ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿಗೆ ಹೆಸರಿಡುವಾಗ ಭವಿಷ್ಯದ ಅರಿವಿರಲಿ!

By ಚಾರುಕೇಶ, ವರ್ಜಿನಿಯ, ಅಮೆರಿಕ
|
Google Oneindia Kannada News

Think thrice before naming your child
ಅಮೆರಿಕದಲ್ಲಿ ಸ್ಕೂಲ್ ಮಕ್ಕಳ ಸೇಫ್ಟಿ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ. ಬಸ್ ಚಾಲಕರು ಮಕ್ಕಳ ಪಾಲಕರನ್ನು ನೋಡದೇ, ಮಾತನಾಡಿಸದೆ ಮಕ್ಕಳನ್ನು ಬಸ್ನಿಂದ ಹೊರಗೇ ಬಿಡುವುದಿಲ್ಲ. ನಮ್ಮ ಮಕ್ಕಳ ಬಸ್ ಚಾಲಕಿ ಇದರಲ್ಲಿ ಒಂದು ಹೆಜ್ಜೆ ಮುಂದು. ನಾವೆಲ್ಲಾ ಸಂಜೆ ಸ್ಕೂಲ್ ಬಸ್ಗೆ ಕಾಯುತ್ತಾ ಇದ್ದಿವಿ, ಬಸ್ ಬಂತು. ನನ್ನ ಮುಂದಿದ್ದ ಅಪ್ಪ ಬಸ್ ಬಾಗಿಲ ಬಳಿಹೋಗಿ ಹೇಳಿದರು "ನಾನು ಸಂಕಲ್ಪ್ ತಂದೆ" ಎಂದು.

ಚಾಲಕಿ - "ಸಾರಿ, ಹುಡುಗನ ಹೆಸರು ಗೊತ್ತಾಗಲ್ಲಿಲ್ಲ."
ಸಂಕಲ್ಪ ಕಿಟಕಿಯಲ್ಲಿ ಅಪ್ಪನ್ನ ನೋಡುತ್ತಾ ಇದ್ದ. ಅಪ್ಪ ಗಂಟಲು ಸರಿಮಾಡಿಕೊಂಡು - "ನನ್ನ ಮಗನ ಹೆಸರು ಸಾನ್ ಕಲ್ಪ."
ಚಾಲಕಿ ಸ್ವಲ್ಪ ಜೋರಾಗಿ - "ಅರ್ಥ ಅಗಲ್ಲಿಲ್ಲಾ, ಬೇಗ ಹೇಳಿ ತುಂಬಾ ಜನ ಕಾಯ್ತಾ ಇದಾರೆ."
ಅಪ್ಪ ಕಕ್ಕಾಬಿಕ್ಕಿಯಾಗಿ, ತಡಬಡಿಸಿ - "ಸ್ಯಾನ್ ಕ್ಯಾಲ್ಪ್" ಎಂದು ಕೂಗಿದ.
"ಒಹ್ ಗೊತ್ತಾಯಿತು!" ಚಾಲಕಿ ಬಸ್ಸಿನ್ನೊಳಗೆ ತಿರುಗಿ ಜೋರಾಗಿ "ಸ್ಯಾನ್ ಕ್ಯಾಲ್ಪ್, ನಿಮ್ಮ ಅಪ್ಪಾ!"

ಸಂಕಲ್ಪ ಜಿಂಕೆ ತರಹ ಓಡಿ ಬಂದ, ಅವನ ಅಪ್ಪ ಬೆವತು ಸುಸ್ತಾಗಿದ್ದರು. ಹುಡುಗನ ಕಿವೀಲಿ ನಾಮಕರಣದಲ್ಲಿ ಮೂರು ಸರ್ತಿ ಹೇಳುವಾಗ ಭವಿಷ್ಯದ ಅರಿವಿರಲಿಲ್ಲ ಅನ್ನಿಸುತ್ತೆ. ಹಿಂದೆ ಅಬ್ರಾಮ್ ತಾಯಿ ಓಡಿಬಂದಳು, ಸಾರಿ, ಅಭಿರಾಮ್ ತಾಯಿ. [ಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ]

***
ಅಮೆರಿಕಕ್ಕೆ ಬಂದ ಹೊಸದು, ನನ್ನ ಸ್ನೇಹಿತ ತಿರು ಜೊತೆ ಕ್ರಿಕೆಟ್ ಆಡಲು ಹೋಗಿದ್ದೆ. ತುಂಬ ಜನ ಭಾರತಿಯರು, ನನ್ನ ನೆಚ್ಚಿನ ಆಟವಾಡೋದು ನೋಡಿ ಖುಷಿಯಾಗಿತ್ತು. ಒಬ್ಬರು ಹೊಸದಾಗಿ ಬಂದು ಸೇರಿದರು. ತಿರು ಪರಿಚಯ ಮಾಡಿಕೊಡುತ್ತಾ - "ಹಿ ಇಸ್ ಮ್ಯಾಡ್" ಅಂದ. ನನಗೆ ಹೆದರಿಕೆಯಾಯಿತು, ನಾನೇನು ಮಾತಾಡಿಸಲಿಲ್ಲಾ ಆಗ್ಲೆ ಮ್ಯಾಡ್ ಯಾಕೆ ಅಂತ.

"ನಾನೇನು ಮಾಡಿದೆ" ತಿರು ಕಿವಿಯಲ್ಲಿ ಪಿಸುಗುಟ್ಟಿದೆ.
"ಅಯ್ಯೋ, ಅವರ ಹೆಸರೇ ಮ್ಯಾಡ್" ಅಂದ.
"ಜನ ಮ್ಯಾಡ್ ಇರತಾರೆ, ಆದರೆ ಒಪ್ಪಿಕ್ಕೊಳುವುದು ಅಪರೂಪ" ಅಂದೆ.
"ನೋ, ನೋ, ಅವರ ಪೂರ್ತಿ ಹೆಸರು ಮಾದವಪ್ರಸಾದ ವಾಲ್ ದಾಲ್ ಕರ್ ಅಂತ. ಜನಕ್ಕೆ ಕಷ್ಟ ಅಂತ ಶಾರ್ಟಾಗಿ ಮ್ಯಾಡ್ ಆಗಿದ್ದಾರೆ" ಅಂದ.
ತಿರು ಮುಂದುವರೆಸಿ "ಅವರ ತಮ್ಮನ ಹೆಸರು ಗೊತ್ತಾ ನಿನಗೆ, ಪ್ಯಾಡ್ ಅಂತ!"

ಬರಿ ಬೌನ್ಸರ್ಸ್... ಆದ್ರೂ ಚೇತರಿಸಿಕೊಂಡು "ಗೆಸ್ ಮಾಡ್ಲಾ ತಮ್ಮನ ಹೆಸರು, ಪದ್ಮನಾಭ..."
"ಸಾರಿ, ಪ್ರಹ್ಲಾದಪ್ರಸಾದ ವಾಲ್ ದಾಲ್ ಕರ್" ಗೆಲುವಿನ ನಗೆನಕ್ಕ.

ಒಂದೇ ಬಾಲ್ಗೆ ಎರಡ್ಸರ್ತಿ ಔಟಾದಂಗೆ ಅನ್ನಿಸಿತು. ಅಷ್ಟೊತ್ತಿಗೆ ಬಾಲ್ ನನ್ನ ಕಡೆ ಬಂತು, ಹಿಂದೆ ಮಾದವಪ್ರಸಾದ್ ಬಂದ್ರು. "ನಾನು ಹಿಡಿತೀನೀ ಬಿಡಿ ಮಾದವ್" ಅಂದೆ. ನನ್ನ ಗುರಾಯಿಸಿ - "ಕಾಲ್ ಮಿ ಮ್ಯಾಡ್" ಅಂದ್ರು. [ನಟರಾಜ್ ಅಂತ ಕರೆಯಕ್ಕೆ ಬರಲ್ವಾ ಈಯಮ್ಮನಿಗೆ?]

***
ನಮ್ಮ ಊರು ಚಿಕ್ಕನಾಯಕನಹಳ್ಳಿ. ಹೆಸರು ಇಲ್ಲಿಯವರ ಬಾಯಲ್ಲಿ ಹೇಳಿಸಲು ಹರಸಾಹಸ ಮಾಡುತ್ತಿದ್ದೆ. ಆದ್ರೆ ಚೀನಿಯರು, ತಮ್ಮ ಹೆಸರು ಚಿಕ್ಕದಾಗಿ ಚೊಕ್ಕವಾಗಿಟ್ಟುಕೊಂಡು ನಲಿಯುತ್ತಿದ್ದರು. ನನ್ನ ಚೀನಿ ಸ್ನೇಹಿತ ಯಿಂಗನ್ನು ಕೇಳಿದೆ "ಇಷ್ಟು ಚಿಕ್ಕ ಸರಳ ಹೆಸರು ಇಟ್ಟುಕೊಂಡಿದೆಯಲ್ಲಾ ನೀನು, ಅದು ಹೇಗೆ?"

"ಇದು ನನ್ನ ಇಂಗ್ಲಿಷ್ ಹೆಸರು" ಅಂದ.
"ಅಂದ್ರೆ ನಿನಗೆ ಎರಡು ಹೆಸರಾ?"
"ಹೌದು, ಒಂದು ಇಂಗ್ಲಿಷ್, ಇನ್ನೊಂದು ನಮ್ಮದು"
"ನಿನ್ನ ಚೀನಿ ಹೆಸರೇನು?"
"ಯಿಂಗ್ವಾಶಿಂಗ್ವಾಶಿ" (ಹೆಚ್ಚುಕಮ್ಮಿ ಅದೆ ಸೌಂಡು)
"ಅಹ್,.. ಏನು ಹಂಗಂದ್ರೆ?"
"ಬೆಳಗ್ಗೆ ಸೂರ್ಯಹುಟ್ಟುತ್ತಿರುವಾಗ ಎಳೆ ಬಿದಿರು ತಿನ್ನುತ್ತಿರುವ ಪಾಂಡ" ಅಂದ.
"ಬಹಳ ಕಾವ್ಯಮಯವಾಗಿದೆ."
"ಆದ್ರೆ ಚೀನಿಯಲ್ಲದವರಿಗೆ ಕಷ್ಟ ಅಂತ, ಯಿಂಗ್ ಆದೆ."
"ಆದ್ರೆ, ನನ್ನ ಹಿಂದಿನ ಪ್ರಾಜೆಕ್ಟ್ನಲ್ಲಿ ಹುಡುಗಿ ಹೆಸರು ಯಿಂಗ್ ಇತ್ತು?"
"ಹೌದು, ಯಿಂಗ್ ಗಂಡು ಹೆಣ್ಣು ಇಬ್ಬರಿಗೂ ಅನ್ವಯಿಸುತ್ತೆ."
"ಅಂದ್ರೆ ಯಿಂಗ್ ಹೆಣ್ಣಾದರೂ, ಚೀನಿ ಭಾಷೆಯಲ್ಲಿ ಸೇಮ್ ಮೀನಿಂಗಾ?"
"ನೋ, ನೋ, ಹೆಣ್ಣಾದ್ರೆ ಬೇರೆ ಮಿನಿಂಗೂ..." ಮುಂದುವರೆಸಿ "ನಮ್ಮೂರ ಮಂದಾರ ಹೂವು ಅಂತಾ." ಬಹಳ ಬುದ್ದಿವಂತ ಜನ!

English summary
If you are staying in America think thrice before naming your child. Don't say what is in name. Humor by Charukesha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X