• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರಾಶಿ’ - ಕನ್ನಡದ ಅನನ್ಯ ವೈದ್ಯ-ವೇದಾಂತಿ-ಸಾಹಿತಿ

By Staff
|

ಡಾ। ಮಿಸ್‌.ಅಲ್ಬುಕರ್ಕ ಎಂಬ ಮೇಧಾವಿ, ದೂರದೃಷ್ಟಿಯುಳ್ಳ ಮಹಿಳೆ ಡಾ। ಶಿವರಾಂ ಅವರ ಪ್ರಾಧ್ಯಾಪಿಕೆ ಆಗಿದ್ದಳು. ದಕ್ಷಿಣ ಭಾರತದಲ್ಲೇ ಅತ್ಯುತ್ತಮವಾದ ಒಂದು ಮಹಿಳಾ ಅಸ್ಪತ್ರೆಯನ್ನು ಬೆಂಗಳೂರಲ್ಲಿ ತೆರೆಯುವ ಕನಸು ಕಂಡಿದ್ದಳು. ಅದಕ್ಕಾಗಿ ಧನ ಸಂಗ್ರಹಿಸಬೇಕಾಗಿತ್ತು. ಕೈಲಾಸಂ ಅವರ ನಾಟಕ ಆಡಿಸಲು ಶಿವರಾಂ ಅವರ ನೆರವು ಕೇಳಿದಳು. ಶಿವರಾಂ ಅವರ ಮಾತಿಗೆ ಒಪ್ಪಿ ಕೈಲಾಸಂ ‘ಹೋಂ ರೂಲ್‌’ ನಾಟಕ ಆಡಿದರು. ಈ ಚಾರಿಟಿ ಶೋದಿಂದ 35 ಸಹಸ್ರ ರೂಪಾಯಿ ಸಂಗ್ರಹಿತವಾಯಿತು. ಡಾ। ಅಲ್ಬುಕರ್ಕ್‌ ಆಗಿನ ದಿವಾನರಾಗಿದ್ದ ಸರ್‌. ಮಿರ್ಜಾ ಅವರನ್ನು ಸಂಪರ್ಕಿಸಿ ಅವರಿಂದ ಸಹಾಯ ಪಡೆದು ವಾಣಿವಿಲಾಸ ಅಸ್ಪತ್ರೆ ತೆರೆದರು.

ಶಿವರಾಂ ಎಮ್‌.ಬಿ.ಬಿ.ಎಸ್‌. ಮುಗಿಸುವ ವೇಳೆಗೆ ಅವರ ಬೆಂಗಳೂರು ಮೆಡಿಕಲ್‌ ಕಾಲೇಜು ಮೈಸೂರಿಗೆ ಸ್ಥಳಾಂತರಗೊಂಡಿತು. ಬೆಂಗಳೂರಿಗೆ ಮೆಡಿಕಲ್‌ ಕಾಲೇಜು ಇಲ್ಲದಾಯ್ತು. 1954ರಲ್ಲಿ ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದಾಗ, ‘ಮೈಸೂರು ಮೆಡಿಕಲ್‌ ಅಸೋಸಿಯೇಶನ್‌’ ಅಸ್ತಿತ್ವಕ್ಕೆ ಬಂತು. ಅದರ ಕಾರ್ಯದರ್ಶಿ ಡಾ। ಶಿವರಾಂ ಆದರು. ಬಹಳ ಪರಿಶ್ರಮ ವಹಿಸಿ 1956ರಲ್ಲಿ ಬೆಂಗಳೂರಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸಿದರು.

ಡಾ। ಶಿವರಾಂ ಅವರ ಮನೆಯಲ್ಲಿ ಏಳೂ ದಿನ ವಾರನ್ನದ ಹುಡುಗರು ಬರುತ್ತಿದ್ದರು. ಒಬ್ಬ ಹುಡುಗ ಇಂತರ್‌ಮೀಡಿಯೇಟ್‌ ಪರೀಕ್ಷೆಗೆ ಕಟ್ಟಲು ದುಡ್ಡು ಇಲ್ಲದೆ ಪರದಾಡುತ್ತದ್ದ. ಒಂದು ಕಾಗದದ ಪಟ್ಟಿ ಮಾಡಿ ಹಣವಂತರಿಂದ ಧನ ಸಂಗ್ರಹಿಸುತ್ತಿದ್ದ. ಅವನು ಡಾ। ಶಿವರಾಂ ಅವರ ಬಳಿ ಬಂದಾಗ 5 ರೂಪಾಯಿ ಸಂಗ್ರಹವಾಗಿತ್ತು. ಇನ್ನು ಎಂಟು ದಿನ ಸುತ್ತಾಡಿ 25 ರೂಪಾಯಿ ಸಂಗ್ರಹಿಸಬೇಕಾಗಿತ್ತು.

ಶಿವರಾಂ ಅವನ ಪಾಡನ್ನು ಕೇಳಿ ಅವನ ಕೈಯಲ್ಲಿದ್ದ ಕಾಗದವನ್ನು ಹರಿದು ಹಾಕಿ, ‘ಮನೆಗೆ ಹೋಗಿ ಅಭ್ಯಾಸ ಮಾಡು, ದುಡ್ಡಿಗಾಗಿ ಸಮಯ ಹಾಳು ಮಾಡಬೇಡ’ ಎಂದರು. ಹುಡುಗ ಹತಾಶನಾದ. ‘ಆ ಲಿಸ್ಟ್‌ ಇಲ್ಲದೆ ನಾನು ಹೇಗೆ ಹಣ ಸಂಗ್ರಹಿಸಲಿ?’ ಎಂದು ಗೋಳಿಟ್ಟ. ಆಗ ಅವನಿಗೆ 25 ರೂಪಾಯಿ ಕೊಟ್ಟರು. ‘ನಿನ್ನ ಸಮಸ್ಯೆ ಬಗೆ ಹರಿಯಿತಲ್ಲವೇ?’ ಎಂದರಂತೆ. ಅಸಂಖ್ಯ ಬಡ ವಿದ್ಯಾರ್ಥಿಗಳು ಇವರ ಸಹಾಯದಿಂದ ಮೆಡಿಕಲ್‌ ಹಾಗೂ ಇಂಜಿನಿಯರಿಗ ಪದವಿ ಗಳಿಸಿದರು.

ಒಬ್ಬ ಮೆಡಿಕಲ್‌ ವಿದ್ಯಾರ್ಥಿ ಫೀಜ್‌ಗಾಗಿ ಇವರ ಬಳಿ ಧನಸಹಾಯ ಯಾಚಿಸಲು ಬಂದ. ಇವರು ಅವನಿಗೆ ಹಣ ಕೊಟ್ಟರು. ಅವನು ಒಂದು ಕಂಡಿಶನ್‌ ಹಾಕಿದ: ‘ತಾವು ಈ ಹಣ ನನ್ನಿಂದ ನಂತರ ವಾಪಸ ಪಡೆಯಬೇಕು. ತಾವು ಹಾಗೆಯೇ ಕೊಟ್ಟರೆ ನಿಮ್ಮ ಸಹಾಯ ನನಗೆ ಬೇಡ’ ಎಂದ. ಆಗ ಶಿವರಾಂ ಹೇಳಿದ ಮಾತು ಮಾರ್ಮಿಕವಾಗಿವೆ. ‘ನೀನು ನನಗೆ ಹಣ ಮರಳಿ ಕೊಡಬೇಕಾಗಿಲ್ಲ. ಆದರೆ ನೀನು ಒಂದು ಕೆಲಸ ಮಾಡು . ಒಬ್ಬ ಬಡ ಮೇಧಾವಿ ವಿದ್ಯಾರ್ಥಿಯನ್ನು ಹಿಡಿದು ಅವನಿಂದ ಮೆಡಿಕಲ್‌ ಓದಿಸು.’ ಇದು ಎಂತಹ ಆದರ್ಶ!

ಶಿವರಾಂ ಮೈಸೂರು ಕ್ಯಾನ್ಸರ್‌ ಸೊಸೈಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 1940 ರಿಂದ 60ರ ವರೆಗೆ ಬೆಂಗಳೂರಿನಲ್ಲಿಯ ಸೇಂಟ್‌ ಮಾರ್ತಾ ಆಸ್ಪತ್ರೆಯಲ್ಲಿ ಕಿವಿ-ಮೂಗು-ಗಂಟಲು(ಇ.ಎನ್‌.ಟಿ)ವಿಭಾಗದಲ್ಲಿ ಗೌರವ ಸರ್ಜನರಾಗಿ ದುಡಿದು ಸಹಸ್ರಾರು ಬಡವರ ಸೇವೆಯನ್ನು ಮಾಡಿದರು.

ಡಾ। ಶಿವರಾಂ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ(1971), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1974) ದೊರಕಿತ್ತು. ಅವರ ‘ಮನಮಂಥನ’ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕೆಡೆಮಿ ಪ್ರಶಸ್ತಿ(1974), ಕೇಂದ್ರ ಸಾಹಿತ್ಯ ಅಕೆಡೆಮಿ ಪ್ರಶಸ್ತಿ (1976) ದೊರೆತಿದ್ದವು. ಇವರು ಎಂಭತ್ತರ ತುಂಬು ಜೀವನ ನಡೆಸಿದರು. (1984, ಜನವರಿ 13ರಂದು ಸ್ವರ್ಗಸ್ಥರಾದರು). ಮುಂದಿನ ವಾರ ‘ರಾಶಿ’ ಸಾಹಿತ್ಯಲೋಕದಲ್ಲಿ ಸುತ್ತಾಡೋಣ.

(ಓದುಗರ ಗಮನಕ್ಕೆ : ಕಾರಾಣಾಂತರಗಳಿಂದ ‘ಜೀವನ ಮತ್ತು ಸಾಹಿತ್ಯ’ ಅಂಕಣ, ಬುಧವಾರ ಪ್ರಕಟವಾಗುತ್ತಿದೆ. ಮುಂದೆ ಯಥಾ ಪ್ರಕಾರ ಶನಿವಾರ ಪ್ರಕಟಗೊಳ್ಳಲಿದೆ -ಸಂಪಾದಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more