ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಗತಿ ಪ್ರಾಪ್ತಿಗಾಗಿ ವಿಷ್ಣುಸಹಸ್ರನಾಮ ಪಠನೆ

By Super Admin
|
Google Oneindia Kannada News

ಇದೇ ಅಂಕಣದಲ್ಲಿ ವಿಷ್ಣುಸಹಸ್ರನಾಮ ಕುರಿತಂತೆ ಪ್ರಕಟವಾದ ಲೇಖನಕ್ಕೆ ಪ್ರತಿಯಾಗಿ ಅನೇಕರು ಯಾವ ಸಂಕಷ್ಟ ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕೆಂದು ಕೋರಿದ್ದರು. ಇಲ್ಲಿ ಜನ್ಮನಕ್ಷತ್ರಕ್ಕನುಗುಣವಾಗಿ ಸಂಪೂರ್ಣ ಕೋಷ್ಟಕ ನೀಡಲಾಗಿದೆ. ವಿಷ್ಣುಸಹಸ್ರನಾಮದ 108 ಶ್ಲೋಕಗಳಲ್ಲಿ ಪ್ರಯೊಬ್ಬರ ಜನ್ಮ ನಕ್ಷತ್ರ ಹಾಗೂ ಪಾದಕ್ಕೂ ಅನುಗುಣವಾಗಿ ಪಠಿಸಲು ಒಂದು ಶ್ಲೋಕವಿದೆ.

* ಡಾ| ಜೀವಿ ಕುಲಕರ್ಣಿ, ಮುಂಬಯಿ

ವಿಷ್ಣುಸಹಸ್ರನಾಮ ಸ್ತೋತ್ರ ಪ್ರತಿನಿತ್ಯ ಪಾರಾಯಣಕ್ಕೆ ಶ್ರೇಷ್ಠವಾದುದು ಇದರಲ್ಲಿ ಸಂಶಯವೇ ಇಲ್ಲ. ತ್ರಿಮತಾಚಾರ್ಯರು (ಶಂಕರ-ರಾಮಾನುಜ-ಮಧ್ವರು) ಇದರ ಹಿರಿಮೆಯನ್ನು ಕೊಂಡಾಡಿದ್ದಾರೆ. ಮಹಾಭಾರತದ ಅನುಶಾಸನ ಪರ್ವದಲ್ಲಿ 149ನೆಯ ಅಧ್ಯಾಯದಲ್ಲಿ ವಿಷ್ಣುಸಹಸ್ರನಾಮದ ಉಲ್ಲೇಖವಿದೆ. ಮಹಾಭಾರತ ಯುದ್ಧ ಸಮಾಪ್ತಿಗೊಂಡ ಮೇಲೆ ಶರಶೈಯ್ಯೆಯಲ್ಲಿ ಮಲಗಿದ ಭೀಷ್ಮ ಪಿತಾಮಹರನ್ನು ಕಾಣಲು ಯುಧಿಷ್ಠಿರನು ಬರುತ್ತಾನೆ. ಪರಮ ಈಶ್ವರನು ಯಾರು, ಯಾರಿಗೆ ಶರಣು ಹೋಗುವುದರಿಂದ, ಯಾರ ಗುಣಗಾನ ಮಾಡುವುದರಿಂದ ನಮಗೆ ಪರಮಗತಿ ಪ್ರಾಪ್ತವಾಗುವುದು? ಎಂದು ಕೇಳಿದಾಗ, ಉತ್ತರರೂಪಿಯಾಗಿ ಭೀಷ್ಮರು ವಿಷ್ಣುಸಹಸ್ರನಾಮವನ್ನು ಧರ್ಮರಾಜನಿಗೆ ಬೋಧಿಸುತ್ತಾರೆ. ಆಗ ಲೋಕಗುರುವಾದ ಶ್ರೀಕೃಷ್ಣ ಎದುರುಗೆ ಉಪಸ್ಥಿತನಿದ್ದ. ಆದ್ದರಿಂದ ಈ ಸ್ತೋತ್ರಕ್ಕೆ ಹೆಚ್ಚಿನ ಮಹತ್ವ ಬಂದಿದೆ.

vishnusahasranama

ಇದರಲ್ಲಿ ಮೂರು ಭಾಗಗಳಿವೆ. 1) ಪೂರ್ವಭಾಗ 2) ಸಹಸ್ರನಾಮಾವಳಿ 3) ಉತ್ತರಭಾಗ(ಫಲಶ್ರುತಿ). ಎಲ್ಲವನ್ನೂ ಪಠಿಸಬೇಕು. ಮೂರನೆಯ ಭಾಗದಲ್ಲಿ ಪಾರ್ವತಿಯು ಕೇಳುತ್ತಾಳೆ, ವಿಷ್ಣುಸಹಸ್ರನಾಮವನ್ನು ಲಘುವಾಗಿ ಪಠಿಸಲು ಉಪಾಯವಿದೆಯೇ? ಎಂದು, ಆಗ ಈಶ್ವರ ಉತ್ತರಿಸುತ್ತಾನೆ, ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ|| ಎಂದು. ಹೆಚ್ಚಿನ ಜನ ಇದನ್ನೇ ಪಠಿಸುತ್ತ ಬಂದಿದ್ದಾರೆ. ಆದರೆ ಪ್ರತಿಯೊಬ್ಬರೂ ತಮ್ಮ ಜನ್ಮ ನಕ್ಷತ್ರದ ಪ್ರಕಾರ ಒಂದು ಶ್ಲೋಕ ಪಠಿಸಬಹುದು ಎಂಬ ಸಂಗತಿ ಹೊಸತು. ಇದರ ಲಾಭವನ್ನು ಅನೇಕರು ಪಡೆದಿದ್ದಾರೆ.

ಜನ್ಮ ನಕ್ಷತ್ರ ಹಾಗು ಪಾದದ ಪ್ರಕಾರ ಪಠಿಸಬೇಕಾದ ಶ್ಲೋಕಗಳ ಕೋಷ್ಟಕ

ಅಶ್ವಿನಿಯಿಂದ ಹಿಡಿದು ರೇವತಿಯ ವರೆಗೆ 27 ನಕ್ಷತ್ರಗಳಿವೆ. ಪ್ರತಿ ನಕ್ಷತ್ರದಲ್ಲಿ 4 ಪಾದ(ಚರಣ)ಗಳು ಇವೆ. ನಕ್ಷತ್ರಗಳ ಸಂಖ್ಯೆಯಿಂದ ಪಾದಗಳ ಸಂಖ್ಯೆ ಗುಣಿಸಿದರೆ 108 ಬರುತ್ತದೆ. ಪ್ರತಿಯೊಬ್ಬರ ಜನ್ಮ ಕಾಲಕ್ಕೆ ಒಂದು ನಕ್ಷತ್ರ ಇರುತ್ತದೆ. ಜನನ ಸಮಯಕ್ಕೆ ಅನುಗುಣವಾಗಿ ಜನ್ಮನಾಮವು ನಾಲ್ಕರಲ್ಲಿ ಒಂದು ಪಾದವನ್ನು ಅನುಸರಿಸಿ ಇರುತ್ತದೆ. ಶ್ರೀ ವಿಷ್ಣುಸಹಸ್ರನಾಮದ ಒಂದು ಶ್ಲೋಕ ಪ್ರತಿಯೊಬ್ಬರ ಜನ್ಮ ನಕ್ಷತ್ರದ (ಪಾದದ)ಅನುಗುಣವಾಗಿ ಇರುತ್ತದೆ. ಅದನ್ನು ಕಂಡು ಹಿಡಿದು ಪ್ರತಿ ದಿನ ಹನ್ನೊಂದು ಸಲ ಆ ಶ್ಲೋಕವನ್ನು ಪಠಿಸಿದರೆ ಆ ವ್ಯಕ್ತಿಗೆ ವಿಶೇಷ ಲಾಭವಾಗುತ್ತದೆ. ಯಾವುದೇ ವ್ಯಕ್ತಿಗೆ ನಕ್ಷತ್ರ ಮಾತ್ರ ಗೊತ್ತಿದ್ದು ಪಾದ ಗೊತ್ತಿಲ್ಲದಿದ್ದರೆ ಅವನು ನಾಲ್ಕೂ ಶ್ಲೋಕಗಳನ್ನು ಪಠಿಸಬಹುದು. ವಿಷ್ಣುಸಹಸ್ರನಾಮದ ಯಾವ ಶ್ಲೋಕವನ್ನು ಪಠಿಸಬೇಕು ಎಂಬುದನ್ನು ಕೆಳಗೆ ಜನ್ಮನಾಮದ ಮೊದಲ ಅಕ್ಷರದ ನಂತರ ಕೊಡಲಾಗಿದೆ. ಮಕ್ಕಳಿಗಾಗಿ ಪಾಲಕರು ಅವರ ಜನ್ಮನಾಮಕ್ಕೆ ಅನುಗುಣವಾದ ಶ್ಲೋಕವನ್ನು ಪಠಿಸಬಹುದು.

ಉದಾ: ರೇವತಿ ನಕ್ಷತ್ರದ 1ನೆಯ ಪಾದ ಚು *(1)ನೆಯ ಶ್ಲೋಕ, ಚಿತ್ರಾ ನಕ್ಷತ್ರದ 2ನೆಯ ಪಾದ ಪೊ *(54)ನೆಯ ಶ್ಲೋಕ, ರೇವತಿ 4ನೆಯ ಪಾದ ಚಿ*(108)ನೆಯ ಶ್ಲೋಕ. ಕೆಲವು ಪುಸ್ತಕಗಳಲ್ಲಿ 107 ಶ್ಲೋಕ ಕಂಡುಬಂದರೆ ಫಲಶ್ರುತಿಯಲ್ಲಿ ಬರುವ ವನಮಾಲೀ ಗದೀ... ಎಂಬ ಶ್ಲೋಕವನ್ನು 108ನೆಯ ಶ್ಲೋಕವೆಂದು ಪರಿಗಣಿಸಬೇಕು.

ನಕ್ಷತ್ರದ ಹೆಸರು ಪಾದ 1 ಪಾದ 2 ಪಾದ 3 ಪಾದ 4
1 ಅಶ್ವಿನಿ ಚು *(1) ಚೆ *(2) ಚೊ *(3) ಲಾ *(4)
2 ಭರಣಿ ಲೀ *(5) ಲೂ *(6) ಲೆ *(7) ಲೋ *(8)
3 ಕೃತಿಕಾ ಅ *(9) ಈ *(10) ಊ *(11) ಎ *(12)
4 ರೋಹಿಣಿ ಒ *(13) ವಾ *(14) ವಿ *(15) ವೂ *(16)
5 ಮೃಗಶಿರಾ ವೆ *(17) ವೊ *(18) ಕಾ *(19) ಕೀ *(20)
6 ಆರ್ದ್ರಾ ಕು *(21) ಘ *(22) ಙ *(23) ಛ *(24)
7 ಪುನರ್ವಸು ಕೆ *(25) ಕೊ *(26) ಹಾ *(27) ಹಿ *(28)
8 ಪುಷ್ಯ ಹು *(29) ಹೆ *(30) ಹೊ*(31) ಡ *(32)
9 ಆಶ್ಲೇಷಾ ಡಿ *(33) ಡೂ *(34) ಡೆ *(35) ಡೊ*(36)
10 ಮಘಾ ಮಾ *(37) ಮಿ *(38) ಮೂ *(39) ಮೆ *(40)
11 ಪೂರ್ವಾಫಾಲ್ಗುಣಿ ಮೊ *(41) ಟಾ *(42) ಟೀ *(43) ಟೂ *(44)
12 ಉತ್ತರಾ ಟೆ *(45) ಟೊ *(46) ಪಾ *(47) ಪೀ *(48)
13 ಹಸ್ತಾ ಪೂ *(49) ಷ *(50) ಣ *(51) ಠ *(52)
14 ಚಿತ್ತಾ ಪೆ *(53) ಪೊ *(54) ರಾ *(55) ರಿ *(56)
15 ಸ್ವಾತಿ ರು *(57) ರೆ *(58) ರೋ *(59) ತಾ *(60)
16 ವಿಶಾಖಾ ತೀ *(61) ತೂ *(62) ತೆ *(63) ತೋ *(64)
17 ಅನುರಾಧಾ ನಾ *(65) ನೀ *(66) ನೂ *(67) ನೆ *(68)
18 ಜೇಷ್ಠಾ ನೋ *(69) ಯಾ *(70) ಯೀ *(71) ಯೂ *(72)
19 ಮೂಲಾ ಯೆ *(73) ಯೂ *(74) ಭಾ *(75) ಭೀ *(76)
20 ಪೂರ್ವಾಷಾಢಾ ಭೂ *(77) ಧಾ *(78) ಫಾ *(79) ಢಾ *(80)
21 ಉತ್ತರಾಷಾಢಾ ಭೆ *(81) ಭೊ *(82) ಜಾ *(83) ಜೀ *(84)
22 ಶ್ರವಣಾ ಖಿ *(85) ಖೂ *(86) ಖೆ *(87) ಖೊ *(88)
23 ಧನಿಷ್ಠಾ ಗಾ *(89) ಗೀ *(90) ಗು *(91) ಗೆ *(92)
24 ಶತತಾರಕ ಗೊ *(93) ಸಾ *(94) ಸಿ *(95) ಸೂ *(96)
25 ಪೂರ್ವಾಭಾದ್ರಪದಾ ಸೇ *(97) ಸೋ *(98) ದಾ *(99) ದೀ *(100)
26 ಉತ್ತರಾಭಾದ್ರಪದಾ ದೂ *(101) ಥ *(102) ಝ *(103) ಜ *(104)
27 ರೇವತಿ ದೆ *(105) ದೋ *(106) ಚ *(107) ಚೀ *(108)

* ವಿಷ್ಣುಸಹಸ್ರನಾಮ ಶ್ಲೋಕ ನಂ.
ದೆ, ದೋ : ಇವು ಜನ್ಮನಾಮದ ಮೊದಲ ಪದ.

ಹಿಂದೂ ನಾಮಗಳು:

ಮಗು ಜನಿಸಿದಾಗ ಹೆಸರು ಇಡುವುದು ಒಂದು ಸಂಸ್ಕಾರ. ಅದುವೆ ಷೋಡಶ ಸಂಸ್ಕಾರಗಳಲ್ಲಿ ಒಂದಾದ ನಾಮಕರಣ. ಒಬ್ಬನಿಗೆ ಐದು ಹೆಸರುಗಳನ್ನು ಇಡಲಾಗುತ್ತದೆ. ಅದರಲ್ಲಿ ಒಂದನ್ನು ವ್ಯವಹಾರದಲ್ಲಿ ಬಳಸಲಾಗುತ್ತದೆ. ವಂಶದ ಹೆಸರು, ಅಜ್ಜನ ಹೆಸರು, ಗೋತ್ರದ ಹೆಸರು, ಪ್ರೀತಿಯಿಂದ ಕರೆಯುವ ಹೆಸರು ಮತ್ತು ಜನ್ಮನಾಮ. ಜನ್ಮನಾಮದ ಒಂದನೇ ಅಕ್ಷರ ನಕ್ಷತ್ರದ ಪಾದಕ್ಕೆ ಅನುಗುಣವಾಗಿ ಇರುತ್ತದೆ. ಎಲ್ಲ ಜನ್ಮನಾಮಗಳ ಅಕ್ಷರಗಳನ್ನು ಬೆಳೆಸಿ ಹೆಸರು ಇಡಲು ಬರುವದು. ಉದಾ: ಸ್ವಾತಿಯ ಮೂರನೆಯ ಪಾದ ರೋ ಇದೆ. ರೋಹಿತ್/ ರೋಹಿಣಿ ಎಂದು ಹೆಸರಿಡಬಹುದು. ಆದರೆ ಈ ಅನುಕೂಲತೆ ಎ ಜನ್ಮನಾಮಗಳಿಗೆ ಇಲ್ಲ.

English summary
Chant vishnusahasranama for a healthy life. Complete chart is provided by thatskannada columnist GV Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X