• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀ ಮಧ್ವರ ದಕ್ಷಿಣ ದೇಶದ ದಿಗ್ವಿಜಯ!

By Staff
|

ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ... ದಕ್ಷಿಣ ರಾಜ್ಯಗಳಲ್ಲಿ ಪ್ರಯಾಣ ಬೆಳೆಸಿದ ಮಧ್ವರು, ತಮ್ಮ ಪ್ರಯಾಣವನ್ನು ಸಾರ್ಥಕಪಡಿಸಿಕೊಂಡ ಬಗೆ ಇಲ್ಲಿದೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Madhwacharyaಸಂಚಾರ ಮಾಡುತ್ತ ಶ್ರೀ ಮಧ್ವರು ಪುರಾಣಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುವನಂತಪುರ ತಲುಪಿದರು. ಅನಂತಪದ್ಮನಾಭಸ್ವಾಮಿಯ ಸ್ವರ್ಣಮಯ ಮೂರ್ತಿಯಿಂದ ಪರಿಶೋಭಿತವಾದ ಅನುಪಮ ಸಿದ್ಧಿಯ ಮಹಾಕ್ಷೇತ್ರವಿದು. ಅಲ್ಲಿಯ ವಿದ್ವತ್‌ ಸಭೆಯಲ್ಲಿ, ‘ಶ್ರೀ ಹರಿಸರ್ವೋತ್ತಮತ್ವವೇ ಸಕಲ ಶಾಸ್ತ್ರಗಳ ಹೃದಯ; ಶ್ರೀಹರಿಯೇ ಶಾಸ್ತ್ರಪ್ರತಿಪಾದ್ಯವಾದ ಬ್ರಹ್ಮ’ ಎಂಬುದು ಅವರ ಪ್ರವಚನದ ಸಾರವಾಗಿತ್ತು. ಅಲ್ಲಿ ಕುದಿಪುಸ್ತೂರು ಎಂಬ ಮಾಯವಾದಿ ಸನ್ಯಾಸಿ ಪ್ರಮುಖ ಪಂಡಿತನಾಗಿದ್ದ. ‘‘ಸೂತ್ರಭಾಷ್ಯ ಬರೆಯದೆ, ಸೂತ್ರಾರ್ಥ ಹೇಳುವುದು ದೊಡ್ಡ ಅಪಚಾರ’’ ಎಂದು ಆಕ್ಷೇಪಿಸಿದ.

ಪೂರ್ಣಪ್ರಜ್ಞರ ವಾದ ಹೀಗಿತ್ತು, ‘‘ ವಿಚಾರದ ಬಗ್ಗೆ ನಿನ್ನ ಪ್ರತಿಪಾದನೆ ಇದ್ದರೆ ಮಂಡಿಸು. ನಾವೂ ಬ್ರಹ್ಮಸೂತ್ರಗಳಿಗೆ ಭಾಷ್ಯಬರೆಯಲಿರುವೆವು. ಹಾಗೆ ಭಾಷ್ಯ ಬರೆಯದಿರಲು ಅಡ್ಡಿಯಾದ ಶಾಸನವೇನೂ ಇಲ್ಲವಷ್ಟೇ.’’ ಸಭೆಯು ಅವರ ವಿಚಾರ ಒಪ್ಪಿತು. ‘ಜ್ಞಾನಕ್ಕೂ ದೇಹಲಕ್ಷಣಕ್ಕೂ ಸಂಬಂಧವನ್ನು ಶಾಸ್ತ್ರಗಳು ಪ್ರತಿಪಾದಿಸಿದ ವಿಷಯ ಶ್ರೀ ಮಧ್ವರು ಚರ್ಚಿಸಿದರು. ಇವರ ಮಾತಿನ ಅರ್ಥವಾಗದೆ ಆ ಪಂಡಿತನು ತನಗೆ ತೋಚಿದ್ದೇ ಲಕ್ಷಣವೆಂದು ತಿಳಿದು ವಾದಿಸಿದನು. ‘ಪೂರ್ಣಪ್ರಜ್ಞರ ದಂಡವನ್ನು ತಾನು ತುಂಡು ಮಾಡುವ’ ಶಪಥಗೈದು ಅಲ್ಲಿಂದ ತೆರಳಿದನು.

ಕನ್ಯಾಕುಮಾರಿ -

ನಂತರ ಪೂರ್ಣಪ್ರಜ್ಞರು ಅಲ್ಲಿಂದ ಕನ್ಯಾಕುಮಾರಿ ಕ್ಷೇತ್ರ ಸಂದರ್ಶಿಸಿದರು. ದಿಗ್ವಿಜಯ ಸಾಧಿಸುತ್ತ ರಾಮೇಶ್ವರ ತಲುಪಿದರು. ಇದು ವಿಶಿಷ್ಟವಾದ ಕ್ಷೇತ್ರ. ರಾಮನಿಂದಾಗಿ ವೈಷ್ಣವರಿಗೂ, ಶಿವನಿಂದಾಗಿ ಶೈವರಿಗೂ ಪ್ರಿಯವಾದ ಕ್ಷೇತ್ರ ಇದಾಗಿದೆ. ಶೈವರ ಪ್ರಕಾರ, ಅದು ರಾಮ ರಾವಣನನ್ನು ಕೊಂದ ಬ್ರಹ್ಮಹತ್ಯಾ ಪಾಪದ ಪರಿಹಾರಕ್ಕಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ ಸ್ಥಳ.

ಶ್ರೀರಾಮನು ಶಿವನನ್ನು ಹಾಗೆ ಪ್ರತಿಷ್ಠಾಪಿಸಲು ಶಿವನು ಮನೋನಿಯಾಮಕನಾದ ತತ್ತ್ವಾಭಿಮಾನಿ ದೇವತೆ; ಶಿವನಿಂದ ಕಡಿಮೆಯಾದ ದೇವತೆಗಳಿಗೆಲ್ಲ ತಾರತಮ್ಯೋಕ್ತ ರೀತಿಯಲ್ಲಿ ಶಿವ ಪೂಜೆ ಕಡ್ಡಾಯ ಎಂಬುದನ್ನು ತಿಳಿಸಿಕೊಡುವುದು ಮುಖ್ಯ ಕಾರಣ. ಅಲ್ಲದೇ ರಾವಣ ಬ್ರಾಹ್ಮಣನೇ ಅಲ್ಲ. ಅವನು ವಿಪ್ರವಸ್‌ ಮುನಿಯ ಮಗನಾದರೂ, ಅವನ ತಾಯಿ ಕೇಕಸಿ ಎಂಬ ರಾಕ್ಷಸಿ. ಶಾಸ್ತ್ರವಿಧಿಯಂತೆ ಮಗನ ಗುಣ ತಂದೆಯದು, ಜಾತಿ ತಾಯಿಯದು(ಮಾತೃಜಾತಿಃ ಪಿತೃಗುಣಾಃ). ಆದ್ದರಿಂದ ರಾವಣ ಹತ್ಯೆ ಬ್ರಹ್ಮಹತ್ಯೆಯಾಗುವುದಿಲ್ಲ. ಅವನು ಜಗತ್ತು ಕಂಡ ಪರಮ ದುಷ್ಟರಲ್ಲಿ ಒಬ್ಬವ. ಅವನ ಸಂಹಾರದಿಂದ ವಿಶ್ವಕ್ಕೇ ಕಲ್ಯಾಣವಾಯಿತು. ಇದು ಪುರಾಣಪ್ರಸಿದ್ಧವಾಗಿದೆ.

ಶಿವನನ್ನು ರಾಮ ಪ್ರತಿಷ್ಠಾಪಿಸಿದ್ದು ಶಿವನ ಕಲ್ಯಾಣಕ್ಕಾಗಿ. ನಿಜಕ್ಕೂ ಬ್ರಹ್ಮಹತ್ಯೆಯ ದೋಷವಿದ್ದದ್ದು ಶಿವನಿಗೆ. ಅವನು ಬ್ರಹ್ಮನ ಐದನೆಯ ಶಿರಸ್ಸನ್ನು ಛೇದಿಸಿದ್ದ. ಬ್ರಹ್ಮ ಕಪಾಲ ಅವನ ಬೆನ್ನುಹತ್ತಿತ್ತು. ಅವನು ಕಪಾಲಿ ಎಂಬುದು ಲೋಕಪ್ರಸಿದ್ಧ. ಆ ದೋಷ ಪರಿಹರಿಸಲು ರಾಮೇಶ್ವರದಲ್ಲಿ ಶಿವಲಿಂಗದ ಪ್ರತಿಷ್ಠಾಪನೆಯಾಯ್ತು. ಅಲ್ಲಿ ನೆಲೆಸಿದ ಶಿವನಿಗೆ ನಿತ್ಯ ರಾಮಸೇತುವೆಯ ದರ್ಶನವಿದೆ.

ಸೇತುವೆಯ ದರ್ಶನ ಬ್ರಹ್ಮಹತ್ಯಾನಾಶಕ ಎಂಬುದು ಪುರಾಣವಚನ. ರಾಮೇಶ್ವರ ಕ್ಷೇತ್ರದಲ್ಲಿ ಪೂರ್ಣಪ್ರಜ್ಞರ ಚಾತುರ್ಮಾಸ್ಯ. ಅಲ್ಲಿಯ ಪಂಡಿತರೊಂದಿಗೆ ವಾದವಿವಾದ ನಡೆಯಿತು. ಎಲ್ಲೆಡೆ ಪೂರ್ಣಪ್ರಜ್ಞರಿಗೆ ಜಯ. ಪ್ರಾಜ್ಞಪಂಡಿತರಿಗೆ ಇವರು ಸಾಮಾನ್ಯರಲ್ಲ ‘ಪೂರ್ಣಪ್ರಜ್ಞ’ರು ಎಂಬ ಮನವರಿಕೆ ಆದದ್ದೇ ಈ ಕ್ಷೇತ್ರದಲ್ಲಿ.

ಕುದಿಪುಸ್ತೂರನು ಮತ್ತೆ ರಾಮೇಶ್ವರದಲ್ಲಿ ಪೂರ್ಣಪ್ರಜ್ಞರನ್ನು ಎದುರಿಸಿದ. ಅವನನ್ನು ಕಂಡು ಶ್ರೀ ಮಧ್ವರು ಕಿರುನಗೆ ಬೀರುತ್ತ ನುಡಿದರು, ‘‘ನೀನು ಪ್ರತಿಜ್ಞೆ ಮಾಡಿದ್ದೆಯಲ್ಲ ನಮ್ಮ ದಂಡ ಮುರಿಯುವೆನೆಂದು. ಇಗೊ ಇಲ್ಲಿದೆ ದಂಡ. ಇದನ್ನು ಮುರಿಯುವೆಯಾ? ಅಥವಾ ನೀನು ತಿಳುವಳಿಕೆಯಿಲ್ಲದ ಹೇಡಿಯೆಂದು ಒಪ್ಪಿಕೊಳ್ಳುವೆಯಾ?’’ಎಂದು. ಅವನು ವಾದಕ್ಕಿಳಿಯದೆಯೇ ಅಲ್ಲಿಯ ಜನರ ಬೆಂಬಲವನ್ನು ಯಾಚಿಸತೊಡಗಿದ. ಅವನಿಗೆ ಪರಾಭವವಾಯಿತು. ಜನರೆಲ್ಲ ಪೂರ್ಣಪ್ರಜ್ಞನರ ಮಹಿಮೆ ಅರಿತು ಅವರ ಶಿಷ್ಯತ್ವ ವಹಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more