• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವಿಗೆ ತಕ್ಕ ಶಿಷ್ಯ ಪಂಡಿತ್ ಗಣಪತಿ ಭಟ್!

By Staff
|

ಮೋಡಿ ಮಾಡಿದ ನಾದಗ್ರಾಮ, ಸಂಗೀತ ಬ್ರಹ್ಮ ಪಂಡಿತ್ ಬಸವರಾಜ ರಾಜಗುರು, ಸಂಗೀತ ನಿಧಿ ಪಂಡಿತ್ ಗಣಪತಿ ಭಟ್ ಬಗ್ಗೆ...

Basavaraja Rajaguruಬಸವರಾಜ ರಾಜಗುರು ಅವರ ಶಿಷ್ಯ ಪರಂಪರೆಯಲ್ಲಿ ಪಂ. ಗಣಪತಿ ಭಟ್ ಅಗ್ರಗಣ್ಯರಾಗಿದ್ದಾರೆ. ಅವರ ಸಂಗೀತ ಸಾಧನಾ ಮಂದಿರದಲ್ಲಿ ಗುರುಗಳಾದ ಪಂ.ಬಸವರಾಜ ರಾಜಗುರು ಅವರ ವರ್ಣರಂಜಿತ ಭವ್ಯ ಭಾವಚಿತ್ರ ಬಹಳ ಪ್ರಮುಖವಾಗಿ ಸ್ಥಾಪಿತವಾಗಿದೆ. 1991ಜುಲೈ 20ರಂದು ನೆಚ್ಚಿನ ಗುರುಗಳು ಸ್ವರ್ಗಸ್ಥರಾದಾಗ ಬಹಳ ದೊಡ್ಡ ನಿಧಿಯನ್ನು ಕಳೆದುಕೊಂಡ ವೇದನೆ ಇವರಿಗಾಯಿತು. ಇದೊಂದು ತುಂಬಲಾರದ ಹಾನಿಯಾಗಿತ್ತು.

ಗುರುಗಳ ಸ್ಮರಣೆಯನ್ನು ಸದಾ ಜಾಗೃತವಾಗಿಡಲು, ಅದೇ ವರ್ಷ ‘ಪಂ. ಬಸವರಾಜ ರಾಜಗುರು ಸಂಗೀತ ಪ್ರತಿಷ್ಠಾನ’ವನ್ನು ಆರಂಭಿಸಿದರು. ಪ್ರತಿ ವರ್ಷ ಉತ್ತಮ ಗಾಯಕರನ್ನು, ಕಲಾವಿದರನ್ನು ಕರೆಸಿ ‘ಸ್ಮೃತಿ ಸಂಗೀತ ಸಮ್ಮೇಲನ’ವನ್ನು ನಡೆಸುತ್ತಾರೆ. ಕಳೆದ ಹದಿನಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಇವರ ನಾದಗ್ರಾಮದ ದೇವತೆಯೇ ಪಂ. ಬಸವರಾಜ ರಾಜಗುರು ಅಂದರೆ ತಪ್ಪಾಗಲಿಕ್ಕಿಲ್ಲ.

ತಮ್ಮ ಗುರುಗಳ ಬಗ್ಗೆ ಅವರು ಮೂರು ಮಹತ್ವದ ಮಾತುಗಳನ್ನು ಹೇಳಿದರು.

1) ಬಸವರಾಜ ರಾಜಗುರು ಅವರು ಹೆಸರಿಗೆ ತಕ್ಕಂತೆ ರಾಜಗುರುಗಳೇ. ಬಹಳ ಸದಾ ಜೀವನ ನಡೆಸುವ ನಾದಯೋಗಿಗಳು ಕೂಡ. ‘ಗುರು’ ಎಂದರೆ ಶಿಷ್ಯರಲ್ಲಿ ಭಯವೂ ಇರುತ್ತದೆ, ಜೊತೆಗೆ ಭಕ್ತಿಯೂ ಇರುತ್ತದೆ. ಆದರೆ ಇವರ ಬಗ್ಗೆ ಹೇಳುವುದಾದರೆ ಇವರಲ್ಲಿ ಭಯಕ್ಕೆ ಆಸ್ಪದವೇ ಇರುತ್ತಿರಲಿಲ್ಲ. ಶಿಷ್ಯರಿಗೆ ಕೇವಲ ಭಕ್ತಿ ಮತ್ತು ಪ್ರೀತಿ ಇವರ ಬಗ್ಗೆ ಉಕ್ಕುತ್ತಿತ್ತು. ಅವರದು ಮುಗ್ಧ ಮನಸ್ಸು, ತಾಯಿಕರುಳು. ಶಿಷ್ಯರನ್ನು ಮಕ್ಕಳಂತೆ ಪ್ರೀತಿಸುತ್ತಿದ್ದರು.

2) ಕೆಲವರು ಉತ್ತಮ ಶಿಕ್ಷಕರಾಗಿರುತ್ತಾರೆ, ಆದರೆ ಉತ್ತಮ ಪರ್‍ಫಾರ್ಮರ್(ಪ್ರದರ್ಶನ ಚತುರರು) ಆಗಿರುವುದಿಲ್ಲ. ಕೆಲವರು ಪ್ರದರ್ಶನ ಚತುರರಾಗಿರುತ್ತಾರೆ ಆದರೆ ಉತ್ತಮ ಶಿಕ್ಷಕರಾಗಿರುವುದಿಲ್ಲ. ಇವೆರಡರಲ್ಲೂ ಇವರು ಅದ್ವಿತೀಯರಾಗಿದ್ದರು. ಅಷ್ಟೇ ಅಲ್ಲ ತಾವು ಕಾರ್ಯಕ್ರಮ ನೀಡುವಾಗ ಶಿಷ್ಯರಿಗೆ ಅವಕಾಶ ಮಾಡಿಕೊಡುತ್ತಿದ್ದರು, ಅವರ ಪ್ರಗತಿ ಕಂಡು ಹಿಗ್ಗುತ್ತಿದ್ದರು.

3) ಇತರ ಗುರುಗಳನ್ನು ಹೋಲಿಸಿದರೆ ಇವರ ಶಿಷ್ಯಪರಂಪರೆ ಬಹಳ ದೊಡ್ಡದು. ಅಧಿಕಾಧಿಕ ಜನರಿಗೆ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ನೀಡುವುದು ತಮ್ಮ ಬಾಳಿನ ಗುರಿ ಎಂದು ಅವರು ಭಾವಿಸಿದ್ದರು. (ಬಸವರಾಜ ರಾಜಗುರು ಅವರ ಶಿಷ್ಯರಲ್ಲಿ ಪರಮೇಶ್ವರ ಹೆಗಡೆ, ಶ್ರೀಪಾದ ಹೆಗಡೆ, ಸಂಗೀತಾ ಕಟ್ಟಿ, ಪೂರ್ಣಿಮಾ ಕುಲಕರ್ಣಿ, ನಚಿಕೇತ ಶರ್ಮಾ ಒಳ್ಳೆಯ ಹೆಸರು ಗಳಿಸಿದ್ದಾರೆ.)

ಗಣಪತಿ ಭಟ್ ಅವರು ಭಾರತದಾದ್ಯಂತ ಪ್ರತಿಷ್ಠಿತ ಸಂಗೀತ ಕಾರ್ಯಕ್ರಮಗಳಲ್ಲಿ, ಸಮ್ಮೇಲನಗಳಲ್ಲಿ ಭಾಗವಹಿಸಿದ್ದಾರೆ. ಮೂರನೆ ಸಲ ಅಮೆರಿಕೆಗೆ ಹೋಗಿ ಅಲ್ಲಿ ಸಂಗೀತ ಜೈತ್ರಯಾತ್ರೆ ಕೈಕೊಳ್ಳುವ ಸಿದ್ಧತೆಯಲ್ಲಿದ್ದಾರೆ.

ಗಣಪತಿ ಭಟ್‍ರ ಸೊಸೆ ಡಾ.ಗೀತಾ ವಸಂತ ಅವರಿಗೆ ವರಕವಿ ಬೇಂದ್ರೆಯವರಲ್ಲಿ ಅಪಾರ ಆಸಕ್ತಿ. ನನ್ನೊಡನೆ ಬೇಂದ್ರೆಯವರ ಬಗ್ಗೆ ಹಲವಾರು ವಿಷಯ ಚರ್ಚಿಸಿದರು. ‘ಬೇಂದ್ರೆ ಕಾವ್ಯದಲ್ಲಿ ಅವಧೂತ ಪ್ರಜ್ಞೆ’ ಎಂಬ ವಿಷಯದಲ್ಲಿ ಪ್ರಬಂಧ ಸಿದ್ಧಪಡಿಸುತ್ತಿದ್ದಾರೆ.

ವಸಂತ ತನ್ನ ಪತ್ರಿಕೊದ್ಯಮ, ಕಾಲೇಜಿನಲ್ಲಿಯ ಬೋಧನೆಯ ಹವ್ಯಾಸ ಬಿಟ್ಟು, ತಂದೆಯಲ್ಲಿ ಸಂಗೀತ ಕಲಿಯುತದ್ದಾರೆ. ಇದನ್ನು ನೋಡಿ ನನಗೆ ಅಚ್ಚರಿಯಾಯಿತು.

ವಸಂತ ತಂದೆಯ ಪ್ರತಿಭೆಗೆ ಮಣಿದು, ನಗರದ ಆಕರ್ಷಕ ಜೀವನದಿಂದ ವಂಚಿತನಾದರೂ, ನಾದಗ್ರಾಮದಲ್ಲಿ ಸ್ವಾಭಾವಿಕವಾಗಿ ಅರಳುತ್ತಿದ್ದಾನೆ.

ಗಣಪತಿ ಭಟ್ಟರ ಪತ್ನಿ ಶ್ರೀಮತಿ ನಾಗವೇಣಿಯವರು ಸಿದ್ಧಪಡಿಸಿದ ಉತ್ತರ ಕನ್ನಡದ ವಿಶೇಷ ರುಚಿಕರ ಅಡಿಗೆ ನನ್ನ ಪ್ರಶಂಸೆಗೆ ಪಾತ್ರವಾಗಿತ್ತು. ನಾದಗ್ರಾಮದಲ್ಲಿ ನಾನು ಪಡೆದ ಅನುಭವ ಅನುಭಾವದ ಮಟ್ಟಕ್ಕೆ ತಲುಪಿತ್ತು. ಅವರ ಮೊಮ್ಮಕ್ಕಳು ಯಶಸ್ವಿನಿ ಮತ್ತು ತೇಜಸ್ವಿ ಅವರ ಒಡನಾಟವೂ ಸ್ಮರಣೀಯವಾಗಿತ್ತು. ಕಳೆದ ಎರಡು ದಿನ- ಬೇಂದ್ರೆ, ಯೋಗ, ನಾದಮಯವಾಗಿತ್ತು. ಸಗ್ಗವು ಭುವಿಗಿಳಿದಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more