• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀ ಮಧ್ವರ ದಕ್ಷಿಣ ದೇಶದ ದಿಗ್ವಿಜಯ!

By Staff
|

ಉಡುಪಿಗೆ ತೆರಳುವ ಮಾರ್ಗದಲ್ಲಿ...

ಚಾತುರ್ಮಾಸ್ಯ ಪೂರೈಸಿ ಶ್ರೀ ಮಧ್ವರು ಬೇರೆ ಮಾರ್ಗದಿಂದ ಉಡುಪಿಗೆ ಮರಳತೊಡಗಿದರು. ದಾರಿಯಲ್ಲಿ ಅಪೂರ್ವ ಕ್ಷೇತ್ರ ಶ್ರೀರಂಗಂದಲ್ಲಿ ದಿಗ್ವಿಜಯ ಮಾಡಿದರು. ವಿಭೀಷಣನಿಂದ ನಿತ್ಯದಲ್ಲಿ ಗುಪ್ತವಾಗಿ ಆರಾಧಿಸಲ್ಪಟ್ಟ ಮೂರ್ತಿ ಎಂಬ ಪ್ರಸಿದ್ಧಿ ಇಲ್ಲಿಯ ಶ್ರೀ ರಂಗನಾಥನ ಸುಂದರ ವಿಗ್ರಹಕ್ಕಿದೆ. ಪ್ರವಾಸದಲ್ಲಿ ಮತ್ತೆ ಚಾತುರ್ಮಾಸ್ಯ ಸಮೀಪಿಸಿತು. ಶ್ರೀಮುಷ್ಣ ಕ್ಷೇತ್ರದತ್ತ ನಡೆದರು. ಇದು ಮತ್ತೊಂದು ಸ್ವಯಂವ್ಯಕ್ತ ವೈಷ್ಣವ ಕ್ಷೇತ್ರ. ಭಗವಂತನ ವರಾಹರೂಪದ ಸನ್ನಿಧಿಯಿಂದ ಪರಮ ಪಾವನವೆನಿಸಿದ ಪುಣ್ಯಕ್ಷೇತ್ರ. ಮೂಲವಿಗ್ರಹ ಭೂವರಾಹಮೂರ್ತಿಯದು. ಅಲ್ಲಿ ಶ್ರೀ ಮಧ್ವರು, ‘‘ತಸ್ಯ ಯಜ್ಞ ವರಾಹಸ್ಯ ವಿಷ್ಣೋರಮಿತತೇಜಸಃ । ಪ್ರಣಾಮಂ ಯೇ ಪ್ರಕುರ್ವಂತಿ ತೇಷಾಮಪಿ ನಮೋ ನಮಃ ।।’’ ಎಂದು ಸ್ತುತಿಸಿ ನಮಿಸಿದರು. ಶ್ರೀ ಮಧ್ವರಿಗೆ ಇಲ್ಲಿಯ ತೀರ್ಥಯಾತ್ರೆಗಿಂತ ಶಾಸ್ತ್ರಪ್ರವಚನವೇ ಮುಖ್ಯಗಿರಿಯಾಗಿತ್ತು. ಅವರು ಅಲ್ಲಿ ನೆಲೆಸಿದಾಗ ಒಂದು ಪ್ರಸಂಗ ನಡೆಯಿತು.

ಯತಿಗಳಿಗೆ ಭಿಕ್ಷಾನ್ನವೇ ಶಾಸ್ತ್ರ ವಿಧಿಸಿದ ವಿಧಿ. ಬ್ರಹ್ಮಚಾರಿಗಳಿಗಳಂತೆ ಯತಿಗಳಿಗೂ ಸ್ವಯಂಪಾಕ ನಿಷಿದ್ಧ. ಬ್ರಹ್ಮಚಾರಿಗಳ ಜ್ಞಾನಕಾರ್ಯ ಜ್ಞಾನಾರ್ಜನೆಯಾದರೆ, ಯತಿಗಳ ಜ್ಞಾನಕಾರ್ಯ ಜ್ಞಾನಪ್ರಸಾರ. ಅದಕ್ಕೆಂದೇ ಯತಿಗಳದು ಮಧುಕರ ವೃತ್ತಿ. ಭಿಕ್ಷೆ ಒಂದು ಮನೆಗೆ ಸೀಮಿತವಾಗಬಾರದು, ಏಳಕ್ಕಿಂತ ಹೆಚ್ಚು ಮನೆಗಳಲ್ಲಿ ಭಿಕ್ಷೆ ಬೇಡಬಾರದು. ಒಂದೇ ಮನೆಗೆ ಸೀಮಿತವಾದರೆ ಅಭಿಮಾನ ಬೆಳೆಯುವ ಅಪಾಯವಿದೆ, ಹೆಚ್ಚು ಮನೆಗಳಾದರೆ ಭೋಜನದ ಪ್ರಮಾಣ ಮಿತಿ ಮೀರುವ ಅಪಾಯವಿದೆ. ಪ್ರತಿ ದಿನ ಹೊಸ ಮನೆ ಹುಡುಕಬೇಕು ಎಂಬುದು ಇನ್ನೊಂದು ನಿಯಮ.

ಪೂರ್ಣಪ್ರಜ್ಞರು ಒಂದು ಮನೆಗೆ ಭಿಕ್ಷೆಗೆ ತೆರಳಿದಾಗ ಕಂತಿ ಎಂಬ ಮನೆಯ ಸೊಸೆ ದೂರದಿಂದ ನೀರು ತರುವ ದೃಶ್ಯ ಅವರ ಕಣ್ಣಿಗೆ ಬಿತ್ತು. ಅವಳು ತುಂಬ ಗರ್ಭಿಣಿಯಾಗಿದ್ದಳು. ಶ್ರೀ ಮಧ್ವರ ಕರುಣೆ ಉಕ್ಕಿತು. ಕೈಯಲ್ಲಿದ್ದ ದಂಡ ನೆಲಕ್ಕೆ ಅಪ್ಪಳಿಸಿದರು. ನೆಲದಿಂದ ನೀರು ಪುಟಿಯಿತು, ಉಕ್ಕಿ ಹರಿಯಿತು. ಅಲ್ಲಿ ದಂಡತೀರ್ಥ ಉದ್ಭವಿಸಿತು. ಭಿಕ್ಷೆ ಕೇಳಲು ತೆರಳಿದರು, ಶಾಶ್ವತವಾದ ನೀರಿನ ‘ಜಲಭಿಕ್ಷೆ’ ನೀಡಿ ಮರಳಿದರು.

ಅಲ್ಲಿಂದ ಮರಳುವಾಗ ಮಾರ್ಗದಲ್ಲಿ ಯೋಗಿಯಾಬ್ಬ ಅವರ ಕಣ್ಣಿಗೆ ಬಿದ್ದ. ಅವನೊ ವರಾಹೋಪಾಸಕ. ವರಾಹಮಂತ್ರ ಕೋವಿದ. ಮೂವತ್ತು ವರಾಹ ಮಂತ್ರ ತಿಳಿದಿರುವ ಅಹಂಕಾರ ಅವನಿಗೆ. ಅವನು ಪಠಿಸುವ ಮಂತ್ರಗಳಿಗೆ ಶ್ರೀ ಮಧ್ವರು ವಿವರಣೆ ನೀಡಿದರು. ಅಲ್ಲದೆ ಅವನಿಗೆ ತಿಳಿಯದ ಮಿಗಿಲಾದ ಮಂತ್ರಗಳನ್ನು ಹೇಳಿದರು. ಅವನಿಗೆ ಮಂತ್ರಸಿದ್ಧಿಯ ಫಲವಾಗಿ ಶ್ರೀ ಮಧ್ವರ ದರ್ಶನದ ಭಾಗ್ಯ ಲಭಿಸಿತ್ತು. ಶ್ರೀ ಮಧ್ವರ ಮತ್ತೊಂದು ಮುಖ ಇಲ್ಲಿ ಪ್ರದರ್ಶಿತವಾಗಿತ್ತು.

ತತ್ತ್ವಜ್ಞಾನ ಶಾಸ್ತ್ರಗಳ ತಾತ್ವಿಕ ಭಾಗವಾದರೆ, ತಂತ್ರಶಾಸ್ತ್ರ ತತ್ತ್ವಜ್ಞಾನದ ಪ್ರಾಯೋಗಿಕ ಭಾಗ. ಅವರೆಡೂ ಜೊತೆಯಾದಾಗ ಮಾತ್ರ ಸಿದ್ಧಿಯ ಪೂರ್ಣತೆ. ತಂತ್ರಶಾಸ್ತ್ರದ ಪಂಡಿತರಿಗೆ ಕೆಲಸಲ ತತ್ತ್ವಜ್ಞಾನದ ಗಂಧಗಾಳಿ ಕೂಡಾ ಇರುವುದಿಲ್ಲ. ಅನುಸಂಧಾನವಿಲ್ಲದ ಪ್ರಯೋಗ, ಪ್ರಯೋಗವಿಲ್ಲದ ಅನುಸಂಧಾನ - ಇವೆರಡೂ ಒಂಟಿ ರೆಕ್ಕೆಯ ಪಕ್ಷಿಯಂತೆ. ಅದು ಎಂದೂ ಗಗನದಲ್ಲಿ ಹಾರಲಾರದು. ಯೋಗಿಗಳಿಗೆ ಇವೆರಡೂ ಬೇಕು (ತತ್ತ್ವಜ್ಞಾನ ಮತ್ತು ತಂತ್ರಶಾಸ್ತ್ರ) ಎಂಬುದನ್ನು ಶ್ರೀ ಮಧ್ವರು ತೋರಿಸಿಕೊಟ್ಟರು. ತತ್ತ್ವಶಾಸ್ತ್ರದಂತೆ ಮಂತ್ರಶಾಸ್ತ್ರವು ಅವರಿಗೆ ಕರತಲಾಮಲಕವಾಗಿತ್ತು. ‘ಬ್ರಹ್ಮಸೂತ್ರಭಾಷ್ಯ’ವು ಅವರ ತತ್ತ್ವಶಾಸ್ತ್ರದ ಪರಿಣತಿಯನ್ನು ತೋರಿದರೆ, ‘ತಂತ್ರಸಾರಸಂಗ್ರಹ’ ಅವರ ತಂತ್ರಸಿದ್ಧಿಯನ್ನು ತೋರುತ್ತದೆ. ಶ್ರೀ ಮಧ್ವರು ತಿಳಿದಿದ್ದ ಮಂತ್ರಗಳ ಸಂಖ್ಯೆ ಏಳು ಕೋಟಿ ಎಂದು ಶ್ರೀ ರಾಘವೇಂದ್ರೆಸ್ವಾಮಿಗಳು ಬಣ್ಣಿಸಿದ್ದಾರೆ.

ಅಡೂರಿಗೆ ಭೇಟಿ -

ಶೀ ಮಧ್ವರು ನಂತರ ಸಂದರ್ಶಿಸಿದ ಸ್ಥಳ ಪಯಸ್ವನೀತೀರದ ಅಡೂರು. ಅಲ್ಲಿ ಮಹಾಲಿಂಗೇಶ್ವರ ದೇವಾಲಯವಿದೆ. ಅವರನ್ನು ಕಾಣಲು ಪಂಡಿತರ ಒಂದು ದೊಡ್ಡ ಗುಂಪೇ ಧಾವಿಸಿ ಬಂತು. ಅವರು ‘ವಿದ್ವನ್‌ ನಕ್ಷತ್ರಗಳನ್ನು ಮಂಕಾಗಿಸುವ ಭಾಸ್ಕರನಂತೆ, ದುರ್ವಾದಿಗಜಗಳ ಕುತರ್ಕವೆಂಬ ಕುಂಭಸ್ಥಲವನ್ನು ಭೇದಿಸುವ ಸಿಂಹನಂತೆ, ಜನಸ್ತೋಮದ ನೇತ್ರ ಕನ್ನೈದಿಲೆಗಳನ್ನು ಅರಳಿಸುವ ಚಂದ್ರನಂತೆ’ ಶೋಭಿಸಿದರಂತೆ.

ಒಂದು ಸಭೆಯಲ್ಲಿ ಪ್ರಧಾನ ವಿದ್ವಾಂಸನೊಬ್ಬ ಪ್ರಶ್ನಿಸಿದ: ‘‘ಪೂಜ್ಯರೆ, ತಮ್ಮಿಂದ ಐತರೇಯಶ್ರುತಿಯ ಒಂದು ಸೂಕ್ತದ ಅರ್ಥವಿವರಣೆ ಕೇಳುವ ಕಾತರ ನಮಗಿದೆ. ಅನುಗ್ರಹಿಸಬೇಕು.’’ಎಂದು. ಶ್ರೀ ಮಧ್ವರು ಅವನ ಪ್ರಾರ್ಥನೆ ಮನ್ನಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more