• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಕ್ಕೊಂದು ಬಾಳೆಹಣ್ಣು ಸೇವಿಸಿ ಆರೋಗ್ಯದಿಂದಿರಿ

By Staff
|
ಎಪಲ್ ಎ ಡೇ ಕೀಪ್ಸ್ ಡಾಕ್ಟರ್ ಅವೇ' (Apple a day keeps doctor away) ಎನ್ನಲಾಗುತ್ತದೆ. ಆದರೆ ಅದರ ಸ್ಥಾನವನ್ನು ಬಾಳೆಹಣ್ಣು ಆಕ್ರಮಿಸುತ್ತಿದೆ. ಬನಾನಾ ಅ ಡೇ ಕೀಪ್ಸ್ ಡಾಕ್ಟರ್ ಅವೇ' ಎನ್ನುವ ಕಾಲ ಸನ್ನಿಹಿತವಾಗಿದೆ. ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಹಣ್ಣೇ ಕಾರಣ ಎನ್ನಲಾಗಿದೆ. ಇದನ್ನು ಮಾನವರು ಆದಷ್ಟು ಬೇಗನೆ ತಿಳಿದುಕೊಂಡರೆ ಒಳಿತು!

* ಡಾ| ಜೀವಿ' ಕುಲಕರ್ಣಿ, ಮುಂಬಯಿ

ಎಲ್ಲ ಹಬ್ಬಗಳಲ್ಲಿ ಆದ್ಯತೆಯನ್ನು ಪಡೆಯುವ, ಸರ್ವಋತುಗಳಲ್ಲೂ ಲಭ್ಯವಾದ ಫಲ ಎಂದರೆ ಬಾಳೆಹಣ್ಣು. ಈ ಹಣ್ಣು ಸಾಮಾನ್ಯವಾಗಿದ್ದರೂ ಅದರ ಗುಣಗಳು ಅಸಾಮಾನ್ಯವಾಗಿವೆ. ಕದಳೀ ವೃಕ್ಷದ ಎಲ್ಲ ಭಾಗಗಳೂ ಉಪಯುಕ್ತವಾಗಿವೆ. ಬಾಳೆಯ ಎಲೆ ಊಟಕ್ಕೆ ಶ್ರೇಷ್ಠವಾದರೆ ಅದರ ದಿಂಡು, ಹೂವು, ಕಾಯಿಯನ್ನು ಕೂಡ ತರಕಾರಿಯಂತೆ ಬಳಸಬಹುದಾಗಿದೆ. ಜನಸಾಮಾನ್ಯರಲ್ಲಿ ಬಾಳೆಯ ಹಣ್ಣಿನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಕೆಲವರು ಇದರ ಸೇವನೆಯಿಮ್ದ ತೂಕ ಹೆಚ್ಚಾಗುತ್ತದೆ ಎಂದರೆ. ಕೆಲವರು ಇದರಿಂದ ಮಲಬದ್ಧತೆ ಉಂಟಾಗುತ್ತದೆ ಎನ್ನುತ್ತಾರೆ. ಇವೆಲ್ಲ ಸತ್ಯಕ್ಕೆ ದೂರವಾದ ಸಂಗತಿಗಳು.

ಬಾಳೆ ಇದು ಭಾರತದ ಹಣ್ಣು. ಇದು ಅಸಂಖ್ಯ ಪ್ರಕಾರಗಳಲ್ಲಿ ದೊರೆಯುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಮ್, ಫಾಸ್ಫರಸ್ ಹಾಗೂ ಇತರ ವಿಟಮಿನ್‍ಗಳು ಇವೆ. (ಇದರಲ್ಲಿರುವ ಕ್ಯಾಲೋರಿ 116). ಇದು ಪೋಷಕ ಆಹಾರವೆಂದೇ ಪ್ರಸಿದ್ಧವಾಗಿದೆ. ಡಾ. ಬಾಖ್ರು ಅವರು ಬರೆಯುತ್ತಾರೆ: ಪಕ್ವ ಬಾಳೆಯ ಹಣ್ಣು ಕರುಳಿನ ಬೇನೆಗೆ ಉತ್ತಮ. ಇದರಲ್ಲಿರುವ ವಿಟಮಿನ್ ಯು' ಕರುಳಿನ ವ್ರಣಕ್ಕೆ ಉಪಶಮನಕಾರಿಯಾಗಿದೆ. ಮಲಬದ್ಧತೆ, ಬೇಧಿ, ಸಂಧಿವಾತ, ರಕ್ತಹೀನತೆ, ಮತ್ತು ಕಿಡ್ನಿಯ ತೊಂದರೆಗೆ ಉಪಶಮನಕಾರಿಯಾಗಿದೆ. ಬ್ರಾಝಿಲ್‍ದ ಡಾಕ್ಟರರೊಬ್ಬರು ಇದನ್ನು ಬೇಯಿಸಿ ರೋಗಿಗಳಿಗೆ ಕೊಟ್ಟು ಟಿ.ಬಿ.ಮುಂತಾದ ಕಾಯಿಲೆಗಳನ್ನು ಗುಣಪಡಿಸಿದರೆಂದು ವರದಿಯಾಗಿದೆ. ಮೂತ್ರಕೋಶ ಹಾಗೂ ಕಿಡ್ನಿಯ ಕಾರ್ಯಾಚರಣೆಗೆ ಇದರಿಂದ ಉತ್ತೇಜನ ದೊರೆಯುತ್ತದೆ. ಕೆನೆಯನ್ನು ತೆಗೆದ ಹಾಲಿನಲ್ಲಿ ಬಾಳೆಹಣ್ಣನ್ನು ಬೆರೆಸಿ ಕೊಟ್ಟಾಗ ದೇಹದ ಅತಿಭಾರ ಕಡಿಮೆಯಾದದ್ದು ಕಂಡುಬಂದಿದೆ. (ದಿನದಲ್ಲಿ ಆರು ಬಾಳೆಹಣ್ಣು ಮತ್ತು ನಾಲ್ಕು ಗ್ಲಾಸ್ ಹಾಲು ಸೇವಿಸಬೇಕು. ಬೇರೆಯ ಯಾವ ಆಹಾರ ಸೇವಿಸಬಾರದು. ಹದಿನೈದು ದಿನಗಳಲ್ಲಿ ಇದರ ಪರಿಣಾಮ ತಿಳಿಯುತ್ತದೆ.) ಅನಿಯಮಿತವಾಗಿ ಮುಟ್ಟಾಗುವ ಸ್ತ್ರೀಯರು ಬಾಳೆಯ ಹೂವನ್ನು ಬೇಯಿಸಿ ಮೊಸರಲ್ಲಿ ಕಲಿಸಿ ಸೇವಿಸಿದರೆ ಅವರಿಗಾಗುವ ಋತುಕಾಲದ ವೇದನೆ ಹಾಗೂ ಅತಿಯಾದ ರಕ್ತಸ್ರಾವ ಕಡಿಮೆಯಾಗುವುದು.

ಪಾಲಿಸಬೇಕಾದ ಮುಂಜಾಗ್ರತೆಗಳು ಎಂದರೆ ಕಚ್ಚಾ ಬಾಳೆಹಣ್ಣು ತಿನ್ನಬಾರದು. ಬಾಳೆಹಣ್ಣನ್ನು ರೆಫ್ರಿಜರೇಟರ್‍ನಲ್ಲಿ ಇಡಬಾರದು. ಕಿಡ್ನಿಫೇಲ್ ಆದವರು ಬಾಳೆಹಣ್ಣು ಸೇವಿಸಬಾರದು.

ಇತ್ತೀಚಿನ ಸಂಶೋಧನೆಗಳಿಂದ ಬಾಳೆಹಣ್ಣಿನ ಹೆಚ್ಚಿನ ಮಹತ್ವ ಬೆಳಕಿಗೆ ಬಂದಿದೆ. ಮಿತ್ರ ದೇವೇಂದ ಪೆಜತ್ತಾಯ ಅವರು ನನಗೊಂದು ಲೇಖನವನ್ನು ಕಳಿಸಿದರು. ಅದರಲ್ಲಿಯ ಮಹತ್ವದ ಕೆಲವು ಅಂಶಗಳು ಇಂತಿವೆ:

* ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ (sucrose, fructose and glucose)ಇವೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

* ತಲ್ಲಣ (ಡಿಪ್ರೆಶನ್) ಆದಾಗ ಬಾಳೆಹಣ್ಣು ಸೇವಿಸಿದರೆ ಒಳ್ಳೆಯದು.

* ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.

* ಬ್ಲಡ್‍ಪ್ರೆಶರ್ ಇದ್ದವರಿಗೆ ಬಾಳೆಹಣ್ಣು ಒಳ್ಳೆಯದು. ಕಾರಣ ಇದರಲ್ಲಿ ಪೊಟ್ಯಶಿಯಮ್ ಹೆಚ್ಚಾಗಿದೆ, ಲವಣಾಂಶ ಕಡಿಮೆಯಾಗಿದೆ.

* ಮಿಡಲ್ ಎಸೆಕ್ಸ್‍ನ 200 ವಿದ್ಯಾರ್ಥಿಗಳಿಗೆ ಬಾಳೆಯಹಣ್ಣನ್ನು ಬ್ರೆಕ್‍ಫಾಸ್ಟ್, ಲಂಚ್ ಹಾಗೂ ಸಂಜೆಯ ತಿಂಡಿಯೊಡನೆ ಕೊಟ್ಟಾಗ ಅವರ ಬುದ್ಧಿಶಕ್ತಿಯಲ್ಲಿ ಸುಧಾರಣೆ ಕಂಡು ಬಂತಂತೆ.

* ಮಲಬದ್ಧತೆಗೆ ರೇಚಕ ಮಾತ್ರೆ ಕೊಡುವ ಬದಲು ಬಾಳೆಹಣ್ಣು ಕೊಡುವುದು ಹಿತಕರವಾಗಿದೆ.

*ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್‍ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.

* ಎದೆಹುಳಿ ಸುಡುವಾಗ ಬಾಳೆಹಣ್ಣು ಉಪಶಮನ ತರುತ್ತದೆ.

* ಸೊಳ್ಳೆ ಕಡಿದಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತಿಕ್ಕಿದರೆ ಬಾವು ಹಾಗೂ ತುರಿಕೆ ಕಡಿಮೆಯಾಗುತ್ತದೆ.

* ಆಸ್ಟ್ರಿಯಾದ ಒಂದು ಮಾನಸಶಾಸ್ತ್ರ ಸಂಶೋಧನಾ ಸಂಸ್ಥೆಯು 5000 ರೋಗಿಗಳನ್ನು ಪರೀಕ್ಷಿಸಿದಾಗ, ಸ್ಥೂಲಕಾಯರಿಗೆ ಹೆಚ್ಚು ಒತ್ತಡದ ಕೆಲಸವಿರುವದು ಗಮನಕ್ಕೆ ಬಂದಿತು. ಅಂಥವರಿಗೆ ಬಾಳೆಹಣ್ಣಿನ ಸೇವನೆಯಿಂದ ಲಾಭವಾದುದನ್ನು ಕಂಡರು.

* ಸಿಗರೇಟ್ ಅಭ್ಯಾಸವಿದ್ದವರಿಗೆ ಬಾಳೆಹಣ್ಣಿನ ಸೇವನೆಯಿಂದ ಅದನ್ನು ಕಡಿಮೆಗೊಳಿಸಲು ಸಹಾಯವಾಗಿದೆಯಂತೆ, ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಬಿ-6, ಬಿ-12, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳೇ ಕಾರಣವೆನ್ನಲಾಗಿದೆ.

* ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಾರ ಸ್ಟ್ರೋಕ್‍ನಿಂದ ಸಾಯುವವರ ಸಂಖ್ಯೆಯಲ್ಲಿ ಪ್ರತಿಶತ 40ರಷ್ಟು ಕಡಿಮೆಗೊಳಿಸಲು ಬಾಳೆಯಹಣ್ಣಿನ ಸೇವನೆಯೇ ಕಾರಣ ಎನ್ನಲಾಗಿದೆ.

* ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಯಹಣ್ಣಿನ ಸೇವನೆಯೇ ಕಾರಣವಂತೆ. (ಮಾನವರು ಇದರ ಮಹತ್ವ ಅರಿಯುವ ದಿನ ಬಂದಿವೆ)

* ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more