ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್ : ಭಾಗ 9

By Staff
|
Google Oneindia Kannada News

ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್'ನ ಮುಂದುವರಿದ ಭಾಗ.

* ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

M V Kamatನೌಕರಿ ಬಿಟ್ಟರೆ ಅಲ್ಲಿಗೆ ಮುಗಿಯಲಿಲ್ಲ, ಮತ್ತೊಂದು ನೌಕರಿ ಹುಡುಕಬೇಕಾಗಿತ್ತು. ಇವರ ಮಿತ್ರನೊಬ್ಬ ಡಿಸೈನ್ ಇದ್ದ ಜೂಟ್ ಬ್ಯಾಗ್‌ಗಳನ್ನು ರಸ್ತೆಯಲ್ಲಿ ಮಾರುತ್ತಿದ್ದ. ನಾಲ್ಕಾಣೆಯ ಬ್ಯಾಗ್ ಎಂಟಾಣೆಗೆ ಮಾರಿದಾಗ ಒಂದೆರಡೆ ತಾಸಿನಲ್ಲಿ ಎರಡು ರೂಪಾಯಿ ದೊರೆಯುತ್ತಿತ್ತು. ಬೀದಿಯ ಮೂಲೆಯಲ್ಲಿ ನಿಂತು ಮಾರಲು ಕಾಮತರಿಗೆ ಮಾನಸಿಕ ಆತಂಕ ಇರಲಿಲ್ಲ, ಆದರೆ ಅವರ ಅಣ್ಣ ನೋಡಿದರೆ ತಪ್ಪು ತಿಳಿಯಬಹುದೆಂಬ ಭಯ ಮಾತ್ರ ಇತ್ತು. ದೂರದ ಸೆಂಟ್ರಲ್ ಸಿನೇಮಾದ ಬಳಿ ಈ ಕೆಲಸ ಕೆಲದಿನ ಮಾಡಿದರು. ನಂತರ, ಸ್ವಲ್ಪೇ ದಿನಗಳಲ್ಲಿ ಒಂದು ಇಂಡಿಯನ್ ಕಂಪನಿಯಲ್ಲಿ ಕೆಲಸ ದೊರೆಯಿತು. ವೆಂಕಟರಾಮನ್ ಎಂಬವರು ಇವರನ್ನು ನಪೂ ಗಾರ್ಡನ್ ಸಭೆಗಳಲ್ಲಿ ನೋಡಿದ್ದರು, ಇವರಿಗೆ ತಮ್ಮ ಕಂಪನಿಯಲ್ಲಿ ಕೆಲಸ ಕೊಟ್ಟರು. ಅವರ ಕಂಪನಿಯ ಹೆಸರು ಓರಿಯಂಟಲ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಅಲ್ಲಿ ಇಂಜೆಕ್ಶೆನ್ ಡಿಪಾರ್ಟಮೆಂಟಿನ ಮುಖ್ಯಸ್ಥ ಜಾಗ ಕಾಮತರಿಗೆ ದೊರೆಯಿತು.

ಒಮ್ಮೆ ಪ್ಯಾಕಿಂಗ್ ನೋಡುತ್ತ ನಿಂತ ಕಾಮತರು ಕೆಲ ಸಲಹೆಗಳನ್ನು ವೆಂಕಟರಾಮನ್ನರಿಗೆ ನೀಡಿದರು. ಕೆಲಸದಲ್ಲಿ ಬಹಳ ಪ್ರಗತಿಯಾಯಿತು. ಪ್ಯಾಕಿಂಗ್ ಡಿಪಾರ್ಟಮೆಂಟಿನ ಹೊಸ ಪ್ರಯೋಗದಿಂದಾಗಿ ಕಾಮತರಿಗೆ ಈ ಡಿಪಾರ್ಟಮೆಂಟಿನಲ್ಲಿ ಅಸಿಸ್ಟಂಟ್ ಜನರಲ್ ಮೆನೆಜರ್ ಹುದ್ದೆ ದೊರೆಯಿತು. ಈ ಕೆಲಸದೊಂದಿಗೆ ಪತ್ರ ಬರೆಯುವುದು, ಉತ್ಪಾದನೆಗಳ ಬಗ್ಗೆ ಕಾಪಿ ಬರೆಯುವುದೂ ಇವರ ಕೆಲಸವಾಯಿತು. ಈ ಕೆಲಸವೂ ಬೇಸರ ತಂದಿತು, ಒಂದು ಪತ್ರಿಕೆಯ ರಿಪೋರ್ಟರ್ ಆಗಲು ಬಯಸಿದರು. ರಾಜೀನಾಮೆ ಕೊಡಲು ಹೊರಟರೆ ವೆಂಕಟರಾಮನ್ ಬೇಡ ಅಂದರು. ಮೂರು ತಿಂಗಳು ರಜೆ ಪಡೆದು ಬೇರೆ ಕೆಲಸ ಮಾಡಲು ಹೇಳಿದರು. ಒಂದು ವೇಳೆ ಹೊಸ ಕೆಲಸ ಒಗ್ಗದಿದ್ದರೆ ಮತ್ತೆ ವಾಪಸ್ ಇದೇ ಕೆಲಸಕ್ಕೆ ಬರಬಹುದೆಂದು ವೆಂಕಟರಾಮನ್ ಸಲಹೆ ನೀಡಿದರು.

ಈ ಮೊದಲು ಕಾಮತರ ಮೇಲೆ ವಿವೇಕಾನಂದರ ಪ್ರಭಾವ ಬಹಳ ಆಗಿತ್ತು. ತಾವೂ ಸಂನ್ಯಾಸಿಯಾಗಬೇಕೆಂದಿದ್ದರು, ರಾಮಕೃಷ್ಣ ಮಿಶನ್ ಸೇರಬೇಕೆಂದಿದ್ದರು. ಆದರೆ ಅವರ ತಾಯಿಗೆ ಮನಸ್ಸಿರಲಿಲ್ಲ. ಇವರು ಸಂನ್ಯಾಸಿಯಾದರೆ ತಾವು ಜೀವ ತೊರೆಯುವುದಾಗಿ ತಾಯಿ ಬೆದರಿಸಿದ್ದರಂತೆ. ಹೀಗಾಗಿ ಆ ದಾರಿ ಇವರದಾಗಲಿಲ್ಲ. ಕಾಮತರು ಡಾಕ್ಟರರಾಗಬೇಕೆಂದಿದ್ದರು. ಅದು ಸಾಧ್ಯವಾಗಲಿಲ್ಲ. ಇನ್ನು ಅವರು ಬಯಸಿದ ಇನ್ನೊಂದು ದಾರಿ ಎಂದರೆ ಪತ್ರಕರ್ತನಾಗುವುದು. ಆ ದಿಸೆಯಲ್ಲಿ ಪ್ರಯತ್ನ ನಡೆಸಿದರು.

ಕಾಮತರು ಮುಂಬೈಯಲ್ಲಿ ಶಿಕ್ಷರಾಗಿಯೂ ಕೆಲಕಾಲ ದುಡಿದರು. ಬಾಂಬೇ ಫೋರ್ಟ್ ಫ್ರೀ ನೈಟ್ ಹೈಸ್ಕೂಲಿನಲ್ಲಿ ಇವರು ಇಂಗ್ಲಿಷ್, ಇತಿಹಾಸ, ವಿಜ್ಞಾನ ಕಲಿಸುತ್ತಿದ್ದರು. ಇವರ ಸಂಬಳ ರೂ.35 ಮಾತ್ರ. ಇವರು ರಾತ್ರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಕರೆಂದು ಹೆಸರು ಗಳಿಸಿದ್ದರು. ಇವರು ಕ್ಲಾಸಿನಲ್ಲಿ ಸಿಲೆಬಸ್ ಬಿಟ್ಟು ಹೊರಗಿನ ವಿಷಯವನ್ನೂ ಕಲಿಸುತ್ತಿದ್ದರು. ಇವರ ಒಬ್ಬ ವಿಧ್ಯಾರ್ಥಿ ಪಿ.ಎಚ್.ಡಿ. ಮಾಡಿದ, ಒಬ್ಬ ದೊಡ್ಡ ಉದ್ಯಮಿಯಾಗಿ ಲಕ್ಷಾಧೀಶನಾದ ಎಂದು ಹೆಮ್ಮೆಯಿಂದ ಬರೆಯುತ್ತಾರೆ. ದಾದರ್ ಬ್ಲೈಂಡ್ ಸ್ಕೂಲಿನಲ್ಲಿಯೂ ಕಲಿಸುತ್ತಿದ್ದರು. ಅಲ್ಲಿ ಇವರಿಗೆ ಮುಖ್ಯಾಧ್ಯಾಪಕ ಜಾಗೆಯನ್ನು, ಉಚಿತವಸತಿಯನ್ನೂ, ರೂ.350 ಸಂಬಳವನ್ನು ಕೊಡಲು ಮುಂದೆ ಬಂದಿದ್ದರು. ಆದರೆ ಇವರು 100 ರೂಪಾಯಿಯ ರಿಪೋರ್ಟರ್ ಜಾಗೆಗೆ ಸೇರಿದರು. ಇವರಿಗೆ ಪತ್ರಿಕೋದ್ಯಮ ಬಹಳ ಅಚ್ಚುಮೆಚ್ಚಿನ ಕೆಲಸವಾಗಿತ್ತು.

ಕಾಮತರು ಪ್ರತಿನಿತ್ಯ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡವರು. ಆ ಕಾಲದಲ್ಲಿ ಪತ್ರಿಕೋದ್ಯಮ ಕಲಿಸಲು ಕಾಲೇಜುಗಳು ಇರಲಿಲ್ಲ. ಆದರಿಂದ ಅವರು ಅಮೇರಿಕೆಗೆ ಹೋಗಿ ಜರ್ನಲಿಸಂ ಕಲಿಯಲು ಬಯಸಿದ್ದರು. ಬೆಂಗಳೂರಿನಿಂದ ಮೈಸಿಂಡಿಯಾ' ಎಂಬ ಆಂಗ್ಲಪತ್ರಿಕೆ ಪ್ರಕಟವಾಗುತ್ತಿತ್ತು. ಇದರ ಸಂಪಾದಕ ಒಬ್ಬ ಐರಿಶ್ ವ್ಯಕ್ತಿಯಾಗಿದ್ದ. ಕಾಮತರು ನಾರ್ವೇಜಿಯನ್ ದೇಶದಲ್ಲಿ ಸೋಸಿಯಾಲಿಜಂ' ಎಂಬ ಲೇಖನ ಬರೆದು ಮೈಸಿಂಡಿಯಾ'ಗೆ ಕಳಿಸಿದರು. ತಮ್ಮ ಮೊದಲ ಲೇಖನ ಪ್ರಕಟವಾದಾಗ ಇವರಿಗೆ ಎಷ್ಟು ಆನಂದವಾಯಿತು ಎಂದರೆ, ಅವರಿಗೆ ಏಳನೆಯ ಸ್ವರ್ಗ ದೊರೆತಂತಾಗಿತ್ತು. ಅವರಿಗೆ ಸಂಭಾವನೆ ದೊರೆಯಲಿಲ್ಲ. ಆದರೆ ಒಂದು ವರ್ಷ ಪತ್ರಿಕೆ ಉಚಿತವಾಗಿ ದೊರೆಯಿತು. ಇವರ ಮೂರನೆಯ ಲೇಖನಕ್ಕೆ ೩ ರೂ 50 ಪೈಸೆ ಸಂಭಾವನೆ ದೊರೆಯಿತು.

ಇವರ ಮೂರನೆಯ ಲೇಖನದ ಕತೆ ರೋಚಕವಾಗಿದೆ. ಇವರು ಅಮೇರಿಕನ್ ಲೈಬ್ರರಿಯಲ್ಲಿ ಯಾಂಕೀ ಫ್ರಾಂ ಆಲಿಂಪಸ್' (Yankee From Olympus) ಎಂಬ ಪುಸ್ತಕ ಓದಿ ಪ್ರಭಾವಿತರಾದರು. ಅದು ಆಲಿವರ್ ವೆಂಡೆಲ್ ಹೋಮ್ಸ್ ಜ್ಯೂ. (Oliver Wendell Holmes Jr.))ಎಂಬ ಅಮೇರಿಕನ್ ನ್ಯಾಯಧೀಶನ ಆತ್ಮಕತೆ. ಇವನು ಅಮೇರಿಕೆಯ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಲ್ಲಿ ಒಬ್ಬನಾಗಿದ್ದ. ಒಂದು ಕೇಸಿನಲ್ಲಿ ಇವನು ವಿರುದ್ಧ ತೀರ್ಪು ನೀಡಿದ್ದ(ಡಿಸೆಂಟಿಂಗ್ ಜಜ್‌ಮೆಂಟ್). ಇವನ ನಿರ್ಭಯ ತೀರ್ಪಿನ ಕೆಲಭಾಗ ಎಷ್ಟು ಚೆನ್ನಾಗಿತ್ತೆಂದರೆ ಅದು ಕಾಮತರಿಗೆ ಕಂಠಪಾಠವಾಗಿತ್ತು. ಈ ನ್ಯಾಯಧೀಶನ ಬಗ್ಗೆ ಇವರು ತಮ್ಮ ಮೂರನೆಯ ಲೇಖನ ಬರೆದಿದ್ದರು.

ಈ ಲೇಖನಕ್ಕೆ ಸಂಬಂಧಿಸಿದ, ಭವಿಷ್ಯದಲ್ಲಿ ನಡೆದ ಘಟನೆಗಳನ್ನು ದಾಖಲಿಸುತ್ತಾರೆ. ಇವರು ಮುಂದೆ ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದ ಸಮಯ. ಕೊಳಕು ವಸ್ತ್ರ ಧರಿಸಿದ, ಸರಿಯಾಗಿ ಕ್ಷೌರ ಮಾಡಿಕೊಳ್ಳದ ಒಬ್ಬ ವ್ಯಕ್ತಿ ಇವರ ಕ್ಯಾಬಿನ್ ಪ್ರವೇಶಿಸಿದ. ಅವನ ಕೈಯಲ್ಲಿ ಮೈಸಿಂಡಿಯಾ' ಪೇಪರ್ ಇತ್ತು. ಅದನ್ನು ಕಾಮತರಿಗೆ ತೋರಿಸಿ ಈ ಲೇಖನ ಯಾರದು?' ಎಂದು ಕೇಳಿದ. ಅದು ಜಸ್ಟಿಸ್ ಹೋಮ್ಸ್ ಆವರ ಬಗ್ಗೆ ಬರೆದ ಕಾಮತರ ಮೂರನೆಯ ಲೇಖನವಾಗಿತ್ತು. ಹಾಂ, ಇದು ಇದು ನನ್ನದೇ' ಎಂದು ಕಾಮತರು ನುಡಿದರು. ಆ ಪುಟದ ಹಿಂಭಾಗದಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದನ್ನು ತೋರಿಸುತ್ತ, ಇದು ಯಾರ ಲೇಖನ ಗೊತ್ತೇ?'' ಎಂದು ಕೇಳಿದ. ಆಗ ಕಾಮತರು ಆ ಪುಟವನ್ನು ಕೂಲಕಷವಾಗಿ ನೋಡಿ, ನನಗೆ ಗೊತ್ತಿಲ್ಲ..'' ಎಂದು ಉತ್ತರಿಸಿದರು. ಆಗಂತುಕ ಮತ್ತೆ ನುಡಿದ, ಇದರ ಲೇಖಕ ನಾನೇ.'' ಇವರು ಅವನಿಗೆ, ಕಂಗ್ರ್ಯಾಚುಲೇಶನ್ಸ್' ಎನ್ನುವುದರೊಳಗಾಗಿ ಆ ವ್ಯಕ್ತಿ ಎದ್ದು ನಿಂತು, ಆ ಪೇಪರನ್ನು ಕಸಿದುಕೊಂಡು, ಮಿತ್ರ, ಈಗ ನೀನು ಎಷ್ಟು ದೊಡ್ಡ ಮನುಷ್ಯನಾಗಿದ್ದೀ!''ಎಂದು ಉದ್ಗಾರ ತೆಗೆದವನೇ ಅಲ್ಲಿಂದ ಹೊರಟು ಹೋಗಿಯೇಬಿಟ್ಟ. ಕಾಮತರಿಗೋ ಅಚ್ಚರಿ. ಬೇಸರ ಕೂಡ ಆಯಿತು. ಅವನು ಸ್ವಲ್ಪ ಕಾಲ ಅಲ್ಲೇ ಉಳಿದಿದ್ದರೆ ಅವನನ್ನು ಚಹಕ್ಕೆ ಇಲ್ಲವೆ ಡಿನ್ನರ್‌ಗೆ ಕರಕೊಂಡು ಹೋಗಬಹುದಾಗಿತ್ತು. ಅವನ ಅನುಭವ ಕೇಳಿ ಒಂದು ಪುಸ್ತಕವನ್ನೇ ಬರೆಯಬಹುದಾಗಿತ್ತು.'' ಎನ್ನುತ್ತಾರೆ.

ಇನ್ನೊಂದು ಘಟನೆ ನೆನೆಯುತ್ತಾರೆ. 1953ರಲ್ಲಿ ಒಂದು ಅಮೇರಿಕನ್ ಸಂಸ್ಥೆ ಕಾಮತರಿಗೆ ೩ ತಿಂಗಳು ಅಮೇರಿಕೆಯಲ್ಲಿ ಪ್ರವಾಸ ಮಾಡಲು ಟ್ರಾವೆಲ್ ಗ್ರಾಂಟ್' ನೀಡಿತ್ತು. ಅಮೇರಿಕೆಯ ಪ್ರಸಿದ್ಧ ದಿನಪತ್ರಿಕೆಯಲ್ಲಿ ಒಂದಾದ ಸೇಂಟ್ ಲುಯಿಸ್ ಪೋಸ್ಟ್ ಡಿಸ್ಪ್ಯಾಚ್' (St. Louis Post Despatch) ಎಂಬುದರ ಕಚೇರಿಗೆ ಭೇಟಿಕೊಟ್ಟಿದ್ದರಂತೆ. ಅಲ್ಲಿ ಪುಲಿಟ್ಸರ್ ಬಹುಮಾನ ಪಡೆದ ಕಾರ್ಟೂನಿಸ್ಟ್ ಕರ್ನಲ್ ಫಿಜ್ ‌ಪ್ಯಾಟ್ರಿಕ್ (Col. Fitzpatrick) ಅವರನ್ನು ಕಂಡರಂತೆ. ಗಾಂಧೀಜಿಯವರ ಕೊಲೆಯಾದಾಗ ಇವರು ತೆಗೆದ ಕಾರ್ಟೂನ್ ಜಗತ್ತಿನಲ್ಲೇ ಬಹಳ ಪ್ರಸಿದ್ಧಿ ಪಡೆಯಿತಂತೆ. ಆ ಪತ್ರಿಕೆಯ ಸಾಹಿತ್ಯ ವಿಭಾಗದ ಸಂಪಾದಕರಾದ ಅಯರ್‌ವಿಂಗ್ ಡಿಲಿಯರ್ಡ್ (Irving Dilliard) ಅವರನ್ನು ಕಂಡರಂತೆ. ಅವರು ಕಾಮತರಿಗೆ, ಕೆಲವು ನಿಮಿಷ ತಡೆಯಿರಿ, ನಾನು ಬರುವೆ. ಅಲ್ಲಿಯ ವರೆಗೆ ನೀವು ಇಲ್ಲಿಯ ಪುಸ್ತಕಗಳನ್ನು ನೋಡಬಹುದು.'' ಎಂದರಂತೆ. ಅಲ್ಲಿಯ ಬುಕ್-ಸೆಲ್ಫ್‌ನಲ್ಲಿ ಒಂದು ಪುಸ್ತಕ ತೆಗೆದುಕೊಂಡು ಬಹಳ ಆಸಕ್ತಿಯಿಂದ ಪುಟ ತಿರುವುತ್ತ ಕುಳಿತರಂತೆ.

ನಂತರ ಬಂದ ಸಂಪಾದಕರು ಅಚ್ಚರಿಯಿಂದ ಕೇಳಿದರಂತೆ, ಈ ಪುಸ್ತಕವೇ ಯಾಕೆ ತಮ್ಮ ಗಮನವನ್ನು ಸೆಳೆಯಿತು?'' ಎಂದು. ಕಾಮತರು, ಈ ಪುಸ್ತಕ ಪ್ರಸಿದ್ಧ ನ್ಯಾಯಾಧೀಶ ಜಸ್ಟಿಸ್ ಹೋಮ್ಸ್ ಅವರ ಬಗ್ಗೆ ಇದೆ ಎಂದು ಹೇಳಿ, ನಂತರ ಆ ನ್ಯಾಯಾಧೀಶನ ಬಗ್ಗೆ, ಅವನು ಕೊಟ್ಟ ಐತಿಹಾಸಿಕ ತೀರ್ಪಿನ ಬಗ್ಗೆ ಮಾತಾಡಿದರಂತೆ. ಅವನ ತೀರ್ಪಿನಿಂದ ಕೆಲವು ಸಾಲುಗಳನ್ನು ಉದ್ಧರಿಸಿದರಂತೆ. ಆಗ, ಆನಂದಿತರಾದ ಸಂಪಾದಕರು, ಆ ಗ್ರಂಥವನ್ನು ಕೈಯಲ್ಲಿ ಹಿಡಿದು, ಕಾಮತರಿಗೆ ಕಾಣಿಕೆಯಾಗಿ ಕೊಟ್ಟರಂತೆ. ಅಲ್ಲಿ ಅವರು ಒಕ್ಕಣಿಸಿದ ಮಾತು ಹೀಗಿತ್ತು, ಜಸ್ಟಿಸ್ ಹೋಮ್ಸರ ಬಗ್ಗೆ ನನಗಿಂತ ಅಧಿಕ ತಿಳಿದುಕೊಂಡಿರುವ ಮಾಧವ ಕಾಮತರಿಗೆ'' ಎಂದು. ಆ ಗ್ರಂಥದ ಲೇಖಕರು ಅವರೇ ಎಂದು ತಿಳಿದಾಗ ಕಾಮತರಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಸಂಪಾದಕರು ಹಿಂದೆ ಆ ಪತ್ರಿಕೆಯ ಲೀಗಲ್ ಕರಸ್ಪಾಂಡೆಂಟ್' ಆಗಿದ್ದರಂತೆ, ನ್ಯಾಯಧೀಶರನ್ನು ಹತ್ತಿರದಿಂದ ಬಲ್ಲವರೂ ಅಗಿದ್ದರಂತೆ. ಅಲ್ಲಿ ಇನ್ನೊಂದು ಅಚ್ಚರಿ ಇವರಿಗಾಗಿ ಕಾದಿತ್ತು. ಕಾರ್ಟೂನಿಸ್ಟ್ ಫಿಜ್ ‌ಪ್ಯಾಟ್ರಿಕ್ ತನ್ನ ಹಸ್ತಾಕ್ಷರ ಹಾಕಿದ ಕಾರ್ಟೂನ್ ಪುಸ್ತಕವನ್ನು ಇವರಿಗೆ ಕಾಣಿಕೆಯಾಗಿ ಕೊಟ್ಟನಂತೆ, ಪರಮ ಮಿತ್ರನೂ ಆದನಂತೆ.

ಮೈಸಿಂಡಿಯಾ'ದ ಲೇಖನಗಳಿಂದ ಸ್ಫೂರ್ತಿ ಪಡೆದು ಫ್ರೀ ಪ್ರೆಸ್ ಜರ್ನಲ್ ಸೇರುವ ಕನಸು ಕಾಣತೊಡಗಿದರು. ಆ ಪತ್ರಿಕೆಯನ್ನು ಕೂಲಂಕಷವಾಗಿ ಓದಿ ತಾವು ಸ್ಪೋರ್ಟ್ಸ್ ಬಗ್ಗೆ ಅಥವ ನಗೆಬರಹ ಬರೆಯಬಹುದು ಅಂದುಕೊಂಡರು. ಕ್ರೀಡೆಯ ಪುಟವನ್ನು ಪ್ರಸಿದ್ಧ ಲೇಖಕ ಎ.ಎಸ್.ಎಫ್.ತಲ್ಯಾರ್‌ಖಾನ್ ಸಂಪಾದಿಸುತ್ತಿದ್ದ, ತಾವು ಬರೆದ ಲೇಖನ ಅವನು ಹಾಕಬಹುದೇ ಎಂಬ ಚಿಂತೆ. ಒಂದು ಲೇಖನ ಕಳಿಸಿದರು. ಅದು ಪ್ರಕಟವಯಿತು. ಇವರಿಗೆ ರೂ.7 ಸಂಭಾವನೆ ದೊರೆಯಿತು. ಆಗಾಗ ಲೇಖನ ಬರೆಯಲು ತಲ್ಯಾರ್‌ಖಾನರ ಪತ್ರವೂ ಬಂತು. 7-8 ಲೇಖನಗಳು ಪ್ರಕಟವಾದ ಮೇಲೆ ಇವರಿಗೆ ಧೈರ್ಯಬಂತು. ರಿಪೋರ್ಟರ್ ಕೆಲಸಕ್ಕೆ ಅರ್ಜಿಹಾಕಲು ನಿರ್ಧರಿಸಿದರು.

ಒಂದು ಮುಂಜಾನೆ. 21, ದಲಾಲ್ ಸ್ಟ್ರೀಟ್‌ಗೆ ಬಂದರು. ಫ್ರೀ ಪ್ರೆಸ್ ಆಫೀಸ್ ಪ್ರವೇಶಿಸಿದರು. ಸಂಪಾದಕರ ಸೆಕ್ರೆಟರಿ ದಾಸ್ ಅವರನ್ನು ಕಂಡರು. ನೀನು ಅರ್ಜಿ ಹಾಕಿದ್ದೀಯಾ?' ಎಂದು ಕೇಳಿದಾಗ ಇವರ ಉತ್ತರ, ಇಲ್ಲ'ಎಂದಿತ್ತು. ನೀವು ಬರುವ ಕಾರಣವಿಲ್ಲ, ಪೋಸ್ಟಿನಿಂದ ಅರ್ಜಿ ಕಳಿಸಿರಿ ನಾವು ಕರೆಯುತ್ತೇವೆ.' ಅಂದರು. ಅರ್ಜಿ ಕಳಿಸಿದರು. ಕೆಲವು ವಾರಗಳು ಕಳೆದವು. ಉತ್ತರವಿಲ್ಲ. ಒಂದೆರಡುಸಲ ಆಫೀಸಿಗೆ ಹೋದರು. ಜಾಗಾ ಖಾಲಿ ಇಲ್ಲ' ಎಂಬ ಉತ್ತರ ಪಡೆದರು. ಒಂದು ದಿನ ಸೆಕ್ರೆಟರಿಯನ್ನು ಕಂಡರು. ಇವರ ತೊಂದರೆಯಿಂದ ಅವನು ತಾಳ್ಮೆಯನ್ನು ಕಳೆದುಕೊಂಡ. ಇವರೂ ತಾಳ್ಮೆ ಕಳೆದುಕೊಂಡು, ನಾನಿಲ್ಲಿ ನಾಲ್ಕು ಸಲ ಬಂದು ಹೋಗಿದ್ದೇನೆ ...'' ಎಂದು ದನಿ ಎತ್ತರಿಸಿದಾಗ ಅಲ್ಲಿ ಒಬ್ಬ ವ್ಯಕ್ತಿ ದಾಕ್ಷಿಣಾತ್ಯನಂತೆ ಮುಂಡು ಸುತ್ತಿ, ಸಾದಾ ಕುರ್ತಾ ಹಾಕಿಕೊಂಡು ಅಲ್ಲಿಂದ ಹೋಗುತ್ತಿದ್ದವ ನಿಂತುಕೊಂಡ, ನೀನಾರು, ಏಕೆ ಹೀಗೆ ಕೂಗುತ್ತಿರುವೆ?'' ಎಂದ.

ಇತರರು ಅವರಿಗೆ ತೋರುತ್ತಿರುವ ಭಯಭಕ್ತಿ ಕಂಡರೆ ಆ ವ್ಯಕ್ತಿ ಮಹತ್ವದ ವ್ಯಕ್ತಿ ಇರಬೇಕೆಂದು ಕಾಮತರಿಗೆ ಅನಿಸಿತು, ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ಇತ್ತ ಬಾ' ಎಂದು ಕರೆದು ತಮ್ಮ ಕೋಣೆಗೆ ಕರೆದುಕೊಂಡು ಹೋದರು. ಅವರೇ ಶ್ರೀ ಸದಾನಂದರು. ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯ ಪ್ರಧಾನ ಸಂಪಾದಕರು. ನಂತರ ಕಾಮತರ ಹೆಸರು, ವಯಸ್ಸು, ಶಿಕ್ಷಣ, ಕೆಲಸದ ಅನುಭವದ ಬಗ್ಗೆ ಪ್ರಶ್ನೆ ಕೇಳಿದರು. ಆಮೇಲೆ ಅವರೆಂದರು, ಯಂಗ್ ಮ್ಯಾನ್, ನೀನು ತಪ್ಪು ಜಾಗೆಗೆ ಬಂದಿರುವೆ. ಇದು ನ್ಯೂಜ್ ಪೇಪರ್ ಆಫೀಸು, ಫಾರ್ಮಾಸ್ಯುಟಿಕಲ್ ಲ್ಯಾಬೊರೆಟರಿ ಅಲ್ಲ.'' ಎಂದು.

ಕಾಮತರು ಸೋಲನ್ನೊಪ್ಪಲಿಲ್ಲ. ತಾವು ಬರೆದ ಲೇಖನಗಳ ಪ್ರತಿಗಳನ್ನು ಎದುರಿಗೆ ಹಿಡಿದರು. ಅವರು ಆ ಕಡೆಗೆ ಕಣ್ಣುಹಾಯಿಸಲಿಲ್ಲ. ನಂತರ ಅವರು ಕೇಳಿದರು, ನೀನು ಕೊನೆಯಲ್ಲಿ ಪಡೆದ ಸಂಬಳವೆಷ್ಟು?''. ಕಾಮತರ ಉತ್ತರ, ಸರ್, ಒಂದು ನೂರಾ ಹದಿನೈದು ರೂಪಾಯಿ, ಮತ್ತೆ ಹತ್ತು ರೂಪಾಯಿ ಹನ್ನೆರಡಾಣೆ ತುಟ್ಟಿಭತ್ಯ.''. ಆಗ ಸದಾನಂದರು ನುಡಿದರು, ನಾನು ನೂರು ರೂಪಾಯಿ ಕೊಡುವೆ ನೀನು ಕೆಲಸ ಮಾಡುವೆಯಾ?''. ಆಗ ಕಾಮತರು, ಆಗಬಹುದು ಸರ್''ಎಂದರು. ನಂತರ ಸದಾನಂದರು ಗಂಭೀರವಾಗಿ ನುಡಿದರು, ನಾನು ನಿನಗೆ ಎಚ್ಚರಿಕೆ ಕೊಡುವೆ, ಮೂರು ತಿಂಗಳ ತರುವಾಯ ನೀನು ಈ ಕೆಲಸಕ್ಕೆ ಅಯೋಗ್ಯ ಎನ್ನಿಸಿದರೆ, ನಿನ್ನನ್ನು ಕೆಲಸದಿಂದ ವಜಾ ಮಾಡುತ್ತೇವೆ.'' ಆಗ ಕಾಮತರು ಒಪ್ಪಿಗೆಯಿಂದ ತಲೆ ಅಲ್ಲಾಡಿಸಿದರು. ನಿನಗೆ ಕೆಲಸ ಸಿಕ್ಕಿತು, ಈಗ ನ್ಯೂಜ್ ಎಡಿಟರ್‌ಗೆ ಹೋಗಿ ರಿಪೋರ್ಟ್ ಮಾಡು.'' ಎಂದರು.

ಮೂರು ತಿಂಗಳ ನಂತರ ಸದಾನಂದರು ಕಾಮತರನ್ನು ಕರೆದು ಹೊಸತಾಗಿ ಅವರು ಪ್ರಾರಂಭಿಸಿದ ಸಂಜೆ ಪತ್ರಿಕೆ, ಫ್ರೀ ಪ್ರೆಸ್ ಬುಲೆಟಿನ್'ನ ಸಂಪಾದಕ ಹುದ್ದೆಗೆ ಆಯ್ಕೆ ಮಾಡಿದರು.

ಫ್ರೀ ಪ್ರೆಸ್ ಜರ್ನಲ್‌ದಲ್ಲಿ ಮೂರು ಜನ ಸೀನಿಯರ್ ಸಬ್-ಎಡಿಟರ್ಸ್ ಇದ್ದರು. ಎ.ಹರಿಹರನ್, ಕೆ.ಎಸ್.ಎಸ್.ರಾಘವನ್, ಕೆ.ಎಲ್.ಮ್ಯಾಥ್ಯು. ಕಾಮತರು ನ್ಯೂಜ್ ಎಡಿಟರ್ ಅವರನ್ನು ಕಂಡರು. ತಾವು ಹೊಸತಾಗಿ ಸೇರಿರುವುದಾಗಿ ಹೇಳಿದರು. ಅವರು ಕೇಳಿದ ಮೂರು ಪ್ರಶ್ನೆಗಳಿಗೆ ಉತ್ತರ ಹೀಗಿತ್ತು. ಪ್ರ-ನೀವು (ಸಿಗಾರೆಟ್) ಸೇದುತ್ತೀರಾ?' ಉ- ಇಲ್ಲ'. ಪ್ರ. ನೀವು (ಮದ್ಯ)ಕುಡಿಯುತ್ತೀರಾ?' ಉ-ಇಲ್ಲ'. ಪ್ರ-ನೀವು ಹುಡಿಗೆಯರ ಬೆನ್ನುಹತ್ತುತ್ತೀರಾ?'' ಉ- ಇಲ್ಲ'. ಸರಿ, ನೀವು ಹೋಗಿ ಚೀಫ್ ರಿಪೋರ್ಟರ್‌ನನ್ನು ಕಾಣಿರಿ.'' ಇವರು ಚೀಫ್ ರಿಪೋರ್ಟರ್‌ರನ್ನು ಕಾಣಲು ಹೊರಟರು. ಅವರು ಗಾಂಧೀಟೋಪಿ ಧರಿಸಿದ ದೇಶಭಕ್ತ ಕ್ರಿಶ್ಚನ್ ಸ್ಯಾಮ್ಯುವೆಲ್ (ಸ್ಯಾಮಿ) ಕ್ಯಾಸ್ಟಿಲಿನೋ ಎಂಬವರು. ಅವರು ಮಂಗಳೂರವರು. ಕಾಮತರಿಗೆ ಅವರೆಂದರು, ಯುನೈಟೆಡ್ ನೇಶನ್ಸ್‌ನ ಮಾಜಿ ಪ್ರೆಸಿಡೆಂಟ್ ಹರ್ಬರ್ಟ್ ಹೂವರ್ ಇಂದು ಮುಂಬೈಗೆ ಬರುತ್ತಿದ್ದಾರೆ. ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಬರೆಯಿರಿ.'' ಕಾಮತರು ಸರಿ'' ಎಂದು ಹೊರಟರು. ಅವರು ಎಲ್ಲಿ ಬರುತ್ತಾರೆ, ಯಾವಾಗ ಬರುತ್ತಾರೆ?'' ಎಂದು ಕೇಳಿದರು. ಅವರು ವಿಮಾನದಿಂದ ಬರುತ್ತಾರೆ. ನೀವೇ ಎಲ್ಲ ವಿಷಯ ಕಂಡುಹಿಡಿಯಬೇಕು,'' ಎಂಬ ಉತ್ತರ ಬಂತು.

ಕಾಮತರಿಗೆ ಜುಹೂದಲ್ಲಿರುವ ಟಾಟಾ ಅವರ ವಿಮಾನ ನಿಲ್ದಾಣ ಗೊತ್ತಿತ್ತು. ಅಲ್ಲಿ ಹೋದರೆ ಅಲ್ಲಿಯ ಜನ ಹೊಸತಾಗಿ ನಿರ್ಮಾಣಗೊಂಡ ಸಾಂತಾಕ್ರುಜ್ ನಿಲ್ದಾಣಕ್ಕೆ ಹೋಗಲು ಹೇಳಿದರು. ಟ್ಯಾಕ್ಸಿ ಹಿಡಿದು ಸಂತಾಕ್ರುಜ್‌ಕ್ಕೆ ಹೋದರೆ, ಅಮೇರಿಕನ್ ಪ್ರೆಸಿಡೆಂಟ್ ಬಂದು ಹೋದರು?'' ಎಂಬ ನುಡಿ ಕೇಳಿದರು. ಎಲ್ಲಿ"" ಅಂದ್ರೆ, ಸೆಕ್ರೆಟಾರಿಯೆಟ್'' (ಮಂತ್ರಾಲಯ) ಎಂಬ ಉತ್ತರ. ಅದೇ ಟ್ಯಾಕ್ಸಿಯನ್ನು ಮಂತ್ರಾಲಯಕ್ಕೆ ಓಡಿಸಿದರು. ಮುಖ್ಯಮಂತ್ರಿಗಳ ರೂಮಿನ ಹೊರಗೆ ಪತ್ರಿಕಾಪ್ರತಿನಿಧಿಗಳ ದೊಡ್ಡ ಗುಂಪೇ ಇತ್ತು. ಅಲ್ಲಿ ಇವರ ಮಿತ್ರ ಗೋಪಿ (ಯು.ಜಿ.ರಾವ್) ಕೂಡ ಅಲ್ಲಿದ್ದರು. ನಿನಗೇನು ಇಲ್ಲಿ ಕೆಲಸ'' ಎಂದು ಕೇಳಿದರು. ನಾನು ರಿಪೋರ್ಟರ್ ಆಗಿದ್ದೇನೆ.'' ಯಾವಾಗಿನಿಂದ?'', ಉತ್ತರ, ಎರಡು ತಾಸಿನಿಂದ.

'' ಅಷ್ಟರಲ್ಲಿ ಅಮೇರಿಕೆಯ ಮಾಜಿ ಪ್ರೆಸಿಡೆಂಟ್ ಹೂವರ್ ರೂಮಿನಿಂದ ಹೊರಗೆ ಬಂದರು. ಕಾಮತರು ಅವರನ್ನು ಸಂಧಿಸಿ, ಮಿಸ್ಟರ್ ಪ್ರೆಸಿಡೆಂಟ್, ನಾನು ಲೋಕಲ್ ಪತ್ರಿಕೆ ಪ್ರತಿನಿಧಿಸುತ್ತೇನೆ. ನಿಮ್ಮ ಮತ್ತು ಮುಖ್ಯಮಂತ್ರಿಗಳ ಮಾತುಕತೆಯ ಬಗ್ಗೆ ಕೆಲ ವಿಷಯ ಹೇಳಬಹುದೇ?'' ಅಮೇರಿಕನ್ ಮಾಜಿ ಪ್ರೆಸಿಡೆಂಟ್‌ಗೆ ಪತ್ರಿಕಾ ಪ್ರತಿನಿಧಿಗಳನ್ನು ಎದುರಿಸುವುದು ಹೊಸದೇನಾಗಿರಲಿಲ್ಲ. ಅಮೇರಿಕನ್ ಸರಕಾರ ಕೆಲವು ಸಾವಿರ ಟನ್ ಆಹಾರಧಾನ್ಯ ಭಾರತಕ್ಕೆ ದಾನವಾಗಿ ಕೊಡಲು ನಿರ್ಣಯಿಸಿತ್ತು. ಅಮೇರಿಕೆಯಿಂದ ಹಡಗಗಳಲ್ಲಿ ಮಾಲು ಹೊರಟಿತ್ತು. ಅದು ಮುಂಬೈ ಬಂದರು ತಲುಪಿದಾಗ ಅದನ್ನು ಪಡೆಯುವ, ಸ್ಟೋರ್ ಮಾಡುವ ವ್ಯವಸ್ಥೆಯ ಬಗ್ಗೆ ಮಾತಾಡಿದ್ದರು. ಕೆಲ ಮಾತು ಹೇಳಿ ಹೆಚ್ಚಿನ ವಿವರ ಮುಖ್ಯಮಂತ್ರಿಗಳ ಕಚೇರಿಯಿಂದ ಪಡೆಯಲು ಹೇಳಿ ಹೊರಟು ಹೋದರು.

ಕಾಮತರು ಆಫೀಸಿಗೆ ಹೋಗಿ ಲಗುಬಗೆಯಿಂದ ರಿಪೋರ್ಟ್ ಬರೆದು, ಅದು ಡಾಕ್ ಎಡಿಶನ್‌ದಲ್ಲು ಬರುವಂತೆ ಸಿದ್ಧಪಡಿಸಿದರು. ಆದರೆ ಈ ವಿಶೇಷ ವರದಿ ಕಂಡು ಗೋಪಿ ಇವರನ್ನು ಬೈದರು. ನಮ್ಮ ಸರಕಾರದ ಬ್ರೀಫಿಂಗ ಮುಖ್ಯ ಅಂದಿದ್ದರು.

ಕಾಮತ್ ಸರಣಿಯ ಹಿಂದಿನ ಪುಟಗಳು

ಕ್ವಿಟ್ ಇಂಡಿಯಾ ಚಳವಳಿಯಲ್ಲಿ</a><br><a href=ಕಾಲೇಜು ಮುಗಿದ ಮೇಲೆಯೇ ನಿಜ ಜೀವನದ ಆರಂಭ
ಉಡುಪಿಯಲ್ಲಿ ಗಾಂಧಿ, ನೆಹರು, ರಾಜಾಜಿ ಜೊತೆ ಒಡನಾಟ
ಅಂದಿನ ಸುಖ ವಂಚಿತ ಇಂದಿನ ಮಕ್ಕಳು
ಕಾಮತರಿಗೆ ವರದಾನವಾದ ಯೌವನದ ಸಂಸ್ಕಾರ
ತುಂಬಿದ ಮನೆಯಲ್ಲಿ ಕಾಮತರ ಅಕ್ಕರೆಯ ಬಾಲ್ಯ
ಕಾಮತ್‌ರ ಆತ್ಮಚರಿತ್ರೆಯಲ್ಲಿ ಭೂತ, ವರ್ತಮಾನದ ಮೆಲುಕು
ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್" title="ಕ್ವಿಟ್ ಇಂಡಿಯಾ ಚಳವಳಿಯಲ್ಲಿ
ಕಾಲೇಜು ಮುಗಿದ ಮೇಲೆಯೇ ನಿಜ ಜೀವನದ ಆರಂಭ
ಉಡುಪಿಯಲ್ಲಿ ಗಾಂಧಿ, ನೆಹರು, ರಾಜಾಜಿ ಜೊತೆ ಒಡನಾಟ
ಅಂದಿನ ಸುಖ ವಂಚಿತ ಇಂದಿನ ಮಕ್ಕಳು
ಕಾಮತರಿಗೆ ವರದಾನವಾದ ಯೌವನದ ಸಂಸ್ಕಾರ
ತುಂಬಿದ ಮನೆಯಲ್ಲಿ ಕಾಮತರ ಅಕ್ಕರೆಯ ಬಾಲ್ಯ
ಕಾಮತ್‌ರ ಆತ್ಮಚರಿತ್ರೆಯಲ್ಲಿ ಭೂತ, ವರ್ತಮಾನದ ಮೆಲುಕು
ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್" />ಕ್ವಿಟ್ ಇಂಡಿಯಾ ಚಳವಳಿಯಲ್ಲಿ
ಕಾಲೇಜು ಮುಗಿದ ಮೇಲೆಯೇ ನಿಜ ಜೀವನದ ಆರಂಭ
ಉಡುಪಿಯಲ್ಲಿ ಗಾಂಧಿ, ನೆಹರು, ರಾಜಾಜಿ ಜೊತೆ ಒಡನಾಟ
ಅಂದಿನ ಸುಖ ವಂಚಿತ ಇಂದಿನ ಮಕ್ಕಳು
ಕಾಮತರಿಗೆ ವರದಾನವಾದ ಯೌವನದ ಸಂಸ್ಕಾರ
ತುಂಬಿದ ಮನೆಯಲ್ಲಿ ಕಾಮತರ ಅಕ್ಕರೆಯ ಬಾಲ್ಯ
ಕಾಮತ್‌ರ ಆತ್ಮಚರಿತ್ರೆಯಲ್ಲಿ ಭೂತ, ವರ್ತಮಾನದ ಮೆಲುಕು
ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X