ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನಾಕ್ಷಿ ಸೈಯದ್ ವೆಡ್ಸ್ ಸರ್ವೋತ್ತಮ ಜೋಸೆಫ್

By ರವೀಂದ್ರ ಕೊಟಕಿ
|
Google Oneindia Kannada News

Meenakshi Syed weds Sarvotham Joseph
ದೃಶ್ಯ 1

ಮೀನಾಕ್ಷಿ ಸೈಯದ್ : ಹಣೆ ಮೇಲೆ ಸ್ಟಿಕರ್ ನೋಡಿದ್ರೆ ಅಪ್ಪನ ಕಡೆಯವರು ಬೈತಾರೆ. ಅದೇ ಸ್ಟಿಕರ್ ಇಲ್ಲಾಂದ್ರೆ ಅಮ್ಮನ ಕಡೆಯುವರು ಬೈತಾರೋ ಸರ್ವೋತ್ತಮ.

ಸರ್ವೋತ್ತಮ ಜೋಸೆಫ್ : ಅಯ್ಯೋ ನನ್ ಕಥೆನು ಇದೇ ಆಗಿದೆ ಕಣೇ. ಗುರುವಾರ ರಾಯರ ಮಠಕ್ಕೆ ಹೋಗ್ದೆ ಹೋದ್ರೆ ಅಮ್ಮನ ಕಡೆಯವರು ಬೈತಾರೆ. ಭಾನುವಾರ ಚರ್ಚ್‌ಗೆ ಹೋಗಿ ಪ್ರೇಯರ್ ಮಾಡ್ದೆ ಹೋದ್ರೆ ಅಪ್ಪ ಕಡೆಯವರು ಬೈತಾರೆ ಮೀನಾಕ್ಷಿ.

ದೃಶ್ಯ 2

ಮೀನಾಕ್ಷಿ ಸೈಯದ್ ತಂದೆ : ಮಕ್ಳ ಸಂತೋಷವೆ ನಮುದುಕೆ ಸಂತೋಷ. ದೋನೋ ಇಷ್ಟಪಟ್ಟಿದ್ದಾರೆ. ಶಾದಿನು ಆಗ್‌ಬೇಕು ಅಂತ್ನಾವರೆ. ನಾವು ಖುಸಿಯಿಂದ ಓಪ್ಪಿದೀವಿ. ನಿಖಾನಾ ನಮುದಕೇ ತರ ಮಾಡ್ಕೊಡ್ತೀವಿ ಜೋಸಫ್‌ಜೀ.

ಸರ್ವೋತ್ತಮ ಜೋಸೆಫ್ ತಂದೆ : ನೋ ನೋ ನೋ...ಈಟ್ಸ್ ನಾಟ್ ಪಾಸಿಬಲ್. ಚರ್ಚ್‌ಲ್ಲಿ ಇಬ್ರು ರಿಂಗ್ಸ್‌ನ ಎಕ್ಸ್‌ಚೇಂಜ್ ಮಾಡ್ಕೊಂಡೇ ಮ್ಯಾರೇಜು ಆಗ್ಬೇಕು ಮಿಸ್ಟರ್ ಸೈಯದ್.

ಇಬ್ಬರು ಮಧ್ಯೆ ನಿಖಾ-ಮ್ಯಾರೇಜಿನ ತಿಕ್ಕಾಟ...

ಮಧ್ಯೆಪ್ರವೇಶಿಸಿದ ಮೀನಾಕ್ಷಿ ಸೈಯದ್ ತಾಯಿ : ನೋಡಿ ನಿಖಾನು ಬೇಡ, ಮ್ಯಾರೇಜು ಬೇಡ, ದೇವಸ್ಥಾನದಲ್ಲಿ ಮದುವೆ ಅಂತ ಮಾಡ್ಬಿಟ್ರೆ ಯಾವ್ ಸಮಸ್ಯೇನು ಇರೋದಿಲ್ಲ.

ಅವರ ಮಾತಿಗೆ ಧ್ವನಿಗೂಡಿಸಿದ ಸರ್ವೋತ್ತಮ ಜೋಸೆಫ್‌ನ ತಾಯಿ ಕೂಡ : ಹೌದೌದು ಮದುವೆ ದೇವಸ್ಥಾನದಲ್ಲೇ ಮಡೋಣ.

ಸರಿ ಆಯಿತು ಅಂತ ಎಲ್ಲಾರೂ ತಲೆಯಾಡಿಸಿದರು.

ಮೀನಾಕ್ಷಿ ಸೈಯದ್ ತಾಯಿ : ಇಲ್ಲೇ ಹತ್ತಿರದಲ್ಲೇ ನಮ್ಮ ಶಂಕರ ಮಠಕ್ಕೆ ಸೇರಿದ ದೇವಸ್ಥಾನ ಇದೆ ಅಲ್ಲೇ ಮದುವೆ ಮಾಡ್‌ಬಿಡೋಣ.

ತಕ್ಷಣ ಸರ್ವೋತ್ತಮ ಜೋಸೆಫ್‌ನ ತಾಯಿ : ಶಂಕರಮಠಕ್ಕೆ ಸೇರಿದ ದೇವಸ್ಥಾನ ಅಂದ್ಮೇಲೆ ಸ್ಮಾರ್ತ ಸಂಪ್ರದಾಯದಲ್ಲಿ ಮದುವೆ ಅಂತಾಯಿತು. ಅಯ್ಯೋ ಎಲ್ಲಾದ್ರೂ ಉಂಟೆ? ನಮ್ಮ ಸರ್ವೋತ್ತಮನಿಗೆ ಮದುವೆಂತ ಮಾಡಿದ್ರೆ ಅದು ಮಧ್ವ ಸಂಪ್ರದಾಯದಲ್ಲೇ ಮಾಡಬೇಕು. ಸಾಧ್ಯ ಇಲ್ಲಾಂದ್ರೆ ನಿಖಾ ಆದ್ರು ಪರವಾಗಿಲ್ಲ, ಚರ್ಚ್‌ಲ್ಲಿ ಮ್ಯಾರೇಜು ಆದ್ರೂ ಪರವಾಗಿಲ್ಲ. ಆದ್ರೆ ಸ್ಮಾರ್ತರ ಪದ್ದತಿಗೆ ನಾನ್ ಅವಕಾಶ ಕೊಡೋದಿಲ್ಲ.

ಮೀನಾಕ್ಷಿ ಸೈಯದ್ ತಾಯಿ : ನಾನು ಅಷ್ಟೆ. ನನ್ ಮಗಳ ಮದುವೇನಾ ಯಾವುದೇ ಕಾರಣಕ್ಕೂ ಮಧ್ವ ಸಂಪ್ರದಾಯದಲ್ಲಿ ಆಗೋದ್ಕೆ ಬಿಡೋದಿಲ್ಲ. ನೀವು ಹರಿ ಸರ್ವೋತ್ತಮ-ವಾಯು ಜೀವೋತ್ತಮ ಅಂದ್ರೆ ನಾವು ಅಹಂ ಬ್ರಹ್ಮಾಸಿ ಅನ್ನೋ ಜನ. ನಾವು ಮಸಾಲೆದೋಸೆ (ಆತ್ಮಕ್ಕೂ-ಪರಮಾತ್ಮಕ್ಕೂ ವ್ಯತ್ಯಾಸವಿಲ್ಲ ಎರಡು ಸೇರಿ ಒಂದೇ ದೋಸೆ) ಪ್ರಿಯರು, ನೀವು ಖಾಲಿದೋಸೆ (ಆತ್ಮವೇ ಬೇರೆ-ಪರಮಾತ್ಮವೆ ಬೇರೆ, ಎರಡು ಬೇರೆ ಬೇರೆ ದೋಸೆ) ತಿನ್ನೋರು. ನಮ್ಗೂ ಮಧ್ವ ಸಂಪ್ರಾಯದಲ್ಲಿ ಮದುವೆ ಸಾಧ್ಯವಿಲ್ಲ ಬಿಡಿ. ಮದುವೇಂತ ನಡಿದ್ರೆ ಅದು ನಮ್ ಪದ್ದತಿಲ್ಲೇ ನಡೀಬೇಕು.

ಅಂತರಧರ್ಮ ವಿವಾಹವಾಗಿರೋ ದ್ವೈತಿ- ಅದ್ವೈತಿಗಳ ವಾಗ್ವಾದ.

ಇದೆಲ್ಲಾ ನೋಡಿ ಸುಸ್ತಾದ ಮೀನಾಕ್ಷಿ ಸೈಯದ್-ಸರ್ವೋತ್ತಮ ಜೋಸೆಫ್ ಇಬ್ರು ಕೊನೆಗೆ : (ಒಟ್ಟಿಗೆ) ನೋಡಿ ನಮಗೆ ನೀವು ಮಾಡೋ ನಿಖಾನು ಬೇಡ, ಮ್ಯಾರೇಜು ಬೇಡ, ಮದುವೆನು ಬೇಡ...ಸಬ್‌ ರಿಜಿಸ್ಟರ್ ಆಫೀಸ್‌ಲ್ಲಿ ಸರ್ಕಾರಿ ವಿವಾಹವಾಗ್ತೀವಿ. ಇನ್ನೂ ಒಂದ್ ಮಾತು, ಮುಂದೆ ಹುಟ್ಟೋ ಮಗು ಗಂಡಾದ್ರೆ ಅದಕ್ಕೆ ಭರತ್ ಸೈಯದ್ ಜೋಸೆಫ್ ಅಂತ ಇಡ್ತೀವಿ. ಅದೇ ಹೆಣ್ಣಾದ್ರೆ ಭಾರತಿ ಸೈಯದ್ ಜೋಸೆಫ್ ಅಂತ ಇಡ್ತೀವಿ. ದಯವಿಟ್ಟು ಇದಕ್ಕೆ ಅವಕಾಶ ಮಾಡ್ಕೋಡಿ ಪ್ಲೀಸ್... (ಎಂದ್ಹೇಳಿ ಕೈ ಮುಗಿದರು.)

ಮೀನಾಕ್ಷಿ ಸೈಯದ್ ಮತ್ತು ಸರ್ವೋತ್ತಮ ಜೋಸೆಫ್ ಮದುವೆ ಬಗ್ಗೆ ನಿಮ್ಮ ಒಪ್ಪಿಗೆ ಇದೇನಾ? ಈ ವಿವಾಹದ ಬಗ್ಗೆ ನೀವೇನಂತೀರಿ?

English summary
You may call it humor or satire. But, Meenakshi Syed is getting into wedlock with Sarvotham Joseph shortly. You are all welcome to bless the couple. An unusual love story by Ravindra Kotaki, unusual film director.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X