• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜಲನೇತಿ’ ಎಷ್ಟು ಸುಲಭ, ಎಂಥ ಅದ್ಭುತ ಪರಿಣಾಮ; ನಮಗೋ ಅಗಾಧ ಅಜ್ಞಾನ!

By Staff
|

‘ಜಲನೇತಿ’ಯನ್ನು ಸಾವಿರಾರು ಜನರಿಗೆ ಕಲಿಸಿದ ಜೀವಿಯವರು ಕೆಲವು ಮಹತ್ವದ ಘಟನೆ, ಪ್ರಸಂಗಗಳನ್ನು ಸಾಮಾನ್ಯ ವಾಚಕರಿಗೆ ಇಲ್ಲಿ ಕೊಟ್ಟಿದ್ದಾರೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
GV Kulkarni demonstrating Jalaneti1982ರಲ್ಲಿ ನನ್ನ ಮಡದಿಗೆ ಸೈನಸ್‌ ಬಾಧೆ ವಿಪರೀತವಾಗಿತ್ತು. ಸಂತ ಪ್ರೊ.ಬೆಲಸರೆ ಅವರ ಪ್ರವಚನ ಕೇಳಲು ಒಂದು ರವಿವಾರ ಮಲಾಡಕ್ಕೆ ಹೋಗಿದ್ದೆವು. ಪ್ರವಚನ ಮುಗಿದ ಮೇಲೆ ಪ್ರೊ.ಬೆಲಸರೆಯವರಿಗೆ ಅನೇಕರು ತಮ್ಮ ಆಧಿ-ವ್ಯಾಧಿಗಳ ಬಗ್ಗೆ ಹೇಳಿಕೊಂಡು ನಿವಾರಣೆಗಾಗಿ ಅವರ ಆಶೀರ್ವಾದ ಪಡೆಯುತ್ತಿದ್ದರು.(ಅವರ ವಚನದಲ್ಲಿ, ಸ್ಪರ್ಶದಲ್ಲಿ ಅಂತಹ ಶಕ್ತಿ ಇತ್ತು). ನನ್ನ ಮಡದಿ ಅವರಿಗೆ ನಮಸ್ಕರಿಸಿ ತನ್ನ ಸಮಸ್ಯೆ ತೋಡಿಕೊಂಡಳು. ‘ತುಮ್ಹೀ ಜಲನೇತಿ ಕರಾ, ಬರ ಹೋಯೀಲ್‌’ (ನೀವು ಜಲನೇತಿ ಮಾಡಿರಿ, ವಾಸಿಯಾಗುವುದು) ಎಂದರು. ‘ಜಲನೇತಿ ನಾನು ಕಲಿಸುವೆ’ ಎಂದು ಅಭಿಮಾನದಿಂದ ಹೇಳಿದ್ದೆ. ನಾನು ನೀರು ಕುಡಿದು ತೋರಿಸಿದೆ ಆದರೆ ಅವಳಿಗೆ ಕಲಿಯಲು ಸಾಧ್ಯವಾಗಲಿಲ್ಲ. ನೀರು ತಲೆಗೆ ಏರಿತು. ವಿಪರೀತ ಸಂಕಟವಾಗತೊಡಗಿತು. ನಮ್ಮ ನೆರೆಯವರು ಹೇಳಿದರು ‘ಬೋರಿವಿಲಿಯಲ್ಲಿ ಅಂಬಿಕಾ ಯೋಗ ಕುಟೀರದವರು ಯೋಗ ಕ್ಲಾಸ್‌ ನಡೆಸುತ್ತಾರೆ. ಅಲ್ಲಿ ನೇತಿ-ಪಾಟ್‌ ದೊರೆಯುತ್ತವೆ. ಅವರು ಜಲನೇತಿ ಮಾಡಲು ಕಲಿಸುತ್ತಾರೆ’ ಎಂದು. ಶ್ರೀಮತಿ ಯೋಗ ಕ್ಲಾಸು ಸೇರಿದಳು. ಮೊದಲನೆಯ ದಿನವೇ ಜಲನೇತಿ ಕಲಿಸಿದರು. ಅವಳ ಸೈನಸ್‌ ಬಾಧೆ ಕೆಲವು ಮಾಸಗಳಲ್ಲಿ ಮಾಯವಾಯಿತು. ಮುಂದೆ ನಾನೂ ಅಂಬಿಕಾ ಯೋಗ ಕುಟೀರದ ವಿದ್ಯಾರ್ಥಿಯಾದೆ. ಗುರುಗಳಾದ ಹಠಯೋಗಿ ನಿಕಂ ಗುರೂಜಿಯವರ ವಿಶೇಷ ಕೃಪೆಗೂ ಪಾತ್ರನಾದೆ.

‘ಜಲನೇತಿ’ಯನ್ನು ಸಾವಿರಾರು ಜನರಿಗೆ ಕಲಿಸಿದೆ. ಕೆಲವು ಮಹತ್ವದ ಘಟನೆಗಳು, ಪ್ರಸಂಗಗಳು ನೆನಪಾಗುತ್ತವೆ. ಸಾಮಾನ್ಯ ವಾಚಕರಿಗೆ ಅವು ರೋಚಕವಾಗುತ್ತವೆ ಎಂದು ಭಾವಿಸಿ, ಕೆಲವನ್ನು ಆಯ್ದು ಇಲ್ಲ ಕೊಡುವೆ.

ನಮ್ಮ ಕಾಲೇಜಿನ ಸ್ಟಾಫ್‌ ರೂಮಿನಲ್ಲಿ ಯೋಗದ ಬಗ್ಗೆ ನನ್ನ ಭಾಷಣವನ್ನು ಏರ್ಪಡಿಸಿದ್ದರು. ಒಂದೂವರೆ ಗಂಟೆ ಮಾತಾಡಿದೆ (45 ನಿಮಿಷಗಳ ಎರಡು ಲೆಕ್ಚರ್‌ನಷ್ಟು ಅವಧಿ). ಅದರ ಪ್ರಭಾವ ಅನೇಕರ ಮೇಲೆ ಆಗಿತ್ತು. ನನ್ನ ಭಾಷಣ ತಪ್ಪಿಸಿಕೊಂಡ ಮಿತ್ರ ಪ್ರಧ್ಯಾಪಕರು, ‘‘ಜೀವಿ, ನಮ್ಮನ್ನು ಕ್ಷಮಿಸಿರಿ. ನೀವು ಏನೋ ಮಾತಾಡುತ್ತೀರಿ ಎಂದು ಭಾವಿಸಿದ್ದೆವು. ಇತರರ ಮಾತು ಕೇಳಿದಾಗ ನಾವು ಬಹಳ ದೊಡ್ಡ ಸಂಧಿ ಕಳೆದುಕೊಂಡೆವು ಅನ್ನಿಸುತ್ತಿದೆ. ಇನ್ನೊಮ್ಮೆ ನಿಮ್ಮ ಭಾಷಣ ಇದ್ದರೆ ನಾವು ಖಂಡಿತವಾಗಿ ಮಿಸ್‌ಮಾಡುವುದಿಲ್ಲ.’’ ಎಂದಿದ್ದರು. ಆಗ ನಾನು ಉತ್ತರಿಸಿದ್ದೆ, ‘‘ ನೀವು ಏನನ್ನೂ ಮಿಸ್‌ ಮಾಡಿಲ್ಲ. ನೀವು ಕೇಳಿದಾಗ, ಕೇಳಿದಲ್ಲಿ, ನಾನು ಮತ್ತೆ ಮಾತಾಡಲು ಸಿದ್ಧ.’’ ಎಂದು. ನನ್ನ ಭಾಷಣ ಆದ ಮೇಲೆ ಜಲನೇತಿ ಪ್ರಯೋಗ ಮಾಡಿ ತೋರಿಸಿದ್ದೆ. ಎರಡು ಡಜನ್‌ ನೇತಿ-ಪಾಟ್‌ ಒಯ್ದಿದ್ದೆ. ಕೆಲವರಿಂದ ಜಲನೇತಿ ಮಾಡಿಸಿ ನೇತಿ-ಪಾಟ್‌ ಕೊಟ್ಟಿದ್ದೆ.

ನಮ್ಮ ಕಾಲೇಜಿನ ಒಬ್ಬ ಪಾರ್ಸಿ ಪ್ರಾಧ್ಯಾಪಕರು ತಮಗೆ ಸೈನಸ್‌ ಬಾಧೆ ಇದೆಯೆಂದು, ನನ್ನಿಂದ ನೇತಿ-ಪಾಟ್‌ ಪಡೆದರು. ನನ್ನೆದುರು ಪ್ರಯೋಗ ಮಾಡಲು ಹೇಳಿದೆ. ‘‘ಬಹಳ ಜನ ಮಾಡಿದ್ದು ನೋಡಿದ್ದೇನೆ. ಸುಲಭವಾಗಿದೆ.’ ಅಂದರು. ನಂತರ ವಿಪರೀತ ಪರಿಣಾಮವಾಗಿತ್ತು. ಅವರು ಮನೆಯಲ್ಲಿ ಹೆಂಡತಿಗೆ ಅಭಿಮಾನದಿಂದ ಹೇಳಿದರು, ‘‘ಮೈ ಯೋಗಾ ಸೀಖ್‌ ಕೆ ಆಯಾ ಹೂಂ, ಇಸ್‌ ಸೆ ಮೇರಾ ಸೈನಸ್‌ ಗಾಯಬ್‌ ಹೋಜಾಯೇಗಾ’’ ಎಂದು ವೀರನಂತೆ ನಿಂತು, ತಲೆ ಮೇಲೆತ್ತಿ ಒದು ಮೂಗಿನ ಹೊರಳೆಯಲ್ಲಿ ನೇತಿ-ಪಾಟ್‌ನ ನಾಝಲ್‌ ಹಾಕಿ, (‘ಬಾಯಿ ತೆರೆದು ಉಸಿರಾಡಿಸಬೇಕು’ ಎಂದು ನಾನು ಹೇಳಿದ್ದನ್ನು ಮರೆತು) ಇನ್ನೊಂದು ಮೂಗಿನ ಹೊರಳೆಯಿಂದ ಉಸಿರೆಳೆದರು. ನೀರು ನೆತ್ತಿಗೇರಿತು, ಮೂರ್ಛೆಹೋದರು. ಮರುದಿನ ಸ್ಟಾಫ್‌ರೂಮಿನಲ್ಲಿ ನನ್ನನ್ನು ಬಯ್ಯುತ್ತ, ‘‘ತೋಬಾ ತೋಬಾ, ಜಿಂದಗೀಮೆ ಕಭೀಭಿ ಯೋಗಾ ನಹೀಂ ಕರೂಂಗಾ’’ ಎಂದರು. ಇದರಿಂದ ಒಂದು ಪಾಠ ನಾನು ಕಲಿತೆ, ‘ಯಾರಾದರೂ ನನ್ನೆದುರು ಜಲನೇತಿ ಮಾಡಿ ತೋರಿಸದಿದ್ದರೆ, ಅವರಿಗೆ ನೇತಿ-ಪಾಟ್‌ ನಾನು ಕೊಡಬಾರದು ’ ಎಂಬ ಪಾಠ.

ಮುಂಬೈಯಲ್ಲಿ ಒಬ್ಬ ಹಿರಿಯ ಶಿಲ್ಪಕಲಾ ತಜ್ಞರು ಇದ್ದರು. ಅವರು ಸರ್‌ ಸಿ.ವಿ.ರಾಮನ್‌ ಅವರ ಮೂರ್ತಿ ಮಾಡಿ ಬಹಳ ಹೆಸರು ಗಳಿಸಿದ್ದರು. ಅವರು ಬೇಂದ್ರೆ, ಕೈಲಾಸಂ, ಶ್ರೀರಂಗ ಮೊದಲಾದವರ ಪುತ್ಥಳಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ಮಾಡಿದ್ದರು. (ದಿ। ಗುರುರಾಜ ವರ್ಖೇಡಿ). ಅವರನ್ನು ನಾನು ಹಿಂದೆ ಕ.ಸಾ.ಪ. ಅಧ್ಯಕ್ಷರಾಗಿದ್ದ ಶ್ರೀ ಹಂಪ(ಹಂ.ಪ.ನಾಗರಾಜಯ್ಯ) ಅವರಿಗೆ ಪರಿಚಯಿಸಿದಾಗ, ಅವರನ್ನು ಮೈಸೂರಿಗೆ ಆಮಂತ್ರಿಸಿ ‘ಕುವೆಂಪು’ ಅವರ ಮೂರ್ತಿ ಮಾಡಿಸಿದ್ದರು. ಅವರ ಅಳಿಯ ಶ್ರೀನಿವಾಸ ನನ್ನ ಸಹಪಾಠಿಯಾಗಿದ್ದರು. ಅವರಿಗೆ ನನ್ನ ಪುಸ್ತಕ ‘ಔಷಧಿಯಿಲ್ಲದೆ ಬದುಕಲು ಕಲಿಯಿರಿ’ ಕೊಟ್ಟಿದ್ದೆ. ಅವರ ಅತ್ತೆ, ಕಲಾವಿದರ ಪತ್ನಿ, ಎಪ್ಪತ್ತರ ಇಳಿವಯಸ್ಸಿನಲ್ಲಿ ಆ ಪುಸ್ತಕವನ್ನು ಓದಿದರು. ಅವರ ಮೇಲೆ ಪುಸ್ತಕವು ಬಹಳ ಪ್ರಭಾವ ಬೀರಿರಬೇಕು. ಜಲನೇತಿ ಮಾಡಲು ಪ್ರಯತ್ನಿಸಿದರು. ಅವರಿಗೆ ನೇತಿ-ಪಾಟ್‌ ದೊರೆಯಲಿಲ್ಲ. ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಅವರ ಸಂಕಲ್ಪಶಕ್ತಿ ದೃಢವಾಗಿತ್ತು. ಅವರು ಅಪರವಯಸ್ಸಿನಲ್ಲಿಯೂ ಹರಿಕಥಾಮೃತಸಾರ ಕ್ಲಾಸು ಸೇರಿದ್ದರು, ಪರೀಕ್ಷೆಯಲ್ಲಿ ತರುಣ-ತರುಣಿಯರನ್ನು ನಾಚಿಸುವಂತೆ ಉಚ್ಚ ಗುಣಗಳನ್ನು ಪಡೆದು ಪಾಸಾಗಿದ್ದರು.

ಅವರು ತಮ್ಮ ಮನೆಯಲ್ಲಿರುವ ಹಳೆಯ ತೀರ್ಥದ ಗಿಂಡಿಯನ್ನು ಉಪಯೋಗಿಸಿ ಅದರ ಸೊಂಡಿಯಿಂದ ಒಂದು ಘ್ರಾಣರಂಧ್ರದಲ್ಲಿ ನೀರುಹಾಕಿ ಯಶಸ್ವಿಯಾಗಿ ಜಲನೇತಿ ಮಾಡಿದ್ದರು. ಸುದೈವದಿಂದ ಅವರು ಬಾಯಿಯಿಂದ ಉಸಿರಾಡಿಸಿದ್ದರು. ಯಾವುದೇ ತೊಂದರೆಯಾಗಿರಲಿಲ್ಲ. ಅವರಿಗೆ ‘ಯುರೇಕಾ’ ಎನ್ನುವಂತಹ ಆನಂದವೇ ಆಗಿರಬೇಕು. ನನಗೆ ಈ ಸಂಗತಿ ತಿಳಿಸುವ ಆತುರ ಅವರಿಗಿತ್ತು. ಒಂದು ಧಾರ್ಮಿಕ ಸಭೆಯಲ್ಲಿ ನನ್ನನ್ನು ಗುರುತಿಸಿ, ಬದಿಗೆ ಕರೆದು, ‘ಜೀವಿ, ನಿನ್ನ ಪುಸ್ತಕ ಬಹಳ ಚೆನ್ನಾಗಿ ಇದೆಯಪ್ಪಾ. ನನಗೆ ನೇತಿ-ಪಾಟ್‌ ಸಿಗಲಿಲ್ಲ. ನಿನ್ನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ತೀರ್ಥದ ಗಿಂಡಿ ಬಳಸಿ ಜಲನೇತಿ ಕ್ರಿಯೆ ಮಾಡಿದೆ. ನನಗೆ ಈಗ ಯಾವುದೇ ಶೀತ, ತಲೆನೋವಿನ ಬಾಧೆಯೂ ಇಲ್ಲ!’ ಎಂದು ಉದ್ಗಾರ ತೆಗೆದರು. ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ‘ಅಜ್ಜಿ, ಹಿಂದಿನಕಾಲದಲ್ಲಿ ಹೀಗೆಯೇ ಜಲನೇತಿ ಮಾಡುತ್ತಿದ್ದರು ಎನ್ನಿಸುತ್ತಿದೆ. ಪ್ಲಾಸ್ಟಿಕ್‌ನ ನೇತಿ-ಪಾಟ್‌ನ ಬಳಕೆ ಇತ್ತೀಚಿನ ಆವಿಷ್ಕಾರಗಳ ಫಲ. ಅಹಮದಾಬಾದ್‌ದಿಂದ ಪ್ರಕಟವಾದ ‘ಯೋಗ’ ಎಂಬ ಪುಸ್ತಕದಲ್ಲಿ ತೀರ್ಥದ ಗಿಂಡಿಯ ಚಿತ್ರವೇ ಇದೆ’ ಎಂದೆ.

ನಾನು 2000ದಲ್ಲಿ ವಿಶ್ವ ಕನ್ನಡ ಸಮ್ಮೇಲನದಲ್ಲಿ ಭಾಗವಹಿಸಲು ಅಮೇರಿಕೆಯ ಪ್ರವಾಸ ಮಾಡಿದಾಗ ಡಲ್ಲಾಸ್‌ನಲ್ಲಿ ಶ್ರೀಮತಿ ಆಶಾ ಘಾಟೆಯವರ ಪರಿಚಯವಾಯಿತು. ಅಲ್ಲಿಯ ಚಿನ್ಮಯ ಮಿಶನ್‌ ಶಾಖೆಯ ಅಧ್ಯಕ್ಷೆಯಾಗಿದ್ದಾರೆ. ಅಲ್ಲಿಯ ಕಟ್ಟದದ ನಿರ್ಮಾಣದಲ್ಲಿ ಘಾಟೆ ದಂಪತಿಗಳು ಬಹಳ ದುಡಿದಿದ್ದಾರೆ. ಆಶಾ ಅವರಿಗೆ ಸೈನಸ್‌ ಬಾಧೆಯಿತ್ತು. ಅವರ ಮನೆಗೆ ಹೋದಾಗ ಅವರಿಗೆ ಜಲನೇತಿ ಮಾಡಲು ಹೇಳಿದೆ. ನನ್ನ ಬಳಿಯಲ್ಲಿದ್ದ ನೇತಿ-ಪಾಟ್‌ ಕೊಟ್ಟು, ಮಾಡುವ ವಿಧಾನ ತಿಳಿಸಿಕೊಟ್ಟೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more