• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರ ಸರಸ್ವತಿ ಭಂಡಾರ ಕದಿಯಲು ಸಂಚು!

By Staff
|

ಅದಕ್ಕೆ ಅವನು, ‘‘ನನ್ನ ಶಾಸ್ತ್ರ ಸಾಮಾನ್ಯವಾದುದಲ್ಲ, ಅದು ಎಲ್ಲೆಡೆ ವ್ಯಾಪಿಸಿದೆ’’ ಎಂದು ದುರಹಂಕಾರದಿಂದ ನುಡಿದ. ಅದಕ್ಕೆ ಮಧ್ವರು, ‘‘ನಮ್ಮ ಶಾಸ್ತ್ರ ಮೂಲೋಕದಲ್ಲಿ ವ್ಯಾಪ್ತವಾದುದು’’ ಎಂದು ಉತ್ತರಿಸಿದರು. ಆಗ ಪದ್ಮತೀರ್ಥ, ‘‘ನಿಮ್ಮದು ಶಾಠ್ಯದ ಮಾತು ಇದನ್ನು ನಮ್ಮ ಅಂತರ್ಯಾಮಿಯೇ ಬಲ್ಲ.’’ ಎಂದು ಉತ್ತರಿಸಿದ. ಇದಕ್ಕೆ ಶ್ರೀಮಧ್ವರು ಆಶ್ಚರ್ಯ ವ್ಯಕ್ತಪಡಿಸುತ್ತ, ‘‘ನೀನು ಅಂತರ್ಯಾಮಿಯನ್ನು ಒಪ್ಪಿದರೆ, ನೀನು ನಿಯಮ್ಯ ಎಂಬ ಮತ್ತೊಬ್ಬನನ್ನೂ ಒಪ್ಪಬೇಕಾಗುವುದು. ಈ ಎರಡನ್ನು ಒಪ್ಪಿದ ಮೇಲೆ ನಮ್ಮ ಶಾಸ್ತ್ರವನ್ನು ಒಪ್ಪಿದಂತಾಯಿತು.’’ ಅಂದಾಗ ಅವನು ನಿರುತ್ತರಿಯಾದ.

ಶ್ರೀಮಧ್ವರು ಮಾಡಿದ ವಾದಸರಣಿಯೆಲ್ಲ ಉಪನ್ಯಾಸ ರೂಪವಾಗಿ ದಾಖಲಾಯಿತು. ಅದುವೆ ‘‘ತತ್ತ್ವೋದ್ಯೋತ’’ ಎಂಬ ಕೃತಿ. ಶ್ರೀಮಧ್ವರ ಕೃತಿಗಳನ್ನು ಕದಿಯುವುದರ ಮೂಲಕ ಮಧ್ವಸಿದ್ಧಾಂತದ ಹಿರಿಮೆಯನ್ನು ತಡೆಯುವ ಪ್ರಯತ್ನ ಪಂಚಾಂಗವನ್ನು ಸೂರ್ಯೋದಯವನ್ನು ತಡೆಗಟ್ಟುವ ಮೂರ್ಖಪ್ರಯತ್ನದಂತಿತ್ತು. ಶ್ರೀಮಧ್ವರ ವಾದಿಜಯ ಅಪೂರ್ವ ದಾಖಲೆ. ಆ ಸ್ಥಳದಲ್ಲಿ ವಿಷ್ಣು ಸರ್ವೋತ್ತಮತ್ವದ ಸಾಧನೆಯ ನೆನಪಿಗಾಗಿ ಒಂದು ಭವ್ಯ ವಿಶ್ಣು ದೇವಾಲಯವನ್ನು ಸ್ಥಾಪಿಸಲಾಯ್ತು. ಅದು ಶ್ರೀಮಧ್ವರ ಅಮೃತ ಹಸ್ತದಿಂದಲೇ ಪ್ರತಿಷ್ಠಾಪಿತವಾಯ್ತು.

ಮತ್ತೆ ಚಾತುರ್ಮಾಸ್ಯದ ಅಪೂರ್ವ ಸಂಧಿ ಬಂತು. ಯತಿಗಳಿಗೆ ಪರ್ಯಟನದಿಂದ ಸ್ವಲ್ಪ ವಿಶ್ರಾಂತಿ. ಅವರು ಒಂದೇ ಸ್ಥಳದಲ್ಲಿದ್ದು ಪಾಠಪ್ರವಚನ ಮಾಡಿಕೊಂಡಿರುವ ಕಾಲ. ಈ ಕಾಲದಲ್ಲಿ ಪೈರುಗಳು ಬೆಳೆಯುವ ಕಾಲವಾದ್ದರಿಂದ ಗೃಹಸ್ಥರಿಗೂ ಹೊರಗಿನ ಕಾರ್ಯಗಳಿಂದ ಬಿಡುವು ದೊರೆತಿರುತ್ತದೆ. ಅವರ ಸಂಚಾರವೂ ಕಡಿಮೆಯಾಗಿರುತ್ತದೆ, ಯತಿಗಳ ಚಾತುರ್ಮಾಸ್ಯ ಆಚರಣೆಯ ಲಾಭ ಪಡೆಯುವಂತಹ ಶುಭ ಕಾಲ.

ಶ್ರೀಮಧ್ವರು ಈ ಸಲದ ಚಾತುರ್ಮಾಸ್ಯವನ್ನು ಆಚರಿಸಲು ಕೊಟಪಾಡಿ(ಪ್ರಗ್ಯವಾಟ) ಸ್ಥಲವನ್ನು ಆಯ್ಕೆ ಮಾಡಿದ್ದರು. ಇದು ದಕ್ಷಿಣ ಕನ್ನಡದ ಪುತ್ತೂರಿನ ಬಳಿಯಲ್ಲಿದೆ. ಶ್ರೀಜನಾರ್ದನ ವಿಗ್ರಹದಿಂದ ಶೋಭಿಸುವ ರಮ್ಯಸ್ಥಾನವಿದು. ಶ್ರೀಮಧ್ವರು ಇಲ್ಲಿ ನಡೆಸಿದ ಜ್ಞಾನ ಕಾರ್ಯದಲ್ಲಿ ವಿದ್ವಾಂಸರಿಗೆ ಅನರ್ಘ್ಯ ಸುವರ್ಣಾಭರರಣಗಳನ್ನು ಕೊಟ್ಟರೆಂಬ ಪ್ರತೀತಿ ಇದೆ. ಅವರು ನಿತ್ಯ ಪಾಠಪ್ರವಚನ ಮಾಡುವಾಗ ಅವರು ಆಸೀನರಾಗಿರುತ್ತಿದ್ದ ಒಂದು ಶಿಲಾಪೀಠವೂ ಅಲ್ಲಿದೆ.

ತಮ್ಮ ಶಿಷ್ಯರಿಗೆ ಮಾಯವಾದ ಖಂಡಿಸಲು ಸುಲಭವಾದ ಚಿಕ್ಕ ಗ್ರಂಥಗಳನ್ನು ಶ್ರೀಮಧ್ವರು ರಚಿಸಿದರು, ಅವೇ ‘ಉಪಾಧಿಖಂಡನ’, ‘ಮಾಯಾವಾದಖಂಡನ’ ಹಾಗೂ ‘ಪ್ರಪಂಚಮಿಥ್ಯಾತ್ವಾನುಮಾನಖಂಡನ’. ಶ್ರೀಮಧ್ವರ ಸಿದ್ಧಾಂತವನ್ನು ಸಂಗ್ರಹವಾಗಿ ಒದಗಿಸುವ ಕೃತಿ ‘ತತ್ತ್ವಸಂಖ್ಯಾನ’. ತಮ್ಮ ಆ ತತ್ತ್ವವಿಭಾಗಕ್ಕೆ ಅಧಾರವನ್ನಾಗಿ ಅವರು ನೀಡಿರುವ ಮತ್ತೊಂದು ಕೃತಿ ‘ತತ್ತ್ವವಿವೇಕ’. ಈ ಎರಡು ಕೃತಿಗಳ ಅಧ್ಯಯನವು ದ್ವೈತವೇದಾಂತದ ಪ್ರಮೇಯಶಾಸ್ತ್ರದ ಸಾರಸರ್ವಸ್ವವನ್ನು ಅನಾವರಣಗೊಳಿಸುತ್ತದೆ.

ಪ್ರಮೇಯಗಳಿಗೆ ಸಂಬಂಧಿಸಿದ ಎರಡೂ ಕೃತಿಗಳಂತೆ, ಪ್ರಮಾಣಶಾಸ್ತ್ರಕ್ಕೆ ಸಂಬಂಧಿಸಿದಂತೆ ಎರಡು ಕೃತಿ ರಚಿಸಿದ್ದಾರೆ. ಅವು ‘ಪ್ರಮಾಣಲಕ್ಷಣ’ ಮತ್ತು ‘ಕಥಾಲಕ್ಷಣ.’ ಪ್ರಮಾಣಲಕ್ಷಣವು ಬ್ರಹ್ಮತರ್ಕವೆಂಬ ವೇದವ್ಯಾಸಪ್ರಣೀತ ಕೃತಿಯ ಹಿನ್ನೆಲೆಯಲ್ಲಿ ವೈದಿಕ ಪರಂಪರೆಯ ಪ್ರಮಾಣಶಾಸ್ತ್ರದ ಸಮಗ್ರ ಚಿತ್ರಣವನ್ನು ನೀಡುವ ಅಪೂರ್ವ ಕೃತಿ. ಪ್ರಮಾಣಲಕ್ಷಣ ಅದರ ವಿಭಾಗ, ಪರೀಕ್ಶೆ, ನಿದರ್ಶನ ಮೊದಲಾದ ಸಮಗ್ರ ಮಾಹಿತಿಯನ್ನು ನಿರೂಪಿಸಿರುವರು. ಕಥಾಲಕ್ಷಣವು ಇಪ್ಪತ್ತೈದು ಶ್ಲೋಕಗಳ ಕಿರುವ್ಯಾಪ್ತಿಯಲ್ಲಿ ವೇದಾಂತ ಚರ್ಚೆಯ ಸ್ವರೂಪವನ್ನು ತೆರೆದಿಡುವ ಕೃತಿ. ಕೃತಿ, ವಾದ, ಜಲ್ಪ, ವಿತಂಡಾ ಎಂಬ ಕಥಾಪ್ರಭೇದಗಳೊಂದಿಗೆ ಚರ್ಚೆಯ ವಿಧಿವಿಧಾನಗಳು, ಪ್ರಶ್ನಿಕರ ಲಕ್ಷಣ, ಸದಾಗಮಗಳ ವಿವರ ತಿಳಿಸುವ ವಿಶಿಷ್ಟ ಕೃತಿ.

ಪ್ರಮಾಣ ಲಕ್ಷಣ, ಕಥಾಲಕ್ಷಣ ಹಾಗೂ ಖಂಡತ್ರಯಗಳನ್ನು ರಚಿಸಿದ ನಂತರ ಅವೆಲ್ಲವುಗಳಲ್ಲಿ ಅಡಕವಾಗಿರುವ ವಾದಸರಣಿಯನ್ನು ಸಕಲ ಮತಗಳ ವಿಮರ್ಶೆಗೆ ಪರಿಣಾಮಕಾರಿಯಾಗಿ ಬಳಸುವ ಮಾರ್ಗದರ್ಶಕ ಕೃತಿಯಾಂದನ್ನು ಸಹ ಶ್ರೀಮಧ್ವರು ರಚಿಸಿದರು. ಅದು ‘ವಿಷ್ಣುತತ್ತ್ವವಿನಿರ್ಣಯ’. ಇದರಲ್ಲಿ ‘ಅಹಂಬ್ರಹ್ಮಾಸ್ಮಿ’, ‘ತತ್ತ್ವಮಸಿ’ ಮೊದಲಾದ ಅದ್ವೈತಬೋಧಕಗಳೆಂದು ತೋರುವ ಶ್ರುತಿವಾಕ್ಯಗಳೆಲ್ಲ ಹೇಗೆ ಭೇದಬೋಧಕವಾಗಿವೆ ಎಂಬುದರ ವಿಸ್ತಾರವಾದ ವಿವೇಚನೆಯಿದೆ.

ಚಾತುರ್ಮಾಸ್ಯ ಪೂರೈಸಿದ ಮೇಲೆ ಕಾರ್ತೀಕ ಮಾಸದ ಪೌರ್ಣಿಮೆಯಂದು ಅಲ್ಲಿಂದ ಶ್ರೀಮಧ್ವರು ಮರಳಿಹೊರಡಲು ಸಿದ್ಧರಾದರು. ಆ ವೇಳೆಗೆ ಶ್ರೀಮಧ್ವರ ಗ್ರಾಂಥಗಳನ್ನು ಅಪಹರಿಸಿ ಪಲಾಯನ ಗೈದಿದ್ದ ಪದ್ಮತೀರ್ಥನೆಂಬವನನ್ನು ಗ್ರಾಮಸ್ಥರು ಕಾಸರಗೋಡಿನ ಕಾವುಮಠದತ್ತ ಹಿಡಿದರು. ಆ ಪ್ರಾಂತದ ದೊರೆಯಾದ ಜಯಸಿಂಹರಾಜನ ಗಮನಕ್ಕೆ ತಂದು, ಅವನ ಮುಖಾಂತರ ಕಳವಾದ ಪುಸ್ತಕಗಳನ್ನು ಗುರುಗಳಿಗೆ ಮರಳಿ ಒಪ್ಪಿಸಲಾಯಿತು.

ಶ್ರೀಮಧ್ವರರದು ಸರ್ವಂಕಷ ಪ್ರತಿಭೆ. ಅವರು ಶಾಸ್ತ್ರಗಳ ಎಲ್ಲ ವಿಭಾಗದಲ್ಲಿ ತೋರಿಸಿದ ಪ್ರತಿಭೆಯನ್ನು ಕಾವ್ಯದಲ್ಲಿಯೂ ತೋರಿಸಬೇಕೆಂಬುದು ಅವರ ಶಿಷ್ಯರ ಬಯಕೆಯಾಗಿತ್ತು. ಅವರ ಕೋರಿಕೆಯನ್ನು ಮನ್ನಿಸಿ ‘ಯಮಕಭಾರತ’ ಎಂಬ ಕಾವ್ಯವನ್ನು ರಚಿಸಿದರು. ಹದಿನೆಂಟು ಪರ್ವಗಳ ಮಹಾಭಾರತದ ಸಾರವನ್ನು ಎಂಭತ್ತೊಂದು ಶ್ಲೋಕಗಳಲ್ಲಿ ವಿವರಿಸುವ ಅಪೂರ್ವ ಕೃತಿ ಇದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more