• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಸುದೇವನ ಬಾಲಲೀಲೆ, ಭೀಮಶಕ್ತಿ ಮತ್ತು ಪವಾಡಗಳು!

By Staff
|

ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿಯಲ್ಲಿ ಮಧ್ವರ ದರ್ಶನ ಅನುಭವಕ್ಕೆ ಬರುತ್ತದೆ... ಈವಾರ ಇನ್ನಷ್ಟು ವಿವರಣೆ...

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Madhwacharya - founder of Dwaita Siddhantaಕಳೆದ ವಾರ ನೀವು ಮಧ್ವರ ಅವತಾರ... ಉಡುಪಿ ಕ್ಷೇತ್ರ... ಲೇಖನ ಓದಿರುವಿರಿ. ಅಲ್ಲಿ ಪ್ರಸ್ತಾಪವಾಗಿರುವ ಹುಣಿಸೆಮರದ ಮಹತ್ವದ ಬಗ್ಗೆ ಶ್ರೀ ವಾದಿರಾಜರು ‘ಯುಕ್ತಿಮಲ್ಲಿಕೆ’ಯಲ್ಲಿ ಬರೆಯುತ್ತಾರೆ: ‘‘ಗೃಹ್ಣೀಯಾತ್‌ ತಿಂತ್ರಿಣೀಶಾಖಾಂ ಶಿಗ್ರುಶಾಖಾಗ್ರಹೇಣ ಕಿಮ್‌’’ಎಂದು.

ಗಿಡವನ್ನೇ ಏರಬೇಕಾದರೆ ಹುಣಸೆಮರ ಏರಬೇಕು, ನುಗ್ಗೀಗಿಡವನ್ನಲ್ಲ. ಕಾರಣ ಹುಣಸೆಮರದ ಶಾಖೆಗಳು ಗಟ್ಟಿಯಾಗಿರುತ್ತವೆ. ಜೋತುಬಿದ್ದಾಗ ನುಗ್ಗಿಯ ಮರದಂತೆ ತುಂಡಾಗುವುದಿಲ್ಲ. ನುಗ್ಗೆಯ ರೆಂಬೆ ಹಿಡಿದರೆ ಬೀಳುವುದು ನಿಶ್ಚಿತ. ಟೊಳ್ಳು ಮತಗಳನ್ನು ತೊರೆದು ಗಟ್ಟಿಮತವನ್ನು ಹಿಡಿದು ಉದ್ಧಾರವಾಗಬೇಕು ಎಂಬ ಮಾತನ್ನು ಹುಣಿಸೆಯ ಮರದ ಉದಾಹರಣೆ ತೋರುತ್ತದೆ.

ನಿಡಿಯೂರು ಎಂಬುದು ಮಧ್ಯಗೇಹಭಟ್ಟರ ಬಂಧುಗಳ ಊರು. ಅಲ್ಲಿ ಒಂದು ವಿವಾಹದ ಸಂಭ್ರಮವಿತ್ತು. ಮದುವೆಯಲ್ಲಿ ಮಗ್ನಳಾದ ತಾಯಿ ತನ್ನನ್ನು ಲಕ್ಷಿಸುತ್ತಿಲ್ಲವೆಂದು ಬಗೆದ ವಾಸುದೇವ ಅಲ್ಲಿಂದ ಒಬ್ಬನೆ ಹೊರಟ. ಒಂದು ವರ್ಷದ ಮಗು ಎತ್ತಿನ ಬಾಲ ಹಿಡಿದು ಕಾಡು ಸುತ್ತಿ ಬಂದಿತ್ತು. ಈಗ ಎಲ್ಲಿ ಹೋಯಿತು ಎಂದು ಎಲ್ಲರು ಅಚ್ಚರಿಪಡುವಂತಾಯಿತು.

ದಾರಿಯಲ್ಲಿ ಕಂಡವರೆಲ್ಲ ‘ಹೀಗೆ ಒಂಟಿ ಮಗುವನ್ನು ಬಿಡುವುದು ಉಚಿತವಲ್ಲ’ ಎಂಬ ಸಲಹೆ ಕೊಡುತ್ತಿದ್ದರು. ತಂದೆ ಹುಡುಕುತ್ತ ಕೊನೆಗೆ ಉಡುಪಿಯ ಅನಂತೇಶ್ವರ ದೇವಾಲಯದಲ್ಲಿ ಕಂಡರು. ಮಗು ದೇವರಿಗೆ ನಮಸ್ಕರಿಸುತ್ತಿದ್ದ. ತಂದೆಯ ಕಣ್ಣಲ್ಲಿ ನೀರು. ‘‘ಮಗು! ಇಷ್ಟುದೂರ ದಾರಿಯನ್ನು ನೀನೊಬ್ಬನೆ ಹೇಗೆ ಕ್ರಮಿಸಿದೆ? ನಿನ್ನ ಜೊತೆಯಲ್ಲಿ ಯಾರಿದ್ದರು?’’ ಎಂದಾಗ ವಾಸುದೇವನ ಉತ್ತರ ಅವರನ್ನು ಚಕಿತಗೊಳಿಸಿತ್ತು.

‘‘ಅಪ್ಪಾ! ನಾನು ಒಂಟಿಯಾಗೇನು ಬರಲಿಲ್ಲ. ನನ್ನ ಜೊತೆಯಲ್ಲಿ ದಾರಿಯುದ್ದಕ್ಕೂ ಭಗವಂತ ಒಂದಿಲ್ಲ ಒಂದು ರೂಪದಲ್ಲಿ ಇದ್ದನಲ್ಲ!’’ ದೇವಭಕ್ತನ ಜೊತೆಗೇ ಭಗವಂತ ನಡೆದಿದ್ದ. ಈ ಪ್ರಸಂಗ ‘ದ್ವಾಸುಪರ್ಣಾ’ ಎಂಬ ಶ್ರುತಿಯ ನುಡಿಗೆ ವ್ಯಾಖ್ಯಾನದಂತಿತ್ತು.

ತಂದೆ ಮಗನ ಅಕ್ಷರಾಭಾಸವನ್ನು ಸಂಭ್ರಮದಿಂದ ಆಚರಿಸಿದರು. ದೊಡ್ಡ ಹಾಸುಗಲ್ಲಿನ ಮೇಲೆ ಅಕ್ಷರ ಬರೆಸಿದರು. ಮರುದಿನ ಅದೇ ಅಕ್ಷರ ತೀಡಲು ಹೇಳಿದಾಗ, ‘ಅವೆಲ್ಲ ಬರೆದಾಗಿದೆ ಮುಂದಿನದನ್ನು ಹೇಳಿರಿ’ ಎಂದ ಪ್ರತಿಭಾಶಾಲಿ ಮಗು. ಒಮ್ಮೆ ವಾಸುದೇವನ ತಾಯಿ ಮಗನನ್ನು ಬೇರೆಕಡೆ ಕರೆದೊಯ್ದಿದ್ದರು. ಅಲ್ಲಿ ಶಿವಭಟ್ಟ ಎಂಬ ಪೌರಾಣಿಕರ ಪ್ರವಚನ ನಡೆದಿತ್ತು. ಅಲ್ಲಿ ಅವರ ವಾಕ್ಯಾರ್ಥ ಸರಿಯಾಗಿರಲಿಲ್ಲ.

ಮಗು ಗುಡುಗಿತು, ‘‘ಎಲವೊ ಪೌರಾಣಿಕ! ನೀನು ಹೇಳುವ ಅರ್ಥ ವ್ಯಾಸ, ಶುಕಾದಿ ಜ್ಞಾನಿಗಳಿಗೆ ಸಮ್ಮತವಾಗಿಲ್ಲ.’’ ಎಂದು. ಶಿವಭಟ್ಟರು ಕಂಗಾಲಾದರು. ಶೋತ್ರುಗಳು ಮಗುವಿಗೇ ಅರ್ಥ ಹೇಳಲು ಬಿನ್ನವಿಸಿದರು. ಮಗು ಅರ್ಥ ಹೇಳಿದ. ಅವನು ವಾಯುದೇವರ ಅವತಾರವಲ್ಲವೇ. ಇವನ ಮಾತು ಕೇಳಿ ಅವಾಕ್ಕಾದ ಪೌರಾಣಿಕರು, ‘‘ಮಗು, ನೀನು ಹೇಳಿದ್ದೇ ಸರಿ.’’ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more