ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರೆದ ಬಾಗಿಲು

By Staff
|
Google Oneindia Kannada News

Fresh Air from Kannada Literary fieldsತೇಜಸ್ವಿ ತುಂಬ ಸೊಗಸಾಗಿ ಬರೀತಾರೆ !

ಹಾಗಂತ ತೇಜಸ್ವಿಯನ್ನು ಓದಿದವನೊಬ್ಬ ಇನ್ನೊಬ್ಬನಿಗೆ ಹೇಳಿದರೆ ಅದನ್ನು ಯಾವ ‘ಪ್ರಕಾರ’ ಎನ್ನುತ್ತೀರಿ ? ಗೊತ್ತಿಲ್ಲ .

ಹಾಗಂತ ಪಂಡಿತ ಹೇಳಿದರೆ ವಿಮರ್ಶೆಯಾಗುತ್ತದೆ. ಪತ್ರಕರ್ತ ಹೇಳಿದರೆ ಹೊಗಳಿಕೆಯಾಗುತ್ತದೆ. ಸಹಲೇಖಕ ಹೇಳಿದರೆ ರಾಜಕೀಯವಾಗುತ್ತದೆ. ತೇಜಸ್ವಿಯೇ ಹೇಳಿಕೊಂಡರೆ ಆತ್ಮರತಿಯಾಗುತ್ತದೆ. ಆದರೆ ಒಬ್ಬ ಓದುಗ ಮತ್ತೊಬ್ಬ ಓದುಗನಿಗೆ ಹೇಳಿದರೆ...

ಅಲ್ಲಿ ತೇಜಸ್ವಿಯ ಬಗ್ಗೆ ಅಪಾರ ಪ್ರೀತಿಯಾಗಲಿ, ಅಗಾಧವಾದ ಗೌರವವಾಗಲೀ ಇರುವುದಿಲ್ಲ . ಕೃತಿ ಓದುಗನಿಗೆ ಇಷ್ಟವಾಗಿರುತ್ತದೆ ಅಷ್ಟೇ. ಆ ಕೃತಿಪ್ರೀತಿ ಅದೊಂದು ಕೃತಿಗಷ್ಟೇ ಸೀಮಿತವಾಗಿರುತ್ತದೆ. ಒಂದು ಪರಂಪರೆಯ ಹಂಗಿಲ್ಲದೆ, ಆ ಲೇಖಕನ ಬಿರುದುಬಾವಲಿಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮೆಚ್ಚಿಕೊಳ್ಳುವವನು ಓದುಗ.

ಈ ಲೇಖನ ಮಾಲಿಕೆ ಕೂಡ ಅಷ್ಟೇ. ಇದು ಒಬ್ಬ ಓದುಗನ ತಕ್ಷಣದ ಪ್ರತಿಕ್ರಿಯೆ. ಇದರಲ್ಲಿ ಲೆಕ್ಕಾಚಾರವಾಗಲೀ, ಜಾಣತನವಾಗಲೀ ಇಲ್ಲ . ಮೊನ್ನೆ ಒಂದು ಕತೆ ಓದಿದೆ ಮಾರಾಯ... ಎಂಬಷ್ಟು ಸಲೀಸಾಗಿ ತೊಡಗಿಕೊಂಡು ನಿಂಗೇನನ್ನಿಸಿತು ಅಂತ ಕೇಳುತ್ತಾ ಮುನ್ನಡೆದು ಸಾಧ್ಯವಾದರೆ ನೀನೂ ಓದು ಅನ್ನುವ ಸಲಹೆ ಕೊಟ್ಟು ವಿರಮಿಸುವುದಷ್ಟೇ ಈ ಲೇಖನಗಳ ಕೆಲಸ.

ಬನ್ನಿ... ಎದುರುಗೊಳ್ಳಿ. ಈ ‘ತೆರೆದ ಬಾಗಿಲು’ ನಿಮ್ಮನ್ನು ಒಳಗೆ ಕರೆಯುತ್ತಿದೆ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X