ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ರಾಮದೇವ ಮತ್ತು ಪತಂಜಲಿ ಯೋಗಪೀಠ

By Staff
|
Google Oneindia Kannada News


Patanjali Yogapeetha established by Ramdev in Haridwar ರಾಮದೇವರ ಬಗ್ಗೆ ಗೌರವ

ಪುಣೆಯ ಡಿ.ವಾಯ್‌.ಪಾಟೀಲ ಶಿಕ್ಷಣ ಸಂಸ್ಥೆಯ 25 ಸಾವಿರ ವಿದ್ಯಾರ್ಥಿಗಳು ಏಳು ದಿನಗಳ ಪ್ರಶಿಕ್ಷಣ ಪಡೆದ ನೇರ ಪ್ರಸಾರವನ್ನು ನಾನು ದೂರದರ್ಶನದಲ್ಲಿ ನೋಡಿದ್ದೆ. ಬಹಳೇ ಪ್ರಭಾವಿತನಾಗಿದ್ದೆ. ಭಾರತೀಯರು ವಿದೇಶಿ ಔಷಧಿ ಕಂಪನಿಯ ದೈತ್ಯ ಕಬಂಧಪಾಶದಿಂದ ಮುಕ್ತಿ ಪಡೆಯಬೇಕಾದರೆ, ರೋಗಗಳಿಂದ ಪರಿಹಾರ ಪಡೆಯಬೇಕಾದರೆ, ಸ್ವಾಮಿ ರಾಮದೇವ ಅವರು ತೋರಿಸುವ ಯೋಗ ಹಾಗೂ ಆಯುರ್ವೇದದ ಮಾರ್ಗ ಹಿಡಿಯುವುದು ಅನಿವಾರ್ಯ ಎಂದು ನಂಬುವ ಜನರಲ್ಲಿ ನಾನೂ ಒಬ್ಬವ.

ಯೋಗಪೀಠದ ಕಟ್ಟದ ಸಮುಚ್ಛಯ ನಾಲ್ಕು ಲಕ್ಷ ಸ್ಕ್ವೇರ್‌ ಫೂಟ್‌ ಕ್ಷೇತ್ರ ಆವರಿಸಿದೆ. ಎಲ್ಲೆಡೆ ಹಸಿರಿದೆ, ಹೂವಿನ ಉದ್ಯಾನವಿದೆ, ನೀರಿನ ಕಾರಂಜಿಗಳಿವೆ, ಪತಂಜಲಿಯ ಭವ್ಯ ಮೂರ್ತಿಗಳಿವೆ. ಪ್ರಮುಖವಾಗಿ ಕಟ್ಟಡ ಸಮುಚ್ಚಯದಲ್ಲಿ ಐದು ವಿಭಾಗಗಳಿವೆ.

1) ಸದ್ಭಾವನಾ : ಮೂರು ಮಜಲಿನ ಈ ಕಟ್ಟಡದ ಪ್ರವೇಶದ್ವಾರದಲ್ಲಿ ಮಾಹಿತಿ ಕೇಂದ್ರವಿದೆ. ಸಂದರ್ಶಕರಿಗೆ/ ರೋಗಿಗಳಿಗೆ ಅವಶ್ಯಕವಾದ ಮಾಹಿತಿ ಒದಗಿಸುತ್ತದೆ. ಅಲ್ಲಿಯ ಓ.ಪಿ.ಡಿ. ಯಲ್ಲಿ ದಿನಾಲೂ ಹತ್ತು ಸಾವಿರ ರೋಗಿಗಳಿಗೆ ಚಿಕಿತ್ಸೆ ಮಾಡುವ ಕ್ಷಮತೆ ಇದೆಯಂತೆ. ಇನ್ನೂ ಪೂರ್ತಿಯಾಗಿ ಇಲ್ಲಿ ಕಾರ್ಯಾಚರಣೆ ಶುರು ಆಗಿಲ್ಲ. (ಇದು ಪೂರ್ತಿ ಕ್ರಿಯಾಶೀಲವಾಗಲು ಇನ್ನೂ 2-3 ವರ್ಷಗಳು ಬೇಕಾಗಬಹುದು.) ‘ಪತಂಜಲಿ ಯೋಗಪೀಠ’ಕ್ಕೆ ಉತ್ತರಾಂಚಲ ಸರಕಾರದಿಂದ ‘ಡೀಮ್ಡ್‌ ಯುನಿವರ್ಸಿಟ್‌’ ಎಂಬ ಸ್ಟೇಟಸ್‌ ದೊರೆತಿದೆಯಂತೆ. ಅಲ್ಲಿ ಪರೀಕ್ಷಾ ಕೇಂದ್ರವಿದೆ (ಡಯಗ್ನಾಸ್ಟಿಕ್‌ ಸೆಂಟರ್‌). ಪೆಥಾಲಜಿ ಹಾಗೂ ರಿಸರ್ಚ ಲೆಬೊರೆಟರಿ ಇದೆ. ಆಪರೇಶನ್‌ ಥೇಟರ್‌ ಇದೆ. ಅತ್ಯಾಧುನಿಕ ಸಲಕರಣಗಳಿವೆ. ಮೊದಲ ಮಾಳಿಗೆಯಲ್ಲಿ ದಂತ ಚಿಕಿತ್ಸಾಲಯವಿದೆ. ಬದಿಯಲ್ಲಿ ದೊಡ್ಡ ಗ್ರಂಥಾಲಯವಿದೆ. ನನಗೆ ಒಳಗೆ ಹೋಗಿ ನೋಡಲು ಸಾಧ್ಯವಾಗಲಿಲ್ಲ.
2) ಸಮರ್ಪಣ : ಇದು ಮೂರು ಮಜಲುಗಳ ಕಟ್ಟಡ. ಇಲ್ಲಿ ಐಪಿಡಿ/ ಅತಿಥಿಗೃಹ/ ಡಾರ್ಮೆಟರಿ ಇವೆ. ಇವು ರೋಗಿಗಳಿಗಾಗಿ ಮತ್ತು ಸಂದರ್ಶಕರಿಗಾಗಿ ಇವೆ.
3) ತಪಸ್ಯಾ : ಇಲ್ಲಿ ಕೂಡ ಅತಿಥಿಗೃಹಗಳಿವೆ.
4) ಶ್ರದ್ಧಾ : ಇಲ್ಲಿ ವಿಐಪಿಗಳಿಗಾಗಿ ವಿಶೇಷ ವ್ಯವಸ್ಥೆ ಇದೆ.(ಇವು ದಾನಿಗಳಿಗಾಗಿ ಇರಬಹುದು)
5) ದಿಶಾ : ಇಲ್ಲಿ ಆಯುರ್ವೇದ ಔಷಧಿಗಳ ಮಾರಾಟ ಕೇಂದ್ರವಿದೆ. ಇಲ್ಲಿ ಅತಿ ಕಡಿಮೆ ಬೆಲೆಗೆ ಉತ್ತಮ

ಔಷಧಿ ಮಾರಲಾಗುತ್ತದೆ ಎನ್ನುತ್ತಾರೆ. ಕಡುಬಡವರಿಗೆ ಉಚಿತ ಔಷಧಿ ಸರಬರಾಜು ಮಾಡುವ ವ್ಯವಸ್ಥೆ ಇದೆ. ಇಲ್ಲಿಯೇ ಒಂದು ಭಾಗದಲ್ಲಿ ಸ್ವಾಮಿ ರಾಮದೇವ ಹಾಗೂ ಆಯುರ್ವೇದಾಚಾರ್ಯ ಬಾಲಕೃಷ್ಣಜೀ ಅವರು ಬರೆದ ಪುಸ್ತಕಗಳ ಹಾಗೂ ಸಿಡಿಗಳ ಮಾರಾಟದ ವ್ಯವಸ್ಥೆ ಇದೆ. ಅವುಗಳ ಬೆಲೆ ಅತಿ ಕಡಿಮೆ. ಮೊದಲ ಮಾಳಿಗೆಯಲ್ಲಿ ಒಂದು ಸಾವಿರ ಜನರು ಯೋಗಾಭ್ಯಾಸ ಮಾಡಲು ಸ್ಥಳಾವಕಾಶವಿದೆ.

ಇನ್ನೆರಡು ವಿಭಾಗಗಳು

ಅನ್ನಪೂರ್ಣಾ : ನೆಲಮಾಳಿಗೆಯಲ್ಲಿ ಉಚಿತ ಕ್ಲೋಕ್‌ರೂಮ್‌ ಹಾಗೂ ವಿಶ್ರಾಂತಿಗೃಹ ಒದಗಿಸಲಾಗಿದೆ. ಪ್ರಥಮ ಹಾಗೂ ದ್ವಿತೀಯ ಮಜಲುಗಳಲ್ಲಿ ಭೋಜನಾಲಯವಿದೆ. ಇಲ್ಲಿ ಅತ್ಯಂತ ಶುದ್ಧ ಆಹಾರವನ್ನು ಅತಿ ಕಡಿಮೆ ಬೆಲೆಗೆ ಪೂರೈಸುತ್ತಾರೆ. ಇಲ್ಲಿ ಸೆಲ್ಫ್‌-ಸರ್ವಿಸ್‌ ಪದ್ಧತಿ ಇದೆ.

ಯಜ್ಞಶಾಲಾ : ವಾತಾವರಣವನ್ನು (ಪರಿಸರವನ್ನು) ಶುದ್ಧಗೊಳಿಸಲು ಇಲ್ಲಿ ಸದಾ ಯಜ್ಞ ನಡೆದಿರುತ್ತದೆ. ಅದರ ಸುತ್ತಲೂ ಪ್ರತಿ ದಿನ ಯೋಗ-ಕ್ಲಾಸ್‌ ನಡೆಸಲಾಗುತ್ತಿದೆ. ಇಲ್ಲಿಂದ 200 ಮೀಟರ್‌ ದೂರದಲ್ಲಿ, ಸುಮಾರು 20 ಎಕರೆ ಪ್ರದೇಶದಲ್ಲಿ ಔಷಧೀಯ ಗಿಡಮೂಲಿಕೆಗಳನ್ನು ಬೆಳೆಯುವ ತೋಟವಿದೆ. ಬದಿಯಲ್ಲಿ ಗೋಶಾಲೆ ಇದೆ. ಭಾರತದ ಉತ್ತಮ ತಳಿಯ ಗೋವುಗಳು ಇವೆ.

ಇಲ್ಲಿ ಬರುವವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲೆಡೆ ಕ್ಯೂ ಸಿಸ್ಟಂ ಇದೆ. ಇಲ್ಲಿ ಸುರಾಪಾನ, ಗುಟಕಾ ಸೇವನೆ, ಬೀಡಿ-ಸಿಗಾರೇಟ್‌ ಸೇವನೆ ನಿಷಿದ್ಧ. ಈ ಹೊಸ ಕ್ಯಾಂಪಸ್‌ ಒಂದೆರಡು ವರ್ಷಗಳಲ್ಲಿ ರೂಪುಗೊಂಡದ್ದು. ಇವರ ಮೂಲ ಸ್ಥಾನ ಹರಿದ್ವಾರದಿಂದ ಎರಡು ಕಿಲೋಮೀಟರ್‌ ದೂರದಲ್ಲಿರುವ ಕನ್‌ಖಲ್‌ ಎಂಬ ಪ್ರದೇಶ. ಅಲ್ಲಿ ‘ದಿವ್ಯ ಯೋಗಮಂದಿರ ಟ್ರಸ್ಟ್‌’ ಇದೆ. ಅಲ್ಲಿ ಕೃಪಾಲು ಆಶ್ರಮವಿದೆ.

ಕೃಪಾಲು ಮಹಾರಾಜರ ಶಿಷ್ಯರಾದ ಶಂಕರಮಹಾರಾಜರು ಸ್ವಾಮಿ ರಾಮದೇವರ ಗುರುಗಳು. ಅಲ್ಲಿ ಆಯುರ್ವೇದ ಔಷಧಿ ಉತ್ಪಾದಿಸುವ ಕೇಂದ್ರವಿದೆ. ಮಧ್ಯದಲ್ಲಿ ಒಬ್ಬ ಕಮ್ಯೂನಿಸ್ಟ್‌ ಎಂ.ಪಿ. ಇಲ್ಲಿಯ ಔಷಧಿಗಳಲ್ಲಿ ಎಲುಬಿನ ಪುಡಿಯಿದೆ ಎಂದು ದೂರಿದ್ದ ಗಲಾಟೆಯ ಪ್ರಸಂಗದ ತರುವಾಯು ಇಲ್ಲಿ ಜನರಿಗೆ ಪ್ರವೇಶವಿಲ್ಲವಂತೆ. ಅಲ್ಲಿ ಗ್ರಂಥಾಲಯವಿದೆ. ಪುಸ್ತಕ ಮಾರಾಟ ಕೇಂದ್ರವಿದೆ.

ಪತಂಜಲಿ ಯೋಗಪೀಠದಿಂದ ಇಲ್ಲಿಗೆ ಪ್ರತಿ ತಾಸಿಗೆ ಒಂದು ಆಶ್ರಮದ ಬಸ್‌ ಹೋಗುತ್ತದೆ. ಅದರಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮರುದಿನ ಬಸ್‌ ಹಿಡಿದು ಪತಂಜಲಿ ಯೋಗ ಪೀಠಕ್ಕೆ ಬಂದೆ. ಇಡೀ ಕ್ಯಾಂಪಸ್‌ ಸುತ್ತಿ ವಾಯುಸೇವನೆ ಮಾಡುತ್ತ ಅಡ್ಡಾಡಿದೆ.

ಪ್ರಾಣಾಯಾಮದ ಪಾಠ

ಮಾರನೆಯ ದಿನ ಮುಂಜಾನೆ ಬೇಗ ಎದ್ದೆ. ಮುಂಜಾನೆ ಏಳು ಗಂಟೆಯಿಂದ ಅಲ್ಲಿಯ ಯಜ್ಞಶಾಲೆಯಲ್ಲಿ ಯೋಗ ಕ್ಲಾಸ್‌ ನಡೆಯುತ್ತವೆ ಎಂದು ತಿಳಿದಿದ್ದೆ. ಅಲ್ಲಿ 60-70 ಜನ ಇದ್ದರು. ಒಂದಿಬ್ಬರು ವಿದೇಶೀಯರೂ ಇದ್ದರು. ಅಲ್ಲಿ ಏಳು ಬಗೆಯ ಪ್ರಾಣಾಯಾಮ ಮಾತ್ರ ಹೇಳಿಕೊಡುತ್ತಾರೆ. ಯೋಗ ಕ್ಲಾಸು ಮುಗಿಸಿ ರೂಮು ಖಾಲಿ ಮಾಡಿ ಹರಿದ್ವಾರಕ್ಕೆ ಹೊರಟೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X