• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ’

By Staff
|

ನಮ್ಮ ವಿಶ್ವವಿದ್ಯಾಲಯ(ಕರ್ನಾಟಕ) ಹಲವಾರು ಬಹುಮಾನ ಗಳಿಸಿತ್ತು. ಗಿರೀಶ ಕಾರ್ನಾಡ ಭಾಷಣ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಬೇಂದ್ರೆಯವರ ಮಗ ವಾಮನ ಬೇಂದ್ರೆ, ಗೋಕಾಕರ ನಾಟಕ ‘ವಿಮರ್ಶಕ ವೈದ್ಯ’ದಲ್ಲಿ ನಾಯಕನಾಗಿ ನಟಿಸಿದ್ದರೆ, ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ನಾಟಕದಲ್ಲಿ ಅವರ ಮಗ ಪೂರ್ಣಚಂದ್ರ ತೇಜಸ್ವಿ ಪಾತ್ರಧಾರಿಯಾಗಿದ್ದರು. ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರ’ದಲ್ಲಿ ನನಗೊಂದು ಪಾತ್ರವಿತ್ತು.

ಪ್ರಧಾನಿ ನೆಹರು ಉದ್ಘಾಟನ ಭಾಷಣ ಮಾಡಿದ್ದರು. ಅವರನ್ನು ಬಹಳ ಸಮೀಪದಿಂದ ಕಂಡ ಭಾಗ್ಯ ನಮ್ಮದಾಗಿತ್ತು. (ಈಗ ಅವರು ನಮ್ಮನ್ನಗಲಿ ಹೋಗಿದ್ದಾರೆ, ಈ ಸ್ಮೃತಿಗೆ ಖೇದದ ಆಯಾಮವೂ ಸೇರಿದೆ.) ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ತಮ್ಮ ರಾಷ್ಟ್ರಪತಿಭವನದ ‘ಮೊಘಲ್‌ ಗಾರ್ಡನ್‌’ದಲ್ಲಿ ಸುಖಭೋಜನ ಕೂಟ ಏರ್ಪಡಿಸಿದ್ದರು.

ಏಳು ದಿನದಲ್ಲಿ ಒಂದು ದಿನ ನಾವು ಒಂದು ಟ್ಯಾಕ್ಸಿಯಲ್ಲಿ ಹರಿದ್ವಾರಕ್ಕೆ ಹೋಗಿ ಅಲ್ಲಿ ಗಂಗಾಸ್ನಾನ ಮಾಡಿ ಬಂದಿದ್ದೆವು. ಆಗ ನನಗೆ ವಿಪರೀತ ಜ್ವರವಿತ್ತು. ಅಂಥದರಲ್ಲೇ ಐಸ್‌ಕೋಲ್ಡ್‌ ನೀರಿನಲ್ಲಿ ಸ್ನಾನಮಾಡಿದ್ದೆ. ಮುಂದೆ ಎಷ್ಟೋವರ್ಷ ನನಗೆ ಜ್ವರದ ಬಾಧೆಯೇ ಆಗಿರಲಿಲ್ಲ. ದೆಹಲಿ ಎಂದೊಡನೆ ಎಲ್ಲ ಸ್ಮೃತಿಗಳು ಮರುಕಳಿಸಿದವು.

ಪುಸ್ತಕಪ್ರೇಮಿ ‘ಕೂಗೋ’(ಕೆ. ಗೋಪಾಲ ಭಟ್ಟ) ಅವರ ಕಳಕಳಿಯ ಕರೆಯಿಂದ ಸ್ವಲ್ಪ ಕನ್ನಡ ಪುಸ್ತಕ ಮಾರಾಟಗೊಂಡವು. ಕವಿಗೋಷ್ಠಿಯನ್ನು ಡಾ। ವಸಂತಕುಮಾರ ಪೆರ್ಲ್‌ ಉದ್ಘಾಟಿಸಿದರು. ನಾನು ಓದಿದ ಒಂದು ಪದ್ಯವನ್ನು ಮೆಚ್ಚಿ ಚಿರಂಜೀವಿಸಿಂಗ್‌ ಅದರ ಪ್ರತಿ ಕೇಳಿದಾಗ ನನಗೆ ಕವಿಯಾದದ್ದು ಸಾರ್ಥಕವೆನಿಸಿತ್ತು. ‘‘ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ’’ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಮಾಡಿ ನಾನು ಭಾಷಣ ಮಾಡಿದೆ.

ಭಾಷಣದ ಸಾರಾಂಶ :

‘‘ದೆಹಲಿ ಎಂದರೆ ಹೊಸ್ತಿಲು ಎಂದು ಅರ್ಥವಿದೆ. ಸಂಸ್ಕೃತದಲ್ಲಿ ‘ದೆಹಲಿದೀಪನ್ಯಾಯ’ ಎಂಬ ಉಕ್ತಿ ಇದೆ. ಇದರ ಅರ್ಥ ‘ಹೊಸ್ತಿಲ ಮೇಲಿಟ್ಟ ದೀಪ’ ಎಂದು. ಮನೆಯ ಹೊಸ್ತಿಲ ಮೇಲೆ ದೀಪ ಇಟ್ಟರೆ ಮನೆಯ ಒಳಗೂ ಹೊರಗೂ ಬೆಳಕಾಗುತ್ತದೆ. ದೆಹಲಿ ಭಾರತವೆಂಬ ಮನೆಯ ಹೊಸ್ತಿಲು. ಅಲ್ಲಿ ಕಳೆದ 24 ವರ್ಷಗಳಿಂದ ಸಾಮಗರು ಕನ್ನಡದ ದೀಪ ಹೊತ್ತಿಸುತ್ತ ಬಂದಿದ್ದಾರೆ.

‘ಹಚ್ಚೇವು ಕನ್ನಡದ ದೀಪ’ ಎಂದು ಹಾಡಿದರು ಡಾ। ಕರ್ಕಿ. ಬಾ. ಸಾಮಗರು ನಮ್ಮನ್ನೆಲ್ಲ ದೆಹಲಿಗೆ ಬಾ ಎಂದು ಕರೆದು ಕನ್ನಡದ ಹಬ್ಬ ನಡೆಸುತ್ತಿದ್ದಾರೆ. ಸಮಸ್ತ ಕನ್ನಡಿಗರ ವತಿಯಿಂದ ನಾನು ಅವರನ್ನು ಅಭಿನಂದಿಸುತ್ತೇನೆ.

ಕನ್ನಡ ಸಂಸ್ಕೃತಿ ಯಾವುದು? ‘ಭಾರತ ಜನನಿಯ ತನುಜಾತೆ । ಜಯಹೇ ಕರ್ನಾಟಕ ಮಾತೆ’ ಎಂದು ಹಾಡಿದರು ಕುವೆಂಪು. ಒಂದು ಹೆಜ್ಜೆ ಮುಂದಿಟ್ಟು ‘ಕನ್ನಡವೂ ಭಾರತವೂ ಜಗವೆಲ್ಲವು ಒಂದೇ । ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೇ’ ಎಂದು ಹಾಡಿದರು ಬೇಂದ್ರೆ. ಈ ಮಾತು ಋಷಿವಾಕ್ಯದಂತಿದೆ. ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ವಿರಾಟ್‌ ಹೆಜ್ಜೆ ಇಡುತ್ತಲಿದೆ.

ಪ್ರಕೃತಿ ಮತ್ತು ಸಂಸ್ಕೃತಿಯ ಬಗ್ಗೆ ಮಾತಾಡುತ್ತ ಬೇಂದ್ರೆ ಒಮ್ಮೆ ಹೇಳಿದ್ದರು. ‘ನಡೆದಾಡುವುದು ಪ್ರಕೃತಿ, ಆದರೆ ನೃತ್ಯಮಾಡುವುದು ಸಂಸ್ಕೃತಿ’ ಎಂದು. ನರ್ತಿಸುವವರಿಗೆ ನಡೆದಾಡಲು ಬರುತ್ತದೆ ಆದರೆ ನಡೆದಾಡುವವರಿಗೆಲ್ಲ ನರ್ತನ ಸಾಧಿಸುವುದಿಲ್ಲ. ಅದೇರೀತಿ ಎಲ್ಲ ಸಂಸ್ಕೃತಿಯೂ ಪ್ರಕೃತಿಯೇ, ಆದರೆ ಪ್ರಕೃತಿಯೆಲ್ಲ ಸಂಸ್ಕೃತಿ ಅಲ್ಲ. ಭಾರತೀಯ ಸಂಸ್ಕೃತಿ ವಿಶ್ವದ ಅಸಂಖ್ಯ ಸಂಸ್ಕೃತಿಗಳಿಗಿಂತ ಭಿನ್ನವಾಗಿದೆ. ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿಯು ಕೂಡ ಭಿನ್ನವಾಗಿದೆ. ಕನ್ನಡ ಸಂಸ್ಕೃತಿಗೆ ತನ್ನದೇ ಆದ ಒಂದು ವೈಶಿಷ್ಟ್ಯವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more