ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ ಹುಡ್ಗೀನ ಅಂದು ನೋಡಿದ್ದಕ್ಕೂ ಇಂದು ನೋಡುವುದಕ್ಕೂ!

By ನಾಗರಾಜ ಮಹೇಶ್ವರಪ್ಪ, ಕನೆಕ್ಟಿಕಟ್
|
Google Oneindia Kannada News

ಛೆ... ವೀಕೆಂಡ್ ಡೆಡ್ಲೈನ್.. ಈ ಕೋಡ್ ಬೇರೆ ಇನ್ನು ಸರಿಯಾಗಿ ವರ್ಕಾಗ್ತಿಲ್ಲ ಅಂತ ತಲೆಕೆಡಿಸಿಕೊಂಡು ಇನ್ನೊಂದು ಕಪ್ ಕಾಫಿ ಕುಡಿತಾ ಯೋಚನೆ ಮಾಡ್ತಿರುವಾಗ.. ಟ್ರಿಣ್ ಟ್ರಿಣ್ ಅಂತಾ ಸೆಲ್ ಫೋನ್ ರಿಂಗಾಗಿತ್ತು!

ರೀ, ಆಲ್ರೆಡಿ 7 ಗಂಟೆ... ಇನ್ನೂ ಎಷ್ಟೊತ್ತಿಗೆ ಬರೋದು? ಅಂತ ಮಡದಿಯ ಆವಾಜ್ ಕೇಳಿ... ಇನ್ನೊಂದು ಅರ್ಧ ಗಂಟೆ ಕಣೆ ಬರ್ತೀನಿ, ಸರಿನಾ? ಅಂತ ಹೇಳಿದ್ದೆ. "ಸರಿ ಬೇಗ ಬನ್ನಿ... ನಾನು ರೆಡಿ ಆಗಿರ್ತೀನಿ ಡಿನ್ನರ್ಗೆ ಹೊರಗೆ ಹೋಗೋಣ.. ಸರಿನಾ" .. ಅಂತಾ ರಿಕ್ವೆಸ್ಟ್.. ಅಲ್ಲಲ್ಲಾ ಆರ್ಡರ್ ಮಾಡಿದ್ದನ್ನು ಕೇಳಿ... ಮೊನ್ನೆ ತಾನೆ ಹೋಗಿದ್ವಲ್ಲೇ ಅಂತ ನುಡಿದಾಗ... ರೀ, ಒಂದು ರೆಸ್ಟೋರೆಂಟ್ ಕೂಪನ್ ಬಂದಿದೆ... ಯೂಸ್ ಮಾಡ್ಲಿಲ್ಲ ಅಂದ್ರೆ expire ಆಗುತ್ತೆ ನಾಳೆ... ಅದಕ್ಕೆ ಹೋಗೋಣ ಅಂತ ಬಂದ ಉತ್ತರ ಕೇಳಿ ಕುಡಿತಿದ್ದ ಕಾಫಿನೂ ರುಚಿ ಇಲ್ಲದಂಗೆ ಆಗಿತ್ತು!

ಹೆಂಡ್ತಿ ಚಾಪೆ ಕೆಳಗೆ ನುಗ್ಗಿದ್ರೆ, ಗಂಡ ರಂಗೋಲಿ ಒಳಗೆ ನುಗ್ಬಿಟ್ಟ ಹೆಂಡ್ತಿ ಚಾಪೆ ಕೆಳಗೆ ನುಗ್ಗಿದ್ರೆ, ಗಂಡ ರಂಗೋಲಿ ಒಳಗೆ ನುಗ್ಬಿಟ್ಟ

ಮನೆಗೆ ಹೋಗಿ ಬಿಸಿ ಬಿಸಿ ಊಟ ಮಾಡೋಣ ಅಂದ್ರೆ, ಕೂಪನ್ ವೇಸ್ಟ್ ಆಗುತ್ತೆ ಅಂತ ಈ ಚಳಿಯಲ್ಲಿ ಮತ್ತೆ ಇಪ್ಪತ್ತು ನಿಮಿಷ ಗಾಡಿ ಓಡಿಸ್ಕೊಂಡು ಹೋದ್ರೆ, ಪೆಟ್ರೋಲ್ ಜೊತೆಗೆ ಟೈಮ್ ಎಷ್ಟು ವೇಸ್ಟ್ ಅಲ್ವಾ? ಒಳ್ಳೆ ಸಹವಾಸ ಆಯ್ತಲ್ಲ ಅಂತ ಗೊಣಗುತ್ತಾ, ಹೊಸದಾಗಿ ಆರಂಭವಾಗಿದ್ದ ರೆಸ್ಟುರಾಂಟ್ ನಲ್ಲಿ ಕುಳಿತಾಗ waitress ತಂದುಕೊಟ್ಟಿದ್ದಳು ಹತ್ತು ಪೇಜ್ಸ್ ಇರೋ ಫುಡ್ ಮೆನು!

My wife was not like this when I got married

ನಾನು ಹುಸ್ ಪುಸ್ ಅಂತಾ ಒಂದೊಂದೇ ಪೇಜ್ ತಿರುವಾಕಿ ಮೆನು ಮತ್ತೆ ಅದರ ಬೆಲೆ ನೋಡ್ತಾ ಇರುವಾಗ, ಪರಕ್ಕಂತ ನನ್ನ ಕೈಯಿಂದ ಮೆನುನ ತಗೊಂಡು (ಅಲ್ಲಲ್ಲಾ ಕಸ್ಕೊಂಡು) ನನ್ನಾಕೆ.. ಪಟ ಪಟನೆ ಆರ್ಡರ್ ಮಾಡೇ ಬಿಟ್ಟಿದ್ದಳು.

ಇಡ್ಲಿ ಮತ್ತು ವಡೆಯಲ್ಲಿ ಸಮಾನತೆ ತರುವ ಮಹತ್ವದ ಆದೇಶ ಇಡ್ಲಿ ಮತ್ತು ವಡೆಯಲ್ಲಿ ಸಮಾನತೆ ತರುವ ಮಹತ್ವದ ಆದೇಶ

ಓಹ್ ಯು ಆರ್ ವೆರಿ ಸೂಪರ್ ಫಾಸ್ಟ್ ಮೇಡಂ! ಅಂತ ಆ waitress ಹೇಳಿದಾಗ, ಥಾಂಕ್ ಯು ಅಂತ ಹೇಳಿ, ನನ್ನೆಡೆ ನೋಡಿ ಹುಸಿನಗು ಬೀರಿದ್ದಳು ನನ್ನಾಕೆ! ಮೊದಲೇ ಆ ಕೋಡ್ ವರ್ಕ್ ಆಗ್ತಿಲ್ಲಾ ಅಂತಾ ತಲೆ ಕೆಡಿಸಿಕೊಂಡಿದ್ದ ನಂಗೆ, ಅವಳ ಆ ನಗೆ... ಬರಿ ಹುಸಿಯಾಗಿ ಕಂಡಿತ್ತು.

My wife was not like this when I got married

ಅಲ್ಲಾ, ನಿನ್ನ ನೋಡಲಿಕ್ಕೆ ನಿಮ್ಮನೆಗೆ ಬಂದಿದ್ದಾಗ "ನಮ್ಮ ಹುಡುಗಿ... ವೆರಿ ಫಾಸ್ಟ್.. ಪಟ ಪಟ ಅಂತ ಅಡುಗೆ ಮಾಡ್ತಾಳೆ" ಅಂತ ಆ ಮದುವೆ ಬ್ರೋಕರ್ ಹೇಳಿದ್ನಲ್ಲಾ? ಅಂತ ತಲೆ ಕೆರೆದುಕೊಂಡು ಧೈರ್ಯವಾಗಿ ಕೇಳೇಬಿಟ್ಟೆ!

ಆವಯ್ಯ ಹೇಳಿದ್ದು "ಪಟ ಪಟ ಅಂತ ಆರ್ಡರ್ ಮಾಡ್ತಾಳೆ" ಅಂತ, ನಾಟ್ ಅಡುಗೆ... ನೀವು ಸರಿಯಾಗಿ ಕೇಳಿಸ್ಕೊಂಡಿಲ್ಲ... ಹುಹ್... ನಿಮಗೆ ಕಿವಿ ಮಂದ ಅಂತ ಆ ಬ್ರೋಕರ್ ಹೇಳಲೇ ಇಲ್ಲ ನೋಡಿ ಅವತ್ತು" ಅಂತ ತಟ ತಟನೇ ನನ್ನ ಮೇಲೇ ಗೂಬೆ ಕೂರಿಸಿದ್ದಳು ನನ್ನ ಮುದ್ದಿನ ಮಡದಿ!

ಮೇಳೈಸೋ ಮೇಳಕ್ಕೆ ಹೋಗಿಬರೋಣ ಬನ್ನಿ ಮೇಳೈಸೋ ಮೇಳಕ್ಕೆ ಹೋಗಿಬರೋಣ ಬನ್ನಿ

ಅವಳು ನನ್ನ ಕಿವಿ ಮಂದ ಅಂತ ಅಂದಾಗ, ಒಮ್ಮೆ ಪಿಳಿ ಪಿಳಿ ಕಣ್ಣು ಬಿಟ್ಟು.. "ಸೊರ್ ಅಂತಾ ಜ್ಯೂಸು ಕುಡಿತಾ, ಜ್ಯೂಸು ಗ್ಲಾಸ್ ಜೊತೆ ಸೆಲ್ಫಿ" ತೊಗೋತಿದ್ದ ಅವಳನ್ನು ನೋಡಿದಾಗ... ಅಂದು ನೋಡಿದ್ದಕ್ಕೂ - ಇಂದು ಕಾಣೋದಕ್ಕೂ ತುಂಬಾನೇ ಡಿಫರೆಂಟ್ ಆಗಿ ಕಾಣುತ್ತಿದ್ದಾಳೆ...

My wife was not like this when I got married

ಹಂಗಂತ ಇನ್ನೇನು ಅವಳಿಗೆ ಅದನ್ನು ಹೇಳ್ಬೇಕು ಅಂತ ನಾಲಿಗೆ ತುದಿಯಲ್ಲಿ ಬಂದಿದ್ದನ್ನು... ಹಾಗೆ ತಡೆದುಕೊಂಡೆ... ಯಾಕಂದ್ರೆ.. "ಕಿವಿ ಜೊತೆ ನಿಮಗೆ ಕಣ್ಣೂ ಮಂದ ಅಂತ ಆ ಬ್ರೋಕರ್ ಹೇಳಲೇ ಇಲ್ಲ ನೋಡಿ ಅವತ್ತು" ನನ್ನ ಮೇಲೆ ಮತ್ತೆ ತಿರುಗುಬಾಣ ಬರುತ್ತೆ ಅಂತ... ಅವಳಿಗೆ ಏನೂ ಹೇಳದೆ... ಮನದಲ್ಲೇ ಬಯ್ಕೊಂಡಿದ್ದೆ... ಛೆ ಅವಳಿಗಲ್ಲ... ಆ ಮ್ಯಾರೇಜ್ ಬ್ರೋಕರ್ಗೆ!

ಇನ್ನೇನು ಮಾಡೋಕೆ ಸಾಧ್ಯ.. ಅಲ್ವಾ..? ಅಂದ ಹಾಗೆ ನಿಮ್ದೂ ಅದೇ ಕಥೇನಾ? ಅಥವಾ ಇನ್ನೂ ಡಿಫರೆಂಟ್ ಆಗಿದೆಯಾ?

English summary
My wife was not like this when I got married. Who should I blame now? Myself or the marriage broker? Humorous Kannada write up by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X