• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರ ಸರಸ್ವತಿ ಭಂಡಾರ ಕದಿಯಲು ಸಂಚು!

By Staff
|


ಭಾವೀಬ್ರಹ್ಮರಾದ ಶ್ರೀಮಧ್ವರ ಪ್ರವಚನ ಕೇಳಲು ಸಹಸ್ರಶೀರ್ಷನಾದ ಆದಿಶೇಷ ಬರುತ್ತಿದ್ದನಂತೆ. ಆಗ ಎಲ್ಲೆಡೆ ಕಣ್ಣು ಕೋರೈಸುವಂತಹ ಬೆಳಕು ಕಾಣುತ್ತಿತ್ತಂತೆ. ಈ ಪವಾಡ ಸದೃಶ ಬೆಳಕಿನ ಬಗ್ಗೆ ಶ್ರೀಮಧ್ವರನ್ನು ಕೇಳಿದಾಗ, ‘ಇದು ಶೇಷದೇವರ ಮೈಕಾಂತಿ’ ಎಂದವರು ಹೇಳಿದ್ದರಂತೆ. ಓದುಗರೇ, ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ...

Madhwacharyaಶ್ರೀಮಧ್ವರು ಉಡುಪಿಗೆ ಮರಳಿದರು. ಹಿಂದೆ ಗೋದಾವರೀ ತೀರದಲ್ಲಿ ಶಿಷ್ಯತ್ವ ವಹಿಸಿದ್ದ ಶೋಭನಭಟ್ಟರು ಆಗಮಿಸಿದರು. ಅವರು ಅನೇಕ ವಿದ್ವತ್‌ ಸಭೆಗಳಲ್ಲಿ ಮಧ್ವಸಿದ್ಧಾಂತದ ಹಿರಿಮೆಯನ್ನು ಕೊಂಡಾಡಿದ್ದರು. ಶ್ರೀಮಧ್ವರು ಅವರನ್ನು ಸ್ವಾಗತಿಸಿದರು, ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದರು. ‘ಶ್ರೀಪದ್ಮನಾಭತೀರ್ಥ’ ಎಂಬ ನಾಮವನ್ನೂ ದಯಪಾಲಿಸಿದರು. ನಂತರ ಪದ್ಮನಾಭತೀರ್ಥರು ಬೇಲೂರಲ್ಲಿ ನೆಲೆಸಿದ್ದರು. ಇದಕ್ಕೆ ಬೇಲೂರ ಚೆನ್ನಕೇಶವ ದೇವಸ್ಥಾನದಲ್ಲಿನ, ನರಸಿಂಹದೇವರ ಎದುರಿಗಿನ ಕಂಬದ ದಕ್ಷಿಣಮುಖದಲ್ಲಿರುವ, ಶಿಲಾಶಾಸನವೇ ಆಧಾರ.

ಶ್ರೀಮದಾಚಾರ್ಯರ ಆದೇಶದ ಮೇರೆಗೆ ಶ್ರೀಪದ್ಮನಾಭತೀರ್ಥರು ಆಚಾರ್ಯರ ಬ್ರಹ್ಮಸೂತ್ರಭಾಷ್ಯಕ್ಕೆ ‘ಸತ್ತರ್ಕದೀಪಾವಲೀ’ ಎಂಬ ಟೀಕೆ ರಚಿಸಿದರು, ಅದರ ಪ್ರಥಮ ಟೀಕಾಕಾರರೆನ್ನಿಸಿದರು. ಶ್ರೀಮಧ್ವರ ಅನುವ್ಯಾಖ್ಯಾನಕ್ಕೆ ‘ಸನ್ನ್ಯಾಯರತ್ನಾವಲಿ’ ಎಂಬ ಟೀಕೆಯನ್ನು ರಚಿಸಿದರು. ಶ್ರೀಪದ್ಮನಾಭತೀರ್ಥರು ತಮ್ಮ ವಿದ್ವತ್ತಿನಿಂದಾಗಿ ‘ವಿದ್ವತ್ತಿಮಿಂಗಿಲ’ ಎಂಬ ಗೌರವ ಪಡೆದಿದ್ದರು. ಅವರ ಪ್ರವಚನದ ಸಿಂಹಗರ್ಜನೆಗೆ ಪ್ರತಿವಾದಿಗಳು ಗ್ರಾಮಸಿಂಹ ಆಗುತ್ತಿದ್ದರಂತೆ.

ಶ್ರೀಮಧ್ವರು ಎರಡನೆಯ ಸಲ ಬದರಿ ಯಾತ್ರೆ ಪೂರೈಸಿ ಮರಳುತ್ತಿದ್ದಾಗ, ಕಳಿಂಗದೇಶದ ಒಬ್ಬ ವಿದ್ವಾಂಸ ಅವರನ್ನು ಸಂದರ್ಶಿಸಿದ. ಸರ್ವಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದ ಮೇಧಾವಿಯಾತ. ಶ್ರೀಮಧ್ವರು ಅವನ ಶಿಷ್ಯತ್ವವನ್ನು ಸ್ವೀಕರಿಸಿದರು, ಅವನಿಗೆ ಶ್ರೀನರಹರಿತೀರ್ಥ ಎಂಬ ಹೆಸರನ್ನಿಟ್ಟು ಸನ್ಯಾಸದೀಕ್ಷೆ ನೀಡಿದರು, ಅವನನ್ನು ಅನುಗ್ರಹಿಸಿದರು.

ಭಾವೀಬ್ರಹ್ಮರಾದ ಶ್ರೀಮಧ್ವರ ಪ್ರವಚನ ಕೇಳಲು ಸಹಸ್ರಶೀರ್ಷನಾದ ಆದಿಶೇಷ ಬರುತ್ತಿದ್ದನಂತೆ. ಆಗ ಎಲ್ಲೆಡೆ ಕಣ್ಣು ಕೋರೈಸುವಂತಹ ಬೆಳಕು ಕಾಣುತ್ತಿತ್ತಂತೆ. ಈ ಪವಾಡ ಸದೃಶ ಬೆಳಕಿನ ಬಗ್ಗೆ ಶ್ರೀಮಧ್ವರನ್ನು ಕೇಳಿದಾಗ, ‘ಇದು ಶೇಷದೇವರ ಮೈಕಾಂತಿ’ ಎಂದವರು ಹೇಳಿದ್ದರಂತೆ.

ವೈಕುಂಠವು ಭಗವಂತನ ನೆಲೆ. ಪ್ರಳಯಕಾಲದಲ್ಲೂ ಲಯ ಹೊಂದದ ಲೋಕವೆಂದರೆ ವೈಕುಂಠ. ಅಂತಹ ಲೋಕವನ್ನು ಹೊಂದುವ ಅರ್ಹತೆ ಮಧ್ವಶಾಸ್ತ್ರ ಅವಲೋಕನದಿಂದ ಹಾಗೂ ಶ್ರೀಹರಿಯ ಅನುಗ್ರಹದಿಂದ ಸಾಧ್ಯ ಎನ್ನಲಾಗುತ್ತದೆ. ಪ್ರವಾಸದಲ್ಲಿ ಶ್ರೀಮಧ್ವರ ಶಿಷ್ಯರಾಗುವವರ ಸಂಖ್ಯೆ ಬೆಳೆಯತೊಡಗಿತು.

ಮಾಯಾವದದ ಮುಖಂಡರಾದ ಪದ್ಮತೀರ್ಥ ಮತ್ತು ಪುಂಡರೀಕಪುರಿ ಎಂಬವರು ಪ್ರಮುಖರ ಸಭೆ ಸೇರಿಸಿ ಮಂತ್ರಾಲೋಚನೆಮಾಡಿ ಶ್ರೀಮಧ್ವರ ತತ್ತ್ವಜ್ಞಾನ ಪ್ರಸಾರ ಕಾರ್ಯಕ್ಕೆ ಆಧಾರಸ್ತಂಭವಾಗಿರುವ ಅವರ ಗ್ರಂಥ ಭಂಡಾರವನ್ನು ಅಪಹರಿಸಲು ಸಂಚುಹೂಡಿದರು. ವಾದದ ನೆಪದಲ್ಲಿ ಪೂರ್ಣಪ್ರಜ್ಞರನ್ನು ಕೆಣಕಲು ನಿಶ್ಚಯಿಸಿದರು.

ಪುಂಡರೀಕಪುರಿ ಶ್ರೀಮಧ್ವರನ್ನು ವಾದಕ್ಕೆ ಆಹ್ವಾನಿಸಿದ. ಕಾಗೆ ಹಂಸನನ್ನು, ನರಿ ಸಿಂಹನನ್ನು ಎದುರಿಸಿದಂತಾಗಿತ್ತು. ಶ್ರೀಮಧ್ವರು ಅಲ್ಪನ ಆಹ್ವಾನವೆಂದು ಕಡೆಗಣಿಸಲಿಲ್ಲ. ಶ್ರೀಮಧ್ವರು ವೇದಘೋಷ ಮಾಡುತ್ತ ಅದರ ವಿವರಣೆಗೆ ತೊಡಗಿದರು. ಪೂರ್ಣಪ್ರಜ್ಞರು ಸಾಕ್ಷಾತ್‌ ಚತುರ್ಮುಖ ಬ್ರಹ್ಮನಂತೆ ಶ್ರುತ್ಯರ್ಥ ನಿರೂಪಿಸಿದರು. ಪುಂಡರೀಕನ ಸರತಿ ಬಂತು. ‘ಅಗ್ನಿನಾ ರಯಿಮಶ್ನವತ್‌’ ಎಂಬುದನ್ನು ‘ಅಗ್ನಿ ನಾರಯಿಮಶ್ನವತ್‌’ ಎಂದು ತಪ್ಪಾಗಿ ಉಚ್ಚರಿಸಿದಾಗ, ವಿದ್ವತ್‌ ಸಭೆಯಲ್ಲಿ ಹಾಸ್ಯಸ್ಪದನೆನಿಸಿದನು.

ಇಲ್ಲಿ ವಾದ ನಡೆಯುತ್ತಿರುವಾಗ ಆಕಡೆ ಪದ್ಮತೀರ್ಥರ ನೇತೃತ್ವದಲ್ಲಿ ದುಷ್ಟರ ಗುಂಪು ಶ್ರೀಮಧ್ವರ ಗ್ರಂಥಭಂಡಾರವನ್ನು ಅಪಹರಿಸಿಬಿಟ್ಟಿದ್ದರು. ವಿಷಯ ತಿಳಿದ ಶ್ರೀಮಧ್ವರು ಪುಂಡರೀಕಪುರಿಯನ್ನು ಜಯಿಸಿ, ಏಕವಾಟ ಎಂಬಲ್ಲಿಗೆ ತೆರಳಿ, ಅಲ್ಲಿ ಪದ್ಮತೀರ್ಥನನ್ನು ಹಿಡಿದು ವಾದಕ್ಕೆ ಆಹ್ವಾನಿಸಿದರು. ‘‘ಪ್ರಶ್ನಿಕರನ್ನು ಕರೆಸಿರಿ, ವಾದ ಮಾಡೋಣ’’ ಎಂದನು. ಆಗ ಶ್ರೀಮಧ್ವರು, ‘‘ಪ್ರಶ್ನಿಕರ ಅನುಪಸ್ಥಿತಿಯಲ್ಲೂ ನಿಮ್ಮನ್ನು ಪರಾಭವಗೊಳಿಸುವೆ, ಬೇಕಿದ್ದರೆ ಪ್ರಶ್ನಿಕರನ್ನು ಕರೆಸು’’ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+8346354
CONG+38790
OTH89098

Arunachal Pradesh

PartyLWT
BJP33033
JDU178
OTH3811

Sikkim

PartyWT
SKM01717
SDF01515
OTH000

Odisha

PartyLWT
BJD7042112
BJP16723
OTH8311

Andhra Pradesh

PartyLWT
YSRCP0150150
TDP02424
OTH011

-
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more