• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಸರಿಯೇನಮ್ಮ ಜಾನಕಿ ?

By Staff
|
 • ಡಾ. ಭರತ್‌ ಎನ್‌. ಎಸ್‌. ಶಾಸ್ತ್ರಿ
 • ಪೋರ್ಟ್‌ ಟಾಲ್ಬಟ್‌, ಯು.ಕೆ.

  ಪ್ರಿಯ ಸಂಪಾದಕರಿಗೆ,

  ಜಾನಕಿಯವರ ಐರಿಷ್‌ ಹೆಂಗಸಿನ ಭಾರತದ ಚಿತ್ರಣ ಓದಿದ ನಂತರ ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ.

  ಜಾನಕಿಯವರು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನದ ಸಂಕ್ರಮಣ ಕಾಲದ intellectualsಅನ್ನು ನೆನಪಿಗೆ ತರುತ್ತಾರೆ. ಆ ಕಾಲದ ಆ ಗುಂಪಿನ ಜನ ದೌರ್ಭಾಗ್ಯವಶಾತ್‌ ನಮ್ಮ ಸಮಾಜದ elite ಕೂಡಾ ಆಗಿದ್ದುದು ವಿಪರ್ಯಾಸವೇ ಸರಿ. ಅವರಿಗೆ ಎಂದೆಂದಿಗೂ ಐರೋಪ್ಯ ಅಥವಾ ಪಾಶ್ಚಿಮಾತ್ಯ ಜನತೆ ತುಂಬಾ ಆದರ್ಶ, ಅನುಕರಣೀಯ. ಭಾರತವನ್ನು ನೆನಪಿಗೆ ತರುವ ಯಾವುದೇ ವಸ್ತು , ವಿಷಯ ತುಚ್ಛ, ಹೀನಾಯ.

  ಜತೆಯಲ್ಲೇ ಅದೇ ಕಾಲದ ಧೀಮಂತ, ತೇಜಸ್ವಿ ಸಂನ್ಯಾಸಿ ಸ್ವಾಮಿ ವಿವೇಕಾನಂದರ ನುಡಿಗಳೂ ನೆನಪಿಗೆ ಬರುತ್ತವೆ- ‘ಕೈಯಲ್ಲಿ ಐರೋಪ್ಯರು ಬರೆದ ಪುಸ್ತಕಗಳನ್ನು ಹಿಡಿದು ಅರ್ಥವಾಗದ ಶಬ್ದಗಳನ್ನು ಉರುಹೊಡೆದು ಸಮುದ್ರದ ದಂಡೆಯಲ್ಲಿ ತಿರುಗಾಡುವ ಯುವಕರೇ, ಹಾಯ್‌, ನಿಮ್ಮನ್ನೂ ನಿಮ್ಮ ಆ ಪುಸ್ತಕಗಳನ್ನೂ ಮುಳುಗಿಸುವಷ್ಟು ನೀರು ಆ ಸಮುದ್ರದಲ್ಲಿ ಇಲ್ಲವೇ?’

  ಈ ಐರಿಷ್‌ ಹೆಂಗಸು ಬರೆದ ಅಂಕಣ, ಮತ್ತದರ ವಿಶ್ಲೇಷಣೆ (ಜಾನಕಿಯವರದ್ದೆಂದು ವಿಶೇಷವಾಗಿ ಹೇಳಬೇಕಿಲ್ಲವಷ್ಟೆ!) ತಲುಪುವುದಾದರೂ ಯಾರನ್ನು? ಜೀವನದಲ್ಲಿ ಎಲ್ಲ ರೀತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ತಂತಮ್ಮ ಕಾರ್ಯಕ್ಷೇತ್ರದಲ್ಲಿ ಹಿರಿಮೆಯನ್ನು ಸಾಧಿಸಿದ, ಮತ್ತದೇ ದಾರಿಯಲ್ಲಿರುವ ಭಾರತೀಯರನ್ನಲ್ಲವೆ? ಅವರೆದುರು ಅವರ ಸಮಾಜ ಇಂತಹದ್ದೆಂದು ಹೀಗಳೆಯುವುದು ಅವರ ಸಾಧನೆಗಳನ್ನು ಹೀನೈಸಿದಂತಲ್ಲವೆ?

  ಕೇವಲ ಭಾರತೀಯರಷ್ಟೆ ಕನಸು ಕಾಣುವವರಾದರೆ, ಶ್ರಮಪಡಲು ಹಿಂಜರಿಯುವವರಾದರೆ, ಬ್ರಿಟನ್ನಿನಲ್ಲಿ ಲಾಟರಿ ಏಕೆ ಅಷ್ಟೊಂದು ಜನಪ್ರಿಯವಾಗಿದೆ ? ಕೇವಲ ಅಮೆರಿಕನ್ನರು ಶ್ರಮಜೀವಿಗಳಾದರೆ, ತಮ್ಮ ಅವಶ್ಯಕತೆಗಳಿಗೆ ದುಡಿಯುವವರಾದರೆ outsourcingಗೆ ಅಮೆರಿಕನ್ನರು ಅಷ್ಟೇಕೆ ಹೆದರುತ್ತಾರೆ?

  ತಮ್ಮನ್ನು ಆಳುವವರು ದೇವರೆಂದುಕೊಂಡ ತಮಿಳುನಾಡಿನ ಜನತೆ ಕರಾರುವಾಕ್ಕಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಆಳುವ ಸರಕಾರವನ್ನು ಬದಲಿಸುತ್ತಿದ್ದಾರೆ, ಅದೂ anti incumbency ಎಂಬ ಕಾರಣಕ್ಕೆ ಎಂಬುದು ಈ ಐರಿಷ್‌ ಮಹಿಳೆಗೆ ಬಹುಶಃ ತಿಳಿದಿರಲಿಕ್ಕಿಲ್ಲ (ಓ! ಆಕೆ ಕೇವಲ ಹದಿನಾರು ತಿಂಗಳುಗಳ ಕಾಲ ಭಾರತದಲ್ಲಿ ಇದ್ದಳಲ್ಲವೆ!). ಅಬ್ಬರದ ಪ್ರಚಾರ ತಂತ್ರದಿಂದ ಒಂದು ಯುದ್ಧವನ್ನೇ ಹೊರಿಸಿದ ಸರಕಾರವನ್ನು ಆರಿಸಿದ ಮತದಾರರಿಗಿಂತ ಇವರು ಮೇಲಲ್ಲವೆ!

  ಇನ್ನು ಮಹಾರಾಷ್ಟ್ರದ ಮಟ್ಟಿಗೆ ಹೇಳುವುದಾದರೆ ಅಲ್ಲಿ, ಮುಖ್ಯತಃ ಮುಂಬಯಿಯಲ್ಲಿ, ಶ್ರೀಮಂತರನ್ನು ಗೇಲಿ ಮಾಡುವವರು ಕೇವಲ ಬಡವರ ಮುಂದಾಳುತನ ವಹಿಸಿಕೊಂಡ ಶ್ರೀಮಂತರು. ಅಂತಹ ನಾಯಕರನ್ನು ಆಯ್ಕೆ ಮಾಡುವ ಅನಿವಾರ್ಯತೆ ಜನಕ್ಕೆ ಕ್ರಮೇಣ ಕಡಿಮೆಯಾಗುತ್ತಿದೆ, ಎಂಬುದೂ ಈ ಘನತೆವೆತ್ತ ಮಹಿಳೆಗೆ ತಿಳಿದಂತಿಲ್ಲ.

  ತಮ್ಮ ಭಾಷೆಯ ಪುಸ್ತಕಗಳನ್ನು ಓದದ, ಇಂಗ್ಲಿಷಿನ ಧಾರಾವಾಹಿಗಳಿಗೆ ಪೆಕರು ಪೆಕರಾಗಿ ನಗುವ ಜನರು ಎಲ್ಲ ಸಮಾಜದಲ್ಲಿಯೂ ಸಿಗುತ್ತಾರೆ (ಹಾಗೆ ನಕ್ಕರೂ ತಪ್ಪೇನಿಲ್ಲ, ನಮ್ಮ ಜನಕ್ಕೆ ಇಂಗ್ಲಿಷರಿಗೆ ಇರುವಂತಹ ‘ವಿಲಕ್ಷಣ’ ಹಾಸ್ಯ ಪ್ರಜ್ಞೆಯಿಲ್ಲವಲ್ಲ !). ಹಾಗೆ ಆಡುವವರನ್ನು ಬಿಡಿ, ಅಂಥವರು ಜಾನಕಿಯವರ ಗುಂಪಿಗೇ ಸೇರುತ್ತಾರೆ. ‘ದಿನಕ್ಕೆ ಐದು ಸ್ಥಳೀಯ ಭಾಷೆಯ ಮೆಗಾ ಸೀರಿಯಲ್‌ ನೋಡುವ’ವರಿಗೆ ಇಂಗ್ಲಿಷ್‌ ಅರ್ಥವಾಗುವುದಿಲ್ಲ, ಅವರು ಇಂಗ್ಲಿಷಿನ ಸೀರಿಯಲ್‌ ನೋಡುವುದೂ ಇಲ್ಲ.

  ‘ಆಕೆ ನುಡಿದಿದ್ದೆಲ್ಲ ಸುಳ್ಳಿರಲೂಬಹುದು’ ಎಂಬ ಅರೆಮನಸ್ಸಿನ ಹೇಳಿಕೆಯಲ್ಲೇ ‘ನಿಜವಿರಲೂಬಹುದು’ ಎನ್ನುವ ತಪ್ಪೊಪ್ಪಿಗೆಯ ಮನೋಭಾವ ಎಲ್ಲಿಯ ತನಕ ಇರುತ್ತದೋ ಅಲ್ಲಿಯ ತನಕ ಯಾವುದೋ ಒಬ್ಬ ಅನಾಮಧೇಯ ಅಂಕಣಕಾರ್ತಿ ಬರೆದ gutter inspectors report ಕೂಡಾ ನಮಗೆ ಬಹುಮುಖ್ಯವಾಗಿ ಬಿಡುತ್ತದೆ.

  ಭರತ್‌ರ ಪ್ರತಿಕ್ರಿಯೆಗೆ ಕಾರಣವಾದ ಲೇಖನ-

  ನೋಡಿ ಸ್ವಾಮಿ, ನಾವಿರೋದೆ ಹೀಗೆ...

  (ಈ ಚರ್ಚೆಯನ್ನು ಓದುಗರು ಮುಂದುವರೆಸಬಹುದು : feedback@thatskannada.com)

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more