• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆ ಮದ್ದು : ಮಲ್ಲಿಗೆ,ಕರಿಬೇವು ಮತ್ತು ಕೊತ್ತಂಬರಿ

By Staff
|


ಮನೆಯಂಗಳದಲ್ಲಿ ಔಷಧಿವನಪುಸ್ತಕದ ಉಪಯುಕ್ತ ಮಾಹಿತಿಗಳು ಇಲ್ಲಿವೆ. ಮಲ್ಲಿಗೆ ಮುಡಿಗಷ್ಟೇ ಅಲ್ಲ, ಕರಿಬೇವು ಒಗ್ಗರಣೆಗಷ್ಟೇ ಅಲ್ಲ,ಕೊತ್ತಂಬರಿ ಅಡುಗೆಗಷ್ಟೇ ಅಲ್ಲ.. ಅವುಗಳ ಅಪಾರ ಔಷಧೀಯ ಗುಣಗಳನ್ನು ಈ ವಾರ ಅರಿಯೋಣ.


Jasmineಮಲ್ಲಿಗೆ ಯಾರಿಗೆ ಗೊತ್ತಿಲ್ಲ. ಮೈಸೂರು ಮಲ್ಲಿಗೆ ಪ್ರಣಯದ ಪ್ರತೀಕವಾದರೆ ಮಂಗಳೂರು ಮಲ್ಲಿಗೆ ಉಡುಪಿಯ ಕೃಷ್ಣನ ಅಲಂಕಾರವಾಗಿ ಭಕ್ತಿಯ ಪ್ರತೀಕವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕೆನ್ನುವ ರಸಿಕ ಜನರು ಕನ್ನಡಿಗರು.

ನಮ್ಮ ದೇಶದ ಮಲ್ಲಿಗೆಯು ಶ್ರೀಲಂಕಾ, ಸಿಂಗಾಪೂರ್, ಮಲೇಶಿಯಾ ಹಾಗೂ ಅರಬ ದೇಶಗಳಿಗೆ ರಫ್ತಾಗುತ್ತದೆ. ಇದನ್ನು ಸುಗಂಧ ತೈಲ ತಯಾರಕರು ಬಳಸುತ್ತಾರೆ. ಇದನ್ನು ಅತ್ತರ್, ಸೋಪು ಹಗೂ ಇತರ ಸೌಂದರ್ಯವರ್ಧಕ ಸಾಧನಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಎಣ್ಣೆಯಲ್ಲಿ ಔಷಧೀಯ ಗುಣ ಇರುವುದರಿಂದ ಇದಕ್ಕೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಮಲ್ಲಿಗೆಯಲ್ಲಿ ಹಲವಾರು ಜಾತಿಗಳಿವೆ. ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ಮಲ್ಲಿಕಾ, ನಿತ್ಯಮಲ್ಲಿಗೆ, ಜಾಜಿಮಲ್ಲಿಗೆ ಮುಂತಾದವು. ಜಾಜಿಮಲ್ಲಿಗೆಯ ತವರು ಭಾರತ. ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಬಹುದಾದ ಜಾಜಿಮಲ್ಲಿಗೆಯಲ್ಲಿ ಔಷಧೀಯ ಗುಣಗಳು ವಿಪುಲವಾಗಿವೆ. ಜಾಜಿಮಲ್ಲಿಗೆಯ ಸಮಗ್ರ ಗಿಡ ಅಂದರೆ ಅದರ ಎಲೆ, ಹೂ, ಬೇರು, ಕಾಂಡ ಎಲ್ಲವೂ ಉಪಯುಕ್ತ.

ಎಲ್ಲ ವಿಧದ ಮಣ್ಣಿನಲ್ಲೂ ಜಾಜಿ ಮಲ್ಲಿಗೆಯನ್ನು ಬೆಳೆಯಬಹುದಾದರೂ ನೀರು ಚೆನ್ನಾಗಿ ಬಸಿದುಹೋಗುವಂತಹ ಕೆಂಪು ಗೋಡುಮಣ್ಣು ಮತ್ತು ಮರಳು ಮಿಶ್ರಿತ ಗೋಡುಮಣ್ಣು ಇದನ್ನು ಬೆಳೆಯಲು ಅತಿ ಸೂಕ್ತ. ಮಲ್ಲಿಗೆಯ ವಿವಿಧ ಜಾತಿಗಳಾದ ಕಾಕಡಾ(ವಸನೆರಹಿತ), ಗುಂಡು/ದುಂಡು ಮಲ್ಲಿಗೆ, ವಸಂತಮಲ್ಲಿಗೆ, ಜಾಜಿಮಲ್ಲಿಗೆ ಬಗ್ಗೆ ಮನೆಯಂಗಳದಲ್ಲಿ ಔಷಧಿ ವನಪುಸ್ತಕದಲ್ಲಿ ವ್ಯಾಪಕ ಮಾಹಿತಿ ಇದೆ. ಅವುಗಳನ್ನು ಬೆಳೆಯುವ,ನಾಟಿಮಾಡುವ ವಿವರವನ್ನು ಲೇಖಕರು ನೀಡಿದ್ದಾರೆ.

ಮಲ್ಲಿಗೆಯಲ್ಲಿನ ಔಷಧೀಯ ಗುಣಗಳು:

* ಕೆಲವು ಮಕ್ಕಳಿಗೆ ಒಂದು ವರ್ಷದ ಮೇಲೆ ಕೂಡ ತಾಯಿಯ ಮೊಲೆಹಾಲು ಕುಡಿಯುವ ಚಟವಿರುತ್ತದೆ. ಅದನ್ನು ಬಿಡಿಸಲು ಜಾಜಿಮಲ್ಲಿಗೆ ರಸವನ್ನು ಸ್ತನಗಳಿಗೆ ಲೇಪಿಸಬೇಕು. ಅಥವಾ ಹೂವುಗಳನ್ನು ಸ್ತನಗಳ ಮೇಲಿಟ್ಟು ಬಟ್ಟೆಕಟ್ಟಬಹುದು.

* ಕಜ್ಜಿ, ತುರಿಕೆ ಮಕ್ಕಳಲ್ಲಿ ಕಂಡರೆ ಇದರ ತೈಲಲೇಪನ ಉಪಯುಕ್ತ.

* ಬಾಯಿಹುಣ್ಣಿನ ತೊಂದರೆಗೆ ಜಾಜಿಮಲ್ಲಿಗೆಯ ಎಲೆಗಳನ್ನು ಅಗಿದು ತಿನ್ನಬೇಕು.

* ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ತೊಂದರೆ ಇದ್ದರೆ ಜಾಜಿಮಲ್ಲಿಗೆ ರಸದಲ್ಲಿ ಒಂದು ಚಿಟಿಕೆ ಕಾಳುಮೆಣಸಿನಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬೇಕು.

* ಒಸಡಿನಲ್ಲಿ ರಕ್ತಸ್ರಾವವಿದ್ದರೆ ಜಾಜಿಮಲ್ಲಿಗೆಯ ಎಲೆಯನ್ನು ಪ್ರತಿದಿನ ತಿನ್ನಬೇಕು.

* ಸುಟ್ಟಗಾಯಗಳಿಗೆ ಜಾಜಿಮಲ್ಲಿಗೆ ಎಲೆಯಿಂದ ತಯಾರಿಸಿದ ತುಪ್ಪ ಅಥವಾ ಎಣ್ಣೆ ಲೇಪಿಸಬೇಕು.

* ದೀರ್ಘಕಾಲದ ಜ್ವರದ ಬಾಧೆಯಾದಾಗ ಜಾಜಿಮಲ್ಲಿಗೆ ಬೇರಿನ ಕಷಾಯ ಉತ್ತಮ, ಪರಿಣಾಮಕಾರಿ.

ಎಣ್ಣೆ ತಯಾರಿಸುವ ವಿಧಾನ : ಒಂದು ಭಾಗ ಜಾಜಿಮಲ್ಲಿಗೆ ಎಲೆಯ ರಸಕ್ಕೆ ಕಾಲುಭಾಗ ಎಳ್ಳೆಣ್ಣೆ ಬೆರೆಸಿ ಒಲೆಯ ಮೇಲೆ ಕಾಯಿಸಬೇಕು. ಸಣ್ಣಗಿನ ಉರಿಯ ಮೇಲೆ ನೀರಿನ ಅಂಶ ಹೋಗುವ ವರೆಗೆ ಇಡಬೇಕು. ಇಳಿಸಿ, ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more