ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಕೋ ಬೇಜಾರು, ನಾಣಿ ತರ ರಿಟೈರ್ ಆಗಿಬಿಡ್ಲಾ

By * ಪಕ್ಷಿರಾಜ ಟೊಂಕಬಾಜ, ಬೆಂಗಳೂರು
|
Google Oneindia Kannada News

Chain smoker Govindappa
ಅಂಗೆ ಮುಂದೆ ಚಾಮರಾಜ ಪೇಟೆ ಕಡೆ ಬಂದೆ. ಒಬ್ಬರು ಗೋವಿಂದಪ್ಪನ ತರದ ಬುದ್ಧಿಜೀವಿ ಸಿಗರೇಟು ಸೇದ್ತಾ ನಿಂತಿದ್ರು. ನಾನು 'ನಮಸ್ಕಾರ ಸಾ... ನಿಮ್ಮ ಅಭಿಪ್ರಾಯ ಬೇಕು' ಅಂತ ಪೀಠಿಕೆ ಹಾಕ್ದೆ. ಸಡನ್ನಾಗಿ ರಾಂಗಾಗಿ ಅವರು 'ಏನ್ರಿ ಇದು ಹೊಸ ವಿವಾದ ನಾವಿನ್ನ ಆ 'ಭೀಮವ್ವನ ತೇರು' ವಿವಾದದಿಂದಲೇ ಇನ್ನೂ ಹೊರ ಬಂದಿಲ್ಲ. ಆ ಕೆ'ಟ್ಟ'ವರ ಮತ್ತು ಎಲ್ಲಾ 'ಬಿ'ಟ್ಟವರ ವಾದ ವಿವಾದ ಕೇಳಿಯೇ, ಟಿವಿ ನೋಡಿಯೇ ತಲೆ ಚಿಟ್ಟು ಹಿಡ್ದು ಹೋಗಿದೆ... ಈಗ್ಯಾಕ್ರಿ ಮತ್ತೆ ಹೊಸ ವಿವಾದ...' ಅಂದ್ರು ಸ್ಟೈಲಾಗಿ ಸಿಗರೇಟು ಹೊಗೆ ಬಿಡುತ್ತಾ.

ನಾನು 'ಅದು ಅಂಗಲ್ಲ ಸಾ... ಇದು ನಿರ್ಮಾಪಕರ, ಇಬ್ಬರು ಅನ್ನದಾತರ ಪ್ರಶ್ನೆ. ಸ್ವಲ್ಪ ಯೋಚ್ನೆ ಮಾಡಿ ಅಭಿಪ್ರಾಯ ಹೇಳಿ’ ಅಂತ ದೈನ್ಯದಿಂದ ಅಂದೆ. ಮುನಿರತ್ನ ಅಥವಾ ಕೊಬ್ರಿ ಮಂಜು ಏನರ ನನ್ನ ಅವಾಗ ನೋಡಿದ್ರೆ ಮುಂದಿನ ಸಿನಿಮಾದಾಗೆ ಒಂದು ಪಾಲ್ಟ್ ಕೊಟ್ಟಿರೋರು.

ಅವ್ರು ಶ್ಯಾನೆ ಯೋಚ್ನೆ ಮಾಡಿ 'ನೋಡಿ ಇದಕ್ಕೆಲ್ಲ ಈ ಬಿಜೆಪಿ ಸರ್ಕಾರನೇ ಕಾರಣ... ಜಾತ್ಯಾತೀತ ಶಕ್ತಿಗಳು ಒಂದಾಗಿ ಎಲ್ಲಾ ಹೋರಾಡಬೇಕು... ಅವ ಕಳ್ಳ ಸ್ವಾಮೀ... ದೇಶದ್ರೋಹಿ ಅವ್ನ ಒಳಗೆ ಹಾಕಿ... ನಕ್ಸಲೈಟ್ ಹೋರಾಟ ತಪ್ಪಲ್ಲ. ಬಾಬಾ ಬುಡಾನ್ ಗಿರಿನ ರಾಷ್ಟ್ರೀಯ ಸ್ಮಾರಕ ಮಾಡಿ' ಅಂತ ಅರಚಾಡಕ್ಕೆ ಶುರುವಿಟ್ಟುಕೊಂಡ್ರು. ಯೋ... ಇದ್ಯಾಕೋ ಗೋವಿಂದಪ್ಪನ ತರದ ಕೇಸು, ಏನು ಕೇಳಿದ್ರು, ಎಲ್ಲಿ ಕರದ್ರು.. ಬಂದು ಅದೇ ರೆಕಾಲ್ಡ್ ಹಾಡ್ತದೆ ಅಂತ ಅಲ್ಲಿಂದ ಟನ್ ಅಂತ ಕಂಬಿಕಿತ್ತೆ.

***
ಈ ಅಭಿಪ್ರಾಯ ಸಂಗ್ರಹಣೆ ಜಂಜಾಟದಲ್ಲಿ... ಯಾಕೋ ಬಲೇ ಬೇಜಾರಾಗಿ ಎಸ್.ನಾಣಿ ತರ ರಿಟೈರ್ ಅಗಿಬಿಡ್ಲಾ? ಶಾಮಣ್ಣಂಗೆ ರಾಜೀನಾಮೆ ವಗಾಯಿಸಿಬಿಡ್ಲ? ಅಂತ ಯೋಚನೆ ಮಾಡ್ದೆ... ಆದ್ರೆ ಎಸ್.ನಾಣಿ ತರಾನೆ ನನ್ನೂ ಯಾರೂ ನಂಬಕಿಲ್ಲ ಅಂತ ನೆನಪಾಗಿ ಇನ್ನೂ ವಸಿ ಜಾಸ್ತಿನೇ ಬೇಜಾರಾಯ್ತು. ಎಲ್ಲಾ ಏನಾರ ಹಾಳಾಗಿ ಹೋಗ್ಲಿ... ಬೇರೆ ಊರಲ್ಲಿ ಟ್ರೈ ಮಾಡಾನ ಅಂತ ಉತ್ತರ ಕರ್ನಾಟಕದ ಬಸ್ ಹತ್ತಿದೆ. ಯಾರ್ ಕೈ ಬಿಟ್ರು ಅವರು ನನ್ನ ಕೈ ಬಿಡಕಿಲ್ಲಂತ, ಯಡಿಯೂರಪ್ಪನ ತರ ನಾನು ನಂಬ್ತೀನಿ. ರಾತ್ರಿ ಬಸ್ ಹತ್ತಿ, ಬೆಳಗ್ಗೆ ಉತ್ತರ ಕರ್ನಾಟಕದಲ್ಲಿ ಇಳ್ದೆ. ಯಾಕೋ ಟೈಮ್ ಮಷಿನ್ನಲ್ಲಿ ಕೂತು ನೂರು ವರ್ಷ ಹಿಂದಕ್ಕೆ ಹೋದಂಗೆ ಆಯ್ತು.

ಎಲ್ಲಾ ಕಡೆ ಬರ. ಎಲ್ಲೂ ತ್ವಟ್ಟೂ ಮಳೆ ಇಲ್ಲ. ಅಭಿವೃದ್ಧಿ ಗಂಧನೆ ಇಲ್ಲ. ಕೆಲ ರೈತರು ದುಂಡುಗೆ ಕೂತು ಸಣ್ಣ ದನೀಲಿ ಮಾತಾಡ್ತಾಯಿದ್ರು. ನನ್ನ ನೋಡಿ ಯಾರೋ ಗೊರಮೆಂಟ್ ಆಪೀಸರ್ ಬರ ಪರಿಹಾರ ಕೊಡಕೆ ಬಂದವ್ರೆ ಅಂದ್ಕೊಂಡು ಓಡೋಡಿ ಬಂದ್ರು. ಪತ್ರಕರ್ತ ಯಾವುದೋ ಸಿನಿಮಾ ಬಗ್ಗೆ ಕೇಳಕ್ಕೆ ಬಂದವನೇ ಅಂತ ಗೊತ್ತಾದ ಮೇಲೆ ಕ್ಯಾಕರ್ಸಿ ಉಗುದು ಹೊಂಟೋದ್ರು.

ಹಂಗೆ ಮುಂದೆ ಹೋದೆ, ಇನ್ನೊಂದಿಷ್ಟು ಜನ ಊರಕಟ್ಟೆ ಮೇಲೆ ಹರಟ್ತಾಯಿದ್ರು. ನಾನು ನಗುನಗುತಾ ನನ್ನ 'ಅದಾ' ತೋರಿಸುತ್ತ 'ಸದಾ' ತರ ಅವರ ಹತ್ರ ಹೋದೆ. 'ಏನ್ ಸಾಮಿ ಬರ ಬಡ್ದಿರೋ ಊರ್ಗೆ ಬಂದ್ರು ಅಂಗೆ ಹಲ್ ಬಿಡ್ತೀರ... ಸ್ವಲ್ಪನೂ ಮನುಷತ್ವ ಇಲ್ವ್ರ' ಅಂತ ಒಬ್ಬ ಮುದುಕ ಅಮರ್ಕೊಂಡ. ಅಂಗೆ 'ಯಡ್ಡಿನ ಮದುವೆ ಮನಿಗೆ ಕರಿ ಬಾರ್ದು... ಸದಾನ ಸತ್ತೋರ್ ಮನೆಗೆ ಕರಿ ಬಾರ್ದು' ಅಂತ ಇತ್ತೀಚಿಗೆ ಹುಟ್ಟಿರೋ ಹೊಸ ಗಾದೆ ನೆನಪಾಯ್ತು. ನಾನು 'ನೋಡ್ರಪ್ಪ ನನ್ ಮಾರಿ ಇರೋದೆ ಅಂಗೆ, ಸ್ವಲ್ಪ ಮಾನಿಫೆಕ್ಚರಿಂಗ್ ಡಿಫೆಕ್ಟ್... ತಪ್ಪು ತಿಳಿಬ್ಯಾಡಿ ಕಣ್ರಪ್ಪ’ ಅಂತ ಅಂದೆ.

ಅಮೇಕೆ ಮುದುಕಪ್ಪ ಬರದ, ತನ್ನ ಹಳ್ಳಿಯ ಕಷ್ಟ ಹೇಳ್ಕೊಂಡ, ಕಣ್ಣೀರ್ ಹಾಕ್ದ. ನಂಗೂ ಕಣ್ಣೀರ್ ಬಂತು. ಬಲೇ ಬೇಜಾರಾಗಿ ಸಿನಿಮಾ ಅಭಿಪ್ರಾಯ ಕೇಳದೆ ಮರ್ತು ಬೆಂಗಳೂರಿಗೆ ವಾಪಸ್ ಬಂದುಬಿಟ್ಟೆ. ‘ಹನುಮಂತಪ್ಪ ಹಗ್ಗ ಕಡಿತಿದ್ರೆ... ಪೂಜಾರಿ ಶಾವಿಗೆ ಬೇಡಿದಂತೆ...’ ‘ನಾಡಿಗೆ ಬರ ಬಡ್ಕೊಂಡಿದ್ರೆ... ಯಾರೋ ಟಿ.ವಿ.ಲಿ ಬ್ಲೂ ಫಿಲಂ ತೋರ್ಸಿದರಂತೆ...’ ಅಂಗಿತ್ತು ನನ್ನ ಸಿನಿಮಾ ಅಭಿಪ್ರಾಯ ಸಂಗ್ರಹ.

ಯಾಕೋ ನನ್ನ ಮತ್ತೆ ನಮ್ಮ ಸುವರ್ಣ ಕರ್ನಾಟಕದ ಹಣೆಬರಹವೇ ಸರಿ ಇಲ್ಲ ಅಂತ ಅನಸ್ತು. ಬೆಂಗಳೂರಿಗೆ ಬಂದವನೇ ಸಿನಿಮಾ ರಿಪೋರ್ಟ್ ಬಿಟ್ಟು ಉತ್ತರ ಕರ್ನಾಟಕದ ಬರದ ರಿಪೋರ್ಟ್ ಬರ್ದುಬಿಟ್ಟೆ. ಶಾಮಣ್ಣ ಏನ್ ಅಂತಾರೋ... ರಿಪೋರ್ಟ್ ಓದಿ ಶಾಮಣ್ಣ ಮೂಗಿನ ಮೇಲಿಂದ ಕನ್ನಡಕ ಮೇಲೆ ಏರ್ಸ್ತಾರ... ಗಡ್ಡ ನೀವ್ಕೋತಾರ... ಊಹುಂ ಗೊತ್ತಿಲ್ಲ! ಇನ್ನು ಕಾಯ್ತಾನೆ ಇವ್ನಿ...

English summary
Three Kannada movies were fighting with each other for early release when whole Karnataka was reeling under drought. Our editor asked to get opinion of movie buffs on film releases. What happened next? Humor by Pakshiraja Tonkabaja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X