ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ದುರ್ಘಟನೆ: ದೇಶದ ಬೆನ್ನೆಲುಬಿಗೆ ಬಾರಿಸಿದ್ರು

By ಸುವರ್ಣಾನಂದ
|
Google Oneindia Kannada News

ಕ್ರಿಸ್ತಪೂರ್ವ 2016 ರ ಚೈತ್ರಮಾಸದ ಒಂದು ಶುಭದಿನ ಅಪರಾಹ್ನದ ವೇಳೆ, ಮಂಗೋಲಿಯದಲ್ಲಿ ಚಂಗ್ಲೂಸ್ ಖಾನನ ಪೂರ್ವಜರೊಬ್ಬರ ಮಂತ್ರಿಯ ಆಳ್ವಿಕೆಯಲ್ಲಿ ನಡೆದಿರಬಹುದಾದ ದುರ್ಘಟನೆಯೊಂದರ ಕುರಿತಾದ ಅತಿ ಗಂಭೀರ ಲೇಖನ..!
---**---
ಘಟನೆ : "ನೀರು ಕೇಳಿಕೊಂಡು ರಾಜಧಾನಿಗೆ ಬಂದ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್.. ಸದನದಲ್ಲಿ, ಮಾಧ್ಯಮಗಳಲ್ಲಿ ಮತ್ತು ಫೇಸ್ಬುಕ್ಕು-ಹೂಸ್ಬುಕ್ಕಿನಲ್ಲೂ ಮಂತ್ರಿಗಳ ವಿರುದ್ಧ ಅತ್ಯುಗ್ರ ಆಕ್ರೋಶ!!" [ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]

---
ಮಳೆಗಾಲದಲ್ಲಿ ಮಳೆ ಬರದೆ, ಬೇಸಿಗೆಯಲ್ಲಿ ವಿಪರೀತ ಸೆಕೆ., ವ್ಯವಸಾಯಕ್ಕೂ ಕುಡಿಯಲೂ ನೀರಿಲ್ಲದ ಬರಪರಿಸ್ಥಿತಿ ತಾಳಲಾರದ ಪ್ರಸ್ಟ್ರೇಷನ್ನಲ್ಲಿ ನಗರಕ್ಕೆ ಬಂದ ರೈತರು ಮತ್ತು ನಗರದ ಅನಿಯಮಿತ ಕ್ರೈಂ ಹಾಗು ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಹೆಣಗಾಡಿ ಹೆಣಗಳಂತಾಗಿರುವ ಪೊಲೀಸರ ನಡುವೆ ಒಂದು ದುರ್ಘಟನೆ ಜರುಗಿಹೋಗಿದೆ.,

ಪಾಪ.. ಇದಕ್ಕೆ ಮಂತ್ರಿಗಳು ಏನ್ ಮಾಡ್ತಾರೆ..!? ಅವರದ್ದೇನು ತಪ್ಪು..? ಅವರ ಟೈಂ ಸರಿಯಿಲ್ಲಾಂದ್ರೆ ಅವರು ತಾನೇ ಏನ್ ಮಾಡ್ತಾರೆ? ಎಲ್ಲೋ ರಸ್ತೆಯಲ್ಲಿ ನಡೆದ ಲಾಠಿಚಾರ್ಜಿಗೂ, ತಮಗೆ ಕೊಡುಗೆಯಾಗಿ ಬಂದಿದ್ದ 'ದುಬಾರಿ ಕಂಟಕದ' ಬಗ್ಗೆ ಸದನದೊಳಗೆ ಸಮರ್ಥನೆ ಕೊಡ್ತಾ ಇದ್ದ ಮಂತ್ರಿವರ್ಯರಿಗೂ ಎತ್ತಣದಿಂದೆತ್ತ ಸಂಬಂಧ!? ಇದು ಶುದ್ಧ ಅಸಂಬದ್ಧವಾದ ವಿವಾದ..!

ಸದನದಲ್ಲಿದ್ದ ಮಂತ್ರಿಗಳು ಹಿಂದೆ ಮುಂದೆ ಯೋಚಿಸದೇ, ಧಾರಾಳ ಮನಸ್ಸಿನಿಂದ ತಮ್ಮ ಕೈಲಿದ್ದ 'ದುಬಾರಿ ಕಂಟಕವನ್ನು' ಬಿಚ್ಚಿ ಸರ್ಕಾರದ ಆಸ್ತಿ ಅಂತ ಒಪ್ಪಿಸಿಬಿಟ್ರು., ಹಾಗಾಗಿ ರೈತರು ರಾಜಧಾನಿಗೆ ಬರೋ ಟೈಂ ಅವರಿಗೆ ಗೊತ್ತಾಗ್ಲಿಲ್ಲ., ಪಾಪ..! ['ದುಬಾರಿ ಕಟಂಕದ' ಬಗ್ಗೆ ಶಾಮ್ ಏನು ಹೇಳುತ್ತಾರೆ?]

Siddaramaiah Government Lathi charge on Farmers spoof article

ರೈತರು ಇಷ್ಟು ಗಂಟೆಗೆ ರಾಜಧಾನಿಗೆ ಬರ್ತಾರೆ ಅಂತ ಮೊದಲೇ ಗೊತ್ತಿದ್ರೆ 'ಕೈಗೆ ಸುತ್ತಿಕೊಂಡ ಕಂಟಕವನ್ನೂ ಲೆಕ್ಕಿಸದೇ', ಖುದ್ದು ಮಂತ್ರಿಗಳೇ ನಗರದ ಹೊರವಲಯಕ್ಕೆ ಹೋಗಿ ರೈತರನ್ನ ಪ್ರೀತ್ಯಾದರಗಳಿಂದ ನಗರದೊಳಗೆ ಸ್ವಾಗತಿಸುತ್ತಿದ್ದರು..! ನಗರದ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡ್ಸಿ, ರಸ್ತೆಯುದ್ದಕ್ಕೂ ಗ್ರೀನ್ ಕಾರ್ಪೆಟ್ ಹಾಸಿ ರೈತರನ್ನು ಕರೆದುಕೊಂಡು ಬರ್ತಾ ಇದ್ರು..!

ದಣಿದು ಬಂದ ರೈತರನ್ನು ತಮ್ಮ ಅರಮನೆಯಂಗಳದಲ್ಲಿ ಪೆಂಡಾಲ್ ಕೆಳಗೆ ಕೂರಿಸ್ಕೊಂಡು, ಒಬ್ಬೊಬ್ಬ ರೈತನಿಗೆ ಇಬ್ಬಿಬ್ಬರು ಸಖಿಯರಿಂದ ಬೀಸಣಿಗೆ ಬೀಸಲು ವ್ಯವಸ್ಥೆ ಮಾಡ್ತಾ ಇದ್ರು..!

ಹಸಿದ ಹೊಟ್ಟೆಗಳಿಗೆ ಕಾಫಿ-ಟೀ-ಬೂಸ್ಟು, ಬನ್ನು-ಬಿಸ್ಕೆಟ್ಟು, ಚಾಕೋಲೇಟು, ಫಲಹಾರಗಳಿಂದ ಕೊಟ್ಟು ಸತ್ಕರಿಸಿ ಅವರ ಕಷ್ಟ ಸುಖ ಏನು ಎತ್ತ ವಿಚಾರಿಸಿ ತಿಳ್ಕೋತಾ ಇದ್ರು..! ಆಮೇಲೆ ತಮ್ಮ ಅರಮನೆಯ ಅಂಡಿನಲ್ಲಿರುವ ಸಂಪು ಮತ್ತು ಗೋಪುರದ ಟಾಪಿನಲ್ಲಿರುವ ಟ್ಯಾಂಕುಗಳಿಂದ ರೈತರು

ವ್ಯವಸಾಯಕ್ಕೆ ಕೇಳಿದಷ್ಟು ನೀರನ್ನು ಡ್ರಮ್ಮು, ಬಕೀಟು, ಹಂಡೆ, ಪಾತ್ರೆ, ಚೊಂಬು, ಲೋಟ ಮತ್ತು ಒಳ್ಳೆಗಳಲ್ಲಿ ತುಂಬಿಸಿ ಕೊಟ್ಟು., ಅವರು ತಿರುಗಿ ಊರಿಗೆ ಹೋಗುವ ಮಾರ್ಗಮಧ್ಯೆ ಕುಡಿಯೋಕೆ ಬಿಸ್ಲರಿ ವಾಟ್ರು ಬಾಟ್ಲು ಮತ್ತು ತಲೆಗೊಂದೊಂದು ಕ್ವಾಟ್ರು ಬಾಟ್ಲು ಕೊಟ್ಟು ಕಳುಹಿಸಿರೋರು..!

ಹಳ್ಳಿಗಳಿಗೆ, ಬಡ ರೈತರ ಮನೆಯ ಬಾಗಿಲುಗಳಿಗೆ ಹೋಗಿ "ನೀವು ನಂಗೆ ವೋಟ್ ಹಾಕಿ, ನಾನು ನಿಮ್ಮ ಸೇವೆ ಮಾಡ್ತೀನಿ.. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ದೊರೆ, ರೈತನೇ ದೇಶದ ಬೆನ್ನೆಲುಬು.." ಅಂತ ರೈತರಿಗೆ ಕೊಟ್ಟ ಮಾತನ್ನು ತಪ್ಪದ "ಮಾತಿಗೆ ತಕ್ಕ ಮಗ" ನಮ್ಮ ಮಂತ್ರಿಗಳು...!

ಅಂಥ ವಿಶಾಲಹೃದಯಿ, ಮಮತಾಮಯೀ, ಜನಸ್ನೇಹಿ, ರೈತಪರ ಕಾಳಜಿ ಮತ್ತು ಬಡವರ ಪರವಾಗಿ ಮಿಡಿಯುವ ಅಂತಃಕರಣವಿರುವ ಮಾನ್ಯ ಮಂತ್ರಿಗಳ ಗಮನಕ್ಕೆ ಬಾರದೆ ನಡೆದಿರೋ ಒಂದು ಆಕಸ್ಮಿಕ ಘಟನೆಯಷ್ಟೇ ವಿನಃ "ರೈತರ ಮೇಲೆ ಲಾಠಿ ಚಾರ್ಜ್ ಆಗಿದ್ದಕ್ಕೂ, ಮಂತ್ರಿಗಳಿಗೂ ಯಾವುದೇ ಸಂಬಂಧವಿಲ್ಲ.."

ಈ ಘಟನೆಯನ್ನು ಎಡಪಕ್ಷಗಳಾಗಲೀ, ಬಲಪಕ್ಷಗಳಾಗಲೀ, ಸೆಂಟ್ರು ಪಕ್ಷಗಳಾಗಲೀ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರೆಸ್ಟೀಜ್ ಪ್ರೆಷರ್ ಕುಕ್ಕರಿನಂತೆ ಬಳಸಿಕೊಳ್ಳುವುದು ಮಾನವೀಯತೆಯಲ್ಲ..!
---**---
ಮಂಗೋಲಿಯನ್ ಭಾಷೆ ಕಾಲ್ಪನಿಕ : ಟೈಂ ಬಾಬಾ.
ಕನ್ನಡಕ್ಕೆ ಭಾಷಾಂತರ ಅತಿರಂಜಕ : ಸುವರ್ಣಾನಂದ

English summary
Karnataka CM Siddaramaiah is acting dictator. Police Lathicharge on Farmers on Thursday (March 03) is highly condemnable. Here is spoof article on the unfortunate incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X