವಾರ ಚಾಕೋಲೇಟ್ ಬೆಟ್ಟದ ಹತ್ತಿರದ ಚಾರಣವಾದ ನಂತರ ನನ್ನ ಚಾಕೋಲೇಟಿನ ಹುಚ್ಚಿನ ಬಗ್ಗೆ ಕೆಲವಾರು ಜನ ಕೇಳಿದ್ದರು. ಇನ್ನು ಅದರ ಬಗ್ಗೆ ಬರೆಯದಿದ್ದರೆ ಹೇಗೆ? ಬರೆಯದಿದ್ದರೆ ನನಗೇ ಸಮಾಧಾನವಿರುವುದಿಲ್ಲ. ಸೋ, ಈ ವಾರ ಅದರ ಬಗ್ಗೆ ಬರೆಯೋದು ಅಂದುಕೊಂಡು ಈ ವಿಷಯವನ್ನು ಆಯ್ದುಕೊಂಡಿದ್ದೇನೆ. ಚಪ್ಪರಿಸಿಕೊಂಡು ಓದಿರಿ.

ಚಿಕ್ಕವಳ್ಳಿದ್ದಾಗ ಯಾರು ಮೊದಲು ಇದರ ರುಚಿ ಹತ್ತಿಸಿದರೋ ಗೊತ್ತಿಲ್ಲ ನನಗೆ ನೆನಪಿದ್ದಂಗೆ ನನ್ನ ಮೂರನೇ ವಯಸ್ಸಿಂದ ಚಾಕೋಲೇಟ್ ಕಂಡರೆ ವಿಪರೀತ ಹುಚ್ಚು. ಸಣ್ಣವಳಿಂದ ಸಿಹಿ ಇಷ್ಟವಾದದ್ದರಿಂದಲೋ ಏನೋ ಅದರ ಮೇಲೆ ಆಸಕ್ತಿ ಜಾಸ್ತಿ. ಯಾವ ರೀತಿಗೆ ಪ್ರೀತಿ ಎಂದರೆ ಅಂಗಡಿಯಲ್ಲಿನ ಎಲ್ಲ ಚಾಕೋಲೇಟ್ ಗಳನ್ನ ಕೊಂಡು ತಿನ್ನಬೇಕೆನ್ನುವ ಹಂಬಲ.

ಮೈನವಿರೇಳಿಸುವ ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣ

ಹುಟ್ಟಿದ್ದಾಗಿಂದಲೇ ಬಂದ್ದದ್ದು ಕ್ಯಾಲ್ಶಿಯಂ ಕೊರತೆ, ಇದರಿಂದ ನನ್ನ ಹಲ್ಲುಗಳು ಬೇಗ ಹಾಳಾಗತ್ತೆ ಎಂದು ವೈದ್ಯರು ತಿಳಿಸಿದ್ದರಿಂದ ಅಮ್ಮ ಚಾಕೋಲೇಟ್ ಕೊಡುವುದಕ್ಕೆ ಹಿಂಜರಿಯುತ್ತಿದ್ದರು. ಅತ್ತು ಕರೆದು ಹಠ ಮಾಡಿ ಅಂತು ಗಿಟ್ಟಿಸಿಕೊಳ್ಳುತ್ತಿದ್ದೆ. ಯಾರದೇ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವಕ್ಕೆ ಗಲಾಟೆ ಮಾಡಿ ಚಾಕೋಲೇಟ್ ತಿನ್ನುತ್ತಲೇ ಇರುತ್ತಿದ್ದೆ.

ರಾಜು ಮತ್ತು ಅವರೆಕಾಳು ಗಿಡದ ಕಥೆಯನ್ನ ಒಮ್ಮೆ ಅಮ್ಮ ಹೇಳಿದ್ದರು. ರಾಜು ಅನ್ನೋ ಹುಡುಗಂಗೆ ಹೊಟ್ಟೆಯಲ್ಲಿ ಅವರೆಕಾಳಿನ ಗಿಡ ಬೆಳೆಯುತ್ತೆ ಎಂದು. ತಮಾಷೆ ಗೊತ್ತಾ? ಅವತ್ತು ರಾತ್ರಿ ನನ್ನ ಕನಸಲ್ಲಿ ಚಾಕೋಲೇಟ್ ಗಿಡ ಬೆಳೆದಿತ್ತು! ನನ್ನ ಹೊಟ್ಟೆಯಿಂದ ಬಂದಿತ್ತು. ಬೆಳಗ್ಗೆ ಅದೇ ಮಂಪರಿನಲ್ಲಿ ನೋಡಿ, ಒಹೋ ಇನ್ನು ಅಮ್ಮನ್ನ ಗೋಗರೆಯುವ ಅವಶ್ಯಕತೆ ಇಲ್ಲ ಎಂದು ಹೊಟ್ಟೆ ಮುಟ್ಟಿ ಕೊಂಡರೆ ಯಾವ ಗಿಡವೂ ಇರಲ್ಲಿಲ್ಲ.

ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!

ನಾನು ದೊಡ್ಡವಳಾದ ಮೇಲೆ ಸಿಕ್ಕಾಪಟ್ಟೆ ದುಡ್ಡು ಸಂಪಾದನೆ ಮಾಡಿ ಚಾಕೋಲೇಟ್ ಅನ್ನ ಬೇಕುಬೇಕಾದ ಸಮಯದಲ್ಲಿ ತಿನ್ತೀನಿ ಎಂದು ಶಪಥ ಮಾಡಿದ್ದೆ. ನನಗೆ ಅದನ್ನ ಹೇಗೆ ಮಾಡುತ್ತಾರೆ ಎಂದು ನನಗೆ ಗೊತ್ತಿರಲ್ಲಿಲ್ಲ. ಅದರ ಹಿಂದಿನ ನೋವಿನ ಕಥೆಗಳ ಬಗ್ಗೆಯೂ ಗೊತ್ತಿರಲ್ಲಿಲ್ಲ. ಚಿಕ್ಕ ಮಕ್ಕಳನ್ನ ಕೋಕೋ ತೋಟಗಳಲ್ಲಿ ದುಡಿಸಿ ಅದರಿಂದ ನಿನ್ನಿಷ್ಟದ ತಿನಿಸನ್ನ ತಯಾರಿಸುತ್ತಾರೆ ಎಂದು ತಾತ ಹೇಳಿದ ನೆನಪು. ಅಸಲಿಗೆ ಇದಷ್ಟು ಸಿಹಿ ಇರುವುದೇ ಇಲ್ಲ ಎಂದು ಸುಮಾರು ಜನ ವಾದ ಮಾಡಿ ಹೋಗಿದ್ದರು. ಸಿಕ್ಕಾಪಟ್ಟೆ ಸಕ್ಕರೆ ಬೆರೆಸಿ, ಮಕ್ಕಳ ಆರೋಗ್ಯ ಹಾಳು ಮಾಡುತ್ತಾರೆ ಎಂದು ಸಹ ಪರಿಚಯದ ವೈದ್ಯರು ಹೇಳುತ್ತಿದ್ದರು.

ಚಾಕೋಲೇಟ್ ವಿವರ ಓದಿದಾಗ ದಂಗಾಗಿದ್ದೆ

ಚಾಕೋಲೇಟ್ ವಿವರ ಓದಿದಾಗ ದಂಗಾಗಿದ್ದೆ

ಇದೆಲ್ಲಾ ಕಥೆಯಾಗಿದ್ದರು ಸಹ ಅಪ್ಪ ಮೊದಲ ಬಾರಿಗೆ ಅಮೆರಿಕಾಗೆ ಹೋದಾಗ ನನಗೆಂದೇ ವಿಶೇಷವಾಗಿ ಚಾಕೋಲೇಟ್ ಅನ್ನ ತಂದಿದ್ದರು. ಸಿಹಿ, ಖಾರ, ಹುಳಿ, ಸಪ್ಪೆ ಹಾಗೂ ಕಹಿಯಾಗಿ ಸಹ ಇದ್ದವು. ಪ್ರತಿಯೊಂದು ಚಾಕೋಲೇಟನ್ನ ಯಾವ ದೇಶದಿಂದ ರಫ್ತು ಮಾಡಲಾಗಿದೆ, ಅದರಲ್ಲಿನ ಕೋಕೋ ಅಂಶ ಇವೆಲ್ಲದರ ವಿವರ ಇರುತ್ತಿತ್ತು. ನಾನು ಅದನ್ನು ಓದಿ ದಂಗಾದೆ. ನಾ ತಿನ್ನೋ ಚಕೋಲೇಟಿಗೆ ಸಕ್ಕರೆ ಅಂಶವೇ ಜಾಸ್ತಿಯಿದೆಯೆಂದು ಆವಾಗ ತಿಳಿಯಿತು. ಹೀಗೆ ಇದರ ಚರಿತ್ರೆಯನ್ನು ಸ್ವಲ್ಪ ತಿಳಿದುಕೊಳ್ಳಲು ಆರಂಭಿಸಿದೆ.

ಚಾಕೋಲೇಟ್ ತಯಾರಿ ಆರಂಭವಾಗಿದ್ದು ಹೀಗೆ

ಚಾಕೋಲೇಟ್ ತಯಾರಿ ಆರಂಭವಾಗಿದ್ದು ಹೀಗೆ

ಕ್ರಿಸ್ತ ಪೂರ್ವದಲ್ಲಿಯೇ ಮೆಕ್ಸಿಕೋ ದೇಶದಲ್ಲಿ ಕೋಕೋ ಬೀಜದ ಪೇಯವನ್ನ ಕುಡಿಯುತ್ತಿದ್ದರೆಂದು ದಾಖಲಿಸಲಾಗಿದೆ. ಅಝಟೆಕ್ ಜನರು ಹಾಗೂ ಮಾಯನ್ನರು ಸಹ ಈ ಪೇಯವನ್ನು ಉಪಯೋಗಿಸುತ್ತಿದರೆಂದು ಉಲ್ಲೇಖವಿದೆ. ಕೊಲಂಬಸ್ ಸ್ಪೇನ್ ಗೆ 16ನೇ ಶತಮಾನದಲ್ಲಿ ಈ ಪೇಯವನ್ನು ಪರಿಚಯಿಸಿದ. ಅದಾದ ಸುಮಾರು ವರ್ಷಗಳು ಇದಕ್ಕೆ ಅಷ್ಟು ಬೆಲೆ ಇಲ್ಲದ್ದಿದ್ದರೂ ಸಹ ಸ್ಪೇನಿನ ಸುಮಾರು ನ್ಯಾಯಾಲಯಗಳು ಇದನ್ನ ಅವರ ಇಷ್ಟವಾದ ಪೇಯವಾಗಿ ಪರಿವರ್ತನೆ ಮಾಡಿಕೊಂಡರು. ಇವರೇ ಸಕ್ಕರೆ ಅಥವಾ ಜೇನು ತುಪ್ಪ ಅಥವಾ ವೆನಿಲ್ಲಾವನ್ನ ಬೆರೆಸಿಕೊಂಡು ಕುಡಿಯೋದಕ್ಕೆ ಶುರು ಮಾಡಿದ್ದರು. 18ನೇ ಶತಮಾನದಲ್ಲಿ ನಮ್ಮ ಈವಾಗಿನ ಚಾಕೋಲೇಟ್ ಬಾರ್ ಗಳು ಬರೋದಕ್ಕೆ ಶುರುವಾದವು. ತೆಬೆರೋಮ ಕೋಕೋ ಎಂದು ಕರೆಯಲ್ಪಡುವ ಈ ಬೀಜವನ್ನ ದೇವರ ತಿನಿಸು ಎಂದೂ ಕರೆಯುತ್ತಾರೆ.

ಇವಳಿಗೆ ಕೋಕೋ ಡಿಫಿಶಿಯೆನ್ಸಿ ಆಗಿದೆ

ಇವಳಿಗೆ ಕೋಕೋ ಡಿಫಿಶಿಯೆನ್ಸಿ ಆಗಿದೆ

ಒಮ್ಮೊಮ್ಮೆ ನಾನು ಚಿಕ್ಕವಳ್ಳಿದ್ದಾಗ ಸಪ್ಪಗೆ ಕೂತು ಮಾತಾಡದೇ ಇದ್ದಾಗ ಅಪ್ಪ ‘ಇವಳಿಗೆ ಕೋಕೋ ಡಿಫಿಶಿಯೆನ್ಸಿ ಆಗಿದೆ, ಒಂದು ಚಾಕೋಲೇಟ್ ಕೊಡು' ಎಂದು ರೇಗಿಸುತ್ತಿದ್ದರು. ಅಪ್ಪ ಬ್ರೆಝಿಲ್ ಗೆ ಹೋದಾಗ 90 ಪ್ರತಿಶತ ಕೊಕೋ ಇದ್ದ ಚಾಕೋಲೇಟ್ ತಂದಾಗ ಬಾಯಿಗೆ ಹಾಕದ ಹಾಗೆ ಆಗಿತ್ತು. ಅಷ್ಟೊಂದು ಕಹಿ. ಕಹಿಯಾದದ್ದನ್ನ ಸಿಹಿ ಮಾಡಿ ಎಷ್ಟು ಟೋಪಿ ಹಾಕಿದ ಜನರಿಲ್ಲಿದ್ದಾರೆ ಎಂದು ನನಗೆ ತಿಳಿಯಿತು.

ಸೂಟ್ ಕೇಸ್ ತುಂಬಾ ಚಾಕೋಲೇಟ್ ತಂದಿದ್ದ ಅಪ್ಪ

ಸೂಟ್ ಕೇಸ್ ತುಂಬಾ ಚಾಕೋಲೇಟ್ ತಂದಿದ್ದ ಅಪ್ಪ

ರಷ್ಯಾಗೆ ಅಪ್ಪ ಹೋದಾಗ ತಮಾಷೆಗೆ ನಾನು ‘ಸೂಟ್ ಕೇಸ್ ತುಂಬಾ ಚಾಕೋಲೇಟ್ ತಗೊಂಡು ಬಾ ಅಪ್ಪ' ಅಂದಾಗ ಅಪ್ಪ ನಿಜವಾಗಲೂ ಒಂದು 23 ಕೆಜಿಯ ದೊಡ್ಡ ಪೆಟ್ಟಿಗೆಯಲ್ಲಿ ತಂದಿದ್ದರು. ಹಾಗೂ ಕಸ್ಟಮ್ಸ್ ನಲ್ಲಿ ಹಿಡಿದು ವಿಚಾರಿಸಿದಾಗ ಅಪ್ಪ ಮನೆಯ ಮಗುವಿಗೆ ಎಂದಿದ್ರಂತೆ. ಮಗುವಿನ ವಯಸ್ಸು ಎಷ್ಟು ಎಂದಾಗ 13 ಅಂದಾಗ, ಅವರೆಲ್ಲಾ ಕಣ್ಣು ಕಣ್ಣು ಬಾಯಿ ಬಾಯಿ ಬಿಟ್ಟರಂತೆ. ನಾನು ಅದನ್ನ ಸುಮಾರು ಮೂರು ತಿಂಗಳ ಕಾಲ ತುಂಬಾ ನಿಷ್ಠೆಯಿಂದ ತಿಂದಿದ್ದೆ.

ಗೆಳತಿಗೆ ಗೆಳೆಯ ಕೊಟ್ಟ ಚಾಕೋಲೇಟ್ ಗುಳುಂ

ಗೆಳತಿಗೆ ಗೆಳೆಯ ಕೊಟ್ಟ ಚಾಕೋಲೇಟ್ ಗುಳುಂ

ಆಪ್ತ ಗೆಳತಿಗೆ ಅವಳನ್ನು ಪ್ರೀತಿಸ್ತೀನಿ ಎಂದು ಹುಡುಗ ಕೊಟ್ಟ ಚಾಕೋಲೇಟ್ ಕೂಡ ನನ್ನ ಹೊಟ್ಟೆಪಾಲಾಗಿತ್ತು. ಅವಳು, ಅವನು ಇಬ್ಬರೂ ಉರಿದುಕೊಂಡು ನನ್ನ ಬೈದಿದ್ರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳದೆ ನನ್ನ ಚಾಕೋಲೇಟ್ ಪ್ರೀತಿಯಲ್ಲಿ ತಲ್ಲೀನವಾಗಿದ್ದೆ. ಇಷ್ಟು ದೊಡ್ಡವಳಾದ್ರೂ ಯಾರದ್ರೂ ಇಗ್ಲೂ ಬೇರೆ ದೇಶಕ್ಕೆ ಹೋಗ್ತಾರೆ ಅಂದ್ರೆ ನನ್ನ ಬೇಡಿಕೆ ಒಂದೆ. ಈಗೀಗ ನೆಂಟರೆಲ್ಲ ಹೇಳದೇನೆ ತಗೊಂಡು ಬರೋವಷ್ಟು ತಯಾರಾಗಿದ್ದಾರೆ.

ಚಾಕೋಲೇಟ್ ತಿನ್ನುವ ಮಗು ಯಾರು?

ಚಾಕೋಲೇಟ್ ತಿನ್ನುವ ಮಗು ಯಾರು?

ಬಾರ್ಸಿಲೋನಾದಲ್ಲಿದ್ದಾಗ ಪ್ರತಿ ವಾರದ ದಿನಸಿ ಪಟ್ಟಿಯಲ್ಲಿ ಚಾಕೋಲೇಟ್ಗೆ ಅಗ್ರಸ್ಥಾನ. ನಿಯಮಿತವಾಗಿ ಹೋಗುತ್ತಿದ್ದ ಸೂಪರ್ ಮಾರ್ಕೆಟ್ ನ ಒಂದು ದೊಡ್ಡ ಭಾಗ ಚಾಕೋಲೇಟ್ ನಿಂದ ತುಂಬಿದ್ದರಿಂದ ಅಲ್ಲಿದ್ದ ಎಲ್ಲವನ್ನು ಪ್ರತಿವಾರ ಒಂದೊಂದರಂತೆ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ. ಇದನ್ನ ಗಮನಿಸಿದ ಅಲ್ಲಿ ಕೆಲಸ ಮಾಡುವ ಹುಡುಗಿ "kids at home?" ಎಂದು ಕೇಳಿದಳು ನಾನು "I am the kid" ಎಂದು ನಕ್ಕು ಹೊರಬಂದೆ.

ನಿಮ್ಮ ಚಾಕೋಲೇಟ್ ಕಥೆ ಏನು ಹೇಳಿ?

ನಿಮ್ಮ ಚಾಕೋಲೇಟ್ ಕಥೆ ಏನು ಹೇಳಿ?

ಊರು ಬಿಡುವಾಗ ಕೊನೆಯ ಭಾನುವಾರ ಅವಳಲ್ಲಿಗೆ ಹೋದಾಗ ಅವಳು ಅತ್ತು ಕಣ್ಣೀರಾಗಿ 10 ಹೊಸ ಚಾಕೋಲೇಟ್ ಕೊಟ್ಟು ಕಳಿಸಿದ್ದಳು. ಇದನ್ನ ನೋಡಿ ನನ್ನ ಮನೆಯ ಒಡತಿ ತಾನು ಬ್ರೆಝಿಲ್ ನಲ್ಲಿ ಕೋಕೋ ತೋಟದಲ್ಲೆ ಚಿಕ್ಕವಳ್ಳಿದ್ದಾಗ ಅನುಭವಿಸಿದ ಹಿಂಸೆಯನ್ನು ಹೇಳಿದ ನಂತರ ಅದೆಲ್ಲವನ್ನು ತಿನ್ನಲು ಮನಸ್ಸಾಗದೆ ಸ್ನೇಹಿತರಿಗೆ ಹಂಚಿಬಂದೆ. ಆದರೂ ಈಗ್ಲೂ ಪುಸ್ತಕ, ಚಾಕೋಲೇಟ್ ಯಾರೊಂದಿಗೂ ಹಂಚಿಕೊಂಡಿಲ್ಲ. ಇವೆರಡು ಸುಖ ದುಃಖ ಎರಡರಲ್ಲೂ ಸಂಗಾತಿಗಳು. ಪಟ್ಟಾಗಿ ಓದಿದಿರಲ್ಲ ನನ್ನ ಚಾಕೋಲೇಟ್ ಕಥೆಯನ್ನು, ನಿಮ್ಮ ಚಾಕೋಲೇಟ್ ಕಥೆ ಏನು ಹೇಳಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
May be there is not even a single child who doesn't like chocolate! A little chocolate is like a love affair - an occasional sweet release that lightens the spirit. Jayanagarada Hudugi Meghana Sudhindra talks about her first love, Chocolate. Savour it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more