• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಲಸಕ್ಕೆ ಅರ್ಜಿ ಹಾಕಿದ್ದೀನಿ, ಗುಡ್ ಲಕ್ ಹೇಳ್ತೀರಾ?

By ಡಾ. ಕೆ.ಎಸ್.ಆರ್. ಮೂರ್ತಿ
|

ಮೂವತ್ತಕ್ಕೂ ಹೆಚ್ಚು ವರ್ಷ ನಿರುಪಯುಕ್ತ, ನಿರರ್ಥಕ ಜೀವನ ನಡೆಸಿ, ಜೀವನದಲ್ಲಿ ಬೇಸತ್ತು ಜೀವ ತೊರೆದು ಹೆಣವನ್ನು ಭೂಮಿಯಲ್ಲೇ ಬಿಟ್ಟು ಒಂದು ದಿನಾ ಸೀದಾ ಪರಲೋಕಕ್ಕೆ(ನರಕಕ್ಕೆ) ಹೋದೆ. ನರಕದ ಬಾಗಿಲ ಮುಂದೆ ಹೋದೆ. ದೊಡ್ಡ ಗೇಟಿನ ಮುಂದೆ ಸಾವಿರಾರು ಶವಗಳು ನಿಂತಿದ್ದವು. ಕ್ಯೂ ನಿಧಾನವಾಗಿ ಚಲಿಸುತ್ತಿತ್ತು.

ಕಡೆಗೂ ನನ್ನ ಸರದಿ ಬಂದೇ ಬಿಟ್ಟಿತು. ಎಲ್ಲರೂ ಭೂಮಿಯ ಮೇಲೆ ಮಾಡಿದ ಪಾಪ ಪುಣ್ಯಗಳ ದಾಖಲೆಗಳನ್ನು ಪರಿಶೀಲಿಸಿದ ಹಾಗೆ ನನ್ನ ಬಯೋಡೇಟಾವನ್ನು ನೋಡಿದ ಅಲ್ಲಿನ ಅಧಿಕಾರಿಯೊಬ್ಬ. ನನ್ನ ಹೆಸರು ಹೇಳಿದ ಮೇಲೆ ಅಧಿಕಾರಿಯೊಬ್ಬ ನನಗೆ ಹೇಳಿದ, "ಆ ಮೂಲೆಯಲ್ಲಿರುವ ಮುಖ್ಯ ಮಾಹಿತಿ ಅಧಿಕಾರಿಯನ್ನು ನಿನೀಗಲೇ ಹೋಗಿ ಕಾಣು."

ಆ ಮುಖ್ಯ ಮಾಹಿತಿ ಅಧಿಕಾರಿ ಮತ್ಯಾರೂ ಅಲ್ಲ, ಯಮದೇವನ ಬಲಗೈ ಬಂಟ ಚಿತ್ರಗುಪ್ತನ ಹೊಸ ವರ್ಷನ್. ಮೂಲೆಯ ಕಚೇರಿಯ ಮೂಲೆಯೊಂದರಲ್ಲಿ ಟೋಪಿ ತೆಗೆದು ತಲೆ ಕೆರೆದುಕೊಳ್ಳುತ್ತಿದ್ದ ಚಿತ್ರಗುಪ್ತನನ್ನು ಹೋಗಿ ಭೇಟಿಯಾದೆ. ಚಿತ್ರಗುಪ್ತ ನನಗೆ ಕುಳಿತುಕೊಳ್ಳಲು ಹೇಳಿ ತನ್ನ ಐ ಪ್ಯಾಡನ್ನೂ, ಐ ಫೋನನ್ನೂ ಆಚೆ ತೆಗೆದ.

ಚಿತ್ರಗುಪ್ತ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿದ್ದಾನೆ ಎಂದು ಲೆಕ್ಕ ಹಾಕಿದೆ. ಆತ ತನ್ನ ಐಪ್ಯಾಡಲ್ಲಿ ಈಮೇಲೆ ಚೆಕ್ ಮಾಡುತ್ತಿರಬಹುದು ಎಂದು ಎಣಿಸಿ, "ಬುದ್ದಿ, ತಾವು ಐಫೋನ್, ಐಪ್ಯಾಡಲ್ಲಿ ಏನು ನೋಡ್ತಾ ಇದ್ದೀರಾ ಎಂದು ಕೇಳಬಹುದೆ ಮಹಾಶಯರೆ" ಎಂದೆ.

"ನಿನ್ನ ಫೇಸ್ ಬುಕ್ಕು, ಲಿಂಕ್ಡ್ ಇನ್ನು, ಟ್ವಿಟ್ಟರ್ ಖಾತೆಗಳನ್ನು ನೋಡುತ್ತಿದ್ದೇನೆ. ನೀನು ನಿನ್ನ ಜೀವನದ ಅತ್ಯಮೂಲ್ಯ ಘಳಿಗೆಗಳನ್ನು ಈ ಖಾತೆಗಳಲ್ಲಿ ಹೆಚ್ಚಾಗಿ ಕಳಿದಿದ್ದೀಯಾ ಅಂತ ಕಾಣತ್ತೆ. ನಿನ್ನ ಬಗ್ಗೆ ನೀನು ಏನೇನು ಹೊಗಳಿಕೊಂಡಿದೆಯೋ ಬೊಗಳಿಕೊಂಡಿದೆಯೋ ನೋಡೋದಕ್ಕೆ ನನ್ನ ಬಾಸು ಅಪ್ಪಣೆ ಕೊಟ್ಟಿದ್ದಾನೆ ಕಣಯ್ಯ" ಅಂತ ಹೇಳಿದ ಚಿತ್ರಗುಪ್ತ.

ಮುಂದುವರಿಸಿ, "ನಿನಗೆ ಭಾರೀ ದುರಂಕಾರ ಇದೆ. ಸಾಕಷ್ಟು ಸಂದರ್ಭದಲ್ಲಿ ಅನೇಕ ಸಂಗತಿಗಳ ಬಗ್ಗೆ ಸುಳ್ಳನ್ನು ನುಡಿದಿದ್ದಿಯಾ. ನೀನು ಭೂಮಿಯ ಮೇಲೆ ಪ್ರಯೋಜನಕ್ಕೆ ಬರುವ ಯಾವುದೇ ಕೆಲಸವನ್ನು ಮಾಡಿದ ಹಾಗೆ ಕಾಣುವುದಿಲ್ಲ" ಎಂದು ಅಪಾದಮಸ್ತಕವಾಗಿ ನೋಡಿದ ಚಿತ್ರಗುಪ್ತ. ನಾನು ಪೆಕ್ರನಂತೆ ನಕ್ಕೆ.

ಚಿತ್ರಗುಪ್ತ ಭಾರೀ ಚಾಲಾಕಿ ಅಂತ ಕಂಡಿತು. ಆತನನ್ನು ಹೊಗಳಲು ಪ್ರಾರಂಭಿಸಿದೆ, "ಜಗತ್ತಿನ ಅತ್ಯಂತ ಜವಾಬ್ದಾರಿಯುತ ಮತ್ತು ಅತ್ಯುತ್ತಮ ಕೆಲವನ್ನು ನೀನು ಮಾಡುತ್ತಿದ್ದೀಯಾ. ಐಫೋನ್, ಐಪ್ಯಾಡ್ ನೋಡುವ, ಎಲ್ಲರ ಫೇಸ್ ಬುಕ್, ಟ್ವಿಟ್ಟರ್, ಲಿಂಕ್ಡ್ ಇನ್ ಖಾತೆಗಳನ್ನು ಜಾಲಾಡಿ ನೋಡುವ ಗುರುತರ ಜವಾಬ್ದಾರಿ ನಿನ್ನ ಮೇಲಿದೆ" ಅಂತ ಹೇಳಿದೆ.

ಪ್ರಸನ್ನವದನನಾದ ಚಿತ್ರಗುಪ್ತ, "ಯಸ್, ನನ್ನದು ಪ್ರಪಂಚದ ಅತ್ಯುತ್ತಮ ಕೆಲಸ" ಅಂತ ಹೆಮ್ಮೆಯಿಂದ ಹೇಳಿದ.

"ಈ ಕೆಲಸ ನಿನಗೇ ಹೇಗೆ ಸಿಕ್ತು? ಹಿಂದೆ ನಿನೇನಾಗಿದ್ದಿ? ಈ ಕೆಲಸಕ್ಕೆ ಅರ್ಹತೆ ಗಳಿಸಲು ನೀನು ಏನೇನು ಮಾಡಿದಿ? ನೀನು ಯಾವಾಗ ಇವೆಲ್ಲಾ ಕಲಿತುಕೊಂಡೆ?" ಅಂತ ಕೇಳಿದೆ.

"ಹಿಂದೆ ಇದ್ದ ಚಿತ್ರಗುಪ್ತನು ತಾತರಾಯನ ಕಾಲದಂತೆಯೇ ಪುಸ್ತಕದಲ್ಲಿ ಬರೆದು ಕೆಲಸ ಮಾಡುತ್ತಿದ್ದ ಅವನು ಬಹಳ ನಿಧಾನದಿಂದ ಕೆಲಸ ಮಾಡುತ್ತಿದ್ದ. ನನ್ನ ಬಾಸು ಯಮರಾಜನು ಅವನನ್ನು ಕೆಲಸದಿಂದ ತೆಗೆದು ಹಾಕಿದ. ನಾನು ಸಿಐಎ(ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ)ನಲ್ಲಿ ಕೆಲಸ ಮಾಡುತ್ತಿದ್ದೆ. ಯಮರಾಜನು ಒಂದು ಟೆಕ್ಷ್ಟು ಮೆಸೇಜ್ ಕಳಿಸಿ, 'ಒಳ್ಳೇ ಸಂಬಳ ಕೊಡ್ತೀನಿ' ಬಂದು ನನ್ನ ನರಕದಲ್ಲಿ "ಚೀಫ್ ಚಿತ್ರಗುಪ್ತ" ವೃತ್ತಿಗೆ ಸೇರುತ್ತಿಯೋ? ಅಂತ ಕೇಳಿದ."

"ಸಿಐಎನಲ್ಲಿ ಅಂತಹ ಸಂಬಳವೂ ಇರಲಿಲ್ಲ, ಕೆಲಸವೂ ಇರಲಿಲ್ಲ. ಅಲ್ಲಿಯ ಕೆಲಸ ಸ್ಲೋ ಮತ್ತು ಸಿಕ್ಕಾಪಟ್ಟೆ ಬೋರಿಂಗ್ ಆಗಿತ್ತು. ಹೀಗಾಗಿ ಇದು ಒಳ್ಳೆ ಆಫರ್ ಎಂದರಿತ ನಾನು ಓಕೆ ಅಂತ ಹೇಳಿ ಟೆಕ್ಸ್ಟ್ ಮೆಸೇಜ್ ಕಳಿಸಿದೆ. ನರಕದ ಯಮ ಕೂಡ ಸಾಕಷ್ಟು ಅಪ್ಡೇಟ್ ಆಗಿದ್ದು, ಅಮೆರಿಕಾದ ಸಿಇಓಗಿಂತ, ಜಗತ್ತಿನ ಎಲ್ಲಾ ಕಂಪನಿಯ ಸಿಇಓಗಳಿಗಿಂತ ಎಷ್ಟೋ ಬೆಟರ್ರು" ಎಂದು ವಾಚಾಮಗೋಚರವಾಗಿ ಹೊಗಳಲು ಪ್ರಾರಂಭಿಸಿದ.

ನನ್ನ ತಲೆಯಲ್ ಛಕ್ಕನೆ ಸಿಎಫ್ಎಲ್ ಬಲ್ಬ್ ಉರಿಯಲು ಪ್ರಾರಂಭಿಸಿತು. "ನೋಡಪ್ಪಾ ಚೀಫ್ ಚಿತ್ರಗುಪ್ತ! ನನಗೂ ಒಂದು ಕೆಲಸ ಕೊಡಿಸೋ. ನನಗೆ ಬಿಗ್ ಡೇಟಾ, ಅನಲಿಟಿಕ್ಸ್, ಇತ್ಯಾದಿ, ಇತ್ಯಾದಿಗಳೆಲ್ಲಾ ಚೆನ್ನಾಗಿ ಗೊತ್ತು. ಅದರಲ್ಲೆಲ್ಲಾ ನಾನು ಪಂಟರು. ನಾನು 'ಬಿಗ್ ಡೇಟಾ ಎಕ್ಷಪರ್ಟು'. ಭೂಲೋಕದಲ್ಲಿ ಯಾರಾದರೂ ಸತ್ತ ಕೂಡಲೆ ಅವರಿಗೆ ಸಂಬಂಧಿಸಿದ ಬಿಗ್ ಡೇಟಾವನ್ನು ಎಲ್ಲಾ ನಿನ್ನ ಮೊಬೈಲ್ ನಲ್ಲಿ ನೋಡುವ ಹಾಗೆ ಮಾಡಿ ಕೊಡುತ್ತೇನೆ" ಅಂತ ಅಟ್ಟದ ಮೇಲೆ ಹತ್ತಿಸಿದೆ.

"ಯೋ, ಅದೆಲ್ಲಾ ನನಗೆ ಗೊತ್ತು. ಮೊದಲು ಅರ್ಜಿಯನ್ನು ತುಂಬು. ಚೀಫ್ ಬಿಗ್ ಡೇಟಾ ಆಫೀಸರ್ ಪೋಸ್ಟಿಗೆ ಅರ್ಜಿ ಗುಜರಾಯಿಸು. ಅರ್ಜಿಯಲ್ಲಿ ಸಾಕಷ್ಟು ಪುಟಗಳಿವೆ. ಕೂಡಲೆ ತುಂಬಲು ಆರಂಭಿಸು. ತಿಂಡಿ, ಊಟ, ಬಾತ್ ರೂಂ ಬ್ರೇಕ್ ಇಲ್ಲದೆ ನಿನ್ನ ಕೆಲಸ ಶುರು ಹಚ್ಚಿಕೋ. ಅದನ್ನು ತುಂಬಲು ಹಲವಾರು ಗಂಟೆಗಳು ಬೇಕು. ನಿನ್ನ ಹೆಸರನ್ನು ನಾನು ಯಮನಿಗೆ ಶಿಫಾರಸು ಮಾಡುತ್ತೇನೆ" ಎಂದು ಚಿತ್ರಗುಪ್ತ ಆಜ್ಞಾಪಿಸಿದ.

ನಾನು, ಥೂ ನನ್ಮಗ ತನ್ನ ಹಳೆ ಬುದ್ಧಿಯನ್ನು ಇವ ಇನ್ನೂ ಬಿಟ್ಟಿಲ್ಲ ಅಂತ ಬೈದುಕೊಂಡು ಅರ್ಜಿ ತುಂಬಲು ಪ್ರಾರಂಭಿಸಿದೆ. ಕೆಲಸಕ್ಕೆ ಅರ್ಜಿ ಹಾಕಾಗಿದೆ. ಏನಂತೀರಾ? ನನಗೆ ಕೆಲಸ ಸಿಗಬಹುದಾ? ನನಗೆ ಗುಡ್ ಲಕ್ಕು ಬಯಸ್ತೀರಾ ನೀವೆಲ್ಲಾ?

ಓದಲು ಮರೆಯದಿರಿ : ಯಮಲೋಕದ ಸಿಇಓ ಯಮಣ್ಣನ ಪೀಕಲಾಟ

ನರಕದ ಜೋಕ್ಸ್ : ರಾಮಕ್ಕನ ಗುರುತು ಹಿಡಿಯದ ಯಮಣ್ಣ | ಯಮನ ಬೇಸ್ತು ಬೀಳಿಸಿಲು ಹೋಗಿ | ಸಂತಾ ಬರೆದ ಪರೀಕ್ಷೆ

English summary
I have applied for Chief Big Data Officer post in hell, please wish me good luck, says author of the humorous write up. Hell is not more like hell. It has been turned into corporate office by CEO Yama. Enjoy the conversation between author and Chitragupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more