• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡವೇ ಸತ್ಯ; ಕನ್ನಡವೇ ನಿತ್ಯ; ಕನ್ನಡವೇ ಅಪಥ್ಯ?

By Staff
|

ಕನ್ನಡದ ಮಾತು ಬಂದಾಗ ನೆನಪಾಗುವುದು ನಮ್ಮ ಜನಪ್ರಿಯ ಲೇಖಕರು. ಅವರ ಪೈಕಿ ಅರ್ಧದಷ್ಟು ಮಂದಿ ನವ್ಯ ಮತ್ತು ನವ್ಯೋತ್ತರ ಚಳವಳಿಗಳಿಗೆ ಪ್ರಾಣ ತೆತ್ತರು. ಮತ್ತೆ ಕೆಲವರು ಸೆರೆಯಾಳಾದರು. ಹೀಗಾಗಿ ಕವಿತೆಗಳು ಓದಲಿಕ್ಕೂ ನೆನಪಿಟ್ಟುಕೊಳ್ಳಲಿಕ್ಕೂ ಆಗದಂತೆ ಬದಲಾದವು. ಕಾದಂಬರಿ ಎಂಬ ಪ್ರಕಾರ ಮನರಂಜನೆಗಾಗಿ ಅಲ್ಲ , ಓದುಗರನ್ನು ಪರೀಕ್ಷಿಸುವುದಕ್ಕಿರುವ ಒಂದು ವಿಧಾನ ಎನ್ನಿಸಿಕೊಂಡು ಎಲ್ಲರನ್ನೂ ಹೆದರಿಸತೊಡಗಿತು.

D. H. Girijammaಇಂಥದ್ದರ ನಡುವೆಯೂ ಸರಳವಾದ ಓದಿನ ಖುಷಿಗೆ ಕೆಲವರು ಈಗಲೂ ಬರೆಯುತ್ತಿದ್ದಾರೆ. ಅವು ಸಮಕಾಲೀನ ಸಾಹಿತ್ಯಿಕ ಮಾನದಂಡಕ್ಕೆ ತಕ್ಕಂತೆ ಬರುತ್ತಿರುವ ಕೃತಿಗಳಲ್ಲ. ಓದಿ ಸಂತೋಷಪಡಿಸುವುದಕ್ಕೆಂದೇ ಬರೆದಂಥ ಕೃತಿಗಳು. ಉದಾಹರಣೆಗೆ ಡಾ. ಎಚ್‌.ಗಿರಿಜಮ್ಮನವರ ಕತೆಗಳು. ಇತ್ತೀಚೆಗೆ ಅವರ ನೀಳ್ಗತೆಯಾಂದು ‘ಮಯೂರ’ ಮಾಸಪತ್ರಿಕೆಯಲ್ಲಿ ಓದಲು ಸಿಕ್ಕಿತು. ತುಂಬ ಸರಳವಾಗಿ ಸಾಗುವ ಕುತೂಹಲಕಾರಿ ತಿರುವುಗಳಿರುವ ಕತೆ ಅದು.

ಕತೆ ಎಂದರೆ ಹಾಗಿರಬೇಕು ಅನ್ನಿಸುವಂತೆ ಗಿರಿಜಮ್ಮ ಬರೆಯಬಲ್ಲರು. ಅವರ ಅರ್ಧಾಂಗಿ ನೀಳ್ಗತೆಯನ್ನೇ ನೋಡಿ; ಅದು ಒಂದು ಸುಖದಾಂಪತ್ಯದ ಕತೆಯೆಂಬಂತೆ ಶುರುವಾಗುತ್ತದೆ. ಅಷ್ಟು ಸುಖೀದಾಂಪತ್ಯ ಅದಲ್ಲ ಎಂಬಂತೆ ಮುನ್ನಡೆಯುತ್ತದೆ. ಅವರ ಅಸುಖಕ್ಕೆ ಕಾರಣವೇನು ಅನ್ನುವುದು ನಿಧಾನ ಹೊಳೆಯುತ್ತದೆ.

ಇಂಥ ಕತೆಗಳ ವಿಶೇಷವೆಂದರೆ ಇವನ್ನು ಸಂಕೀರ್ಣವಾಗಿಯೂ ಬರೆಯಬಹುದಾಗಿತ್ತು ಎನ್ನುವುದು. ಆದರೆ ಗಿರಿಜಮ್ಮ ಸರಳವಾಗಿರಲು ಯತ್ನಿಸಿದ್ದು ಉದ್ದೇಶಪೂರ್ವಕ. ಇದು ತನ್ನ ಔಚಿತ್ಯದ ಗಡಿಗಳನ್ನು ಮೀರಬಹುದಾಗಿತ್ತು ಕೂಡ. ಹಾಗೆ ಮೀರಿದ್ದರೆ ಅದು ‘ಮಯೂರ’ದಲ್ಲಿ ಪ್ರಕಟವಾಗುತ್ತಿರಲಿಲ್ಲ. ಯಾವುದೋ ಸಂಕಲನದಲ್ಲಿ ಉಳಿದುಕೊಂಡು ಬೆರಳೆಣಿಕೆಯ ಮಂದಿಯನ್ನು ತಲುಪಿ ಚಿರಾಯುವಾಗುತ್ತಿತ್ತು.

‘ಅರ್ಧಾಂಗಿ’ಯಂಥ ಅಸಂಖ್ಯ ಕತೆಗಳು ಅವರಿಂದ ಬರಲಿ. ಓದುವ ಖುಷಿ ಕೊಡಲಿ.

(ಸ್ನೇಹ-ಸೇ-ತು : ಹಾಯ್‌ ಬೆಂಗ-ಳೂ-ರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more