• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರ ಅವತಾರ... ಉಡುಪಿ ಕ್ಷೇತ್ರ...

By Staff
|

ಮಗುವಿನ ಪೋಷಣೆಗೆ ಮನೆಯಲ್ಲಿ ಹಾಲುಕರೆವ ಆಕಳು ಇರಲಿಲ್ಲ. ಮೂಡಿಲ್ಲಾಯ(ಚಿಟ್ಟಾಡಿಬೀಳು ಬಲ್ಲಾಳ) ಎಂಬ ಶ್ರೀಮಂತ ವೃದ್ಧನೋರ್ವ ಇವರಿಗೆ ಗೋದಾನ ಮಾಡಿದ. ಅದು ಸತ್ಪಾತ್ರದಾನವಾಗಿದ್ದರಿಂದ ಪುಣ್ಯಗಳಿಸಿದ. ಅವನು ಮೃತನಾದಾಗ ಮತ್ತೆ ತನ್ನ ಮಗನ ಶಿಶುವಾಗಿ ಜನಿಸಿದ. ತಾನೇ ತನ್ನ ಮೊಮ್ಮಗನಾದ. ಮುಂದೆ ಶ್ರೀ ಮಧ್ವರಲ್ಲಿ ಸತ್‌ಶಾಸ್ತ್ರಶ್ರವಣ ಮಾಡುವ ಭಾಗ್ಯ ಪಡೆದ. ಅವರ ಅನುಗ್ರಹ ಪಡೆದ, ಪದ್ಮಗರ್ಭದ ಲಕ್ಷೀನಾರಾಯಣ ಪ್ರತೀಕವನ್ನು ಪೂಜಿಸುವ ಭಾಗ್ಯ ಪಡೆದ.

ವಾಸುದೇವನ ಬಾಲಲೀಲೆಗಳು :

ವಾಸುದೇವ ಮೂರು ತಿಂಗಳ ಶಿಶು. ಮಗುವನ್ನು ಮೊದಲಸಲ ಮನೆಯಿಂದ ಹೊರಗೆ ಕರೆದೊಯ್ಯುವ ವಿಶಿಷ್ಟ ಸಂಸ್ಕಾರ. ಮಧ್ಯಗೇಹರು ಮಗ ವಾಸುದೇವನನ್ನು ಉಡುಪಿಗೆ ಒಯ್ದು ಅನಂತೇಶರನ ಪದತಲದಲ್ಲಿ ಇಟ್ಟರು. ಆ ದೇವರ ಅನುಗ್ರಹದಿಂದ ಜನಿಸಿದ ಶಿಶುವನ್ನು ಅಲ್ಲಿಟ್ಟಾಗ ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದರು’ ಎನ್ನುವಂತಾಗಿತ್ತು. ಅಲ್ಲಿ ವಿಶೇಷ ಉತ್ಸವ ಮುಗಿಸಿ ಮನೆಗೆ ಮರಳಲು ರಾತ್ರಿಯಾಯಿತು. ದಟ್ಟಡವಿಯಲ್ಲಿ ಪಯಣಿಸುವಾಗ ಜೊತೆಯಲ್ಲಿದ್ದ ಒಬ್ಬವ ರಕ್ತಕಾರಿ ಕೆಳಗೆ ಬಿದ್ದ. ಇದು ಭೂತಚೇಷ್ಟೆಯೆಂದು ಮಧ್ಯಗೇಹರಿಗೆ ಮನವರಿಕೆಯಾಯಿತು. ಆದರೆ ಮಗು ಸುರಕ್ಷಿತವಾಗಿತ್ತು. ಮಗುವಿನ ಪ್ರಭಾವದಿಂದ ಭೂತ ತೊಲಗಿದ ನಿದರ್ಶನ ಎಲ್ಲರಿಗಾಯಿತು.

ಮಗುವಿನ ಬಾಲ ಲೀಲೆಗಳು ಅವನೊಬ್ಬ ಅವತಾರೀ ಪುರುಷನೆಂಬುದನ್ನು ಪ್ರಕಟಿಸುತ್ತಿದ್ದವು. ತಾಯಿ ವೇದವತಿ ಮಗುವನ್ನು ನೋಡಿಕೊಳ್ಳಲು ಮಗಳಿಗೆ ಹೇಳಿ ನೆರೆಮನೆಗೆ ಸಹಾಯಮಾಡಲು ಹೋದಳು. ಮಗು ಹಸಿವೆಯಿಂದ ಅಳುತ್ತಿತ್ತು. ಏನೂ ತೋಚದ ಅಕ್ಕ ಮಗುವಿನ ಹಸಿವೆ ಹಿಂಗಿಸಲು, ಹಸುವಿಗಾಗಿ ಬೇಯಿಸಿಟ್ಟ ಹುರುಳಿಯನ್ನು ತಿನ್ನಿಸಿದಳು. ಮಗು ಶಾಂತವಾಯಿತು. ನಂತರ ಈ ಪ್ರಮಾದವನ್ನು ಅರಿತ ಮನೆಯವರೆಲ್ಲ ಒದ್ದಾಡಿದರು.

ಮಧ್ಯಗೇಹರು ಮಗುವಿಗೆ ಆಗಬಹುದಾದ ಅಪಾಯ ತಪ್ಪಿಸಲು ಧನ್ವಂತರಿಯ ಜಪ ಪ್ರಾರಂಭಿಸಿದರು. ಅವರ ಪ್ರಾರ್ಥನೆಯಲ್ಲಿ ಊರಜನರೆಲ್ಲ ಸೇರಿದರು. ಮಗುವಿಗೆ ಯಾವ ಆಪತ್ತೂ ಒದಗಲಿಲ್ಲ. ಮಗು ಪಶುಗಳ ಆಹಾರ ಹುರಳಿಯನ್ನು ಜೀರ್ಣಿಸಿಕೊಂಡಿತ್ತು. ಈ ಮಗು ಸಾಮಾನ್ಯನಲ್ಲ ಕಾಲಕೂಟವನ್ನು ಜೀರ್ಣಿಸಿಕೊಂಡ ಮುಖ್ಯಪ್ರಾಣ ಎಂದು ಅವರಿಗೆ ತಿಳಿದಿರಲಿಲ್ಲ.

***

ಹಸುವಿಗಾಗಿ ಬೇಯಿಸಿಟ್ಟ ‘‘ಹುರುಳಿಯನ್ನು ತಿನ್ನುವ ಮೂಲಕ ಹುರುಳಿಲ್ಲದ ಮತಗಳನ್ನು ಸದೆಬಡೆಯುವ ‘ಪ್ರಭಂಜನ’ನೀತ ಎಂಬುದನ್ನು ಮಗು ಸ್ಥಾಪಿಸಿದ್ದ.’’ ಎಂದು ಮಾರ್ಮಿಕವಾಗಿ ಡಾ। ಪ್ರಭಂಜನಾಚಾರ್ಯರು ಬರೆಯುತ್ತಾರೆ.

ವಾಸುದೇವನಿಗೆ ಮೂರು ವರ್ಷ. ಆ ವಯಸ್ಸಿನಲ್ಲಿ ಮಕ್ಕಳು ಬೆಕ್ಕಿನ ಬಾಲ ಹಿಡಿಯುತ್ತವೆ. ಈತನೋ ಪ್ರಚಂಡ. ಮನೆಯ ಎತ್ತಿನ ಬಾಲ ಹಿಡಿದು ಕಾಡಿನೆಡೆಗೆ ನಡೆದಿದ್ದ. ಮನೆಯಲ್ಲಿ ಮಗು ಇಲ್ಲದ್ದನ್ನು ಕಂಡು ಮನೆಯವರೆಲ್ಲ ಎಲ್ಲೆಡೆ ಹುಡುಕತೊಡಗಿದರು, ಸಮೀಪದ ಬಾವಿಗಳನ್ನು ನೋಡಿದರು. ಕಾಡಿನಿಂದ ಬರುವವನೊಬ್ಬ, ‘ಮಗುವೊಂದು ಎತ್ತಿನ ಬಾಲ ಹಿಡಿದು ಬೆಟ್ಟದತ್ತ ತೆರಳುತ್ತಿತ್ತು’ ಎಂದಾಗ ಯಾರೂ ನಂಬಲಿಲ್ಲ.

ಸೂರ್ಯಸ್ತವಾದಾಗ ದನಕರುಗಳು ಮನೆಗೆ ಹಿಂದಿರುಗುವಾಗ ಮನೆಯ ಎತ್ತು ಮರಳಿತ್ತು, ಅದರ ಹಿಂದೆ ವಾಸುದೇವನಿದ್ದ. ಎಲ್ಲರಿಗೆ ಪರಮಾಶ್ಚರ್ಯ. ವಾಸುದೇವ ಜ್ಞಾನದ ಸಂಕೇತ, ವೃಷಭ ಧರ್ಮದ ಸಂಕೇತ, ಎತ್ತಿನ ಬಾಲ ಧರ್ಮಸೂಕ್ಷ್ಮದ ಸಂಕೇತ. ಎತ್ತಿನ ಬಾಲ ಹಿಡಿದು ಬಂದ ಬಾಲಕ ತಾನು ಧರ್ಮರಕ್ಷನಾದ ವಾಯುದೇವ, ಧರ್ಮನನ್ನು ರಕ್ಷಿಸಿದ ಭೀಮಸೇನ ಎಂಬುದನ್ನು ಲೋಕಕ್ಕೆ ಸಾರಿದ್ದ.

ವಾಸುದೇವನ ಬಾಲಲೀಲೆಯಲ್ಲಿ ಒಂದು ಮಹತ್ವದ್ದು ಎಂದರೆ ಹುಣಿಸೆಯ ಬೀಜ ಕೊಟ್ಟು ತಂದೆಯ ಸಾಲ ತೀರಿಸಿದ್ದು. ಮಧ್ಯಗೇಹರು ಎತ್ತು ಕೊಂಡಿದ್ದರು. ಸಾಲಕೊಟ್ಟ ಒಬ್ಬ ಧನಿಕ ಇವರಲ್ಲಿ ಬಂದು ಸಾಲದ ಹಣ ಕೊಡದಿದ್ದರೆ ತಾನು ಅಲ್ಲಿಂದ ಕದಲುವದಿಲ್ಲವೆಂದು ಧರಣಿ ಹೂಡಿದ್ದ. ಮಧ್ಯಗೇಹರು ತಾವು ಸಾಲತೀರಿಸುವ ವರೆಗೆ ಊಟಮಾಡದೆ ಕುಳಿತರು. ಬಾಲಕ ಧನಿಕನನ್ನು ಬದಿಗೆ ಕರೆದ. ಹುಣಿಸೆಮರದಡಿಯಲ್ಲಿ ಬಿದ್ದಿದ್ದ ಹುಣಿಸೆ ಬೀಜಗಳನ್ನು ಬೊಗಸೆಯಲ್ಲಿ ಕೊಟ್ಟ. ಅವು ಧನಿಕನಿಗೆ ಚಿನ್ನದಂತೆ ಕಂಡವು. ಅವನು ತೆರಳಿದ. ನಂತರ ಒಂದು ದಿನ ಮಧ್ಯಗೇಹರು ಧನಿಕನಿಗೆ ಕೊಡಬೇಕಾದ ಸಾಲದ ಹಣವನ್ನು ಕೂಡಿಸಿ, ಮರಳಿಕೊಡಲು ಹೋದಾಗ, ‘ನಿಮ್ಮ ಮಗು ಅಂದೇ ಸಾಲವನ್ನೆಲ್ಲ ತೀರಿಸಿದನಲ್ಲ’ ಎಂದನಾತ. ಈ ಮಾತು ಕೇಳಿ ತಂದೆಗೆ ಪರಮಾಶ್ಚರ್ಯವಾಯಿತು.

ಆ ಘಟನೆಯಿಂದ ಮಧ್ಯಗೇಹರಿಗೆ ಸಾಲದ ಹೊರೆ ಇಳಿದಿತ್ತು. ಧನಿಕನಿಗೊ ಸಂಸಾರ ಬಂಧನದಿಂದ ಪರಿಹಾರ ದೊರೆತಿತ್ತು, ಅವನ ಜೀವನದ ದೆಸೆಯನ್ನೇ ಬದಲಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X