ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ’

By Staff
|
Google Oneindia Kannada News


ದೆಹಲಿಯಲ್ಲಿ 24ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಕೆಲವು ತಿಂಗಳ ಹಿಂದಷ್ಟೇ ನಡೆಯಿತು. ‘ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ’’ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಮಾಡಿ, ನನ್ನ ವಿಚಾರಗಳನ್ನು ಅಲ್ಲಿ ಹಂಚಿಕೊಂಡೆ.

Dr. G.V. Kulkarni speaking at Delhi Kannada Sanghaದೆಹಲಿಯಲ್ಲಿ ಏಪ್ರಿಲ್‌ 7 ಮತ್ತು 8ರಂದು 24ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ನಡೆಯಿತು. ‘ದೆಹಲಿ ಕನ್ನಡಿಗ’ ಮಾಸ ಪತ್ರಿಕೆಯ ಸಂಪಾದಕ ಶ್ರೀ ಬಾಲಕೃಷ್ಣ ಸಾಮಗ ಅವರು ಈ ಸಮ್ಮೇಳನದ ಬೀಜ, ಎಲೆ, ಕಾಯಿ ಮತ್ತೆ ಫಲ ಕೂಡ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ದೆಹಲಿಯ ಜವಾಹರಲಾಲ ನೆಹರು ವಿಶ್ವ ವಿದ್ಯಾಲಯಕ್ಕೆ ವಿದ್ಯಾರ್ಥಿಯಾಗಿ ಬಂದ ಸಾಮಗ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕನ್ನಡದ ಕೈಂಕರ್ಯ ಕೈಕೊಂಡವರು. ‘ಏಕವ್ಯಕ್ತಿ ಸಂಸ್ಥೆ’ಯಂತೆ ಕ್ರಿಯಾಶೀಲರಾಗಿರುವ ಸಾಮಗ ಅವರನ್ನು ಕಂಡರೆ, ಮುಂಬೈಯ ಎಚ್‌.ಬಿ.ಎಲ್‌.ರಾವ್‌ ಅವರ ನೆನಪಾಗುತ್ತದೆ.

ರಾವ್‌ ಅವರು ಕೂಡ ಕನ್ನಡದ ಕೆಲಸಕ್ಕಾಗಿ ಎಪ್ಪತ್ತೈದರ ಹರಯದಲ್ಲಿ ದುಡಿಯುತ್ತಿದ್ದಾರೆ. (ಅವರ ಕ್ಷೇತ್ರದ ವಿಸ್ತಾರ ಇನ್ನೂ ಅಧಿಕ- ಯಕ್ಷಗಾನ, ತುಳುಪರ್ಬ, ಬನ್ನಂಜೆ ವ್ಯಾಖ್ಯಾನ ಸಂಯೋಜನೆ, ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಕಾರ್ಯಕಲಾಪ ಮುಂತಾದವು ಸಮಾವೇಶಗೊಂಡಿವೆ.)

ಮುಂಬೈಯಲ್ಲಿ ಕೆಲ ತಿಂಗಳ ಹಿಂದೆ ಇಂಥದೊಂದು ಸಮ್ಮೇಳನ ಸಾಮಗ ಅವರು ನಡೆಸಿದ್ದರು. ನನಗೆ ಸಾಹಿತಿಯೆಂದಲ್ಲ, ‘ಯೋಗಪಟು’ ಎಂದು ಗೌರವಿಸಿದ್ದರು. ಅಲ್ಲಿ ನಡೆದ ಕವಿಸಮ್ಮೇಳನದ ಅಧ್ಯಕ್ಷರ ಅನುಪಸ್ಥಿಯಲ್ಲಿ ನನಗೆ ಅಧ್ಯಕ್ಷಸ್ಥಾನದ ಗೌರವ ನೀಡಿದ್ದರು. ದೆಹಲಿಯ ಸಮ್ಮೇಳನದಲ್ಲಿ ನನಗೆ ಭಾಗವಹಿಸಲು ಕರೆದಾಗ, (ಪುಸ್ತಕಪ್ರದರ್ಶನ ಉದ್ಘಾಟಿಸಲು, ಒಂದು ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಲು, ಮತ್ತು ಕವಿ ಸಮ್ಮೇಳನದಲ್ಲಿ ಭಾಗವಹಿಸಲು ಆಮಂತ್ರಿಸಿದಾಗ), ನನಗೆ ದೆಹಲಿಯ ಹಳೆಯ ಸ್ಮೃತಿ ಮರುಕಳಿಸಿ ಭಾಗವಹಿಸುವ ಬಯಕೆ ಮೂಡಿತು. ನನ್ನ ಅನುಭವ ಕಥನ, ಈ ಲೇಖನ.

ಏಪ್ರಿಲ್‌ 7, ಶನಿವಾರ ಸಂಜೆ ಎಸ್‌.ಗೋಪಾಲಶಾಸ್ತ್ರಿ ವೇದಿಕೆಯಲ್ಲಿ, ಕರ್ನಾಟಕ ಭವನದ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ। ವಿ.ಎನ್‌.ಆಚಾರ್ಯ ಅವರು ಎರಡು ದಿನಗಳ ಈ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಮ್ಮೇಳನದ ಇನ್ನೊಂದು ವೈಶಿಷ್ಟ್ಯವೆಂದರೆ ಕರ್ನಾಟಕದ ನಿವೃತ್ತ ಐ.ಎ.ಎಸ್‌. ಅಧಿಕಾರಿ ಶ್ರೀ ಚಿರಂಜೀವಿಸಿಂಗ ಅಧ್ಯಕ್ಷತೆ ವಹಿಸಿದ್ದರು.

ಸಿಂಗ್‌ ಅವರು ಪಂಜಾಬಿ ಆಗಿದ್ದರೂ ಕನ್ನಡಕ್ಕೆ ಮನಸೋತವರು. ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿದವರು, ಅವರಿಗಾಗಿ ‘ಜಾಕ್‌ ಅಂಡ್‌ ಜಿಲ್‌’, ‘ಬಾ ಬಾ ಬ್ಲ್ಯಾಕ್‌ ಶೀಪ್‌’ನಂತಹ ನರ್ಸರಿ ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಿದವರು. ಕನ್ನಡದಲ್ಲಿಯೇ ತಮ್ಮ ಭಾಷಣ ಮಾಡಿ ತಮ್ಮನ್ನು ಪಂಜಾಬಿ-ಕನ್ನಡಿಗ ಎಂದು ಅಭಿಮಾನದಿಂದ ಕರೆದುಕೊಂಡರು.

ಎರಡು ದಿನ ಮುಂಬೈಯಲ್ಲಿ ನಡೆದಂತೆ ಕಿಕ್ಕಿರಿರ ಕಾರ್ಯಕ್ರಮ ಇಲ್ಲಿಯೂ ನಡೆಯಿತು. ಹಲವು ಗಣ್ಯರ ಸನ್ಮಾನ, ಮಹಿಳಾಗೋಷ್ಠಿ, ವಿಚಾರ ಗೋಷ್ಠಿ, ಬಾಲಗೋಷ್ಠಿ ನಡೆಸಿದರು. ಸಂಗೀತ ನೃತ್ಯ ಕಾರ್ಯಕ್ರಮಗಳಿದ್ದವು. ಹೊಟೆಲ್‌ ಅಮನ್‌ ಪ್ಯಾಲೇಸಿನವರು ಅತಿಥಿಗಳಿಗೆ ಊಟದ ವ್ಯವಸ್ಥೆ ಪ್ರಾಯೋಜಿಸಿದ್ದರು.

ನನ್ನ ದೆಹಲಿ ನಂಟು :

ನಾನು ಮೊದಲಸಲ ದೆಹಲಿ ಕಂಡದ್ದು 1957ರಲ್ಲಿ. ನಾನು ಆಗ ಎಂ.ಎ. ವಿದ್ಯಾರ್ಥಿಯಾಗಿದ್ದೆ. ಆಗ ಎರಡನೆಯ ಅಖಿಲ ಭಾರತೀಯ ಅಂತರ್‌ವಿಶ್ವವಿದ್ಯಾಲಯ ಯುವಜನ ಮಹೋತ್ಸವ ನಡೆದಿತ್ತು. 33 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X