ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದ ಬಾರೋಂಗ್ ಎಂಬ ಅದ್ಭುತ!

By ಜಯನಗರದ ಹುಡುಗಿ
|
Google Oneindia Kannada News

ಬಾಲಿಯಲ್ಲಿ ಎಲ್ಲವೂ ಭಾರತದಲ್ಲಿ ಇದ್ದಂತೆ ಹೆಸರುಗಳು. ಅಲ್ಲಿನ ಜನರ ನಡವಳಿಕೆ, ಮಾತು, ಓಂ ಸ್ವಸ್ತಿ ಅಸ್ತು ಎಂದು ಮಾತಾಡುವ ಜನರ ಹಾಡು ಹಾಗೂ ನೃತ್ಯ ನೋಡುವ ಮನಸ್ಸಾಯಿತು.

ನಾ ಬಾರ್ಸಿಲೋನಾದಲ್ಲಿದ್ದಾಗ ಗಮೆಲಾನ್ ಎಂಬ ಇಂಡೋನೇಷ್ಯಾ ಸಂಗೀತ ಕೇಳಿದ್ದೆ. ಸುಮಾರು ಸಲ ಅವರ ಸಂಗೀತ ತುಂಬಾ ಮುದ ಕೊಡುತ್ತಿತ್ತು. ಈ ಸಂಗೀತಕ್ಕೆ ಪಾಶ್ಚಾತ್ಯ ಸಂಗೀತದವರು ನೋಟ್ಸ್ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದರು. ಅದ್ರೂ ಬಹಳ ಕಷ್ಟವಾದ ಕೆಲಸ ಎಂದು ಪಾಪ ಅಲವತ್ತುಕೊಳ್ಳುತ್ತಿದ್ದರು.

ಇಂಡೋನೇಷ್ಯಾದ ಭಾರೀ ದುಬಾರಿ ಲು'ವ್ಯಾಕ್' ಕಾಫಿ!ಇಂಡೋನೇಷ್ಯಾದ ಭಾರೀ ದುಬಾರಿ ಲು'ವ್ಯಾಕ್' ಕಾಫಿ!

ಆದ್ರೂ ಈ ಸಂಗೀತಕ್ಕೆ ಅವರ ನೃತ್ಯ ಹೇಗಿರುತ್ತದೆ ಎಂದು ನೋಡಲು ನಾ ಕಾತುರಳಾಗಿದ್ದೆ. ಬಾರೋಂಗ್ ನಮ್ಮ ಬಹು ರಂಗ್ ಶಬ್ದದಿಂದ ಬಂದಂತಹದ್ದು. ಬಾಲಿಯನ್ನು 1 ಅಥ್ವಾ 2ನೇ ಶತಮಾನದಲ್ಲಿ ಹಿಂದೂ ರಾಜರು ಆಳುತ್ತಿದ್ದರು. ನಂತರ ಬಂದ್ದದ್ದೆ ಬೌದ್ಧರು ಇಬ್ಬರ ಸಂಸ್ಕೃತಿಗಳೆಲ್ಲ ಬೆರಕೆಯಾಗಿ ಅವರ ಆಚರಣೆಗಳಾಗಿವೆ. ನಮ್ಮ ವಿಷ್ಣುವಿಗೆ ಥೇಟ್ ಬೌದ್ಧರ ಕಿರೀಟ ಹಾಕಿ ಖುಷಿಪಡುತ್ತಾರೆ. ಹೀಗೆ ಇದರ ಮಿಶ್ರಣ ಕಥೆಯೇ ಬಾರೋಂಗ್.

Barong animal mask dance of Bali, Indonesia

ಬಾರೋಂಗ್ ಎಂದರೆ ಇಂಡೋನೇಷ್ಯಾ ಭಾಷೆಯಲ್ಲಿ ಕರಡಿ ಎಂದರ್ಥ. ಈ ಪ್ರಕಾರ ಸುಮಾರು ನಮ್ಮ ಭೂತ ಕೋಲದ ಆಚರಣೆಯ ಹಾಗಿದೆ. ದೈವ ಹಾಗೂ ದೆವ್ವದ ವಿಂಗಡಣೆ, ಪ್ರತಿ ಮನೆಗೂ ಅಥ್ವಾ ಊರಿಗೂ ಇರುವ ದೈವದ ನೇಮ ನಿಯಮಗಳು ಇಲ್ಲಿ ಪ್ರಮುಖವಾಗಿದೆ.

ಇಲ್ಲಿ ಬಾರೋಂಗ್ ಎಂಬುದು ಒಂದು ದೈವದ ಹೆಸರು. ಇದು ಸಿಂಹ ಮುಖದ ಒಳ್ಳೆಯ ದೈವ. ಈ ಬಯಲಾಟದಲ್ಲಿ ಕುಂತಿ, ಸಹದೇವ, ಕಾಳಿ ಮಾತೆ ಹಾಗೂ ಕೋತಿ ಮುಖದ ದೈವ (ಹನುಮಂತ) ಎನ್ನಬಹುದು. ಇಲ್ಲಿನ ಕೆಟ್ಟ ದೆವ್ವ rangDa. ಈಕೆ ಒಂದು ಮಾಟಗಾತಿ, ಅವಳು ರೈತರಿಗೆ ತೊಂದರೆ ಕೊಡುತ್ತಿದ್ದಳು. ಅವಳ ಮಗಳಿಗೆ ಇವಳ ಭಯದಿಂದ ಮದುವೆಯ ಭಾಗ್ಯ ಸಹ ಬಂದಿರಲ್ಲಿಲ್ಲ. ಹೀಗೆ ಕೋಪದಿಂದ ಹೆಣ್ಣುಮಕ್ಕಳನ್ನು ಅಪಹರಿಸಿ ಕಾಳಿಗೆ ಬಲಿ ಕೊಡುತ್ತಿದ್ದಳು.

Barong animal mask dance of Bali, Indonesia

ಇದು ಒಂದು ಭಾಗದ ಕಥೆಯಾದರೆ ಮತ್ತೊಂದು ಭಾಗದಲ್ಲಿ ಕುಂತಿಯ ಪುತ್ರ ಸಹದೇವನ್ನನ್ನ ಅಪಹರಿಸಿದ್ದಾಗ, ಅವನ್ನನ್ನು ಕೊಲ್ಲಲ್ಲು ಯತ್ನಿಸುವಾಗ, ಹನುಮಂತ ಬರುವುದು, ಕಾಳಿ ಅವತಾರವೆತ್ತಿ ಬಾರೋಂಗ್ ಸಹಾಯದಿಂದ ಈ ಕೆಟ್ಟದ್ದನ್ನು ಸಂಹರಿಸುವುದು ಇಂತೆಲ್ಲಾ ಕಥೆ ನಡೆಯುತ್ತಿತ್ತು.

ಜ್ವಾಲಾಮುಖಿ ಉಗುಳಿದಾಗ, ನಮ್ಮದಲ್ಲದ್ದನ್ನು ಅಪ್ಪಿದಾಗ!ಜ್ವಾಲಾಮುಖಿ ಉಗುಳಿದಾಗ, ನಮ್ಮದಲ್ಲದ್ದನ್ನು ಅಪ್ಪಿದಾಗ!

ಭಾರತೀಯರಿಗೆ ತ್ರೇತಾಯುಗ, ದ್ವಾಪರಯುಗದ ಮಿಶ್ರಣ ಒಮ್ಮೆ ಸಹಿಸಿಕೊಳ್ಳುವುದು ಸಹ್ಯವಾಗಿರಲ್ಲಿಲ್ಲ. ವಿಚಿತ್ರವೆನ್ನಿಸುತ್ತಿತ್ತು. ಒಮ್ಮೊಮ್ಮೆ ನಮ್ಮ ಇತಿಹಾಸವನ್ನ ಇಷ್ಟು ತಮಾಷೆಯಾಗಿ ತೋರಿಸುತ್ತಿದ್ದಾರಲ್ಲ ಎಂದು ಅಸಹ್ಯವೂ ಆಯಿತು. ಅಲ್ಲಲ್ಲಿ ಹಾಸ್ಯ ಸನ್ನಿವೇಷವನ್ನ ಸೇರಿಸೋದಕ್ಕೆ ಏನೇನ್ನನ್ನೋ ತರುತ್ತಿದ್ದರು. ಇತಿಹಾಸಕ್ಕೂ ಅದಕ್ಕೂ ಸಂಬಂಧವೇ ಇರುತ್ತಿರಲ್ಲಿಲ್ಲ. ತೀರ ಹೊರಗಿರುವವರಿಗೆ ಮೆಚ್ಚಿಸಲು ತಮ್ಮದನ್ನೇ ಮರೆತ್ತಿದ್ದಾರಲ್ಲ ಎಂದು ಖೇದವೂ ಆಯಿತು. ತೀರ ತಮ್ಮನ್ನ ತಾವೆ ಮಾರಿಕೊಂಡ ಸ್ಥಿತಿ ಅಂತಲೂ ಅನ್ನಿಸಿತು. ಬಾಲಿ ಮತ್ತೊಂದು ಗೋವಾ ಆಗ್ತಿದ್ಯಾ ಅಂತಲೂ ಭಯ ಆಯ್ತು.

Barong animal mask dance of Bali, Indonesia

ಇದಕ್ಕೆ ಪೂರಕವಾಗಿ ಇದ್ದ ಸಂಗೀತ ಇನ್ನೂ ಹಾಳಾಗಿಲ್ಲ ಅನ್ನೋದೊಂದೇ ಖುಷಿ. ಗೆಮಾಲಾನ್ ಸಂಗೀತದಲ್ಲಿ ಸುಮಾರು 8 ಥರಹದ ವಾದ್ಯಗಳಿರುತ್ತದೆ. ಎಲ್ಲವೂ ಬೊಂಬು, ಕೊಳಲು, ವಿಧವಿಧವಾದ ಘಂಟೆಗಳಿಂದ ತುಂಬಿರುತ್ತದೆ. ಇದು ಜನಪದ ಸಂಗೀತವೆಂದರೆ ಸರಿ. ಬೊನಾಂಗ್ ಜಲತರಂಗದ ಹಾಗೆ ಇರುವ ಒಂದು ವಾದ್ಯ, ಗೆಂಡರ್ ನಾಲ್ಕೈದು ಕೊಳಲುಗಳನ್ನ ಸೇರಿಸಿ ಮಾಡಿದ ವಾದ್ಯ, ಗೊಂಗ್ ಘಂಟೆಗಳಿಂದ ಮಾಡಿರುವ ವಾದ್ಯ, kendang ಹೆಚ್ಚು ಕಡಿಮೆ ಮ್ರುದಂಗವೇ.

Barong animal mask dance of Bali, Indonesia

ಸುಮಾರು ಹಾಡುಗಾರರು ಸಹ ಇಲ್ಲಿರುತ್ತಾರೆ. ಗಂಡು ಮಕ್ಕಳು ವಾದ್ಯ, ಹೆಣ್ಣು ಮಕ್ಕಳು ಹಾಡುಗಳನ್ನ ಹಾಡುತ್ತಾರೆ. ಬಾಯಿಂದ ಬಾಯಿಗೆ ಸಂಗೀತವನ್ನ ಕಲಿಸುವ ಪದ್ಧತಿ ಇಲ್ಲಿದೆ. ನಮ್ಮ ಸಂಗೀತವೂ ಹಾಗೆಯೇ ಇದ್ದದ್ದು ನಿಮಗೆ ನೆನಪಿರಬಹುದು. 19ನೇ ಶತಮಾನದಿಂದ ಜನ ಸಂಗೀತವನ್ನ ಪುಸ್ತಕದ ರೂಪದಲ್ಲಿ ಬರೆಯೋದಕ್ಕೆ ಶುರು ಮಾಡಿದ್ದರು. ಯೋಗಕರ್ತ ಮತ್ತು ಸುರಕರ್ತ ಎಂಬುವರ ಕೊಡುಗೆ ಇದರಲ್ಲಿ ಅಪಾರ. ಪಾಶ್ಚಾತ್ಯರ ದಾಳಿಯಲ್ಲಿ ತಮ್ಮ ಸಂಗೀತ ಎಲ್ಲಿ ನಲುಗುವುದೋ ಎಂಬ ಭಯದಲ್ಲಿ ಇದೆಲ್ಲವನ್ನೂ ಬರೆಯಲು ಶುರು ಮಾಡಿದರು. ಹಿಂದೂಗಳ ಮನೆಮಾತಾಗಿದ್ದ ಈ ಸಂಗೀತ ನಂತರ ಕ್ರಿಶ್ಚಿಯನ್ನರ ಮನೆಯಲ್ಲಿಯೂ ಇದು ಮೊಳಗಲು ಶುರು ಮಾಡಿತು. ಕಡೆಗೆ ಇಂಡೋನೇಷಿಯನ್ನದ ಸಂಗೀತದ ಪ್ರತೀಕವಾಯಿತು. ಇದರಲ್ಲಿನ ಪಾವಿತ್ರ್ಯತೆ ಇನ್ನೂ ಹಾಳಾಗಿಲ್ಲ ಅನ್ನೋದೊಂದೆ ಖುಷಿಯ ವಿಚಾರ.

Barong animal mask dance of Bali, Indonesia

ಮುಂಚಿನ ಕಾಲದಲ್ಲಿ ಒಂದು ಪಂಗಡಕ್ಕೇ ಸೀಮಿತವಾಗಿದ್ದ ಇವೆಲ್ಲವೂ ಪ್ರವಾಸೋದ್ಯಮದಿಂದ ಎಲ್ಲರಿಗೂ ತೆರೆದು ಕೊಂಡಿದೆ ಎಂಬುವುದು ಒಂದು ಒಳ್ಳೆಯ ವಿಷಯ. ನಮ್ಮಷ್ಟೆ ಅಸಮಾನತೆ, ಅಸಹಾಯಕತೆಯನ್ನ ಈ ದೇಶವೂ ಹೊದ್ದುಕೊಂಡಿದೆ. ಆದರೂ ದೇಶ ಪ್ರೇಮ ಹಾಗೂ ನಾಯಕ ಪ್ರೇಮವನ್ನ ವಿಂಗಡಿಸಿ ಮಾತಾಡುವಷ್ಟು ತಲೆ ಇದೆ. ಅಲ್ಲಿ 300ಕ್ಕೂ ಹೆಚ್ಚು ಭಾಷೆಗಳನ್ನ ಮಾತಾಡುತ್ತಾರೆ, ನಮ್ಮಂತೆಯೇ ಇಂಡೋನೇಷಿಯನ್ ಭಾಷೆಯನ್ನ ಹೇರಲಿಕ್ಕೆ ಪ್ರಯತ್ನ ಪಡುತ್ತಿದ್ದಾರೆ. ರಸ್ತೆಗಳು ಸ್ವಚ್ಛವಾಗಿದೆ, ಮನಸ್ಸು ಇನ್ನೂ ಶುಭ್ರವಾಗಿದೆ. ನಮ್ಮಂತೆಯೇ ಇನ್ನೂ ದೇಶದಲ್ಲಿ ಲಂಚಗುಳಿತನ ಇದೆ. ಅದನ್ನ ಉದ್ಧರಿಸುವ ದೇವರು ಬರುತ್ತಾನೆಂದು ಕಾಯುತ್ತಲೂ ಇದ್ದಾರೆ. ಒಟ್ಟಿನಲ್ಲಿ ನಮ್ಮ ದೇಶದ ಅಕ್ಕನೋ, ತಂಗಿಯೋ ಹಾಗೆ ಇಂಡೋನೇಷ್ಯಾ ಕಾಣಿಸುತ್ತದೆ. ಈ ವಾರಕ್ಕೆ ಬಾಲಿ ಕಥನ ಸಂಪೂರ್ಣ. ಮುಂದಿನ ಕಂತಲ್ಲಿ ಯಂತ್ರದ ಕಥೆಗಳು.

English summary
Barong animal mask dance of Bali, Indonesia. Barong is a lion-like creature and character in the mythology of Bali. He is the king of the spirits, leader of the hosts of good. Meghana Sudhindra narrates how this form of art is similar to Indian art.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X