ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯ್.. ನಮ್ದೊಂದು ಪರ್ಸನಲ್ ಲೋನ್ 'ಮನ್ನಾ' ಮಾಡಿ ಮಾರಾಯ್ರೇ...

|
Google Oneindia Kannada News

ಕುಮಾರಣ್ಣನ ಸಮ್ಮಿಶ್ರ ಸರಕಾರ ರೈತರ ಸಾಲಮನ್ನಾ ವಿಷಯ ಊರೆಲ್ಲ ಸುದ್ದಿಯಾಗುತ್ತಿದ್ದಂತೇ, ವಿವಿಧ ಕಾರಣಗಳಿಗಾಗಿ ಮಾಡಿದ ಪರ್ಸನಲ್ ಲೋನ್ ಅನ್ನು ಕೂಡಾ ಮನ್ನಾ ಮಾಡಿ ಎನ್ನುವ ಕೂಗು ಆರಂಭವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮದುವೆ ಮುಂಜಿ ಹನಿಮೂನಿಗಾಗಿ ಪರ್ಸನಲ್ ಲೋನ್ ತೆಗೆದುಕೊಂಡು ಹಿಂದಿರುಗಿಸಲಾಗದೇ ಕಷ್ಟಪಡುತ್ತಿರುವವರ ಕಡೆ ಕುಮಾರಣ್ಣ ಕೃಪೆ ತೋರಬೇಕು. ಒಂದು ವೇಳೆ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ಅದರ ಬಡ್ಡಿಯನ್ನಾದರೂ ತಮ್ಮ ಮಡಿಲಿಗೆ ಹಾಕಿಕೊಳ್ಳಬೇಕು ಎನ್ನುವ ಒತ್ತಾಯ ಆರಂಭವಾಗಿದೆ.

ಹಾಸ್ಯ : ಮಾಸ್ತರ ಪ್ರಶ್ನೆ ತತ್ತಿ ಮೊದಲ, ಕೋಳಿ ಮೊದಲ?ಹಾಸ್ಯ : ಮಾಸ್ತರ ಪ್ರಶ್ನೆ ತತ್ತಿ ಮೊದಲ, ಕೋಳಿ ಮೊದಲ?

ಒಂದು ವೇಳೆ ಒತ್ತಾಯಕ್ಕೆ ಅಸ್ತು ಎಂದು ಲೋನ್ ಮನ್ನಾ ಮಾಡಲು ಸರಕಾರ ಒಪ್ಪಿಕೊಂಡು, ಸರಕಾರದ ಖಜಾನೆಯಲ್ಲಿ ದುಡ್ಡಿನ ಕೊರತೆ ಇದ್ದಲ್ಲಿ ಮೂರ್ನಾಲ್ಕು ಕಂತಿನಲ್ಲಿ ಪರ್ಸನಲ್ ಲೋನ್ ಮನ್ನಾ ಮಾಡಿದರೂ ಅಡ್ಡಿಯಿಲ್ಲ ಎನ್ನುವ ಈಗ ಆರಂಭವಾಗಿರುವ ಕೂಗಿನ ಹಿಂದೆ ಧ್ವನಿಯೊಂದು ಕೇಳಿಸಲಾರಂಭಿಸಿದೆ.

Humor : Demand to government to waive off personal loan too

ಸಾಲ ಡಿಫಾಲ್ಟರ್ ಆಗುವ ಉದ್ದೇಶ ನಮಗಿಲ್ಲ, ಆದರೆ ಕಾರಣಾಂತರದಿಂದ ಸಾಲ ಹಿಂದಿರುಗಿಸಲಾಗುತ್ತಿಲ್ಲ. ಸಾಲ ಕೊಟ್ಟವನು ಸುಮ್ನೆ ಬಿಡ್ತಾನಾ..ದಿನಾ ಮನೆ, ಆಫೀಸ್ ಬಾಗಿಲಲ್ಲಿ ಕಾಯುತ್ತಿರುತ್ತಾನೆ. ಒಂದೆಡೆ ಹೆಂಡ್ತಿ, ಬಾಸ್ ಜೊತೆ, ಸಾಲಗಾರರ ಕಾಟ ವಿಪರೀತವಾಗಿದೆ.

ಹಾಗಾಗಿ, ಪೂರಕ ಬಜೆಟ್ ಅನ್ನಾದರೂ ಮಂಡಿಸಿ, ಪರ್ಸನಲ್ ಲೋನ್ ಮನ್ನಾ ಮಾಡಲು ಸದನದ ವಿಶೇಷ ಅಪ್ರೂವಲ್ ಪಡೆದುಕೊಳ್ಳಬೇಕು. ಎಲ್ಲಾ ವರ್ಗ ಮತ್ತು ಪಕ್ಷದ ಬೆಂಗಲಿಗರಲ್ಲೂ ಪರ್ಸನಲ್ ಲೋನ್ ಸಮಸ್ಯೆ ಇರುವವರು ಧಾರಾಳವಾಗಿ ಸಿಗುವುದರಿಂದ, ಪರ್ಸನಲ್ ಲೋನ್ ಮನ್ನಾ ಮಾಡಲು ಯಾರೂ ತಕರಾರು ಎತ್ತುವ ಸಾಧ್ಯತೆಯಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ಇದಕ್ಕಾಗಿ ವಿಶೇಷ ಅಧಿವೇಶನವನ್ನು ಕರೆಯುವ ಪ್ರಮೇಯ ಬಂದರೂ, ನಮ್ಮಂತಹ ಸಾವಿರಾರು ಜನ ಪರ್ಸನಲ್ ಲೋನ್ ತೆಗೆದುಕೊಂಡು ಹಿಂದಿರುಗಿಸಲಾಗದವರಿಗಾದರೂ, ಸದನವನ್ನು ಕರೆದು ಅನುಮತಿಯನ್ನು ಪಡೆದುಕೊಂಡು, ರಾಜ್ಯಪಾಲರ ಅನುಮೋದನೆಗೆ ಕಳುಹಿಸಬೇಕೆಂದು ಕಳಕಳಿಯ ಮನವಿ ಮಾಡಲಾಗಿದೆ.

ಒಂದು ವೇಳೆ ನಿಮ್ಮ ಸರಕಾರ ಪರ್ಸನಲ್ ಲೋನ್ ಮನ್ನಾ ಮಾಡುವ ನಿರ್ಧಾರಕ್ಕೆ ಬಂದರೆ, ಇದೊಂದು ಐತಿಹಾಸಿಕ ಕ್ರಮವಾಗಲಿದ್ದು, ದೇಶದ ಇತರ ಭಾಗದಲ್ಲಿರುವ ನಮ್ಮ ಭಾರತೀಯ ಸಹೋದರ/ಸಹೋದರಿಯರಿಗೂ ಹೋರಾಟ ಶುರು ಹಚ್ಚಿಕೊಳ್ಳಲು ಉಪಯೋಗವಾಗಲಿದೆ ಎನ್ನುವ ಈ ಸುದ್ದಿ "ಪಕ್ಕಾ ಸುಳ್ ಸುದ್ದಿ". (ಬರೀ ಹಾಸ್ಯಕ್ಕಾಗಿ, ಯಾರನ್ನೂ ಅಣಕಿಸುವ ಉದ್ದೇಶವಲ್ಲ)

English summary
Humor article: Demand to government to waive off personal loan too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X