ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕದ ಹುಚ್ಚು ಹಚ್ಚಿದ ಗ್ರಂಥಾಲಯದ ಕಥೆಯಿದು

By ಜಯನಗರದ ಹುಡುಗಿ
|
Google Oneindia Kannada News

ವಿಶ್ವ ಪುಸ್ತಕ ದಿನವಾಗಿ ಸುಮಾರು ತಿಂಗಳಾಯಿತು. ಆದರೂ ನಮ್ಮನ್ನೆಲ್ಲಾ ಪುಸ್ತಕದ ಹುಳುಗಳನ್ನಾಗಿ ಮಾಡಿದವರ ಬಗ್ಗೆ ಬರೆಯಬೇಕೆಂಬ ಮನಸಾಯಿತು. ನನ್ನ ತಾತ, ತಂದೆ, ಅಪ್ಪ, ಅಮ್ಮನಿಂದ ನಾನು ಓದುವುದನ್ನು ಕಲಿಯುವುದರ ಜೊತೆಗೆ ನಮ್ಮ ಮನೆಯ ಹತ್ತಿರವೇ ಇದ್ದ ಗ್ರಂಥಾಲಯವೊಂದು ನನ್ನ ಜೀವನದ ಅವಿಭಾಜ್ಯ ಅಂಗ. ಅದರ ಬಗ್ಗೆ ತಿಳಿಯೋಣ ಬನ್ನಿ.

ಇಡೀ ಜೆ ಪಿ ನಗರ, ಜಯನಗರ 9ನೇ ಬ್ಲಾಕ್ ಗೆ ಲೈಬ್ರರಿ ಅಂಕಲ್ ಅಂತಾನೆ ಪರಿಚಿತ ನಮ್ಮ ಚಂದ್ರಶೇಖರ ಅಂಕಲ್. ಅವರಿಗೆ ಸರಿಯಾಗಿ ಲೈಬ್ರರಿ ಆಂಟಿ ಎಂದು ಪರಿಚಿತ ನಮ್ಮ ಸುಶೀಲಾ ಆಂಟಿ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]

ಇವರಿಬ್ಬರ ಕನಸಿನ ಕೂಸು ನಮ್ಮ ಗುರುದತ್ತ ಎಂಟರ್ಪ್ರೈಸಸ್ ಎನ್ನುವ ಚಿಕ್ಕದಾದ ಚೊಕ್ಕದಾದ ಗ್ರಂಥಾಲಯ. ಇದು ನನ್ನ ಅಪ್ಪ 14ನೇ ವಯಸ್ಸಿನಲ್ಲಿದ್ದಾಗ ಸದಸ್ಯರಾದ ಲೈಬ್ರರಿ. ಅಪ್ಪ ಕೆಲಸಕ್ಕೆ ಸೇರುವ ತನಕ ಅಲ್ಲಿದ್ದ ಸುಮಾರು ಪುಸ್ತಕಗಳನ್ನು ಓದುತ್ತಿದ್ದರಂತೆ. ನಾವು ಅಲ್ಲೇ ರಸ್ತೆಯಲ್ಲಿ ಆಟ ಆಡುವಾಗ ಅಂಕಲ್ ನಮ್ಮನು "ಹಾಯ್ ಪುಟ್ಟ" ಆಂತ ಮಾತಾಡಿಸುತ್ತಾ ಇದ್ದರು. ಒಮ್ಮೊಮ್ಮೆ ಚಾಕಲೇಟ್ ಸಹ ಸಿಗುತ್ತಿತ್ತು.

A library is not a luxury but one of the necessities of life

ನಮಗೆ ಲೈಬ್ರರಿ ಎಂಬ ಕಲ್ಪನೆಯೂ ಇರಲ್ಲಿಲ್ಲ. ಹಿಂಗೆ ಒಮ್ಮೆ ನಮ್ಮ ಅಮ್ಮನಿಗೆ ಅಂಕಲ್ ಬಗ್ಗೆ ತಿಳಿಸಿದಾಗ ಅಮ್ಮ ಅದೊಂದು ಗ್ರಂಥಾಲಯ ಎಂದರು. ನನಗೆ ಖುಷಿಯೋ ಖುಷಿ. ನಾನು ಅಲ್ಲಿ ಸದಸ್ಯೆಯಾಗುತ್ತೇನೆ ಅಂದಾಗ ಮನೆಯಲ್ಲಿ ಒಬ್ಬರೂ ಇಲ್ಲವೆನ್ನಲ್ಲಿಲ್ಲ. ಪುಸ್ತಕ ಓದುವ ಹವ್ಯಾಸ ಒಳ್ಳೆಯದು ಎಂದು ಎಲ್ಲರು ನಂಬಿದ್ದರು.[ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!]

ಅಲ್ಲಿ ಅಂಕಲ್ ಗೆ ಇದನ್ನು ಬಂದು ಹೇಳಿದಾಗ, "ಅರೆ ನಿನ್ನ ಅಪ್ಪನ್ನದ್ದು ಸದಸ್ಯತ್ವ ಸಂಖ್ಯೆ ಇದೇ" ಎಂದು ಹೇಳಿ ನನಗೆ 150 ಸಂಖ್ಯೆಯ ಕಾರ್ಡ್ ಕೊಟ್ಟು, ಅದಕ್ಕೆ ನನ್ನ ಹೆಸರು, ತಂಗಿಯ ಹೆಸರು ಬರೆಸಿ ನಮ್ಮ ವಯಸ್ಸಿಗೆ ಅನುಗುಣವಾಗಿ ಒಂದೊಂದು ಪುಸ್ತಕವನ್ನು ನಮಗೆ ನೀಡಿ, ಅದಕ್ಕೆ ಹಿಂದಿರುಗಿಸುವ ಡೇಟ್ ಹಾಕಿ ಕೊಟ್ಟರು. ನಂತರ ಅದಕ್ಕೆ ಕೊಡಬೇಕಾದ ಬಾಡಿಗೆ, ಡೆಡ್ ಲೈನ್ ಮೀರಿದರೆ ಕಟ್ಟುವ ದಂಡ ಎಲ್ಲವನ್ನು ಬಿಡಿಸಿ ಹೇಳಿ ಶಿಸ್ತನ್ನು ಕಲಿಸಿದ್ದರು. ನಾನು ಯಾವಾಗ್ಲೂ ಡೇಟ್ ಗೆ ಮುಂಚೆಯೆ ಪುಸ್ತಕ ಹಿಂದಿರುಗಿಸುತ್ತಿದ್ದೆ. ಅಂಕಲ್ ಒಮ್ಮೂಮ್ಮೆ ಸಂದೇಹ ಬಂದು ಪ್ರಶ್ನೆ ಕೇಳುತ್ತಿದ್ದರು. ನಾನು ಅದಕ್ಕೆ ಉತ್ತರ ಕೊಟ್ಟ ಮೇಲೆ, ಮತ್ತೊಂದು ಪುಸ್ತಕ ಕೊಡುತ್ತಿದ್ದರು.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]

A library is not a luxury but one of the necessities of life

ಬೇಸಿಗೆ ರಜಾದಲ್ಲಂತೂ ಅದೇ ನಮ್ಮ ಇಂಟರ್ನ್ ಶಿಪ್ ಜಾಗ. ಪುಸ್ತಕ ಜೋಡಿಸುವುದು, ಕಾರ್ಡ್ ನಲ್ಲಿ ಡೇಟ್ ಬರೆಯೋದು, ದುಡ್ಡಿನ ಲೆಕ್ಕ ಹಾಕೋದು ಇವೆಲ್ಲಾ ಮಾಡುತ್ತಿದ್ದೆವು. ಒಮ್ಮೊಮ್ಮೆ ಅಮ್ಮ ಎಲ್ಲಾದರೂ ಹೋಗಬೇಕೆಂದಾಗ, ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಲೈಬ್ರರಿಯಲ್ಲಿಯೆ ಬಿಟ್ಟು ಹೋಗುತ್ತಿದ್ದರು. ಅದೊಂದು ಡೇ ಕೇರ್ ಸೆಂಟರ್ ಸಹ ಆಗಿತ್ತು.

ನನ್ನ ತಂಗಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಳು. ಅವಳು ತಾತನಿಂದ ಚೆನ್ನಾಗಿಯೆ ಶಿಸ್ತನ್ನು ಕಲಿತ್ತಿದ್ದಳು. ನಮ್ಮ ಮನೆಯಲ್ಲಿಯೂ ಗ್ರಂಥಾಲಯವಿದ್ದ ಕಾರಣ, ನಾವು ಸಹಜವಾಗಿ ಪುಸ್ತಕಗಳನ್ನು ಜೋಪಾನ ಮಾಡಲು ಕಲಿತ್ತಿದ್ದೆವು. ತಂಗಿ ಒಂದೊಂದೆ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾಗ, ನಾನು ಜೋಡಿಸುವ ಪುಸ್ತಕಗಳನ್ನ ಓದುತ್ತಾ ಕುಳಿತುಕೊಳ್ಳುತ್ತಿದ್ದೆ. ಅದನ್ನು ಕಂಡು ಕಾಣದಹಾಗೆ ಸುಮ್ಮನಿರುತ್ತಿದ್ದರು.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]

ನಮ್ಮ ಬಡಾವಣೆಯ ಮಕ್ಕಳ್ಳೆಲ್ಲ ಸಂಜೆ ಅಲ್ಲೇ ಸೇರಿ ಏನಾದರೂ ತಲಹರಟೆ ಮಾಡೋದು, ಪುಸ್ತಕ ಓದೋದು, ಅಂಕಲ್ ಜೊತೆ ಹರಟೆ ಹೊಡಿಯೋದು... ಇವೆಲ್ಲ ನಮ್ಮ ಅಭ್ಯಾಸವಾಗಿತ್ತು. ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನ ಓದ್ದಿದ್ದು ನಾನು ಅಲ್ಲಿಯೇ. ನನ್ನ ಭಾಷಣಗಳ ಅಭ್ಯಾಸವೂ ಅಲ್ಲಿಯೇ ಆಗುತ್ತಿತ್ತು. ಈಗಲೂ ಮೊನ್ನೆ ಥಿಸೀಸ್ ಒತ್ತಡದಲ್ಲಿದ್ದಾಗ ತಕ್ಷಣ ಕರೆ ಮಾಡಿ ಮಾತಾಡಬೇಕೆನಿಸಿದ್ದು ಅಂಕಲ್ ಗೆನೇ. ಅವರು ನಮ್ಮ ವಿಷಯಗಳನ್ನ ಆಸಕ್ತಿ ವಹಿಸಿ ಕೇಳೋದು, ಅದಕ್ಕೆ ಸಲಹೆ ಕೊಡೋದು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

A library is not a luxury but one of the necessities of life

ಇನ್ನೂ ಇದಕ್ಕಿಂತ ದೊಡ್ಡ ಸಾಧಕ ನನ್ನ ತಾತ. ಸಂಯುಕ್ತ ಕರ್ನಾಟಕದಲ್ಲಿ ಸುದ್ದಿ ಸಂಪಾದಕರಾಗಿದ್ದರೂ ತಾತ ಪುಸ್ತಕ ಪ್ರಿಯ ಎಂದು ವಿಮರ್ಶೆ ಬರೆಯುತ್ತಿದ್ದರು. ಮೊನ್ನೆ ಮನೆಗೆ ಹೋದಾಗ ಎಷ್ಟೋ ದೊಡ್ಡವರ ಪುಸ್ತಗಳು, ಹಸ್ತಾಕ್ಷರ ಸಹಿತ, ತಾತನಿಗೆ ಶುಭಾಶಯಗಳನ್ನು ಬರೆದು ಕಳುಹಿಸಿದ್ದನ್ನು ಕಂಡೆ. ಎಚ್ ಆರ್ ನಾಗೇಶರಾಯರು ಬರೆಯುವ ವಿಮರ್ಶೆ ಅತ್ಯದ್ಭುತ ಎಂದು ಬರೆದಿದ್ದನ್ನು ನಾನು ಓದಿ ದಂಗಾದೆ.

ತಾತ ಚಾತಕ ಪ್ರಕಾಶನ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು ಎಂದು ಗೊತ್ತಾಯಿತು. ಅವರದ್ದೇ ಎಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ತಾತ ಈ ಆಸ್ತಿಯನ್ನು ನಮಗೆ ಬಿಟ್ಟು ಹೋದರಲ್ಲ ಎಂದು ನಾನು ನಾನು ಖುಷಿಯಾದೆ. ನನ್ನ ಪುಸ್ತಕ ಪ್ರೀತಿಯನ್ನು ಇನ್ನಷ್ಟು ಪ್ರೋತ್ಸಾಹಿಸಿದ್ದು ಅಪ್ಪನ ಸ್ನೇಹಿತರು, ಅವರ ಬರಹಗಾರ ಮಿತ್ರರು ಹಾಗೂ ಹಿರಿಯ ಸ್ನೇಹಿತರು.

'ದಿ ವೀಕ್' ನ ಸಂಪಾದಕರಾದ ಸಚ್ಚಿದಾನದ ಮೂರ್ತಿಯವರು (ಸಚ್ಚಿ ಅಂಕಲ್) ಪ್ರತಿ ಬೇಸಿಗೆ ರಜಾಕ್ಕೂ ಮನೆಗೆ ಬಂದಾಗ ಕೊಡುತ್ತಿದ್ದದ್ದು ಪುಸ್ತಕವೇ. ಮುಖ್ಯವಾಗಿ ಅದು ಆ ವರ್ಷದ ಇಂಗ್ಲಿಷ್ ಬೆಸ್ಟ್ ಸೆಲ್ಲರ್ ಆಗಿತ್ತು. ನಾಗೇಶ ಹೆಗಡೆ ಅಂಕಲ್ ಮನೆಗೆ ಬಂದಾಗಲೂ ಅವರ ಹೊಸ ಪುಸ್ತಕವನ್ನು ನನ್ನ ಹೆಸರು ಬರೆದು ಹಸ್ತಾಕ್ಷರ ಹಾಕಿ ಕೊಡುತ್ತಿದ್ದರು. ಮೊನ್ನೆಯೂ ಸಿಕ್ಕಾಗ ಮೇಘನಾಳಿಗೆ ಪುಸ್ತಕ ಕೊಡಬೇಕಿದೆ ಎಂದು ನೆನೆಸಿಕೊಂಡರು ಎಂದು ಅಪ್ಪ ಹೇಳುತ್ತಿದ್ದರಂತೆ.

A library is not a luxury but one of the necessities of life

ಇನ್ನು ನಾನು ತುಂಬಾ ಓದುವ ಅಂಜಲಿ ರಾಮಣ್ಣ, ಭಾರತಿ ಬಿವಿ, ವಸುಧೇಂದ್ರ, ಜೋಗಿಯವರನ್ನ ಮಾತಾಡಿಸುವ, ಭೇಟಿ ಮಾಡುವ ಹಾಗೂ ಅವರಿಂದ ಕಲಿಯುವ ಅವಕಾಶಗಳು ಸುಮಾರು ಸಿಕ್ಕಿವೆ.

ತಾತ ಯಾವಾಗಲೂ ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಪಾಠವನ್ನು ಹೇಳಿಕೊಟ್ಟಿದ್ದರು. ಪ್ರತಿ ಹುಟ್ಟುಹಬ್ಬಕ್ಕೂ ಪುಸ್ತಕವನ್ನೇ ಕೊಡಿಸುತ್ತಿದ್ದರು.
ಇವತ್ತು ನನ್ನ ಹುಟ್ಟುಹಬ್ಬ, ಪುಸ್ತಕಗಳಿಗೆ ಹೊಸ ಊರಲ್ಲಿ ಕಾಯುತ್ತಾ ಇದ್ದೀನಿ!

ಈ ಲೇಖನಕ್ಕೆ ಓದುಗರೊಬ್ಬರು ಬರೆದಿರುವ ಪ್ರತಿಕ್ರಿಯೆ ಹೀಗಿದೆ

ಈ ಅಂಕಣವನ್ನು ಓದುತ್ತಾ ಖ್ಯಾತ ಖಗೋಳ ವಿಜ್ಞಾನಿ ಕಾರ್ಲ್ ಸಗಾನ್ ಹೇಳಿರುವ ಮಾತು ನೆನಪಾಗುತ್ತದೆ, " What a wonderful thing a book is. It's a flat object made from a tree with flexible parts on which are imprinted funny dark squiggles. But one glance at it and you're inside the mind of another person, maybe somebody dead for thousands of years. Across the millennia, an author is speaking clearly and silently inside your head, directly to you. Writing is perhaps the greatest of human inventions, binding together people who never knew each other, citizens of distant epochs. Books break the shackles of time. A book is a proof that humans are capable of working magic."

ಪುಸ್ತಕಗಳು ಎಂದಿಗೂ ಕೈ ಬಿಡದ, ಒಂದು ರೀತಿಯ ಸ್ನೇಹಿತರು. ಗ್ರಂಥಾಲಯಗಳು​ ಪುಸ್ತಕಗಳ ದೇವಾಲಯ ಎಂದರೆ ತಪ್ಪಾಗಲಾರದು. ಬಹಳ ಅದ್ಭುತ ಲೇಖನ.

English summary
Everything you need for better future and success has already been written. And guess what? All you have to do is go to the library - Henri Frederic Amiel. Meghana Sudhindra write how she made use of library to enlarge her knowledge in Jayanagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X