ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಅವರ ನೂರು ಅಮರ ಗೀತೆಗಳು

By Staff
|
Google Oneindia Kannada News


ಒಂದೂವರೆ ಸಾವಿರ ಪದ್ಯಗಳ ಸರ್ದಾರ ವಿಶ್ವಕವಿ ದ.ರಾ.ಬೇಂದ್ರೆ. ಅವರ ಆಯ್ದ ಕವನಗಳ ಸಂಕಲನ ‘‘ನೂರು ಮರ ನೂರು ಸ್ವರ, ಒಂದೊಂದು ಅತಿ ಮಧುರ’’. ಈ ಕೃತಿಯ ಮೇಲೆ ಬನ್ನಿ ಕಣ್ಣಾಡಿಸೋಣ.

GV talks about Nooru mara Nooru Swara, Ondondu Athi madhuraಕರ್ನಾಟಕದ ಸುವರ್ಣ ಪರ್ವದಂದು, ಬೇಂದ್ರೆಯವರು ಧಾರವಾಡಕ್ಕೆ ಸ್ಥಾಯಿಯಾಗಿ ವಾಸಿಸಲು ಬಂದ 50 ವರ್ಷಗಳ ನೆನಪಿಗೆಂದು, ಬೇಂದ್ರೆಯವರ ಪುಣ್ಯತಿಥಿಯ 25ನೆಯ ವರ್ಷದ ಸ್ಮರಣೆಗೆಂದು ಪ್ರಕಟವಾದ ಅಪರೂಪದ ಕವನ ಸಂಗ್ರಹ ‘ನೂರು ಮರ ನೂರು ಸ್ವರ, ಒಂದೊಂದು ಅತಿ ಮಧುರ’’.

ಈ ಕೃತಿಯನ್ನು ಸಂಪಾದಿಸಿದವರು ವರಕವಿಗಳ ಪುತ್ರ ಡಾ। ವಾಮನ ಬೇಂದ್ರೆ. ಪ್ರಕಾಶಕರು ಡಾ। ಕೆ.ಎಸ್‌.ಶರ್ಮಾ, ನಿರ್ದೇಶಕರು, ಬೇಂದ್ರೆ ಸಂಶೋಧನ ಸಂಸ್ಥೆ, ಹುಬ್ಬಳ್ಳಿ-30.

ಸಕಾಲಕ್ಕೆ ಸಂಗ್ರಾಹ್ಯವಾದ ಒಂದು ಅಪರೂಪದ ಕವನ ಸಂಗ್ರಹ ಹೊರಬಂದಿರುವುದು ಬೇಂದ್ರೆ ಕಾವ್ಯವನ್ನು ಹಾಡುವವರಿಗೆ, ಮತ್ತೆ ಮತ್ತೆ ಓದಿ ಮನದಲ್ಲೆ ಮೆಲಕುಹಾಕುವ ಕಾವ್ಯರಸಿಕರಿಗೆ ಸಂತಸವನ್ನು ಉಂಟುಮಾಡಿದೆ. ಬೇಂದ್ರೆಯವರ ಭಾವಗೀತಗಳನ್ನು ಹಾಡುವ ತಂಡಗಳು ಕರ್ನಾಟಕದಲ್ಲೆಲ್ಲ ಹಬ್ಬಿಕೊಂಡಿವೆ. ಅವರಿಗಾಗಿ ಸಂಗ್ರಾಹ್ಯವಾದ ಒಂದು ಕವನ ಸಂಕಲನದ ಅವಶ್ಯಕತೆ ಇತ್ತು.

ಬೇಂದ್ರೆಯವರ ಸಮಗ್ರ ಕವಿತೆಗಳು, ಒಟ್ಟು 1427 ಕವಿತೆಗಳು, ‘‘ಔದುಂಬರ ಗಾಥೆ’’ಯ ಆರು ಬೃಹತ್‌ ಸಂಪುಟಗಳಲ್ಲಿ ಪ್ರಕಟವಾಗಿವೆ. ಇಲ್ಲಿ ಅಪ್ರಕಟಿತ ಕವನಗಳೂ ಸೇರ್ಪಡೆಗೊಂಡಿವೆ. ಅವುಗಳಿಂದ ನೂರು ಕವಿತೆಗಳನ್ನು ಆಯ್ದು ಅವುಗಳಿಗೆ ಸೂಕ್ತವಾದ ಟಿಪ್ಪಣಿಗಳನ್ನು ಡಾ। ವಾಮನ ಬೇಂದ್ರೆ ಬರೆದಿದ್ದಾರೆ, ಸುರೇಶ ಕುಲಕರ್ಣಿಯವರು ಉತ್ತಮ ರೇಖಾಚಿತ್ರ ಬಿಡಿಸಿದ್ದಾರೆ.

ಬೇಂದ್ರೆಯವರ ಕವಿತೆಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಹಾಡುವ ವಿದ್ಯಾರ್ಥಿಗಳಿಗಾಗಿ ಪಂ.ಕೃಷ್ಣಾಜಿ ಕುರ್ತಕೋಟಿಯವರ ಮಾರ್ಗದರ್ಶನದಲ್ಲಿ ‘ಬೇಂದ್ರೆ ಸಂಗೀತ ಅಕಾಡೆಮಿ’ ಹುಬ್ಬಳ್ಳಿಯ ವಿಶ್ವಶ್ರಮ ಚೇತನದಲ್ಲಿ ಪ್ರಾರಂಭಗೊಂಡಿದೆ. ಕುರ್ತಕೋಟಿಯವರ ಶಿಷ್ಯ ಪರಿವಾರ ಹಾಗೂ ಶ್ರೀಮತಿ ವಾಸಂತೀದೇವಿ ಆರ್‌. ಜಂತಲಿಯವರ ಮಾರ್ಗದರ್ಶನದಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ, ಶ್ರೀಮತಿ ವೀಣಾ ಶಿರಾಲಿಯವರು ಹಿಂದುಸ್ತಾನಿ ಶಾಸ್ತ್ರೀಯ ಪದ್ಧತಿಯಲ್ಲಿ ಹಾಡಿದ ಬೇಂದ್ರೆ ಸಂಗೀತ ಚೀಜು, ಸ್ಥಾಯಿ ಮತ್ತು ಅಂತರಾಗಳ ಸುಮಾರು ಎರಡು ನೂರು ಗೀತಗಳನ್ನು ಒಂಭತ್ತು ಕವನ ಸಂಗ್ರಹಗಳಲ್ಲಿ ಈಗಾಗಲೇ ಪ್ರಕಟಗೊಂಡಿವೆ. ಈ ವರ್ಷ ‘‘ಬೇಂದ್ರೆ ಸಂಗೀತ ಸಿದ್ಧಾಂತ ಪ್ರಯೋಗ’’ ಎಂಬ ಗ್ರಂಥವೂ ಪ್ರಕಟಗೊಂಡಿದೆ. ಇದು ಬೇಂದ್ರೆ ಸಂಗೀತ ಸಿದ್ಧಾಂತಕ್ಕೆ ಆಕರ ಗ್ರಂಥವಾಗಲಿದೆ.

ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲಿ ಬೇಂದ್ರೆ ಗೀತ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀಮತಿ ಸಂಗೀತಾ ಕಟ್ಟಿ-ಕುಲಕರ್ಣಿಯವರು ಬೇಂದ್ರೆಯವರ ಹಾಡುಗಳ ಧ್ವನಿಸುರುಳಿ ಹೊರತೆಗೆಯುವುದರ ಜೊತೆಗೆ, ಬೇಂದ್ರೆಯವರ ಕವನಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ‘ಬೇಂದ್ರೆ ಗೀತ ಯಾತ್ರೆ’ ಕೈಕೊಳ್ಳುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ, ಅಲ್ಲಿಯ ಕಲಾವಿದರ ಸಹಯೋಗದೊಂದಿಗೆ, ಬೃಹದ್‌ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬೇಂದ್ರೆಯವರ ನೂರು ಕವಿತೆಗಳನ್ನು ಆಯ್ದು ಪ್ರಕಟಿಸುತ್ತಿರುವುದು ಸ್ತುತ್ಯ ಪ್ರಯತ್ನವಾಗಿದೆ. ಇದು ಬೇಂದ್ರೆ ಕಾವ್ಯ ಹಾಡುವವರಿಗೆ ಅಷ್ಟೇ ಅಲ್ಲ, ಬೇಂದ್ರೆ ಅಭಿಮಾನಿಗಳಿಗೆ, ಕಾವ್ಯರಸಿಕರಿಗೂ ಸಂತೋಷದ ಸಂಗತಿಯಾಗಿದೆ.

‘‘ನೂರು ಮರ ನೂರು ಸ್ವರ, ಒಂದೊಂದೂ ಅತಿಮಧುರ’’ ಕವನ ಸಂಗ್ರಹದಲ್ಲಿ ನಾಲ್ಕು ಭಾಗಗಳಿವೆ. ಭಾಗ 1 ರಲ್ಲಿ ‘ಗರಿ’ ಪೂರ್ವದಿಂದ ‘ಹಾಡು-ಪಾಡು’ ವರೆಗೆ (1918 ರಿಂದ 1946ರ ವರೆಗೆ ಪ್ರಕಟವಾದ) 48 ಕವನಗಳು ಇವೆ. ಇದು ಬೇಂದ್ರೆಯವರ ‘ತುತೂರಿ’ ಎಂಬ ಕವನದಿಂದ ಪ್ರಾರಂಭವಾಗಿದೆ. ಇದು 1918 ಬರೆದ ಅಪ್ರಕಟಿತ ಕವನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X