• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಸುದೇವನಿಂದ ಇನ್ನಷ್ಟು ಪವಾಡಗಳು!

By Staff
|

ಸನ್ಯಾಸದ ಸೆಳೆತ

ಗುರುಕುಲವಾಸ ಮುಗಿಯಿತು. ಇನ್ನು ಸನ್ಯಾಸಿಯಾಗುವ ಬಯಕೆ ಮೂಡಿತು. ‘ಮತ್ತೊಬ್ಬನಿಗೆ ಶಿಷ್ಯನಾಗದವ ಎಂದೂ ಇನ್ನೊಬ್ಬರಿಗೆ ಗುರುವಾಗಲಾರ’ ಎಂಬ ಮಾತನ್ನು ತಿಳಿಸಲೆಂದೇ ಶಿಷ್ಯತ್ವವಹಿಸಿದ್ದ. ಸದಾಗಮಗಳಿಗೆ ಅಪವ್ಯಾಖ್ಯಾನಗಳ ಮೂಲಕ ಅಪಚಾರ ನಡೆದಿತ್ತು. ಅಪಚಾರವೆಸಗಿದವರಿಗೆ ದಂಡನೆ ಮಾಡಬೇಕಾದರೆ ತಾನು ಕೈಯಲ್ಲಿ ದಂಡವನ್ನು ಹಿಡಿಯಬೇಕು. ಅದಕ್ಕೆ ಸನ್ಯಾಸಿಯಾಗಬೇಕು. ಅಂದರೆ ತನ್ನ ಸರ್ವಸ್ವವನ್ನು ಭಗವಂತನಲ್ಲಿ ನ್ಯಾಸವಾಗಿ ಇಡಬೇಕು, ಇದುವೆ ನಿಜವಾದ ಸನ್ಯಾಸ.

ತನಗೆ ಸನ್ಯಾಸ ದೀಕ್ಷೆ ಕೊಡಬಲ್ಲ ಗುರುಗಳನ್ನು ಅರಸಿ ಉಡುಪಿಯ ಬಳಿಯಲ್ಲಿರುವ ಅಚ್ಯುತಪ್ರೇಕ್ಷರೆಂಬ ಯತಿಗಳ ಕಡೆಗೆ ಬಂದ. ಜನ್ಮಾಂತರದ ಪುಣ್ಯದ ಫಲವಾಗಿ ಹಂಸನಾಮಕ ಪರಮಾತ್ಮನು ಪ್ರವರ್ತಿಸಿದ ಪೀಠವನ್ನು ಅವರು ಅಲಂಕರಿಸಿದ್ದರು. ಅವರ ಪ್ರಚಂಡ ತಪಸ್ಸಿಗೆ, ಪರಿಶುದ್ಧ ದೀಕ್ಷೆಗೆ ಅನಂತಾಸನ ಪ್ರಸನ್ನನಾಗಿದ್ದ. ಅವರಿಗೆ ಒಂದು ಸಂದೇಶ ಬಂತು, ‘‘ನಿಮಗೊಬ್ಬ ಅಪೂರ್ವ ಶಿಷ್ಯ ಲಭಿಸುವ, ಅವನಿಂದಲೇ ನಿಮಗೆ ತತ್ತ್ವಜ್ಞಾನ ಪ್ರಾಪ್ತಿ.’’ ಎಂದು. ವಾಸುದೇವ ಅವರ ಬಳಿಗೆ ಬಂದು ,‘‘ನನ್ನನ್ನು ನಿಮ್ಮ ಶಿಷ್ಯನಾಗಿ ಸ್ವೀಕರಿಸಿರಿ’’ ಎಂದಾಗ ಅಚ್ಯುತಪ್ರೇಕ್ಷರಿಗೆ ಶಿಷ್ಯನಲ್ಲೇ ಗುರುವನ್ನು ಕಂಡಂತೆ ಭಾಸವಾಗಿತ್ತು.

ಇತ್ತ ತಂದೆತಾಯಿಗಳಿಗೆ ಮಗನ ಇಚ್ಛೆ ಗೊತ್ತಾದಾಗ ಅವರು ಇವನಿಗೆ ಸನ್ಯಾಸಿಯಾಗಲು ಅಪ್ಪಣೆ ಕೊಡಲಿಲ್ಲ. ಮೊದಲಿನ ಎರಡು ಗಂಡು ಮಕ್ಕಳು ಬದುಕಿ ಉಳಿದಿರಲಿಲ್ಲ. ಹನ್ನೆರಡು ವರ್ಷಗಳ ತಪದ ತರುವಾಯ ಈ ಪುತ್ರರತ್ನವನ್ನು ಪಡೆದಿದ್ದರು. ಮಗ ಸನ್ಯಾಸಿಯಾದರೆ ಮುಂದೆ ತಮ್ಮ ಗತಿಯೇನೆಂಬ ಚಿಂತೆ ಅವರನ್ನು ಆವರಿಸಿತು. ಮಗನು ಹಟಹಿಡಿದು ಸನ್ಯಾಸಿಯಾದರೆ ತಾವು ಪ್ರಾಣ ಬಿಡುವುದು ನಿಶ್ಚಿತ ಎಂದು ಹೇಳಿದರು ತಂದೆ ಮಧ್ಯಗೇಹರು.

ಮತ್ತೊಬ್ಬ ಪುತ್ರನನ್ನು ಅವರು ಪಡೆಯುವ ವರೆಗೆ ತಾವು ಸನ್ಯಾಸ ಸ್ವೀಕರಿಸುವುದಿಲ್ಲ ಎಂದು ಮಗ ವಾಸುದೇವ ಹೇಳಿದಾಗ ಮಧ್ಯಗೇಹರಿಗೆ ನೆಮ್ಮದಿ ದೊರೆಯಿತು. ಅನತಿಕಾಲದಲ್ಲಿ ತಾಯಿ ವೇದವತಿ ಗರ್ಭಿಣಿಯಾದರು, ಮತ್ತೊಬ್ಬ ಮಗನಿಗೆ ಜನ್ಮವಿತ್ತರು. ತಾಯಿ ಮಗನಿಗೆ ಸನ್ಯಾಸಿಯಾಗಲು ಒಪ್ಪಿಗೆ ಕೊಟ್ಟರು. ಅಚ್ಯುತಪ್ರೇಕ್ಷರು ವಾಸುದೇವನಿಗೆ ‘ಶ್ರೀಪೂರ್ಣಪ್ರಜ್ಞ’ ಎಂಬ ಶುಭನಾಮದೊಂದಿಗೆ ಸನ್ಯಾಸ ದೀಕ್ಷೆ ನೀಡಿದರು. ವಾಸುದೇವನಿಗೆ ಆಗ ಹತ್ತು ವರ್ಷ. ‘ದಶಪ್ರಮತಿ’ ಎಂಬ ಹೆಸರಿನಲ್ಲಿ ಈ ಅಂಶ ಸೂಚಿತವಾಗಿದೆ. ಶಿಷ್ಯನೇ ಗುರುವಿಗೆ ಗುರುವು ಆದ ಪವಾಡ ನಡೆಯಿತು.

ಸರ್ವಸಂಗ ಪರಿತ್ಯಾಗಿಗಳಾದ ಅಚ್ಯುತಪ್ರೇಕ್ಷರು ತಮ್ಮ ಶಿಷ್ಯ ‘ಶ್ರೀಪೂರ್ಣಪ್ರಜ್ಞ’ನ ಸಂಗ ಎಷ್ಟು ಬಯಸುತ್ತಿದ್ದರೆಂದರೆ ಅವನನ್ನು ಬಿಟ್ಟಿರಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಗಂಗಾಸ್ನಾನ ಮಾಡಿಬರಲು ಶಿಷ್ಯ ಕಾಶಿಗೆ ಯಾತ್ರೆಗೆಂದು ಹೊರಡಲು ಸಿದ್ಧನಾದಾಗ ಗುರುಗಳಿಗೆ ಆತಂಕ. ಶಿಷ್ಯನ ಸಾನ್ನಿಧ್ಯ ಗುರುಗಳಿಗೆ ಒಂದು ಜ್ಞಾನಯಜ್ಞವೇ ಆಗಿತ್ತು. ಗಂಗಾಸ್ನಾನದ ನಿಮಿತ್ತ ಶಿಷ್ಯ ತಮ್ಮನ್ನು ಅಗಲದಿರಲಿ ಎಂದು ಗುರುಗಳು ಭಗವಂತನಲ್ಲಿ ಪ್ರಾರ್ಥಿಸಿದರು, ವಿಶೇಷ ಸೇವೆಯನ್ನೂ ಕೈಕೊಂಡರು. ದೇವರು ಪುರುಷನೊಬ್ಬನಲ್ಲಿ ಪ್ರವೇಶಿಸಿ ಎಲ್ಲರಿಗೂ ಕೇಳುವಂತೆ ಆದೇಶ ನೀಡಿದ.

‘‘ಪೂರ್ಣಪ್ರಜ್ಞರೇ! ಗಂಗಾ ಸ್ನಾನಕ್ಕಾಗಿ ನೀವೇನೂ ಕಾಶಿಗೆ ತೆರಳಬೇಕಾಗಿಲ್ಲ. ನಿಮಗೋಸ್ಕರ ಗಂಗಾದೇವಿಯೇ ಇಂದಿಗೆ ಮೂರನೆಯ ದಿನ ಅನಂತಸರೋವರಕ್ಕೆ ಆಗಮಿಸುವಳು.’’ ಎಂದು. ಇದನ್ನು ನೋಡಲು ಜನಸಾಗರವೇ ಅಲ್ಲಿ ಸರೋವರದೆಡೆ ನೆರೆಯಿತು. ಸರೋವರದ ಈಶಾನ್ಯ ದಿಕ್ಕಿನಲ್ಲಿ ಶ್ವೇತಜಲಧಾರೆ ಚಿಮ್ಮತೊಡಗಿತು. ಅಚ್ಯುತಪ್ರೇಕ್ಷರೊಂದಿಗೆ ಜನರೆಲ್ಲ ಶ್ರೀಪೂರ್ಣಪ್ರಜ್ಞರನ್ನು ಮುಂದಿಟ್ಟುಕೊಂಡು ಆ ಜಲದಲ್ಲಿ ಮಿಂದು ಪಾವನರಾದರು. ಅಂದಿನಿಂದ ‘ಅನಂತಸರೋವರ’ಕ್ಕೆ ‘ಮಧ್ವಸರೋವರ’ ಎಂಬ ಹೆಸರು ಬಂತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more