• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!

By ನಾಗರಾಜ್ ಎಂ, ಕನೆಕ್ಟಿಕಟ್
|

ಅಬ್ಬಾ... ಭಾನುವಾರ ಸದ್ಯ.. ಇವತ್ತಾದ್ರು ಯಾವದಾದ್ರು ಒಳ್ಳೆ ಮೂವಿ ಬರ್ತಾ ಇರಬಹುದಾ ಅಂತ ಕನ್ನಡ ಚಾನೆಲ್ಸ್ ಹಾಕಿದರೆ... ಅದೇ ಹಳೆ ಕಬ್ಬಿಣ - ಹಳೆ ಪೇಪರ್ ಅನ್ನೋ ಹಾಗೆ ಥೀಯೇಟರ್ ನಲ್ಲಿ ಒಂದೆರಡು ದಿನಗಳಲ್ಲೇ ಹೊರಬಿದ್ದ ಕಥೆ ಇಲ್ಲದ ಸಿನಿಮಾ! ಛೆ!

ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!

ಏನಾರ ಸ್ಪೆಷಲ್ ನ್ಯೂಸ್ ಇರಬಹುದಾ ಅಂತಾ CNN, ಫಾಕ್ಸ್ ಚಾನೆಲ್ಸ್ ಹಾಕಿದರೆ... ಅದೇ ಟ್ರಂಪ್ - ಪುಟಿನ್, ಸ್ಕ್ಯಾಂಡಲ್... ಬರೀ ಅದೇ ನ್ಯೂಸ್... ಇವಾವು ಬೇಡ ಅಂತ ಅಂದುಕೊಂಡು... ಇವತ್ತು ಯಾರ್ಯಾರು ಹೊಸ ಫೋಟೋ ಹಾಕಿದ್ದಾರೆ, ಯಾರು ಚೆಂದ ಕಾಣ್ತಿದ್ದಾರೆ ಅಂತಾ ಫೇಸ್ಬುಕ್ ನಲ್ಲಿ ಕುತೂಹಲದಿಂದ ನೋಡ್ತಾ ಇರೋವಾಗ...

"ಅಪ್ಪಾ.... ನಿನ್ನೆ ಕನ್ನಡ ಶಾಲೆಗೆ ಹೋಗಿದ್ನಲ್ಲಾ... they gave me one home work.. ವಾಂಟ್ ಯುವರ್ ಹೆಲ್ಪ್" ಅಂತಾ ಮಗ ಹತ್ತಿರ ಬಂದು ಕೇಳಿದಾಗ... ಒಲ್ಲದ ಮನಸಲ್ಲೇ... ಏನೋ ಅದು ನಿಂದು? ಅಂತ ಕೇಳಿದ್ದೆ!

"They want us to write one paragraph on one kannada word.." ಅಂತ ಅವ ಹೇಳಿದಾಗ, ಕೇಳಿದ್ದೆ "ಯಾವ ವರ್ಡ್ ಅದು?"

"ನಾಯಿ ಬಾಲ ಡೊಂಕೇ" ಅಂತಾ ಅವ ಅಮೆರಿಕನ್ accentನಲ್ಲಿ ಹೇಳಿದಾಗ ನಗು ಬಂದಿತ್ತು.

"Can you explain me about that?" ಎಂದು ಮಗ ಕೇಳಿದಾಗ.. ಹ್ಮ್ಮ್... ನೋಡು, ಕೆಲವರಿಗೆ ನಾವು ಎಷ್ಟೇ ಬಾರಿ ಹೇಳಿದ್ರು.. ಅವರು ಆ ಕೆಲಸ ಮಾಡೋದನ್ನು ಬಿಡೋಲ್ಲ. ಆವಾಗ ಈ ವರ್ಡ್ use ಮಾಡ್ತೀವಿ! ಅಂತ ಚಿಕ್ಕ-ಚೊಕ್ಕವಾಗಿ ನಾ ಹೇಳಿದ್ದ ಕೇಳಿ... ಅವ ಏನೂ ತಿಳಿಯದೆ ಕಣ್ಣು ಪಿಳಿ ಪಿಳಿ ಬಿಟ್ಟು ನನ್ನೇ ನೋಡ್ತಿದ್ದ.

ಹಾಸ್ಯಮಯ ವೆಬಿಸೋಡ್: ಎಕ್ಸಾಂ ನಿಮಿತ್ತಂ ಬಹುಕೃತ ವೇಷಂ

"Can you explain ಇನ್ ಡೀಟೇಲ್ ವಿಥ್ ಸಂ example?" ಅವ ತಿರುಗಿ ಕೇಳಿದಾಗ... ಒಂದು ಕ್ಷಣ ಹೇಗೆ ಇವನಿಗೆ ಅರ್ಥ ಮಾಡಿಸೋದು ಅಂತ ತಲೆ ಕೆರೆದುಕೊಳ್ಳುವಾಗ.. ಪಟ್ ಅಂತಾ ಏನೋ ಹೊಳೀತು ತಲೇಲಿ! :)

ಬಾ ಇಲ್ಲಿ... ಹತ್ತಿರ ಕೂತ್ಕೋ ಅಂತ ಹೇಳಿ, ಆಚೆ - ಈಚೆ ನೋಡಿ... ಯಾರು ಇಲ್ಲದ್ದ ಕಂಡು..."ನಿಮ್ಮ ಅಮ್ಮ ಎಲ್ಲೋ?" ಅಂತ ಕೇಳಿದ್ದೆ.

"ಓ ಅಮ್ಮನಾ? she is in the backyard and talking to the neighbor who moved recently" ಅಂತ ಅವ ಹೇಳಿದ್ದ ಕೇಳಿ, ಒಮ್ಮೆ ಎದ್ದು ನಿಂತು ನೋಡಿ confirm ಮಾಡಿಕೊಂಡೆ!

ನೋಡು... ಉದಾಹರಣೆಗೆ... ನಿಮ್ಮ ಅಮ್ಮನನ್ನೇ ತಗೋ.... ನಾನು ಎಷ್ಟೇ ಸಲ ಹೇಳಿದ್ರೂ... ಮತ್ತೆ ಅದನ್ನೇ ಮಾಡ್ತಾಳೆ.. ನಂಗೆ ಉಪ್ಪಿಟ್ಟು ಇಷ್ಟ ಇಲ್ಲ... ಬೇರೆ ಏನಾರ ಮಾಡ್ಬಾರ್ದಾ ಅಂತಾ ಹೇಳಿದ್ರೂ.. ಮತ್ತೆ ಅದೇ ಉಪ್ಪಿಟ್ಟು ಇವತ್ತು... ಆಮೇಲೆ, ಬರೀ ಯಾವಾಗ್ಲೂ ಶಾಪಿಂಗ್ - ಶಾಪಿಂಗ್ ಅಂತಾ ಅಲಿಯದೇ... ಸ್ವಲ್ಪ ಮನೆ ಕ್ಲೀನ್ ಕೆಲಸ, ಹೊಸ ಹೊಸ ರುಚಿಕರ ಅಡುಗೆ ಕಲ್ತುಕೊಂಡು ಮಾಡ್ಬಾರ್ದಾ? ಅಂತ ನಾ ಎಷ್ಟೇ ಸಲ ನಯವಾಗಿ, ಒಮ್ಮೊಮ್ಮೆ ಸಿಟ್ಟಾಗಿ ಹೇಳಿದ್ರೂ... ಸರಿ ಅಂತಾ ತಲೆಯಾಡಿಸ್ತಾಳೆ... ಆದ್ರೆ ನೆಕ್ಸ್ಟ್ ವೀಕೆಂಡ್ ಬಂತು ಅಂದ್ರೆ, ಮತ್ತೆ ಅದೇ ಕಥೆ....! ಏನೂ ಚೇಂಜ್ ಇಲ್ಲ... ಹೇಳಿ ಹೇಳಿ ನಾನೇ ಸಾಕಾದ್ನೇ ಹೊರತು.. ಅವಳಲ್ಲ!

ಇದಕ್ಕೆ ಹೇಳೋದು "ಏನೇ ಮಾಡಿದ್ರು, ನಾಯಿ ಬಾಲ ಡೊಂಕೇ" ಅರ್ಥಾ ಆಯಿತಾ ಈಗ? ಅಂತ ಕೇಳಿದಾಗ... "ಓಹ್ ಯಾ.." ಅಂತಾ ಅವ್ನು ಅಂದಿದ್ದ ಕೇಳಿ..." ಅಬ್ಬಾ ಸದ್ಯ... ಒಮ್ಮೆಲೇ, ಅರ್ಥ ಮಾಡಿಕೊಂಡನಲ್ಲ" ಅಂತಾ ನಾ ಇನ್ನೇನು ನಿಟ್ಟುಸಿರು ಬಿಟ್ಟು, ಮತ್ತೆ ಉಸಿರು ಎಳೆದುಕೊಳ್ಳುವಾಗ...

"ಲೇ ರಾಜು... ನಾಯಿ ಬಾಲ ಡೊಂಕೇ... ಆದ್ರೆ ನಾಯಿ ಕಿವಿ ಯಾವಾಗ್ಲೂ ಚುರುಕೆ" ಅಂತಾ ನಿಮ್ಮ ಅಪ್ಪನಿಗೆ ಹೇಳು...! ಜೊತೆಗೆ ಇವೊತ್ತು ರಾತ್ರಿಗೂ ಸಹಾ ಅದೇ ಉಪ್ಪಿಟ್ಟು ಅವ್ರಿಗೆ..."

"ನಾನು ಸ್ವಲ್ಪ ಹೊತ್ತು ಹೊಸದಾಗಿ ಬಂದಿರೋ ಆ ರಶ್ಮಿ ಜೊತೆ ಶಾಪಿಂಗ್ಗೆ ಹೋಗಿ ಬರ್ತಿನೀ... ಅವಳಿಗೂ ತೋರಿಸಿದಂಗೆ ಆಗುತ್ತೆ, ನಂಗೂ ಟೈಮ್ ಪಾಸ್ ಆಗುತ್ತೆ" ಅಂತ ಅವಳು ನನ್ನನ್ನೇ ಒಮ್ಮೆ ಮೇಲಿಂದ ಕೆಳಗೆ ನೋಡಿ, ಬಿರುಸಾಗಿ ಹೊರಗಡೆ ಹೋದಾಗ... "ಅಪ್ಪ ..ಟುಡೇ ಯು ಆರ್ ಇನ್ ಟ್ರಬಲ್" ಅಂತ ಮಗ ಹೇಳಿದ್ದ ಕೇಳಿ... ಉಸ್ಸ್ ಅಂತಾ ಕೂತಿದ್ದೆ!

ಎದುರು ಗೋಡೆಯಲ್ಲಿ ನೇತಾಕಿದ್ದ ಫೋಟೋದಲ್ಲಿನ ನನ್ನ ಮುತ್ತಜ್ಜ... ಯಾಕೋ ನನ್ನೇ ನೋಡಿ ನಕ್ಕು - ನುಡಿದಂತೆ ಅನ್ನಿಸಿತ್ತು...

ಅದಕ್ಕೆ ನಾವು ಹಿರಿಯರು ಯಾವಾಗ್ಲೂ ಹೇಳೋದು...

"ನಾಯಿ ಬಾಲ ಡೊಂಕೇ ...

ಅದನ್ನು ಸರಿಮಾಡೋಕೆ ಹೋಗ್ಬೇಡ ಮಂಕೇ"

ನೀವೂ, ಹಂಗೆ ಅಂತೀರಾ?

English summary
Dog's tail can never be straightened, we should not try to straighten it too. A humorous write by Nagaraja Maheshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more