ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ತಂತ್ರಕ್ಕೆ ಜೋತು ಬಿದ್ದ ರಾಜಕೀಯ ಪಕ್ಷಗಳು

|
Google Oneindia Kannada News

2014ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದೆ, ಜೊತೆಗೆ ಪ್ರಮುಖ ಪಕ್ಷಗಳು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರ ಭರಾಟೆಯಲ್ಲಿದೆ. ಅಯಾಯ ಪಕ್ಷಗಳು ತಮ್ಮಮ್ಮ ನಾಯಕರ ಸಾರ್ವಜನಿಕ ಸಭೆಗೆ ಜನರನ್ನು ಆಕರ್ಷಿಸಲು ಮತ್ತು ನಿಯಂತ್ರಿಸಲು ಹೊಸ ತಂತ್ರಕ್ಕೆ ಶರಣಾಗಲೇ ಬೇಕಾದ ಜರೂರತಿನಲ್ಲಿವೆ ಎನ್ನುವ ಸುದ್ದಿ 'ಬಲ್ಲ' ಮೂಲಗಳಿಂದ ತಿಳಿದು ಬಂದಿದೆ.

ಪ್ರಮುಖ ಪಕ್ಷಗಳಿಗೆ ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕೊರಗೊಂದು ಕಾಡಲಾರಂಭಿಸಿದಯಂತೆ. ಅದೇನಂದರೆ, ಒಂದೆಡೆ ಕೆಲವು ಪಕ್ಷಗಳಿಗೆ ತಮ್ಮ ಸಭೆಗಳಿಗೆ ಜನ ಸೇರುತ್ತಿಲ್ಲ ಎನ್ನುವ ಕೊರಗಾದರೆ ಇನ್ನೊಂದೆಡೆ ಕೆಲವು ರಾಜಕೀಯ ಪಕ್ಷಗಳಿಗೆ ತಮ್ಮ ಸಭೆಗಳಿಗೆ ಸೇರುವ ಜನವನ್ನು ನಿಯಂತ್ರಿಸುವುದು ಹೇಗೆ ಎನ್ನುವ ವಿಚಿತ್ರ ನೋವಂತೆ!

ಈ ವಿಷಯದಲ್ಲಿ ತಡ ಮಾಡಬಾರದು ಮತ್ತು ಈ ಸಮಸ್ಯೆಗಳಿಗೆ ಒಂದು ತಾರ್ಕಿಕ ಪೂರ್ಣವಿರಾಮ ನೀಡಲೇ ಬೇಕೆಂದು ನಿರ್ಧರಿಸಿರುವ ಪಕ್ಷಗಳು, ತಮ್ಮ ಪಕ್ಷದ ಹೈ ಪ್ರೊಫೈಲ್ ನಾಯಕರ ಎಮರ್ಜೆನ್ಸಿ ಮೀಟಿಂಗನ್ನು ವಿವಿಧ ಬೀಚ್ ರಿಸಾರ್ಟುಗಳಲ್ಲಿ ತುರ್ತಾಗಿ ಆಯೋಜಿಸಲು ನಿರ್ಧರಿಸಿವೆ ಎನ್ನುವ ಸುದ್ದಿ ಕೂಡಾ ಈಗ ಗುಪ್ತವಾಗಿ ಉಳಿದಿಲ್ಲ.

Humor article on Indian Politicians public rally

ಅದರಂತೆ ಮಾಧ್ಯಮಗಳಿಗೆ ಅರಿವಾಗದಂತೆ ಸೀಕ್ರೆಟ್ ಸಭೆ ನಡೆಸಿದರೂ, ಅದ್ಯಾಗೋ ವಿಷಯ ಮಾಧ್ಯಮಗಳಿಗೆ ಬಹಿರಂಗವಾಗಿ ಹೋಗಿದೆ. ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರದ ಪ್ರಕಾರ ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗುವ ಪಕ್ಷದ ಸಮಾವೇಶಗಳಿಗೆ ಜನರನ್ನು ಆಕರ್ಷಿಸುವ ಮತ್ತು ನಿಯಂತ್ರಿಸುವ ಪೂರ್ಣ 'ಜನ್ಮಸಿದ್ದ ಹಕ್ಕನ್ನು'ಆಯಾಯ ರಾಜ್ಯಗಳ ಪ್ರಮುಖರಿಗೆ ನೀಡಬೇಕು ಎನ್ನುವ ಸರ್ವಾನುಮತದ ನಿರ್ಣಯಕ್ಕೆ ಬರಲಾಯಿತಂತೆ.

ಸಭೆಯಲ್ಲಿ ತೆಗೆದುಕೊಂಡ ಕೆಲವೊಂದು ನಿರ್ಣಯಗಳನ್ನು ಪ್ರಾಯೋಗಿಕವಾಗಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಕಾರ್ತಿಕ ಮಾಸದ ಅಮವಾಸ್ಯೆ ಮುಗಿದ ನಂತರ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

ಅದರಂತೆ, ಸಮಾವೇಶಕ್ಕೆ ಜನರನ್ನು ಆಕರ್ಷಿಸಲು ತೆಗೆದುಕೊಂಡ ಪ್ರಮುಖ ನಿರ್ಣಯಗಳು ಕೆಳಗಿನಂತಿವೆ:
* ಸಮಾವೇಶಕ್ಕೆ ನಿರೀಕ್ಷಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತಂದರೆ ಸಮಾವೇಶದ ಜವಾಬ್ದಾರಿ ವಹಿಸಿ ಕೊಳ್ಳುವ ಮುಖಂಡರಿಗೆ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಯಸಿದ ನಿಗಮ ಮಂಡಳಿ ಸ್ಥಾನಮಾನ/ಮುಂಬರುವ ಅಸೆಂಬ್ಲಿ ಚುನಾವಣೆಗೆ ಟಿಕೆಟ್ / ಚುನಾವಣಾ ಪ್ರಚಾರಕ್ಕೆ ಪಕ್ಷದ ನಿಧಿಯಿಂದ ಐದು ಕೋಟಿ ರೂಪಾಯಿ.
* ನಗರ ಪ್ರದೇಶದಲ್ಲಿ ಜನರನ್ನು ಆಕರ್ಷಿಸಲು ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಉಚಿತ ಲ್ಯಾಪ್ ಟಾಪ್ ಮತ್ತು ಇಂಟರ್ನೆಟ್ ಸ್ಟಿಕ್.
* ಸಮಾವೇಶಕ್ಕೆ ಬರುವವರಿಗೆ ಹೊಟ್ಟೆ ತುಂಬಾ ದೊನ್ನೆ ಬಿರಿಯಾನಿ ಊಟ (ಪಾರ್ಸೆಲ್ ಬೇಕಂದ್ರೂ ಇಲ್ಲ ಅನ್ನುವ ಹಾಗಿಲ್ಲ), 2 ಲೀಟರ್ ಮಿನರಲ್ ವಾಟರ್
* ಒಂದು ಪ್ರದೇಶದಿಂದ 300ಕ್ಕೂ ಹೆಚ್ಚು ಜನರು ಬರುವ ಹಾಗಿದ್ದರೆ ಸಮಾವೇಶಕ್ಕೆ ಬಂದು ಹೋಗಲು ಎಸಿ ವಿಡಿಯೋ ಕೋಚ್ ಬಸ್ ವ್ಯವಸ್ಥೆ.
* ಸಮಾವೇಶಕ್ಕೆ ಬರುವ ಗ್ರಾಮೀಣ ಪ್ರದೇಶದವರಿಗೆ ಬಂದು ಹೋಗಲು ಬಸ್ ಸೌಲಭ್ಯ, ಊಟದ ವ್ಯವಸ್ಥೆ, ದಿನಭತ್ಯೆ ಗರಿಷ್ಠ ಎರಡು ಸಾವಿರ ರೂಪಾಯಿ.
* ನಾಯಕರು ನಿಗದಿತ ಸಮಯಕ್ಕೆ ಬರದೇ ಇರುವುದರಿಂದ ಸಮಾವೇಶಕ್ಕೆ ಬರುವ ಜನರಿಗೆ ಮಳೆಯಿಂದ/ಬಿಸಿಲಿನಿಂದ ರಕ್ಷಿಸಿಕೊಳ್ಳಲು ಉಚಿತ ಕೊಡೆ ವ್ಯವಸ್ಥೆ.

ಸಮಾವೇಶಕ್ಕೆ ಬರುವ ಜನರನ್ನು ನಿಯಂತ್ರಿಸಲು ತೆಗೆದುಕೊಂಡ ಪ್ರಮುಖ ನಿರ್ಣಯಗಳು ಕೆಳಗಿನಂತಿವೆ:
* ಸಮಾವೇಶದ ಬರುವ ಜನರಿಗೆ ವಿಧಿಸುವ ಎಂಟ್ರಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸುವುದು.
* ಸಮಾವೇಶಕ್ಕೆ ದೂರದ ಊರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಜನರಿಗೆ ಕಡಿವಾಣ ಹಾಕಲು ಸಮಾವೇಶ ನಡೆಯುವ ನಗರ ಸಾರಿಗೆ ಬಸ್ ಸೌಲಭ್ಯ ನಿಲ್ಲಿಸುವುದು.
* ಸಮಾವೇಶ ನಡೆಯುವ ಸ್ಥಳದ ಆಸುಪಾಸಿನಲ್ಲಿ ಮೋಡ ಬಿತ್ತನೆ ಮಾಡಿ, ಧಾರಾಕಾರ ಮಳೆ ಬರುವ ಹಾಗೆ ಮಾಡಿ ಜನರನ್ನು ಸಭೆಗೆ ಬರದಂತೆ ಹಿಮ್ಮುಖ ಗೊಳಿಸುವುದು.
* ಸಮಾವೇಶಕ್ಕೆ ಬರುವವರಿಗಾಗಿ ಊಟ, ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸದೇ ಇರುವುದು.
* ಪ್ರಾದೇಶಿಕ ಭಾಷೆಗಳ ಪ್ರಾಭಲ್ಯವಿರುವ ರಾಜ್ಯಗಳಲ್ಲಿ ಜನರಿಗೆ ಹೆಚ್ಚಾಗಿ ಅರ್ಥವಾಗದ ಹಿಂದಿ ಭಾಷೆಯನ್ನು ಬಳಸುವ ಮೂಲಕ ಪಕ್ಷದ ಮುಂದಿನ ಸಭೆಗಳಿಗೆ ಜನರು ನಿರಾಶಕ್ತಿ ತೋರಿಸುವಂತೆ ಮಾಡುವುದು. (ವ್ಯಂಗ್ಯ ಲೇಖನ)

English summary
Humor article on Indian Politicians public rally. How to attract and control the crowds during political parties rallies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X