ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದ ಹುಡುಗಿಯ ಸೀರೆಯ ಸ್ವಾರಸ್ಯಕರ ಕಥೆ

By ಜಯನಗರದ ಹುಡುಗಿ
|
Google Oneindia Kannada News

ನಿನ್ನೆ ಹೀಗೆ ಬಾರ್ಸಿಲೋನಾದಲ್ಲಿ ತರಕಾರಿ ತರಲು ಸಿಕ್ಕಾಪಟ್ಟೆ ಜನ ಇರುವ ಮಾರುಕಟ್ಟೆಗೆ ಹೋಗಿದ್ದೆ. ಆ ನೂಕುನುಗ್ಗಲ್ಲಲ್ಲಿ ಜಗಳ ಮಾಡಿ, ಚೌಕಾಸಿ ಮಾಡಿ ತರಕಾರಿ ತರುವಾಗ ಒಂದು ಆಂಟಿ ಸೀರೆ ಉಟ್ಟುಕೊಂಡು ನಿಂತಿದ್ದರು. ಅವರ ಮುಖದಲ್ಲಿ ಆತಂಕ, ಭಯ ಎಲ್ಲವೂ ಎದ್ದು ಕಾಣಿಸುತ್ತಿತ್ತು. 10 ತಿಂಗಳ ಹಿಂದೆ ನಾನು ಇಲ್ಲಿಗೆ ಬಂದಾಗ ಸಹ ಅದೇ ಪರಿಸ್ಥಿತಿಯಲ್ಲಿದ್ದ ಕಾರಣ, ಒಮ್ಮೊಮ್ಮೆ ಭಾಷೆಯ ಸಹಾಯ ಮಾಡುವುದು ನನ್ನ ಅಭ್ಯಾಸ.

ಆಂಟಿ ಸೀರೆ ಉಟ್ಟುಕೊಳ್ಳುವ ಪರಿ ನೋಡಿಯೇ ಅವರು ಗುಜರಾತಿನವರು ಎಂದು ಗೊತ್ತಾಯಿತು. ಅವರಿಗೆ ತರಕಾರಿ ಕೊಳ್ಳಲು ಸಹಾಯ ಮಾಡಿದೆ. ಹೊರಡುವಾಗ ಆಂಟಿಯ ಮನೆ ಸಹ ನಮ್ಮ ಮನೆಯ ಹತ್ತಿರ ಎಂದು ತಿಳಿಯಿತು.

ಬನ್ನಿ..ಬನ್ನಿ..10 ಪೈಸೆಗೊಂದು ಸೀರೆ..ತಗೋಳ್ಳಿ..!ಬನ್ನಿ..ಬನ್ನಿ..10 ಪೈಸೆಗೊಂದು ಸೀರೆ..ತಗೋಳ್ಳಿ..!

A tee and a jean never make you look beautiful as a saree

ಸಹಾಯ ಮಾಡಿದಕ್ಕೆ ಅವರು ನನಗೆ ಬಹಳ ದುಬಾರಿಯಾದ ಕರಿಬೇವಿನ ಸೊಪ್ಪನ್ನು ಉಡುಗೊರೆಯಾಗಿ ಕೊಟ್ಟು 'ನೀನು ನನಗೇಕೆ ಸಹಾಯ ಮಾಡಿದೆ, ಹೇಗೆ ಗೊತ್ತಾಯಿತು ನಾನು ಭಾರತೀಯಳು' ಅಂತ ಕೇಳಿದಾಗ 'ಸೀರೆ ನೋಡಿದ ಮೇಲೆ ಗೊತ್ತಾಗತ್ತೆ' ಅಂತ ತಿಳಿಸಿದೆ. ಆಂಟಿಗೆ ಖುಷಿಯಾಗಿ 'ಒಹೋ! ನೀನೂ ಸೀರೆ ಉಟ್ಟುಕೊಳ್ಳುತ್ಯಾ?' ಅಂತ ಕೇಳಿದರು. ನನಗೆ ಉಡೋದಕ್ಕೆ ಬರಲ್ಲ ಅಂತ ಅಂದಿದನ್ನ ಕೇಳಿ ನಕ್ಕು ನಕ್ಕು ಸುಸ್ತಾಗಿ ಹೋದ್ರು.

ನಾನು ಮೊದಲ ಬಾರಿಗೆ ಸೀರೆ ಉಟ್ಟ ಕ್ಷಣವನ್ನ ಅವರಿಗೆ ವಿವರಿಸುತ್ತಿದ್ದೆ. 15 ವರ್ಷಕ್ಕೆ ಶಾಲೆಯ ಕಡೆಯ ದಿವಸ ಅಂತ ಸೀರೆ ಉಡೋದಕ್ಕೆ ಹೇಳಿದ್ದರು. ನಾನು ತುಂಬಾ ವರ್ಷ ಅಜ್ಜಿಯರು, ಅಮ್ಮ, ಅತ್ತೆ, ಚಿಕ್ಕಮ್ಮ ಮಾತ್ರ ಸೀರೆ ಉಡುತ್ತಾರೆ ಅಂದು ಕೊಂಡಿದ್ದೆ. ಅಮೇಲೆ ಮದುವೆಯಾದ ಹೆಂಗಸರು ಮಾತ್ರ ಅಂದುಕೊಂಡಿದ್ದೆ. ಶಾಲೇಲಿ ಹೀಗೆ ಹೇಳಿಬಿಟ್ರು ಅಂತ ಗಾಬರಿಯಾಗಿ ಅಮ್ಮನಿಗೆ ನಾನದೆಲ್ಲ ಉಟ್ಟುಕೊಳ್ಳಲ್ಲ ಎಂದು ಧಿಮಾಕು ಮಾಡಿದ್ದೆ. ಆಮೇಲೆ ಅಮ್ಮ ಬುದ್ಧಿ ಹೇಳಿ ಉಡಿಸಿ ಕಳಿಸಿದ್ದರು.

ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳುಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು

ಬೊಂಬೆ ಥರ ಒಂದು ಸ್ಟೂಲ್ ಮೇಲೆ ಅಮ್ಮ ನಿಲ್ಲಿಸಿ ಅಲ್ಲಾಡಬಾರದು ಎಂದು ಹೇಳಿದ್ದು ಇನ್ನು ನೆನಪಿದೆ. ಒಂದು 20 ಪಿನ್ ಹಾಕಿದ್ರೋ ಏನೋ ಗೊತ್ತಿಲ್ಲ. ನಡೆಯಕ್ಕೆ ಆಗಲ್ಲಾ, ಕೂತ್ಕೊಳಕ್ಕೆ ಆಗಲ್ಲ, ಏಳಕ್ಕಾಗಲ್ಲ ಅಂತ ವಿವಿಧ ರೀತಿಯಲ್ಲಿ ಗಲಾಟೆ ಮಾಡಿ ಅಂತೂ ಒಂದು ಚೆಂದದ ಫೋಟೋ ತೆಗೆಸಿ ಅಜ್ಜಿಗೆ ಕೊಟ್ಟು ನಮಸ್ಕಾರ ಮಾಡಿದ್ದೆ, ಇನ್ನು ಇದನ್ನ ಉಡಲ್ಲ ಎಂದು.

A tee and a jean never make you look beautiful as a saree

ಈ ಸೀರೆ ತೆಗೆದುಕೊಳ್ಳುವಾಗ ನಡೆಯುವ ಪ್ರಸಂಗಗಳೇ ಇನ್ನೂ ಅದ್ಭುತ. ಅಮ್ಮ, ಅಜ್ಜಿ ಜೊತೆ ಚಿಕ್ಕಪೇಟೆಗೆ ಹೋದಾಗ, ಇಡೀ ದಿನ ಅಲ್ಲಿ ಕಳೆದು ಬೇಜಾರಾಗಿ ಜಗಳ ಆಡಿದ್ದೂ ಇದೆ. ನಮ್ಮ ಅಜ್ಜಿಗೆ ರಾಮಾ ಗ್ರೀನ್, ಬಾಟಲ್ ಗ್ರೀನ್, ಆನಂದಾ ಬ್ಲೂ ಅಂತದ್ದೇನೋ ಬಣ್ಣ ಬೇಕು ಅಂತೆಲ್ಲಾ ಹೇಳಿ ಪೀಡಿಸುತ್ತಿದ್ದರು. ಅಂಗಡಿಯವನಿಗೆ ಅದೆಲ್ಲ ಹಳೇ ಫ್ಯಾಷನ್ ಅನ್ನಿಸುತ್ತಿತ್ತು. 25 ಅಂಗಡಿ ತಿರುಗಿ ಕಡೆಗೆ ಮೊದಲ ಅಂಗಡಿಯ ಮೊದಲ ಸೀರೆಯನ್ನೆ ತೆಗೆದುಕೊಂಡು ಬರುತ್ತಿದ್ದರು.

ನನ್ನ ಅಣ್ಣನ ಮದುವೆಯ ಸಂದರ್ಭದಲ್ಲಿ ನಾನೂ ಎಚ್ಚೆತ್ತುಕೊಂಡು, ನೆಮ್ಮದಿಯಾಗಿ 4 ಪುಸ್ತಕ ಓದುತ್ತಿದ್ದೆ ಆ ಅಂಗಡಿಯಲ್ಲಿಯೇ ಕೂತುಕೊಂಡು. ಇದರ ಮೇಲಿನ ಕೋಪ ಬಹಳಷ್ಟಿತ್ತು. ಸುಮ್ಮನೆ pant ಹಾಕೋಬೋದಿತ್ತು ಅಂತ ತುಂಬಾ ಅನ್ನಿಸುತ್ತಿತ್ತು. ಈ 6 ಗಜದ ಬಟ್ಟೆಗೆ ಇಷ್ಟೊಂದು ಬಿಲ್ಡ್ ಅಪ್ ಅಂತಾ ಗೊತ್ತಾಗ್ತಾನೆ ಇರ್ಲಿಲ್ಲ. ನಮ್ಮ ಚಿಕ್ಕಮ್ಮ ಅಂತೂ ಅವಳ ಮಗನ ಉಪನಯನಕ್ಕೆ 30 ಅಂಗಡಿ ಅಲೆಸಿ ನಂತರ ಫೋಟೋಗೆ ವಿಡಿಯೋಗೆ ಚೆನ್ನಾಗಿ ಕಾಣಿಸುವ ಸೀರೆ ಆಯ್ದುಕೊಂಡು ಬಂದ್ದಿದ್ದಳು.

ತಾತ ಖಾದಿಯ ಬಗ್ಗೆ, ಸೀರೆ ನೇಯುವ ಬಗ್ಗೆ, ರೇಷ್ಮೆಯ ಬಗ್ಗೆ ತಿಳಿಸಿ ಹೇಳಿದ್ದರು. ಸೀರೆ ನೇಯುವ ಕಲೆ, ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದು ನಡೆಸಿದ ದೊಡ್ಡ ಪಾತ್ರವನ್ನೆಲ್ಲಾ ಹೇಳಿದ್ದರು. ನನಗೆ ನಂತರ ಮೊಳಕಾಲ್ಮೂರು, ಇಳಕಲ್ ಸೀರೆ ಇವೆಲ್ಲದರ ಬಗ್ಗೆ, ನಮ್ಮ ಮೈಸೂರ್ ಸಿಲ್ಕ್ ಬಗ್ಗೆ ತಿಳಿದುಕೊಂಡು ಖುಷಿ ಪಟ್ಟಿದ್ದೆ. ಪ್ರಸನ್ನರ ಬದವನಾಳು ಸತ್ಯಾಗ್ರಹ ಕೈಮಗ್ಗದ ಉತ್ತೇಜನಕ್ಕೆ, ಯಂತ್ರಗಳನ್ನ ಕಳಚಿ ಪುಸ್ತಕದಲ್ಲಿ ವಿಸ್ತಾರವಾಗಿ ಅವರು ಬರೆದಿರುವ ವಿಷಯಗಳನ್ನ ಓದಿ ನನಗೆ ಪರಮಾಶ್ಚರ್ಯವಾಯಿತು.

A tee and a jean never make you look beautiful as a saree

ಹೆಣ್ಣುಮಕ್ಕಳು ಸೀರೆ ಉಟ್ಟು ಸಂಭ್ರಮಿಸುವುದಕ್ಕಿಂತ ಹಳ್ಳಿ ಹಳ್ಳಿಗಳಲ್ಲಿ ಸೀರೆ ಹೆಣ್ಣು ಮಕ್ಕಳನ್ನ ಆರ್ಥಿಕವಾಗಿ ಸ್ವತಂತ್ರ ಮಾಡುತ್ತಿದೆ ಎಂಬುವ ವಿಷಯ ನನಗೆ ತಿಳಿದು ಇನ್ನೂ ಸಂತೋಷವಾಯಿತು. ನಮ್ಮ ಇಂಜಿಯನಿಯರಿಂಗ್ ಸಹಪಾಠಿಗಳ ಸುಮಾರು ಅಪ್ಪಂದಿರು ರಾಮನಗರದ ರೇಷ್ಮೆ ಬೆಳೆಗಾರರು. ಅವರ ಮನೆಗೆ ಭೇಟಿ ಕೊಟ್ಟು ಅದನ್ನೆಲ್ಲಾ ನೋಡಿದ್ದೆ. ಬರಿ ಬಟ್ಟೆ ಆಗದೆ ಅದು ಅವರ ಸ್ವಾಯತ್ತತೆಯ ಸಂಕೇತ ಎಂದು ತಿಳಿದು ಸೀರೆ ಬಗ್ಗೆ ನನಗಿದ್ದ ಕಲ್ಪನೆಯೇ ಬದಲಾಗಿತ್ತು.

ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!

ಒಂದು ತಿಂಗಳ ಹಿಂದೆ ಮನೆಯವರೆಲ್ಲ ಮೊಳಕಾಲ್ಮೂರಿಗೆ ಹೋಗಿ ಸೀರೆ ನೇಯುವುದನ್ನು ನೋಡಿ ಬಂದಿದ್ದರಂತೆ. ಅಮ್ಮ ಅಂತೂ ಈ ಥರ ಕಲೆಯಿದೆಯೆಂದೇ ಗೊತ್ತಿರಲ್ಲಿಲ್ಲ ಎನ್ನುತ್ತಿದ್ದರು. ನೇಕಾರರ ಕಷ್ಟಗಳು, ಕಲೆಯನ್ನು ಪೋಷಿಸುತ್ತಿರುವ ಬಗ್ಗೆ ಹೇಳಿದ್ದರಂತೆ. ಯಕಶ್ಚಿತ್ ಸೀರೆ ಎನ್ನುತ್ತಿದ್ದ ನನಗೆ ಇದು ದೊಡ್ಡ ಕಲಿಕೆ. ಇವೆಲ್ಲವನ್ನ ಆಂಟಿಗೆ ಹೇಳಿದ್ದೆ.

ಎಲ್ಲಾ ಆಂಟಿಗಳ ಹಾಗೆ 'ನಿನ್ನ ಮದುವೇಲಿ ಸೀರೆ ಹೇಗೆ ಉಟ್ಟುಕೊಳ್ಳುವುದಿಲ್ಲವೋ ನೋಡುತ್ತೇನೆ' ಎಂದು ಸವಾಲು ಹಾಕಿದಾಗ ನಾನು 'ಆಂಟಿ ಜೀನ್ಸ್ ಚಡ್ಡಿ, ಹಿಂಗೆ ಸ್ಲೀವ್ ಲೆಸ್ ಷರ್ಟ್ ಹಾಕೋತ್ತೀನಿ' ಅಂತ ಅವರಿಗೆ ಪ್ರತಿಸವಾಲು ಎಸೆದಿದ್ದೆ. 'ಅದಿಕ್ಕೆ ನೋಡಮ್ಮ ನನ್ನ ಖಾದಿ ಸೀರೆಯಲ್ಲಿ ಒಂದು ಚೂರು ಬೆವರಿನ ಕಲೆ ಕಾಣಿಸುತ್ತಿಲ್ಲ. ನಿನ್ನದು ನೋಡು' ಅಂದು ಹೋದ್ರು.

ಹಂ, ಜಯನಗರದ ಹುಡುಗಿ ಇನ್ನೂ ಸೀರೆ ಉಟ್ಟುಕೊಳ್ಳೋದು ಕಲಿಯಬೇಕಿದೆ ಅಂತ ಮನದಟ್ಟಾಗಿ ಮನೆಗೆ ಬಂದೆ.

English summary
Undoubtedly women, especially Indian, look more beautiful and gorgeous in saree. Saree is not just tradition or a wear for women, it is symbol of their strength. Meghana Sudhindra shares her experience on wearing saree for the first time when she was in school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X