ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಜೀವನಕ್ಕೆ ಒಳ್ಳೆಯದಲ್ಲ!

By ಜಯನಗರದ ಹುಡುಗಿ
|
Google Oneindia Kannada News

"ಕೆಲಸ ಹೋಗಿ ನಾಲ್ಕು ದಿವಸವಾಯ್ತು" ಅಂತ ಇವಳು ಅಳುತ್ತಾ ಕೂತಿದ್ದಳು. ಅವನು "ಸಿಗತ್ತೆ, ಸಿಗತ್ತೆ ಬೀ ಪಾಸಿಟಿವ್" ಎಂದು ಸಮಾಧಾನ ಪಡಿಸುತ್ತಿದ್ದ. ಬೆಂಗಳೂರಿನ ಕಾಫಿ ಶಾಪ್ ಗೆ ಆಗಾಗ ಭೇಟಿ ಕೊಟ್ಟರೆ ಈ ಥರಹದ ಮಾತುಗಳು ಪದೇ ಪದೇ ಕೇಳಿಸುತ್ತಿರುತ್ತದೆ. ಬ್ರೇಕಪ್ ಆದಾಗಲೂ, ಕೆಲಸ ಕಳೆದುಕೊಂಡಾಗಲೂ, ಮತ್ತ್ಯಾರೋ ಸತ್ತುಹೋದಾಗಲೂ ನಮಗೆ ಮತ್ತೆ ಮತ್ತೆ ಸಿಗುವ ಒಂದೇ ಫ್ರೇಸ್ "ಬಿ ಪಾಸಿಟಿವ್".

ಈ ಟೈಟಲ್ ಇಟ್ಟುಕೊಂಡೇ ಅದೆಷ್ಟು ಪುಸ್ತಕಗಳು ಬಂದಿದ್ಯೋ ಏನೋ? ಈ ತರಹದ ಸೂಪರ್ ಪುಸ್ತಕಗಳು ನಮ್ಮ ಕೈಲಿದ್ದಾಗಲೇ ನಮ್ಮ ಕೈಗೆ ಮತ್ತೊಂದು ಪುಸ್ತಕ ಬರುತ್ತದೆ. ನಾವು ಓದಿಕೊಂಡ ಬಿ ಪಾಸಿಟಿವ್ ಗೆ ಆಂಟಿ ಕ್ಲೈಮಾಕ್ಸಿನ ಥರ.

ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು! ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು!

ನೀವು ಮಾರ್ಕ್ ಮಾನ್ಸನ್ ನ ದೊಡ್ಡ ಅಭಿಮಾನಿಯಾಗಿದ್ದರೆ ಅವರ ಬ್ಲಾಗುಗಳನ್ನ ಓದಿದ್ದರೆ "The subtle art of not giving a f*ck" ಎಂಬ ಪುಸ್ತಕವನ್ನ ಕೈಗೆತ್ತುಕೊಳ್ಳಿ. ಇದು ಏನೋ ನಾನು ಯಾರಿಗೂ ಕೇರ್ ಮಾಡಲ್ಲ ಅನ್ನುವ ಹಾಗಿರುವ ಪುಸ್ತಕ ಎಂದುಕೊಂಡರೆ ಅದು ತಪ್ಪು. ಇದು ಜೀವನದ ಕಟು ಸತ್ಯಗಳನ್ನ ಇಂಚುಇಂಚಾಗಿಯೇ ಮುಖಕ್ಕೆ ಹೊಡೆದಹಾಗೆ ತಿಳಿಸುತ್ತದೆ.

Accept positivity and negativity as it is

ಮೊದಲು ಮಾರ್ಕ್ ಮಾನ್ಸನ್ ಇದನ್ನ ಬರೀಬೇಕೆನಿಸಿದ್ದು ಇಂಟರ್ನೆಟಿನ್ನಲ್ಲಿ ಸಿಗುವ "ಆದ್ದದ್ದೆಲ್ಲ ಒಳಿತೇ ಆಯಿತು" ಎನ್ನುವ ಅತೀ ಪಾಸಿಟಿವ್ ಮಾತುಗಳನ್ನ ಕೌಂಟರ್ ಮಾಡುವುದ್ದಕ್ಕೇನೆ. ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಯಾವುದೂ ಜೀವನಕ್ಕೆ ಒಳ್ಳೆಯದಲ್ಲ ಎಂಬುದನ್ನು ಪ್ರಚುರಪಡಿಸುವುದಕ್ಕೆ.

ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು! ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!

ಅವರು ಮೊದಲು ಹೇಳುವುದೇ "ಕೆಲವೊಂದೆ ವಿಷಯಗಳು, ಮನುಷ್ಯರು ನಮಗೆ ಹೊಂದುವುದಕ್ಕೆ ಸಾಧ್ಯವೇ ಇಲ್ಲ, ಕೆಲವು ನಮ್ಮದಲ್ಲದ್ದು, ಬಿಟ್ಟು ಹೋಗುತ್ತಿರಬೇಕು. ಹಾಗೆಯೇ ಕೆಲವೊಂದು ನೆಗಟೀವ್ ಅನುಭವಗಳನ್ನ ನೆಗಟೀವ್ ಎಂದೇ ಪರಿಗಣಿಸಬೇಕು. ಅದರಲ್ಲಿಯೂ ಒಳ್ಳೆಯದನ್ನ ಹುಡುಕೋದಕ್ಕೆ ಹೋಗಬಾರದು" ಎಂದು ಕಡ್ಡಿ ತುಂಡು ಮಾಡಿ ಹೇಳುತ್ತಾರೆ. ಇದು ಈಗಿನ ಕಾಲದ ವೇದಾಂತ. ಕೆಲವೊಂದು ನಮಗೆ ಸಹ್ಯವಾಗುವುದೇ ಇಲ್ಲ. ಕೆಲವರಿಂದ ನಮಗೆ ಹಾನಿಯೇ ಆಗೋದು. ಅದರಲ್ಲಿಯೂ ಸರಿಯಾದದ್ದನ್ನ ಹುಡುಕ ಹೊರಟರೆ ನಮಗೇ ತೊಂದರೆ.

ಬಿ ಎಕ್ಸ್ಟ್ರಾಡಿನರಿ

ಈ ಮಾತು ಎಲ್ಲಾರು ಶಾಲೆಯಲ್ಲಿ ಕೇಳಿರುತ್ತೀವಿ. ಶಾಲೆಯಲ್ಲಿ ಮಕ್ಕಳನ್ನು ಎಲ್ಲವನ್ನೂ ಮಾಡುವ ಕಲೆಯನ್ನ ಕಲಿಸಲಾಗುತ್ತದೆ. ನನಗೂ ಆ ಅನುಭವವಾಗಿತ್ತು. ಗಣಿತದ ಕ್ಲಾಸಿನಲ್ಲಿ ಎಷ್ಟು ಲೆಕ್ಕ ಕೊಟ್ಟರೂ ಮಾಡುತ್ತಿದ್ದ ನನಗೆ, ಹಿಸ್ಟರಿ ಕ್ಲಾಸಿನಲ್ಲಿ ನಿದ್ದೆ ಬಿಟ್ಟರೆ ಬೇರೆನೂ ಬರುತ್ತಿರಲ್ಲಿಲ್ಲ. ಅದೇ ಬೋರಿಂಗ್ ಸಂಗತಿಗಳು. ಇವನು ಅವನ್ನನ್ನ ಕೊಂದ, ಅವನು ಈ ರಾಜ್ಯವಾಳಿದ, ಮತ್ತೊಬ್ಬ ಏನ್ನನ್ನೋ ಕದ್ದುಕೊಂಡು ಹೋದ. ಮಿನಿ ಕೆ ಜಿ ಎಫ್ ಸಿನೆಮಾಗಳಂತೆ ನನಗಿದು ಭಾಸವಾಗುತ್ತಿತ್ತು.

Accept positivity and negativity as it is

ಇದರಲ್ಲಿ ಬುದ್ಧಿ ಓಡಿಸುವುದು ಏನೂ ಇಲ್ಲ ಎಂದು ನನಗೆ ಮನವರಿಕೆಯಾಗಿತ್ತು. ಆದರೂ ಶಾಲೆಯಲ್ಲಿ ಆ ಪಾಠವನ್ನ ಓದಲೇ ಬೇಕಿತ್ತು. ನಿನಗೆ ಸಾಮರ್ಥ್ಯ ಇದೆ, ಓದೋದಿಲ್ಲ ಎಂದು ಅಮ್ಮ ಅಪ್ಪನಿಗೆ ಹೇಳಿ ನನ್ನನ್ನ ಜಗತ್ತಿನ ಪ್ರಸಿದ್ಧ ಹಿಸ್ಟೋರಿಯನ್ ಮಾಡುವ ಎಲ್ಲಾ ಹುನ್ನಾರ ಫಸೀಹಾ ಮಿಸ್ ಗೆ ಇತ್ತು. ಯಾವತ್ತೂ ಶಾಲೆಗೆ ಬರದಿದ್ದ ಅಪ್ಪ ಆವತ್ತು ಪೋಷಕರ ಮೀಟಿಂಗಿಗೆ ಬಂದಿದ್ದರು. ನಮ್ಮ ಮಿಸ್ ಶುರುಮಾಡಿದ್ದರು.

ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕುನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು

ನನ್ನ ಹಾಗೆ ನನ್ನ ತಂಗಿ ಯಾಕಿಲ್ಲ? ನನ್ನ ತಂಗಿಯ ಹಾಗೆ ನಾನು ಯಾಕಿಲ್ಲ? ಎಂದು ಹೋಲಿಕೆ ಮಾಡಿ ದೊಡ್ಡ ಭಾಷಣ ಬಿಗಿದರು. ಅಪ್ಪ ಕೇಳೋ ಅಷ್ಟು ಕೇಳಿ, "ಒಬ್ಬೊಬ್ಬರಿಗೆ ಒಂದೊಂದು ಕಲೆ ಇರತ್ತೆ, ಅದನ್ನ ಮುಂದುವರೆಸಿಕೊಂಡು ಹೋದರೆ ಸಾಕು, ಎಲ್ಲವನ್ನು ಎಲ್ಲರೂ ಮಾಡುವುದು ನನ್ನ ಪ್ರಕಾರ ತಪ್ಪು, ಅವರವರ ಪರಿಣತಿಯ ವಿಷಯದ ಮೇಲೆ ಅವರ ಕೆಲಸವನ್ನ ಆಯ್ದುಕೊಳ್ಳಬೇಕು" ಎಂದು ಆಧುನಿಕ ವೇದಾಂತಿಯ ಹಾಗೆ ಮಾತಾಡುತ್ತಾ ಹೋದರು. ನಮ್ಮ ಅಧ್ಯಾಪಕಿಗೆ ಸಿಕ್ಕಾಪಟ್ಟೆ ಬೇಜಾರಾಯಿತು. ಅಪ್ಪನಿಗೆ ಹೆಣ್ಣುಮಕ್ಕಳ ಮೇಲೆ ವಿಪರೀತ ಪ್ರೀತಿಯೆಂದು ಹೇಳಿ, ಮಾರ್ಕ್ಸ್ ಕಾರ್ಡನ್ನ ಕೈಗಿತ್ತು ಕಳಿಸಿದರು.

ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!

ಪ್ರಾಯಶಃ ಅಪ್ಪ ಆ ಮಾತನ್ನ ಹೇಳದಿದ್ದರೆ, ನಾನು ಮತ್ತೆ ನನ್ನ ತಂಗಿ ಒಬ್ಬರ ಹಾಗೆ ಮತ್ತೊಬ್ಬರಿಲ್ಲ ಎಂಬ ಕೀಳರಿಮೆಯಲ್ಲಿಯೇ ಜೀವನವನ್ನೆಲ್ಲ ಕಳೆಯುತ್ತಿದ್ದೆವೇನೊ. ಹಾಗೆ ಈ ಪುಸ್ತಕದಲ್ಲಿಯೂ ಈ ಮಾತನ್ನ ಬಹಳ ನಿಚ್ಚಳವಾಗಿ ಬರೆದಿದ್ದಾರೆ. ಕೆಲವೊಂದು ವಿಷಯದಲ್ಲಿ ನಾವು ಗೆಲುವು ಪಡೆಯುತ್ತೇವೆ, ಕೆಲವೊಂದರಲ್ಲಿ ಸೋಲು. ಪರವಾಗಿಲ್ಲ ಅದು ನಮಗೆ ಸಾಧ್ಯವಿಲ್ಲ ಎಂದು ನಂಬಿ ಮುಂದಕ್ಕೆ ಹೋಗಬೇಕೆ ಹೊರತು, ಎಲ್ಲವನ್ನೂ ಮಾಡುತ್ತೇನೆ ಎಂದು ಕಷ್ಟ ಪಡುವುದು ನನ್ನ ಪ್ರಕಾರ ತಪ್ಪು. ನಮ್ಮ ಸೀಮೆ, ಗಡಿಗಳು ನಮಗೆ ಗೊತ್ತಿರಬೇಕು.

Accept positivity and negativity as it is

ಯಾವಾಗಲೂ ಖುಷಿಯಾಗಿಯೇ ಇರುವುದು ಎಂಬ ಪರಮ ಸುಳ್ಳು

ತಾತನ ಜೊತೆ ಇದ್ದಾಗ ಅವರ ಭಾವನೆಗೆಳು ನಮಗೆ ಗೊತ್ತಾಗುತ್ತಿರಲ್ಲಿಲ್ಲ. ಅವರು ಯಾವಾಗಲೂ ಮಂದಸ್ಮಿತರಾಗಿಯೇ ಇರುತ್ತಿದ್ದರು. ಅವರಿಗೆ ಕಷ್ಟಗಳೇ ಇರಲ್ಲಿಲ್ಲ ಎಂದು ನಾನು ನಂಬಿಕೊಂಡಿದ್ದೆ. ತಾತ ಹೋದ ನಂತರವೇ ಅವರ ಕಷ್ಟ, ದುಃಖ ಅನಾವರಣವಾಗಿದ್ದು. ಹಾಗಾದರೇ ಅವರು ದುಃಖವನ್ನ ಮರೆಮಾಚುತ್ತಿದ್ದರಾ ಎಂದು ಅಪ್ಪನ್ನನ್ನ ಕೇಳಿದರೆ, ಅಪ್ಪ "ಹೌದು, ಜೀವನದಲ್ಲಿ ಎಲ್ಲವನ್ನು ಎಲ್ಲರಲ್ಲಿಯೂ ಹೇಳಿಕೊಳ್ಳುವ ಅಗತ್ಯವಿಲ್ಲ, ಮತ್ತು ಸದಾ ಖುಷಿಯಾಗಿರುವುದೊಂದು ಮಿಥ್" ಎಂದು ಅಂದಿದ್ದರು.

ಇದನ್ನೇ ಪುಸ್ತಕದಲ್ಲಿಯೂ ಹೇಳಿರುವುದು. ಜೀವನ ಸಿಹಿ ಕಹಿಗಳ ಮಿಶ್ರಣ. ಬಂದದ್ದನ್ನ ಹಾಗೆಯೇ ಸ್ವೀಕರಿಸಬೇಕು ಎಂಬ ಕಟು ಸತ್ಯವನ್ನ ತಿಳಿಸಲಾಗುತ್ತದೆ. ಪುಸ್ತಕದಲ್ಲಿ ಇನ್ನೂ ಅನೇಕಾನೇಕ ವಿಷಯಗಳಿವೆ. ಸರಳ ಇಂಗ್ಲಿಷಿನಲ್ಲಿ ಬರೆದಿರುವ ಈ ಪುಸ್ತಕ ನಮಗೆ ಕೆಲವು ಸತ್ಯಗಳನ್ನ ತಿಳಿಸೇ ತಿಳಿಸುತ್ತದೆ. ಈ ಪುಸ್ತಕ ಬಾರ್ಸಿಲೋನಾದ ಗೆಳತಿ ನನಗೆ ಕೊಟ್ಟಿದ್ದು, ಹುಟ್ಟಿದ ಹಬ್ಬದ ಉಡುಗೊರೆಯಾಗಿ ಶ್ರವಣನಿಗೆ ಕೊಟ್ಟಿದ್ದೆ. ಪುಸ್ತಕ ಕೊಂಡು ಓದಿ!

English summary
The Subtle Art of Not Giving a F*ck: A Counterintuitive approach to Living a Good Life is the second book by blogger and author Mark Manson. Take the life as it is. Don't try to find positivity in negativity and vice-versa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X