• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ‘ಶಿಶು’ಗೀತೆಗೆ ಬೇಕಿದೆ ಲಾಲನೆ !

By Staff
|

*ಶೇಷಾದ್ರಿವಾಸು, ನ್ಯೂ ಜೆರ್ಸಿ

Sheshadri Vasuಜಾನಕಿಯವರ ‘ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ!’ ಲೇಖನ ಓದಿ ಸಂತೋಷ ಆಶ್ಚರ್ಯಗಳು ಒಟ್ಟಿಗೆ ಆದವು.

ನನ್ನ ಐದು ತಿಂಗಳ ಮಗನಿಗೆ ಊಟ ಮಾಡಿಸುವಾಗ ನನ್ನ ಹೆಂಡತಿ ಕೆಲವು ರೈಮ್ಸ್‌ ಹೇಳುತ್ತಿರುತ್ತಾಳೆ. ನನ್ನ ನೆನಪಿನ ಶಕ್ತಿಯಿಂದ ಕೆಲವು ಕನ್ನಡ ಪದ್ಯಗಳನ್ನು (ಅರ್ಧಂಬರ್ಧ) ಅವಳಿಗೆ ಹೇಳಿಕೊಟ್ಟಿದ್ದರೂ ಇಂಗ್ಲಿಷ್‌ ರೈಮುಗಳೇ ಅವಳ ಬಾಯಿಂದ ಬರುವುದು ಜಾಸ್ತಿ. ಅದಕ್ಕೆ ಕಾರಣ ನಮ್ಮ ಮನೆಯ ಪಕ್ಕದಲ್ಲಿ ಇರುವ ಲೈಬ್ರರಿಯಲ್ಲಿ ಉಚಿತವಾಗಿ ದೊರಕುವ ಇಂಗ್ಲಿಷ್‌ ರೈಮುಗಳ ಬಣ್ಣಬಣ್ಣದ ಪುಸ್ತಕಗಳು ಮತ್ತು ಕ್ಯಾಸೆಟ್ಟುಗಳು! ಈ ಇಂಗ್ಲಿಷ್‌ ರೈಮುಗಳಲ್ಲಿ ಒಂದು...

One, two, buckle my shoe

Three, four, shut the door

Five, six, pick up sticks

Seven, eight, lay them straight

Nine, ten, a good fat hen

ಇತ್ತೀಚೆಗೆ ಈ ಹಾಡಿನ ಅರ್ಥ ಏನು ಎಂದು ಕೇಳಿದಾಗ ಗೊತ್ತಿಲ್ಲ ಎಂದಳು. ಶೂ ಹಾಕಿಕೊಂಡು, ಬಾಗಿಲನ್ನು ಮುಚ್ಚಿ, ಕಡ್ಡಿಗಳನ್ನು ಎತ್ತಿಕೊಳ್ಳಬೇಕಾದ ಸಂದರ್ಭ ಯಾವುದು ಎಂದು ನನಗೆ ಗೊತ್ತಿಲ್ಲ. ಇದಕ್ಕಿಂತಲೂ ಉತ್ತಮವಾದ ಮಕ್ಕಳ ಪದ್ಯ ಕನ್ನಡದಲ್ಲಿ ಇದೆ. ಅದು,

ಒಂದು ಎರಡು ಬಾಳೆಲೆ ಹರಡು

ಮೂರು ನಾಲ್ಕು ಅನ್ನ ಹಾಕು

ಐದು ಆರು ಬೇಳೆ ಸಾರು

ಏಳು ಎಂಟು ಪಲ್ಯಕೆ ದಂಟು

ಒಂಬತ್ತು ಹತ್ತು ಎಲೆ ಮುದಿರೆತ್ತು

ಒಂದರಿಂದ ಹತ್ತು ಹೀಗಿತ್ತು

ಊಟದ ಆಟವು ಮುಗಿದಿತ್ತು

ರೈನ್‌ ರೈನ್‌ ಗೊ ಅವೆ... ಪದ್ಯದಷ್ಟೇ ‘ಮಳೆ ಬಂತು ಮಳೆ... ಕೊಡೆ ಹಿಡಿದು ನಡೆ... ಜಾರಿಬಿದ್ದೆ ಕೊಂಚ ತಾಳು ಬಟ್ಟೆಯಲ್ಲ ಕೊಳೆ...’ ಚೆನ್ನಾಗಿಲ್ಲವೆ ? ಪ್ರಾಸದ ಜೊತೆಗೆ ಅರ್ಥವತ್ತಾದ ಇಂತಹ ಅನೇಕ ಪದ್ಯಗಳು ಕನ್ನಡದಲ್ಲಿವೆ.

ನಮ್ಮದಕ್ಕೆ ಸರಿಯಾದ ಪ್ರಚಾರ ಸಿಗದ ಕಾರಣ ಎಲ್ಲಾ ಮರೆತುಬಿಟ್ಟಿದ್ದೇವೆ. ಹ್ಯಾರಿ ಪಾಟ್ಟರ್‌, ಲಾರ್ಡ್‌ ಆಫ್‌ ದ ರಿಂಗ್ಸ್‌ ಮುಂತಾದ ಕಥೆಗಳು ಪ್ರಸಿದ್ಧವಾಗಿದ್ದು ಆಯಾ ಸಿನಿಮಾಗಳ ತಾಂತ್ರಿಕತೆಯಿಂದ ಮತ್ತು ಪ್ರಚಾರದಿಂದ ಮಾತ್ರ. ಈ ಕಥೆಗಳ ಸತ್ವಕ್ಕಿಂತಲೂ ಗ್ರಾಫಿಕ್ಸ್‌ ನಿಂದ ಸಿನಿಮಾಗಳು ಅದ್ಭುತ ಯಶಸ್ಸು ಪಡೆದವು. ಇಂತಹ ಅನೇಕ ಮಂತ್ರವಾದಿ ಕಥೆಗಳನ್ನು, ಸಿನಿಮಾಗಳನ್ನು ಕನ್ನಡದಲ್ಲಿ ನಾವು ಓದಿದ್ದೇವೆ, ನೋಡಿದ್ದೇವೆ.

ಲಯನ್‌ ಕಿಂಗ್‌, ಶ್ರೆಕ್‌ ಕಥೆಗಳಿಗಿಂತ ಅದ್ಭುತವಾದ ಕಥೆಗಳು, ನೀತಿಗಳು ನಮ್ಮ ಪಂಚತಂತ್ರದಲ್ಲಿವೆ. ಆದರೂ ಈ ಸಿನಿಮಾಗಳ ಪ್ರಚಾರ, ಗಳಿಕೆಯ ಅಬ್ಬರದಲ್ಲಿ ನಮಗೆ ಬೇರೆಲ್ಲಾ ಮರೆತು ಹೋಗುತ್ತದೆ. ಆದ್ದರಿಂದ ನಮಗೆ ನಮ್ಮದರ ಬಗ್ಗೆ ಹೆಚ್ಚಿನ ಪ್ರಚಾರ ಬೇಕು. ಆಗ ಎಲ್ಲಾ ಮಕ್ಕಳೂ ಕನ್ನಡ ಪುಸ್ತಕ ಓದುತ್ತಾರೆ, ಮಾತನಾಡುತ್ತಾರೆ! ನಮ್ಮ ಸಾಹಿತ್ಯ ಗಣಿಗಳಲ್ಲಿ ಹುದುಗಿರುವ ಮುತ್ತು-ರತ್ನಗಳನ್ನು ಹೊರತೆಗೆದು ಸದುಪಯೋಗ ಪಡಿಸಿಕೊಳ್ಳುವ ಬುದ್ಧಿವಂತರು ನಮಗೆ ಬೇಕಾಗಿದ್ದಾರೆ!

ಬೆಕ್ಕಿನ ಸಮಸ್ಯೆಗೆ ಗಂಟೆಯ ಉಪಾಯ ಹೇಳಿದ್ದೇನೆ!!!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more