ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಲ್ಡ್ ಲೈಫ್ ಭಾಷಣಾ ಮತ್ತು ವೈಲ್ಡ್ ವೈಫ್ ರಕ್ಷಣಾ!

By ಪ್ರಶಾಂತ ಕೆ. ಅಡೂರ, ಹುಬ್ಬಳ್ಳಿ
|
Google Oneindia Kannada News

ಇವತ್ತ (ಡಿ.4) ವಿಶ್ವ ವನ್ಯಜೀವ ಸಂರಕ್ಷಣಾ ದಿನ. ಬೆಳಿಗ್ಗೆ ನಮ್ಮ ಹುಬ್ಬಳ್ಳಿ wwfನವರು (world wide fund for nature) ನಾಲ್ಕ ಮಾತಾಡ್ರಿ ಅಂತ ಕರದಿದ್ದರು. ನಾ ಅಗದಿ ಭಾರಿ ಉಮೇದಿಲೆ ಹೋಗಿ...

"ಭಾರೀ ದುಃಖದ ಸಂಗತಿಯೇನೆಂದರ ವಿಶ್ವದ ಅತೀ ಸುಂದರ, ಎಲ್ಲಾರಿಂದ ಪ್ರೀತಿಸುವ, ಆಕರ್ಷಕ ಜೀವಿಗಳನ್ನ ಇಂದ ಪ್ರತೀದಿನಾ ಹತ್ಯಾ ಮಾಡಲಿಕತ್ತಾರ. ನಾವು ಸಮಾಜದಾಗ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಅಳಿವಿನಂಚಿನ್ಯಾಗಿರೋ ವನ್ಯಜೀವಿಗಳ ಸಂರಕ್ಷಣಾಕ್ಕ ನಮ್ಮ ಕೈಲಾದ ಕಾಣಿಕೆ ನೀಡಬೇಕ. ವನ್ಯಜೀವಿ ಸಂರಕ್ಷಣಾ ದಿನಾ ಈ ಸುಂದರ ಜೀವಿಗಳ ಸಂರಕ್ಷಣೆ ಬಗ್ಗೆ ಇನ್ನಷ್ಟು ತಿಳಕೊಂಡು ಮತ್ತು ಈ ಸಮಸ್ಯಾಕ್ಕ ಪರಿಹಾರ ಕಂಡುಕೊಳ್ಳಾಕ ಛೋಲೋ ಅವಕಾಶ ನೀಡೇದ. ಈ ಅರಣ್ಯಜೀವಿಗಳ ಸಂರಕ್ಷಣಾ ಹೆಂಗ ಮಾಡಬೇಕು, ಭೂಮಿ ಮ್ಯಾಲಿನ ಅಳಿವಿನಂಚಿನ್ಯಾಗಿರೋ ಪ್ರಾಣಿಗಳನ್ನ ಹೆಂಗ ರಕ್ಷಣಾ ಮಾಡಬೇಕು ಮತ್ತು ಇವನ್ನ ಹತ್ಯಾ ಮಾಡೋದರಿಂದ ಪರಿಸರದ ಮೇಲಾಗೋ ಪರಿಣಾಮದ ಬಗ್ಗೆ ದಯವಿಟ್ಟು ಹೆಚ್ಚ ಅರಿತುಕೊಳ್ಳಿ. ವನ್ಯಜೀವಿ ಹತ್ಯಾ ಮಾಡುವಂಥ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸೋ ಕುರಿತು ಜವಾಬ್ದಾರಿಯುತವಾಗಿ ಚಿಂತನೆ ಮಾಡ್ರಿ..." ಅಂತ ಇಂಗ್ಲಿಷದಾಗ ಒಂದ ದೊಡ್ಡ ಭಾಷಣಾ ಹೊಡದ ಬಂದೆ.

ನಾ ಹಿಂಗ ಮುಂಜಮುಂಜಾನೆ ಎದ್ದ Wildlife Conservation Dayಕ್ಕ ಭಾಷಣಕ್ಕ ಹೋಗಿ ಬಂದಿದ್ದ ನೋಡಿ ನನ್ನ ವೈಫ ಭಾಳ wild ಆಗಿದ್ಲು. ಅಕಿ ನಾ ಮನಿಗೆ ಬರೋ ಪುರಸತ್ತ ಇಲ್ಲದ... [ಸೈಟು ಮನೆ ಕಾರಿನಾಚೆ ಸಿಗುವ ನೆಮ್ಮದಿ!]

Wildlife conservation and wild wife preservation

"ಅಯ್ಯ... ನಿಮಗೇನ ತಲಿ ವೈಲ್ಡ್ ಲೈಫ ಬಗ್ಗೆ ತಿಳಿತದ ಅಂತ ಕರದಿದ್ದರು... ಮನ್ಯಾಗ ಒಂದ ನಾಯಿ, ಬೆಕ್ಕ ಸಾಕಲಿಕ್ಕೆ ಧೈರ್ಯಾ ಇಲ್ಲಾ ವೈಲ್ಡ್ ಲೈಫ್ ಬಗ್ಗೆ ಮಾತಾಡ್ಲಿಕ್ಕೆ ಹೋಗಿದ್ರಿ?" ಅಂತ ಕೇಳಿದ್ಲು. ನಂಗ ತಲಿ ಕೆಡ್ತ...

"ಲೇ ನಂದ ಲಗ್ನ ಆಗಿ ಹದಿನಾಲ್ಕ ವರ್ಷ ಆತ. ಹದಿನಾಲ್ಕ ವರ್ಷದಿಂದ ನಿನ್ನ ಸಾಕಲಿಕತ್ತಿಲ್ಲಾ... ನನಗ wildlife ಬಗ್ಗೆ ಗೊತ್ತಿಲ್ಲಾ ಅಂದರ ಏನ?" ಅಂತ ನಾ ಒರಟ ಹರಿಲಿಕತ್ತೆ.

"ಅಯ್ಯ..ಲಗ್ನಕ್ಕೂ ವೈಲ್ಡ್ ಲೈಫಗೂ ಏನ ಸಂಬಂಧ" ಅಂದ್ಲು. ನಾ ಅಕಿಗೇನ ತಿಳಸಿ ಹೇಳೋದ ಬಿಡ. ನಾ ಒಂದ ಅಂದರ ಅಕಿ ಒಂದ ಅಂತಾಳ. ಅದರಾಗ ಮುಂಜಮುಂಜಾನೆ ಯಾಕೊ ದಿನದಕಿಂತ ಹೆಚಗಿ ಇವತ್ತ ವೈಲ್ಡ್ ಆಗ್ಯಾಳ ಅಂತ ಸುಮ್ಮನಾದೆ. ಆದರ ನಾ ಖರೇ ಹೇಳ್ತೇನಿ Wildlifeಗೂ ಈ ಸಂಸಾರಕ್ಕೂ ಭಾಳ ಸಂಬಂಧ ಅದ.

ಯಾಕಂದರ ನಾವು ಲಗ್ನಾ ಮಾಡ್ಕೋಬೇಕಾರ ನಮಗ ನಾವ ನೋಡೊ ಕನ್ಯಾನ best loved, beautiful and fascinating species in the world ಅಂತ ಅನಿಸಿರ್ತದ. ಅಲ್ಲಾ ಹಂಗ ಇವತ್ತ ಬ್ರಾಹ್ಮರ ಒಳಗ ಕನ್ಯಾದ್ದ ಇಷ್ಟs ಅಭಾವ ಅದ ಅಲಾ ಹಿಂಗಾಗೆ ಅದನ್ನ IUCN (Internation union for conservation of nature and natural resources)ದವರು ಅಳಿನಂಚಿನ್ಯಾಗಿರೋ ಜೀವಿಗಳ ಪಟ್ಟಿ ಒಳಗ ಹೆಸರ ಸೇರಿಸ್ಯಾರ ಆ ಮಾತ ಬ್ಯಾರೆ. ಅದಕ್ಕ ನಾ ನನ್ನ ಭಾಷಣದೊಳಗ ಹೇಳಿದ್ದ 'ನಾವು ಸಮಾಜದಾಗ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಅಳಿವಿನಂಚಿನ್ಯಾಗಿರೋ ವನ್ಯಜೀವಿಗಳ ಸಂರಕ್ಷಣಾಕ್ಕ ನಮ್ಮ ಕೈಲಾದ ಕಾಣಿಕೆ ನೀಡಬೇಕ' ಅಂತ.

ಇನ್ನ ಹಿಂತಾ ಒಂದ species, sorry ಕನ್ಯಾ ಮದುವಿ ಆಗಿ ಒಂದ ಸ್ವಲ್ಪ ವರ್ಷ ಆಗೋದರಾಗ wild wife ಆಗಿರ್ತದ, ಸಂಸಾರಿಕ life ಅನ್ನೋದ ಗಂಡಂದರಿಗೆ wildlife ಆಗಿರ್ತದ ಅನ್ನೋದ ನನ್ನ ಅನಿಸಿಕೆ. ಹಿಂಗಾಗಿ ಗಂಡಂದರಿಗೆ ವೈಲ್ಡ್ ಲೈಫ ಬಗ್ಗೆ ಮಾತಾಡಬೇಕಂದರ ಭಾಳ ನಾಲೇಜ ಇರಬೇಕ ಅಂತಿಲ್ಲಾ. ಮನ್ಯಾಗ ಒಂದ wild wife ಇದ್ದರ ಸಾಕ ದುನಿಯಾ ಮಾತಾಡಬಹುದ.

ಅಲ್ಲಾ ನಂಗೂ ಈಗ ಗೊತ್ತಾತ. ಎಲ್ಲಾ ಬಿಟ್ಟ ನಮ್ಮ ಹುಬ್ಬಳ್ಳಿ wwfನವರ ನಂಗ ಯಾಕ world wildlife conservation dayಕ್ಕ ಕರದಾರ ಅಂತ ಹೇಳಿ. ನನ್ನಂಗ ಹದಿನಾಲ್ಕ ವರ್ಷದಿಂದ wildlife ನಾಗ ಇದ್ದ ಮಾತಾಡಲಿಕ್ಕೆ ಧೈರ್ಯ ಇದ್ದೋರ ಸಿಗಬೇಕಲಾ?

ಆದ್ರೂ ಏನ ಅನ್ನರಿ ಇವತ್ತ ನಾವ wildlife preserve ಮಾಡೋದ ಎಷ್ಟ ಇಂಪಾರ್ಟೇಂಟ ಅದನೋ ಅಷ್ಟ wild wife preserve ಮಾಡೋದು important ಅಂತ ಅನಸ್ತದ. ಹಂಗ ಇದ್ದ ಹೆಂಡ್ತಿನ್ನ wild ಅಂತ ಬಿಟ್ಟರ ಮುಂದ ಇನ್ನೊಂದ ಕನ್ಯಾ ಸಿಗಂಗಿಲ್ಲಾ. ಮೊದ್ಲ ಹೇಳಿದ್ನೆಲ್ಲಾ ಈಗ ಕನ್ಯಾ ಅನ್ನೋವು endangered species ಆಗ್ಯಾವ ಅಂತ.

English summary
The sad truth is that the world’s best loved, beautiful and fascinating species are being slaughtered day by day. We need to Raise awareness in the society and contribute to the conservation and protection of these endangered species on the occasion of World wildlife conservation day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X