• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಲಾ ಪರೀಕ್ಷೆಯ ಮಾರ್ಕುಗಳು ಬರೇ ಬೂಸಾ?

By * ಗುರು ಕುಲಕರ್ಣಿ
|

(ಹಿಂದಿನ ಪುಟದಿಂದ...) ನಮ್ಮ ಇನ್ನೊಬ್ಬ ಮಾಸ್ತರರು ಮಾರ್ಕುಗಳ ವಿಷಯದಲ್ಲಿ ಎಷ್ಟು ಲೋಭಿಯಾಗಿದ್ದರೆಂದರೆ ತಾವು ಇಂಟರ್ನಲ್ ಪರೀಕ್ಷೆಗಳ ಪೇಪರುಗಳನ್ನು ಚೆಕ್ ಮಾಡುತ್ತಿದ್ದಾಗ ತಮ್ಮ ಖಾಸಾ ಚೇಲಾನೊಬ್ಬನನ್ನು ಪಕ್ಕಕ್ಕೆ ಕೂಡಿಸಿಕೊಂಡಿರುತ್ತಿದ್ದರು. ಮಾಸ್ತರರ ದೃಷ್ಟಿಗೆ ಬೀಳದ ಮಾರ್ಕುಕಡಿಯುವ ಅವಕಾಶವನ್ನು ಅವರಿಗೆ ತೋರಿಸಿ ಶಭಾಶಗಿರಿ ಪಡೆಯುವುದು ಚೇಲಾನ ಆಫೀಶಿಯಲ್ ಸ್ಟೇಟ್ ಮೆಂಟ್ ಆಫ್ ವರ್ಕ್ ಆಗಿತ್ತು. ಆದರೆ ಆ ಚೇಲಾನೂ ಪಾಕಡಾ ಆಸಾಮಿ ಇದ್ದದ್ದರಿಂದ ತನಗೆ ಬೇಕಾದವರ ಪೇಪರುಗಳಲ್ಲಿನ ತಪ್ಪುಗಳಿಗೆ ಡಿಸ್ಕೌಂಟು ಕೊಟ್ಟು, ತನಗಾಗದವರ ಪೇಪರುಗಳಲ್ಲಿನ ಇಲ್ಲದ ತಪ್ಪು ತೋರಿಸಿ ಮಾರ್ಕು ಕಡಿಸುತ್ತಿದ್ದ. ಹೀಗಾಗಿ ನಾವು ಒಳ್ಳೆ ಇಂಟರ್ನಲ್ ಮಾರ್ಕುಗಳಿಗಾಗಿ ಮಾಸ್ತರರ ಅಷ್ಟೆ ಅಲ್ಲದೇ ಅವರ ಚೇಲಾನದೂ ಮರ್ಜಿ ಕಾಯಬೇಕಾಗುತ್ತಿತ್ತು!

ನಾವು ಹೀಗೆ ಮಾರ್ಕುಗಳಿಗಾಗಿ ಪರದಾಡುತ್ತಿದ್ದಾಗ ನಮ್ಮ ಗೆಳೆಯರ ಬಳಗದಲ್ಲೊಬ್ಬ ವಿಜಯ್ ಎಂಬವನಿದ್ದ. ಅವನು ಪರೀಕ್ಷೆಗಳು - ಮಾರ್ಕುಗಳು - ಪಾಸು - ಫೇಲುಗಳ ಬಗ್ಗೆ ಅಗಾಧ ನಿರ್ಲಿಪ್ತತನ ಬೆಳೆಸಿಕೊಂಡಿದ್ದ. ಉಳಿದೆಲ್ಲ ದಿನಗಳಲ್ಲಿ ಊರ ಉಸಾಬರಿ ಮಾಡುತ್ತ, ಬಾರಾ ಭಾನಗಡಿಗಳಲ್ಲಿ ಭಾಗಿಯಾಗುತ್ತ, ಪರೀಕ್ಷೆ ಬಂದಾಗ ಸರಿಯಾಗಿ ಮೂವತ್ತೈದು ಮಾರ್ಕುಗಳಿಗೆ ತಯಾರಿ ಮಾಡಿಕೊಂಡು ಪರೀಕ್ಷೆ ಬರಿಯುತ್ತಿದ್ದ. ಹೀಗಾಗಿ ಪ್ರತಿ ಸಲವೂ ಒಂದಾದರೂ ವಿಷಯ ಪಾಸಾಗದೇ ಉಳಿಯುತ್ತಿದ್ದ. ಪ್ರತೀ ಫಲಿತಾಂಶದ ನಂತರ ನಾವು ಕೊಡುತ್ತಿದ್ದ ಪಾರ್ಟಿ ಅವನು ಬರುತ್ತಿದ್ದನಾದರೂ ಅವನಿಗೆ ಪಾರ್ಟಿ ಕೊಡುವ ಅವಕಾಶವೇ ಸಿಕ್ಕಿರಲಿಲ್ಲ.

ಕೊನೆಯ ವರ್ಷದ ಪರೀಕ್ಷೆ ನಾವು ಮುಗಿಸಿ ನಮ್ಮ-ನಮ್ಮ ಊರಿಗೆ ಹೋಗುವ ಮೊದಲು ವಿಜಯ್ "ದೋಸ್ತಗಳಾ, ಬರೀ ನಿಮ್ಮದೇ ಪಾರ್ಟಿಲಿ ತಿಂದಿದೀನಿ, ಈ ಸಲ ನಾನು ಪಾರ್ಟಿ ಕೊಡತೇನಿ. ಈ ಸಲನೂ ನೀವು ಚೆನ್ನಾಗಿ ಪಾಸ್ ಆಗ್ತೀರಿ, ಮತ್ತು ನನ್ನವು ಒಂದೆರಡು ವಿಷಯ ಉಳಿತಾವು. ಉಳಿವಲ್ಯಾಕ, ಆದರ ಅಂತೂ-ಇಂತೂ ಈ ಕಾಲೇಜು ಮುಗಿಸಿದೆನಲ್ಲಾ, ಆ ಖುಷಿಲೇ ಪಾರ್ಟಿ" ಎಂದು ಒಂದು ಭರ್ಜರಿ ಪಾರ್ಟಿ ಕೊಟ್ಟಿದ್ದ. ನಾವು ಡಿಗ್ರಿ ಮುಗಿಸಿ ಒಂದೆರಡು ವರುಷದ ನಂತರ ಹಳೇ ಬಾಕಿಯಲ್ಲಾ ತೀರಿಸಿ, ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಹಿಡಿದ ವಿಜಯ ಈಗ ಜಬರ್ ದಸ್ತಾಗಿದ್ದಾನೆ!

ವಿದ್ಯಾರ್ಥಿ ಜೀವನವನ್ನು ಮುಗಿಸಿ, ಗೃಹಸ್ಥ/ ಗ್ರಸ್ತ ಜೀವನದಲ್ಲಿರುವ ನಾನು ಈಗ ನನ್ನ ಮಾರ್ಕುಗಳ ಬಗ್ಗೆ ಚಿಂತಿಸುವ ಹಂತ ದಾಟಿ, ನನ್ನ ಮಗನ ಮಾರ್ಕುಗಳ ಬಗ್ಗೆ ಚಿಂತಿಸುವ ಹಂತಕ್ಕೆ ಬಂದಿದ್ದೇನೆ. ನಾನು ಕೂಡ ಆಗಾಗ ದಾರ್ಶನಿಕವಾಗಿ ವಿಜಯನಂತೆ ವಿಚಾರ ಮಾಡುತ್ತೇನೆ - ಅಗಾಧವಾದ, ಅನಂತವಾದ ದೇಶ-ಕಾಲಗಳ ಲೆಕ್ಕದಲ್ಲಿ ಕ್ಷುಲ್ಲಕವಾದ ಯಾವುದೋ ಒಂದು ಪರೀಕ್ಷೆಯ ಅಂಕಗಳ ಬಗ್ಗೆ ನಾವು ಚಿಂತಿಸಬೇಕಾ? ಲೋಭ ಪಡಬೇಕಾ? ಹೆಮ್ಮೆ ಇಲ್ಲವೇ ಅವಮಾನ ಪಡಬೇಕಾ? 'ಜೀವನ ಯೋಗ ಧರ್ಮ' ದಯಪಾಲಿಸಿದ ಕವಿ ಡಿವಿಜಿ ಹತ್ತನೇ ಇಯತ್ತೆಯನ್ನೂ ಪಾಸಾಗಿರಲಿಲ್ಲವಲ್ಲ? 'ಕಡಲ ತೀರದ ಭಾರ್ಗವ' ಕಾರಂತರು ಡಿಗ್ರಿಯನ್ನೇ ಪಾಸಾಗಿರಲಿಲ್ಲವಲ್ಲ? ಇನ್ನೇನು 'ಶಾಲಾ ಪರೀಕ್ಷೆಯ ಮಾರ್ಕುಗಳು ಬೂಸಾ' ಎಂಬ ಸಿದ್ಧಾಂತಕ್ಕೆ ಬರೋಣವೆನ್ನುವಷ್ಟರಲ್ಲಿ 'ಕನ್ನಡದ ಆಸ್ತಿ' ಮಾಸ್ತಿ ನೆನಪಾಗುತ್ತಾರೆ. ಪರೀಕ್ಷೆಗಳಲ್ಲಿ ಕೈತುಂಬ ಮಾರ್ಕು ಪಡೆದು, ಒಳ್ಳೆಯ ಕೆಲಸವನ್ನು ಪಡೆದು, ಪರೋಪಕಾರಿಯಾಗಿ ಬಾಳಿ, ತುಂಬು 'ಜೀವನ' ನಡೆಸಿದ ಮಾಸ್ತಿಯವರನ್ನು ನೆನಸಿಕೊಂಡು ನನ್ನ ಸಿದ್ಧಾಂತವನ್ನು ಒಂಚೂರು ಬದಲಿಸಿಕೊಳ್ಳುತ್ತೇನೆ 'ಜೀವನದ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡೋದು ಮುಖ್ಯ, ಅದರ ಜೊತೆಗೆ ಶೈಕ್ಷಣಿಕ ಪರೀಕ್ಷೆಗಳಲ್ಲೂ ಚೆನ್ನಾಗಿ ಮಾಡಿದರೆ ಇನ್ನೂ ಒಳ್ಳೆಯದು..'

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Few decades earlier school teachers would find various methods and theories to gauge the students and give them marks. Few of them were really funny. Guru Kulkarni from Bangalore recalls his good old days in school and college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more