ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾರಿಪುರ ಹರಿಹರೇಶ್ವರ ಕವನ ಎಂದು?

By ಶಿಕಾರಿಪುರ ಹರಿಹರೇಶ್ವರ
|
Google Oneindia Kannada News

ನಾನು ಸೆಲ್ಫ್‌-ಸ್ಟಾರ್ಟರ್‌ ಆಗುವುದು ಯಾವಾಗ?
ಕುದುರೆಯ ಕಸಿನ್‌ಗೆ ಆದಷ್ಟು ವಯಸ್ಸು ಆಯ್ತಲ್ಲ ;
ಹುಟ್ಟಿ ಬೆಳೆದ ನಾಡಿನ ಹಂಗಿನಲ್ಲಿ
ಸಾವಿರಾರು ಡಾಲರು ಸಮಾ ಖರ್ಚಿನಲ್ಲಿ
ದಿನನಿಶಿ ಅವಿರತ ಶ್ರಮದ ಹಣ್ಣ ತಿರುಳು ಅಂಗೈನೆಲ್ಲಿ
ಅನುಭವದ ಸೊಂಪಾದ ಬೆಳೆ, ಕಳೆ- ಇದ್ದೂ
ಹೊತ್ತ ಪರಿಮಳವ ಅರಿಯದ ಹುಂಬ
ಸ್ವಾರಂಭಿಯಾಗುವುದು ಯಾವಾಗ?
ಅನುಗಾಲ ಎಕ್ಸ್‌ಟೆನ್ಷನ್‌ ಕಾರ್ಡನ್ನೇ ನೆಚ್ಚಿ
ಲಘು-ಕಂಪನಕ್ಕೂ ಬೆಚ್ಚಿ
ಕುಳಿ-ತ ಪರಪುಟ್ಟ , ಮೈಮರೆತವನೆ ಕೊಡವಿ,
'ನಾವು ಸಮ ನಿಮಗೆ’- ಎಂದು ಮೆರೆವುದೆಂದು?

ಅವಕಾಶಗಳ ಸ್ವರ್ಗ ಹೊಕ್ಕರೂ
ತಲೆಯಿದ್ದರೇ ಉಳಿವು ;
ಚುರುಕಾಗಿರಬೇಕು ಗುರೂ, ನಾನಾಗ ಬೇಡವೆ ಕಣದಲ್ಲಿ ಮಲ್ಲ ;
'ಮೇಲೆ ಮಹಡಿಯಲ್ಲಿ ಬೆಳ್ಳಿ ಕೋಲು ಆಡಿದೆ’-
ಯೆಂದು ಖಂಡಿತಾ ಇಲ್ಲ ,
ಕೆಂಪು ನೆಲಗಂಬಳಿ ಹಾಸುವುದಿಲ್ಲ ;
ಇಲ್ಲಿ , ಸುತ್ತ ಗಮನಿಸುತ್ತ ,
ಕ್ರಿಟಿಕಲ್‌ ಪಾಥ್‌ ಚಾರ್ಟನ್ನು ದಿನವೂ ಪರಿಷ್ಕರಿಸುತ್ತ,
ನನ್ನ ಥರ್ಮೋಸ್ಟಾಟನ್ನ ನಾನೇ ಹೂಡಿ,
ಪಂದ್ಯದಲ್ಲಿ ತೊಡಗಬೇಕು,
ಗೆಲ್ಲುವ ಗುರಿ ಬೇಕು, ಹಂಬಲ ಬೇಕು, ಛಲ ಬೇಕು,
ನನ್ನಲ್ಲಿ ನನಗೆ ನಂಬಿಕೆ ತುಂಬಿ ತುಳುಕತಲಿ ಇರಲೇಬೇಕು!

English summary
A poem by S.K. Harihareshwara about self Confidence
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X