ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲುಬಿಲ್ಲದ ನಾಲಿಗೆ, ಕಾರಣ ಆಗಬೇಡ ನಿನ್ನ ಸೋಲಿಗೆ!

By ನಾಗರಾಜ್ ಮಹೇಶ್ವರಪ್ಪ, ಕನೆಕ್ಟಿಕಟ್
|
Google Oneindia Kannada News

ಆಫೀಸ್ ನಿಂದ ಬಂದು ನ್ಯೂಸ್ ನೋಡೋಣಾ ಅಂತ ಟಿವಿ ಆನ್ ಮಾಡ್ಲಿಕ್ಕೆ ರಿಮೋಟ್ ಕೈಗೆ ತಗೋವಾಗ ಅಲ್ಲೇ ಕುಳಿತು ಓದುತಿದ್ದ ಮಗನ್ನ ಕಂಡು... ಓಹ್ ನಾಳೆ ಎಕ್ಸಾಮ್ಸ್ ಇವನಿಗೆ... ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂದು ಟಿವಿ ಆನ್ ಮಾಡಿದ್ರೂ ಸೌಂಡ್ ಇಡದೆ... ಕೇಳ್ದೆ "ಏನು ಓದ್ತಾ ಇದಿಯೋ? ನಾಳೆ ಯಾವ ಸಬ್ಜೆಕ್ಟ್?"

"ಸೈನ್ಸ್... ಸಬ್ಜೆಕ್ಟ್" ಶಾರ್ಟ್ ಆಗಿ ಹೇಳಿ... "ಮಾನವ ದೇಹದಲ್ಲಿ ಎಷ್ಟು ಎಲುಬುಗಳಿವೆ... ಪಕ್ಕೆಲುಬು, ಬೆನ್ನೆಲುಬು" ಅಂತ ತನ್ನ ಪಾಡಿಗೆ ಗೊಣಗಿಕೊಂಡು ಓದ್ತಾ, ಉರು ಹೊಡೀತಿದ್ದ ಮಗನನ್ನು ಕಂಡು...

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಲೇ... ಉರು ಹೊಡಿಬೇಡ... ಸರಿಯಾಗಿ ಅರ್ಥ ಮಾಡಿಕೊಂಡು ನೆನಪಿಟ್ಟುಕೋ. ಬರಿ ಎಕ್ಸಾಮ್ಸ್ ದೃಷ್ಟಿಯಿಂದ ಅಷ್ಟೇ ಓದೋದಲ್ಲ... ಜೀವನ ಪೂರ್ತಿ ನೆನಪಿಟ್ಟುಕೋ ಬೇಕು. ನಮ್ಮ ದೇಹದ ಬಗ್ಗೆ ನಮಗೆ ಚೆನ್ನಾಗಿ ಅರಿವಿರಬೇಕು... ಸರಿನಾ?" ಅಂತ ಅವನಿಗೆ ಹೇಳಿ... ಕನ್ನಡ ನ್ಯೂಸ್ ಚಾನೆಲ್ಸ್ ನೋಡ್ತಾ ಇದ್ದೆ "ಲೇಟೆಸ್ಟ್ ಟ್ರೆಂಡ್ ಹೇಗಿದೆ ನಮ್ಮ 2019 ಲೋಕಸಭಾ ಎಲೆಕ್ಷನ್ದು" ಇಂಟರೆಸ್ಟ್ ನಿಂದ.

Lok Sabha Elections : Hold control on your tongue

"ಅಪ್ಪಾ... ಅಪ್ಪಾ.." ಎರಡು ಸಲ ಕರೆದ ಮಗನ್ನ ಕಂಡು, ಏನು ಅಂತ ಕೇಳಿದ್ದಕ್ಕೆ... ಪ್ರಶ್ನೆ ಕೇಳಿದ್ದ... "ಮಾನವ ದೇಹದಲ್ಲಿ ಎಲುಬಿಲ್ಲದ ಒಂದು ಯಾವ್ದು?"

ತುಮಕೂರು ಕ್ಷೇತ್ರದ ಅಭ್ಯರ್ಥಿ, ಪ್ರಭಾವಿ ಸಂಸತ್ ಪಟು ಎಚ್ಡಿ ದೇವೇಗೌಡ ತುಮಕೂರು ಕ್ಷೇತ್ರದ ಅಭ್ಯರ್ಥಿ, ಪ್ರಭಾವಿ ಸಂಸತ್ ಪಟು ಎಚ್ಡಿ ದೇವೇಗೌಡ

ಯಾರೋ ರಾಜಕಾರಣಿ ಮನಸ್ಸಿಗೆ ಬಂದಂಗೆ ಮಾತಾಡುತಿದ್ದನ್ನು ಸೀರಿಯಸ್ ಆಗಿ ಕೇಳುತ್ತಿದ್ದ ನಾನು.. ಟಿವಿ ಕಡೆ ಕೈ ತೋರಿದ್ದೆ! ಅವನಿಗೆ ಅರ್ಥವಾಗದೆ ಕಣ್ಣು ಪಿಳಿ ಪಿಳಿ ಬಿಟ್ಟಿದ್ದ ನೋಡಿ... ಹೇಳಿದ್ದೆ "ಎಲುಬಿಲ್ಲದ ನಾಲಿಗೆ!"

ನೋಡು ಟಿವಿನಲ್ಲಿ ಅವನು ಮಾತಾಡ್ತಾ ಇದನಲ್ವಾ... ನಿನ್ನೆ ಒಂದು ರೀತಿ ಹೇಳಿಕೆ ಕೊಟ್ಟಿದ್ದ... ಇವತ್ತು ಉಲ್ಟಾ ಹೊಡೆದು ಮಾತಾಡ್ತಾ ಇದಾನೆ... ಎಲುಬು ಇಲ್ಲದ ನಾಲಿಗೆನಾ ಹೆಂಗೆ ಟ್ವಿಸ್ಟ್ ಮಾಡಿ ಮಾತಾಡ್ತಾ ಇದಾನೆ. ಅದಕ್ಕೆ ಹೇಳಿದ್ದು... ಈ ನಾಲಿಗೆ ಎಲುಬಿಲ್ಲದ್ದು"... ಓಹ್ ಹೌದಾ? ಸರಿ ಅಂತ ಅವ ತನ್ನ ಪಾಡಿಗೆ ಓದ್ತಾ ಕುಳಿತ.

ಚೌಕಿದಾರ್ ಮೋದಿಗೆ ಕುದುರೆ ವ್ಯಾಪಾರ ತಿಳಿದಿಲ್ಲವೇ? : ಸಿದ್ದರಾಮಯ್ಯ ಚೌಕಿದಾರ್ ಮೋದಿಗೆ ಕುದುರೆ ವ್ಯಾಪಾರ ತಿಳಿದಿಲ್ಲವೇ? : ಸಿದ್ದರಾಮಯ್ಯ

ಅಂದುಕೊಂಡೆ... ಬೈಕೊಂಡೆ.. ಛೆ, ಎಷ್ಟು ದೊಡ್ಡ ಜವಾಬ್ದಾರಿಯಲ್ಲಿ ಇರೋ ಜನನಾಯಕರು ಅಂತ ಅನ್ನಿಸಿಕೊಂಡೋರು (ತಮ್ಮ ಪಾಡಿಗೆ ತಾವೇ ಅಂದುಕೊಂಡೋರು) ಎಲೆಕ್ಷನ್ ಟೈಂನಲ್ಲಿ ಎದುರಾಳಿ ಅಭ್ಯರ್ಥಿ ಮೇಲೆ ವೈಯಕ್ತಿಕವಾಗಿ ನಿಂದನೆ ಮಾಡ್ತಾ, ಅವರು ಮನಸ್ಸನ್ನು ಕೆಡಿಸುವಂತೆ ಮಾತಾಡೋ ಬದ್ಲು... ತಾವು ತಮ್ಮ ಕ್ಷೇತ್ರಕ್ಕೆ ಏನು ಮಾಡ್ಬೇಕು ಅಂತ ಪ್ಲಾನ್, ಯೋಜನೆ ಮಾಡಿದೀವಿ... ಮುಂದೆ ಏನು ಅಭಿವೃದ್ಧಿ ಮಾಡ್ತೀವಿ ಅಂತ ಹೇಳಿ ಜನ ಮನ ಗೆದ್ದರೆ... ಅವರಿಗೇ ಜನ ವೋಟ್ ಹಾಕೋಲ್ವಾ?

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಅಧಿಕಾರ ಇದೆ ಅಂತ, ಎದುರಾಳಿ ಅಭ್ಯರ್ಥಿ ಮಾತಾಡೋದನ್ನು ಪ್ರಸಾರ ಮಾಡದಂತೆ ಕೇಬಲ್ ಕಟ್ /ಪವರ್ ಕಟ್ ಮಾಡ್ಸೋದು, ಅವರ ಪರವಾಗಿ ಪ್ರಚಾರಕ್ಕೆ ಬರೋ ಜನರಿಗೆ ಡೈರೆಕ್ಟ್ ಆಗಿ ಬೆದರಿಕೆ ಹಾಕೋದು, ತಮ್ಮ ಪರವಾಗಿ ಪ್ರಚಾರಕ್ಕೆ ಬಂದ್ರೆ ಮಾತ್ರ ಸಿನಿಮಾ ಮಂದಿ ಹೀರೋಗಳು... ಇಲ್ಲಾಂದ್ರೆ ಅವ್ರು ಜೀರೋಗಳು ಅಂತ ಜರಿಯೋದು... ಅವರಿಗಿಂತ ನಾವು ಹೆಚ್ಚು ಭಾವನಾತ್ಮಕವಾಗಿ ಮಾತಾಡ್ತೀವಿ/ಅಳ್ತೀವಿ ಅಂತ ಕಣ್ಣೀರು ಹಾಕೋದು... ದೇಶದ ಪ್ರಧಾನ ಮಂತ್ರಿ ಹೆಸರಿಗೆ ಜೈಕಾರ ಹಾಕೋರಿಗೆ ಹಿಡಿದು ದವಡೆಗೆ ಹೊಡೀರಿ.. ಅಂತ ಹೇಳೋದು... ಬೇಕಾ ಇವೆಲ್ಲ?

ಸ್ವಾಭಿಮಾನಿ ಜನತೆ ನೋಡ್ತಾ ಇದಾರೆ... ಇದು ಡಿಜಿಟಲ್ ಯುಗ, ಅದರಲ್ಲೂ ಯುವ ಜನತೆಯ ಯುಗ... 20-30 ವರ್ಷದ ಹಿಂದಿನ ಹಾಗಲ್ಲ. ತಕ್ಕ ಪಾಠ ಕಲಿಸೇ ಕಲಿಸ್ತಾರೆ... ಜೋಪಾನ!

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಮಾತಾಡ್ಬೇಡ ಹೆಂಗೆಂಗೋ
ಇದೆ ಅಂತ ಎಲುಬಿಲ್ಲದ ನಾಲಿಗೆ...
ಇಲ್ಲ ಅಂದ್ರೆ, ನೀನೇ ಆಗ್ತೀಯಾ
ಕಾರಣ ನಿನ್ನ ಸೋಲಿಗೆ...!

ಸ್ವಾಭಿಮಾನಿ ದೇಶದ ಜನರೇ... ಮತದಾನ ನಿಮ್ಮ ಹಕ್ಕು, ದೇಶದ ಹಿತದೃಷ್ಟಿಯಿಂದ ಮರೆಯದೆ ಅದನ್ನು ಚಲಾಯಿಸಿ... ಒಳ್ಳೆ ಅಭ್ಯರ್ಥಿಯನ್ನು ಗೆಲ್ಲಿಸಿ, ದೇಶವ ಅಭಿವೃದ್ಧಿ ಕಡೆ ನಡೆಸಿ!

English summary
Lok Sabha Elections 2019 : Dear politicians of Karnataka, hold control on your tongue, mind your language. Political satire by Nagaraj Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X