ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಂಬನೆ : ಸಲಿಂಗಕಾಮ ತಡೆಗೆ ವಿಶೇಷ ಪಡೆ!

By ವಿವೇಕ ಬೆಟ್ಕುಳಿ
|
Google Oneindia Kannada News

ಸುಪ್ರೀಂ ಕೋರ್ಟ್ ಸಲಿಂಗಕಾಮದ ಬಗ್ಗೆ ತನ್ನ ತೀರ್ಪು ಪ್ರಕಟಿಸಿದೆ. ಈ ತೀರ್ಪಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರಕಾರ ಐಪಿಸಿ ಸೆಕ್ಷನ್ 377ನ್ನು ತೆಗೆದುಹಾಕುವ ಚಿಂತನೆಯನ್ನೂ ನಡೆಸುತ್ತಿದೆ. ಈ ತೀಪು೯ ಇನ್ನೂ ನಾವು ಭಾರತೀಯರು ಮೂಢನಂಬಿಕೆಯಲ್ಲಿ ಇರುವೆವು, ಗೊಡ್ಡು ಸಂಪ್ರದಾಯವನ್ನು ಆಚರಿಸುತ್ತಿರುವೆವು ಎಂಬುದನ್ನು ಜಗತ್ತಿಗೆ ಸಾರಿ ಹೇಳಿತ್ತಿದೆ.

ಸುಪ್ರೀಂ ಕೋರ್ಟಿನ ತೀಪಿ೯ನ ಹಿನ್ನೆಲೆಯಲ್ಲಿ ನಮ್ಮ ಗೊಡ್ಡು ಸಂಪ್ರದಾಯವಾದಿ ಸಕಾ೯ರಗಳು ಈ ಕೆಳಗಿನ ಆದೇಶ ಹೊರಡಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. (ಕೇವಲ ವ್ಯಂಗಕ್ಕಾಗಿ)

1. ಪ್ರಾಣಿಗಳು ರಸ್ತೆಯಲ್ಲಿ ತಮಗೆ ಇಷ್ಟಬಂದಂತೆ ಲೈಂಗಿಕತೆಯಲ್ಲಿ ತೊಡಗುತ್ತಿರುವುದರಿಂದ ಅವುಗಳನ್ನು ಕಂಡಲ್ಲಿ ಗುಂಡಿಕ್ಕಲು ಸಕಾ೯ರ ಆದೇಶಿಸಿದೆ (ಭಾರತೀಯರ ಸೆಕ್ಸ್ ನಾಲ್ಕು ಗೋಡೆ ಮಧ್ಯದಲ್ಲಿ ಆಗಬೇಕು. ಅದು ಪ್ರಾಣಿಯಾಗಿರಲಿ, ಮನುಷ್ಯರಾಗಿರಲಿ ಎಲ್ಲರಿಗೂ ಒಂದೇ ಕಾನೂನು. ನಮ್ಮದು ಸಂಪ್ರದಾಯದ ರಾಷ್ಟ್ರ ಎಂಬ ಹಿನ್ನಲೆಯಲ್ಲಿ!)

2. ಸಲಿಂಗಕಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಕಾ೯ರಗಳು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಒಂದು ಹೊಸ ಪಡೆಯನ್ನೇ ಸಿದ್ದಪಡಿಸಿದೆ. ಇದರಲ್ಲಿ ಇರುವ ಪ್ರತಿನಿಧಿಗಳು ಎಲ್ಲರ ಮನೆಯ ಕೋಣೆ ಕೋಣೆಗೆ ನುಗ್ಗಿ ಕಾಮಕೇಳಿಯಲ್ಲಿ ತೊಡಗಿರುವವರನ್ನು ಸಲಿಂಗಕಾಮಿಗಳೇ ಎಂದು ಪರೀಕ್ಷಿಸಲಿದ್ದಾರೆ. ಈ ಪಡೆಯಲ್ಲಿ ಸಲಿಂಗಕಾಮ ವಿರೋಧಿಸಿ ಕೋರ್ಟ್ ಗೆ ಹೋದ ಎಲ್ಲ ಧರ್ಮದ ಒಂದೊಂದು ಪ್ರತಿನಿಧಿಗಳು ಮತ್ತು ಪೊಲೀಸರನ್ನು ಒಳಗೊಂಡ ತಂಡ ಪ್ರತಿ ಹಳ್ಳಿಯಲ್ಲಿ ಕಾರ್ಯನಿರ್ವಹಿಸುವುದು.

3. ಸಲಿಂಗಕಾಮ ನಿಯಂತ್ರಣ ಮಂತ್ರಿಯನ್ನು ಸಕಾ೯ರ ನೇಮಿಸಿದೆ. ಸುಪ್ರೀಂ ಕೋರ್ಟಿನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕಠಿಣ ಕ್ರಮ ಕೈಗೊಳ್ಳಲು ಈ ನಿಧಾ೯ರ ಅಗತ್ಯ ಎಂದು ಎಲ್ಲಾ ಧರ್ಮದ ಮುಖ್ಯಸ್ಥರು ಸಕಾ೯ರಕ್ಕೆ ಆಗ್ರಹಿಸಿದ್ದನು ಸ್ಮರಿಸಬಹುದು.

4. ಧಾಮಿ೯ಕ ನಾಯಕರು ಮಾಂಸಾಹಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟಿಗೆ ಹೋಗಿದ್ದು, ತಕ್ಷಣದಿಂದ ಮಾಂಸಾಹಾರವನ್ನು ನಿಷೇಧಿಸುವ ಬಗ್ಗೆ ಸಂವಿಧಾನದ ಯಾವ ವಿಧಿಯಲ್ಲಿ ಈ ಬಗ್ಗೆ ಪ್ರಸ್ತಾಪ ಇದೆ ಎಂಬುದನ್ನು ಗಮನಿಸಲಾಗುತ್ತಿದೆ.

Special task force to curb homosexuality

ಇಂತಹ ಸರಕಾರಿ ಎಡಬಿಡಂಗಿ ಆದೇಶಗಳು ನಮ್ಮ ದೇಶದಲ್ಲಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ವಾಸ್ತವಕ್ಕಿಂತ ನಮಗೆ ನಮ್ಮ ಪ್ರತಿಷ್ಠೆ, ಸಂಪ್ರದಾಯ ಮುಖ್ಯವಾಗಿರುವುದು.

ನಮ್ಮ ದೇಶ ಎಂಬುದು ಒಂದು ವಿವಿಧತೆಯಲ್ಲಿ ಏಕತೆ ಇರುವ ದೇಶವಾಗಿದೆ. ಅದನ್ನು ಜಗತ್ತಿಗೆ ಎಲ್ಲಾ ರಂಗದಲ್ಲಿಯೂ ಸಾರಿ ಹೇಳುವ ಅಗತ್ಯವಿದೆ. ಸಾವಿರಾರು ಸಂಪ್ರದಾಯ, ಭಾಷೆ, ಸಂಸ್ಕೃತಿ ನಮ್ಮ ದೇಶದ ಹೆಗ್ಗಳಿಕೆ. ಹಾಗೆಯೇ ಎಲ್ಲಾ ರೀತಿಯ ಜನರಿಗೂ ಗೌರವಿಸುವುದು ನಮ್ಮ ಸಂಸ್ಕೃತಿ. ನಮ್ಮ ನಮ್ಮ ಸಂಪ್ರದಾಯವನ್ನು ಸಂಸ್ಕೃತಿಯನ್ನು ಪಾಲಿಸುವುದು ಒಳ್ಳೆಯದು ಆದರೇ ಆ ಉದ್ದೇಶದಿಂದ ಬೇರೆಯವರ ಸ್ವಾಂತಂತ್ಯಕ್ಕೆ ದಕ್ಕೆ ತರುವುದು ಸರಿಯಾದುದಲ್ಲ. ಸಲಿಂಗಕಾಮಿಗಳ ವಿಚಾರದಲ್ಲಿ ಈಗ ಬಂದಿರುವ ತೀಪು೯ ಇದಕ್ಕೊಂದು ಉದಾಹರಣೆ. ನಮ್ಮ ಕಾನೂನು ಸಹಾ ಎಷ್ಟೊಂದು ಜಡ್ಡು ಹಿಡಿದಿರುವ ನಿಯಮವನ್ನು ಹೊಂದಿರುವುದು ಎಂಬುದು ಈ ತೀಪಿ೯ನಿಂದ ಜಗತ್ತಿಗೆ ತಿಳಿದಂತಾಗಿದೆ.

ಶೀಘ್ರವಾಗಿ ಸಕಾ೯ರ ಜಡ್ಡು ಗಟ್ಟಿರುವ ಸಂಪ್ರದಾಯಬದ್ದ ಕಾನೂನಿನ ನಿಯಮವನ್ನು ತಿದ್ದುಪಡಿಗೊಳಿಸುವ ಅಗತ್ಯವಿದೆ. ಆ ಮೂಲಕ ಎಲ್ಲರಿಗೂ ಬೇರೆಯವರಿಗೆ ತೊಂದರೆಯಾಗದಂತೆ ಅವರಿಷ್ಟದಂತೆ ಬದುಕುವ ಹಕ್ಕನ್ನು ಕಲ್ಪಿಸುವ ಅಗತ್ಯವಿರುವುದು. ಮನುಷ್ಯರಾಗಿ ಹುಟ್ಟಿದರೂ ಸಲಿಂಗಕಾಮಿಗಳಾಗಿರುವವರು, ವಿಕಲಾಂಗರಾಗಿರುವವರು, ಮಹಿಳೆಯರು, ದಲಿತರಾಗಿ ಹುಟ್ಟುವುದು ಯಾರ ತಪ್ಪು ಸ್ವಾಮಿ? ಆದರೂ ಸಂಪ್ರದಾಯದ ಹೆಸರಿನಲ್ಲಿ ಅಸಹಾಯಕರ ಸ್ವಾಂತಂತ್ರ್ಯದ ಹರಣ ಮಾಡುತ್ತಿರುವ ನಮ್ಮ ಢೋಂಗಿ ಧಾಮಿ೯ಕ ನಾಯಕರಿಗೆ, ಅವರ ತಾಳಕ್ಕೆ ಕುಣಿಯುತ್ತಿರುವ ಸಕಾ೯ರಕ್ಕೆ, ಹಾಗೇ ಗೊಡ್ಡು ಸಂಪ್ರದಾಯಕ್ಕೆ ಮಣೆ ನೀಡುತ್ತಿರುವ ಕಾನೂನಿಗೆ ಸಹಾ ದಿಕ್ಕಾರವಿರಲಿ.

English summary
Satire : A special task force has been appointed by state govt to curb homosexuality. Also, govt has appointed a minister to handle this portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X